ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಆಟೋ ನಾಪತ್ತೆ, ಆಗಿದ್ದೇನು?

Doddapete-Police-Station.

ಶಿವಮೊಗ್ಗ: ಮನೆ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾ ಕಳ್ಳತನವಾಗಿದೆ. ನಗರದ ಬಿ.ಬಿ.ರಸ್ತೆಯ ಅಂಚೆ ಕಚೇರಿ ಸಮೀಪ ಘಟನೆ ಸಂಭವಿಸಿದೆ. ನಾಗರಾಜ್‌ ಎಂಬುವವರು ಎಂದಿನಂತೆ ಬಾಡಿಗೆ ಮುಗಿಸಿ ಬಂದು ರಾತ್ರಿ 9 ಗಂಟೆ ಹೊತ್ತಿಗೆ ಮನೆ ಮುಂದೆ ಆಟೋ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಮನೆಯಿಂದ ಹೊರ ಬಂದಾಗ ಆಟೋ ರಿಕ್ಷಾ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಎಲ್ಲೆಡೆ ಹುಡುಕಿದ ನಾಗರಾಜ್‌ ಅವರು ಬಳಿಕ ದೂರು‌ ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಲಾರಿ ಚಕ್ರದಡಿ ಸಿಲುಕಿದ ಬೈಕ್‌, … Read more

ಶಿವಮೊಗ್ಗದಲ್ಲಿ ಹೆಚ್ಚು ಹಣ ವಸೂಲಿ ಮಾಡಿದ ಆಟೋ ಚಾಲಕನಿಗೆ ಕಾದಿತ್ತು ಶಾಕ್‌, ಆಗಿದ್ದೇನು?

Police-Fined-auto-driver-for-collecting-extra-amount

ಶಿವಮೊಗ್ಗ: ರೈಲ್ವೆ ನಿಲ್ದಾಣದ ಆಟೋ (Auto) ಪ್ರೀ ಪೇಯ್ಡ್‌ ಟಿಕೆಟ್‌ನಲ್ಲಿ ನಿಗದಿಯಾಗಿದ್ದ ದರಕ್ಕಿಂತಲು, ಹೆಚ್ಚು ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡಿದ ಆಟೋ ಚಾಲಕನಿಗೆ, ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಆಟೋ ಚಾಲಕರೊಬ್ಬರು ಪ್ರೀ ಪೇಯ್ಡ್‌ ಟಿಕೆಟ್‌ನಲ್ಲಿ ನಿಗದಿಯಾಗಿರುವ ದರಕ್ಕಿಂತಲು ಪ್ರಯಾಣಿಕರಿಂದ ₹15 ಹೆಚ್ಚು ವಸೂಲಿ ಮಾಡಿದ್ದರು. ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದರು. ಈ ಸಂಬಂಧ ಪ್ರಯಾಣಿಕ ಕಂಟ್ರೋಲ್‌ ರೂಂಗೆ ದೂರು ನೀಡಿದ್ದರು. ಚಾಲಕನನ್ನು ಪತ್ತೆ ಹಚ್ಚಿದ ಪೂರ್ವ ಸಂಚಾರ ಠಾಣೆ ಪೊಲೀಸರು ಹೆಚ್ಚುವರಿ … Read more

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಕೊನೆಗೂ ಶುರುವಾಯ್ತು ಪ್ರೀ ಪೇಯ್ಡ್‌ ಆಟೋ ಕೌಂಟರ್‌, ಹೇಗಿದೆ ವ್ಯವಸ್ಥೆ?

211025 Prepaid Auto in shimoga railway station.

ಶಿವಮೊಗ್ಗ: ಕೊನೆಗೂ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರೀ ಪೇಯ್ಡ್‌ (Pre Paid) ಆಟೋ ವ್ಯವಸ್ಥೆ ಜಾರಿಗೆ ಬಂದಿದೆ. ಯದ್ವ ತದ್ವ ಹಣ ವಸೂಲಿ ಮಾಡುತ್ತಿದ್ದ ಕೆಲವು ಆಟೋ ಚಾಲಕರಿಗೆ ಮೂಗು ದಾರ ಬಿದ್ದಂತಾಗಿದೆ. ಪೊಲೀಸರ ಈ ಕ್ರಮದಿಂದಾಗಿ ಸದ್ಯ ನಾಗರಿಕರು ನಿರಾಳವಾಗಿದ್ದಾರೆ. ಪ್ರೀ ಪೇಯ್ಡ್‌ ಆಟೋ ವ್ಯವಸ್ಥೆಗೆ ಬಹು ವರ್ಷದಿಂದ ಬೇಡಿಕೆ ಇತ್ತು. ಈಗ ಈ ವ್ಯವಸ್ಥೆ ಜಾರಿಗೆ ಬಂದಿದ್ದು ರೈಲ್ವೆ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಪ್ರಯಾಣಿಕರು ಸೀದ ಈ ಕೌಂಟರ್‌ಗಳತ್ತ ಆಗಮಿಸಿ ರಶೀದಿ ಪಡೆದು ಖುಷಿಯಿಂದ … Read more

