ಹಸುವಿಗೆ ನೀರು ಕುಡಿಸಲು ಹೋಗಿದ್ದ ಯುವಕ ನೀರಲ್ಲಿ ಮುಳುಗಿ ಸಾವು
SHIMOGA | ಹಸುವಿಗೆ ನೀರು ಕುಡಿಸಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ (DROWN) ಮೃತಪಟ್ಟಿದ್ದಾನೆ. ಶಿವಮೊಗ್ಗ ತಾಲೂಕು ಬೀರನಕೆರೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ರವಿನಾಯ್ಕ (18) ಮೃತ ದುರ್ದೈವಿ. ಗ್ರಾಮದ ಎಂಪಿಎಂ ಕಟ್ಟೆ ಬಳಿ ಹಸುವಿಗೆ ನೀರು ಕುಡಿಸಲು ಕರೆದೊಯ್ದಿದ್ದ. ಸ್ವಲ್ಪ ಸಮಯದ ನಂತರ ಹಸು ಮನೆಗೆ ಬಂದಿದೆ. ಆದರೆ ರವಿ ನಾಯ್ಕ ಬಹು ಹೊತ್ತಾದರೂ ಹಿಂತಿರುಗಿರಲಿಲ್ಲ. ಮನೆಯವರು ಹುಡುಕಾಟ ನಡೆಸಿದಾಗ ರವಿನಾಯ್ಕ ನೀರಿನಲ್ಲಿ ಮುಳುಗಿ (DROWN) ಮೃತಪಟ್ಟಿದ್ದ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more