ಶಿವಮೊಗ್ಗದಲ್ಲಿ ಇವತ್ತು ಕಾರು, ಬೈಕ್‌ ಖರೀದಿ ಜೋರು, ಕಾರಿನ ದರ ಎಷ್ಟು ಕಡಿಮೆಯಾಗಿದೆ? ಬೈಕ್‌ ರೆಟ್‌ ಎಷ್ಟು ಇಳಿದಿದೆ?

220925 Automobile sale boom in shimoga after gst 2.0

ಶಿವಮೊಗ್ಗ: ಜಿಎಸ್‌ಟಿ 2.0 ಇಂದಿನಿಂದ ಜಾರಿಗೆ ಬಂದಿದ್ದು, ಆಟೋಮೊಬೈಲ್‌ (Automobile) ಕ್ಷೇತ್ರದಲ್ಲಿ ಚೈತನ್ಯ ಮೂಡಿದೆ. ಶಿವಮೊಗ್ಗದಲ್ಲಿಯು ಬೈಕು, ಕಾರುಗಳ ಶೋ ರೂಂಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ವಾಹನಗಳ ಕುರಿತು ವಿಚಾರಣೆ, ಬುಕಿಂಗ್‌ ಮತ್ತು ಖರೀದಿ ಪ್ರಕ್ರಿಯೆ ಬಿರುಸು ಪಡೆದಿದೆ. ಎಲ್ಲೆಲ್ಲಿ ಹೇಗಿದೆ ಟ್ರೆಂಡ್‌? ಬೈಕ್‌ ಶೋ ರೂಂಗಳಲ್ಲಿ ಚೈತನ್ಯ ಜಿಎಸ್‌ಟಿ ಪ್ರಮಾಣ ಇಳಿಕೆ ವಿಚಾರ ಸುದ್ದಿಯಾಗುತ್ತಿದ್ದಂತೆ ಶೋ ರೂಂಗಳಿಗೆ ಜನ ಕಡಿಮೆಯಾಗಿದ್ದರು. ಆದರೆ ಇವತ್ತು ಜಿಎಸ್‌ಟಿ 2.0 ಜಾರಿಗೆ ಬಂದಿದ್ದು, ಬೈಕುಗಳ ದರ ₹9,000 ದಿಂದ ₹20,000ದವರೆಗೆ … Read more

ಶಿವಮೊಗ್ಗದಲ್ಲಿ ಮೀಟರ್‌ ಹಾಕದ ಆಟೋ ಚಾಲಕನಿಗೆ ದಂಡದ ಬಿಸಿ, ಏನಿದು ಕೇಸ್?

Traffic-police-fine-auto-driver

ಶಿವಮೊಗ್ಗ: ಆಟೋದಲ್ಲಿ (Auto) ಮೀಟರ್‌ ಹಾಕಲು ಕೇಳಿದ ಪ್ರಯಾಣಿಕನಿಗೆ ಅವಾಚ್ಯವಾಗಿ ನಿಂದಿಸಿದ ಆಟೋ ಚಾಲಕನಿಗೆ ಶಿವಮೊಗ್ಗದ ಸಂಚಾರ ಠಾಣೆ ಪೊಲೀಸರು ದಂಡ ವಿಧಿಸಿದ್ದಾರೆ. ಪ್ರಯಾಣಿಕರು ದೂರು ನೀಡಿದ ಹಿನ್ನೆಲೆ ಪರಿಶಿಲಿಸಿದ ಪೊಲೀಸರು ₹500 ದಂಡ ವಿಧಿಸಿದ್ದಾರೆ. ಪ್ರಯಾಣಿಕರೊಬ್ಬರು ಮೀಟರ್‌ ಹಾಕುವಂತೆ ಚಾಲನಿಗೆ ತಿಳಿಸಿದ್ದು, ಆತನ ನಿರಾಕಸಿದ್ದ. ಈ ಸಂಬಂಧ ಸಂಚಾರ ಠಾಣೆ ಪೊಲೀಸರಿಗೆ ಪ್ರಯಾಣಿಕ ದೂರು ನೀಡಿದ್ದರು. ಆಟೋ ಚಾಲಕನನ್ನು ಗುರುತಿಸಿ ಆತನಿಗೆ ದಂಡ ವಿಧಿಸಿ, ಇನ್ಮುಂದೆ ಮೀಟರ್‌ ಹಾಕುವಂತೆ ಸೂಚಿಸಲಾಗಿದೆ.‌ ಇದನ್ನೂ ಓದಿ » ಭದ್ರಾ ಜಲಾಶಯದಲ್ಲಿ … Read more

ಬೈಕ್‌ನಲ್ಲಿ ಬಂದು ಆಟೋ ಅಡಗಟ್ಟಿದ ದುಷ್ಕರ್ಮಿಗಳು, ಹಿಂಬದಿ ಕುಳಿತಿದ್ದ ವ್ಯಕ್ತಿ ಬಳಿ ಇದ್ದ ಬ್ಯಾಗ್‌ ಕಸಿದು ಪರಾರಿ

Police-Van-Jeep-at-Shimoga-Nehru-Road

ಶಿವಮೊಗ್ಗ: ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಲಿಸುತ್ತಿದ್ದ ಆಟೋವನ್ನು (Auto) ಅಡ್ಡಗಟ್ಟಿ ಹಿಂಬದಿ ಕುಳಿತಿದ್ದ ವ್ಯಕ್ತಿ ಬಳಿ ಇದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಬ್ಯಾಗ್‌ನಲ್ಲಿ ಎರೆಡು ಲಕ್ಷ ರೂ. ಹಣವಿತ್ತು ಎಂದು ಆರೋಪಿಸಲಾಗಿದೆ. ನಗರದ ಕೆ.ಆರ್‌.ಪುರಂನಲ್ಲಿ ಘಟನೆ ಸಂಭವಿಸಿದೆ. ಆಟೋ ಚಾಲಕ ಅಲ್ಲಾಭಕ್ಷ್‌ ಎಂಬುವವರು ದೂರು ನೀಡಿದ್ದಾರೆ. ಹೇಗಾಯ್ತು ಘಟನೆ? ಏನಿದು ಹಣ? ನಗರದ ವಿವಿಧ ಆಟೋ ಚಾಲಕರು ತುರ್ತು ಸಂದರ್ಭದಲ್ಲಿ ನೆರವಿಗೆ ಫಂಡ್‌ ರಚಿಸಿಕೊಂಡಿದ್ದಾರೆ. ಅಲ್ಲಾಭಕ್ಷ್‌ ಅವರಿಗೆ ಅದರ ಉಸ್ತುವಾರಿ ವಹಿಸಲಾಗಿದೆ. ಜುಲೈ 5ರಂದು ಫಂಡ್‌ … Read more

ವಿನೋಬನಗರದಲ್ಲಿ ಅಪಘಾತ, ಆಟೋ ಚಾಲಕ ಸಾವು, ಬೈಕ್‌ ಸವಾರನಿಗೆ ಗಾಯ, ಹೇಗಾಯ್ತು ಘಟನೆ?

auto-and-bike-mishap-at-vinobangara

ಶಿವಮೊಗ್ಗ: ಅಪಘಾತದಲ್ಲಿ ಆಟೋ (Auto) ಪಲ್ಟಿಯಾಗಿ ಚಾಲಕನ ಮೇಲೆ ಬಿದ್ದು ಆತ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ವಿನೋಬನಗರದ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ನ್ಯೂ ಮಂಡ್ಲಿಯ ನಿವಾಸಿ ಜಫ್ರುಲ್ಲಾ ಅಲಿಯಾಸ್‌ ವಾಲು ಮೃತರು. ಬಸ್‌ ನಿಲ್ದಾಣದ ಕಡೆಯಿಂದ ಬಂದ ಬೈಕ್‌ ಮತ್ತು ಪೊಲೀಸ್‌ ಚೌಕಿ ಕಡೆಯಿಂದ ಬಂದ ಆಟೋ ಡಿಕ್ಕಿಯಾಗಿವೆ. ಈ ಸಂದರ್ಭ ಆಟೋ ಪಲ್ಟಿಯಾಗಿದ್ದು ಚಾಲಕ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆಯೇ ಆಟೋ ಪಲ್ಟಿಯಾಗಿದೆ ಎಂದು ಆರೋಪಿಸಲಾಗಿದೆ. ಪಶ್ಚಿಮ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ … Read more

ಶಿವಮೊಗ್ಗದ ಮೂರು ಕಡೆ ಆಟೋ ಪ್ರೀ-ಪೇಯ್ಡ್‌ ಕೌಂಟರ್‌ ತೆರೆಯಲು ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸೋದು ಹೇಗೆ?

Auto-in-Shimoga-Nehru-road

ಶಿವಮೊಗ್ಗ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಶಿವಮೊಗ್ಗದ ರೈಲ್ವೆ ನಿಲ್ದಾಣ ಮತ್ತು ಪ್ರಮುಖ ಬಸ್ ನಿಲ್ದಾಣ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಆವರಣದಲ್ಲಿ ಆಟೋರಿಕ್ಷಾ ಪ್ರೀ-ಪೇಯ್ಡ್ (Pre Paid) ಕೌಂಟರ್‌ ತೆರೆಯಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನಗರದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಹೊಳೆಹೊನ್ನೂರು ಪೊಲೀಸರಿಂದ ಚನ್ನಗಿರಿಯ ಬೆಂಕಿ ರಾಮಪ್ಪ ಅರೆಸ್ಟ್‌, ಕಂತೆ ಕಂತೆ ದುಡ್ಡು ವಶಕ್ಕೆ, ಏನಿದು ಕೇಸ್‌?

ಶಿವಮೊಗ್ಗ – ಭದ್ರಾವತಿ ರಸ್ತೆ ಪಕ್ಕದ ತೋಟಕ್ಕೆ ಹಾರಿ ಉಲ್ಟಾ ಬಿದ್ದ ಆಟೋ, ಐವರಿಗೆ ಗಾಯ

auto-upside-down-at-nidige-in-shimoga.

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಆಟೋ (Auto) ಹಳ್ಳಕ್ಕೆ ಉರುಳಿದೆ. ಶಿವಮೊಗ್ಗ – ಭದ್ರಾವತಿ ಹೆದ್ದಾರಿಯ ನಿದಿಗೆ ಸಮೀಪ ಘಟನೆ ಸಂಭವಿಸಿದೆ. ಆಟೋದಲ್ಲಿದ್ದ ಐವರಿಗೆ ಗಾಯವಾಗಿದ್ದು. ಇವರೆಲ್ಲ ಶಿವಮೊಗ್ಗದಿಂದ ಭದ್ರಾವತಿಗೆ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದರು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರು ಮತ್ತು ದಾರಿಯಲ್ಲಿ ಸಾಗುತ್ತಿದ್ದವರು ಗಾಯಾಳುಗಳನ್ನು ರಕ್ಷಿಸಿ, ಆರೈಕೆ ಮಾಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯರು ತಿಳಿಸಿದರು.  ಇದನ್ನೂ ಓದಿ » ಸಕ್ರೆಬೈಲು ಸಮೀಪ ಬೆಳ್ಳಂಬೆಳಗ್ಗೆ ಅಪಘಾತ, ವ್ಯಕ್ತಿ ಸಾವು

ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದರು, ಆಟೋದಲ್ಲಿ ಕಿಡ್ನಾಪ್‌ ಮಾಡಿದರು, ಏನಿದು ಕೇಸ್‌?

Crime-News-General-Image

ಶಿವಮೊಗ್ಗ : ಹೊಟೇಲ್‌ನಲ್ಲಿ (Hotel) ಯುವಕ, ಯುವತಿಯ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಸಂಬಂಧ ಪ್ರಕರಣ ದಾಖಲಾಗಿದೆ. ಯುವಕ ಮತ್ತು ಯುವತಿ (ಇಬ್ಬರ ಹೆಸರು ಗೌಪ್ಯ) ಬೈಕಿನಲ್ಲಿ ಸಕ್ರೆಬೈಲಿನ ಹೊಟೇಲ್‌ ಒಂದಕ್ಕೆ ಊಟಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಯುವಕ ಊಟದ ಕೊಠಡಿಯಲ್ಲಿ ಬಿಯರ್‌ ಬಾಟಲಿ ಇಟ್ಟುಕೊಂಡಿದ್ದ. ಆ ಸಂದರ್ಭ ಅಲ್ಲಿಗೆ ಬಂದ ನಾಲ್ವರು ಅಪರಿಚಿತರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಯುವಕ ಮತ್ತು ಯುವತಿಯನ್ನು ಬಲವಂತವಾಗಿ ಆಟೋದಲ್ಲಿ ಶಿವಮೊಗ್ಗಕ್ಕೆ ಕರೆತಂದು ವಿವಿಧೆಡೆ ಸುತ್ತಾಡಿಸಿದ್ದಾರೆ. … Read more