ಡೆವಿಲ್‌ ಸಿನಿಮಾ ಸಂಭ್ರಮಾಚರಣೆ ಮುಗಿಸಿ ತೆರಳುವಾಗ ಅಪಘಾತ, ಯುವಕ ಸಾವು

Bike-and-rajahamsa-bus-mishap-near-ranjadakatte-in-shimoga

ತೀರ್ಥಹಳ್ಳಿ: ಡೆವಿಲ್‌ ಸಿನಿಮಾದ ಸಂಭ್ರಮಾಚರಣೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ರಾಜಹಂಸ ಬಸ್‌ (Rajahamsa bus) ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ್ದಾನೆ. ತೀರ್ಥಹಳ್ಳಿ ತಾಲೂಕು ರಂಜದಕಟ್ಟೆ ಸಮೀಪದ ಶಿವರಾಜಪುರದಲ್ಲಿ ತಡರಾತ್ರಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಡೆವಿಲ್‌ ಮೇನಿಯಾ, ದರ್ಶನ್‌ ಅಭಿಮಾನಿಗಳ ಅಬ್ಬರ, ಹೇಗಿದೆ ಸಂಭ್ರಮಾಚರಣೆ? ಮೀನುಗುಂದ ಗ್ರಾಮದ ಪುನೀತ್‌ (26) ಮೃತ ದುರ್ದೈವಿ. ತೀರ್ಥಹಳ್ಳಿಯ ವಿನಾಯಕ ಚಿತ್ರಮಂದಿರದಲ್ಲಿ ಡೆವಿಲ್‌ ಸಿನಿಮಾದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಪುನೀತ್‌ ತಮ್ಮ ಬೈಕಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ರಾಜಹಂಸ ಬಸ್‌ ಡಿಕ್ಕಿಯಾಗಿ … Read more

ಶಿವಮೊಗ್ಗದಲ್ಲಿ ಪೊಲೀಸ್‌ ಅಧಿಕಾರಿಯ ಬೈಕ್‌ ನಾಪತ್ತೆ, ಎಲ್ಲಿ? ಆಗಿದ್ದೇನು?

bike theft reference image

ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಪೊಲೀಸ್‌ ಅಧಿಕಾರಿಯೊಬ್ಬರ ಬೈಕನ್ನೇ (Splendor Plus) ಕಳ್ಳರು ಕದ್ದೊಯ್ದಿದ್ದಾರೆ.  ಹೊಸ ಬೊಮ್ಮನಕಟ್ಟೆ, ಅಪೂರ್ವ ಕಾಲೇಜು ಬಳಿ ಮನೆ ಮುಂಭಾಗ ನಿಲ್ಲಿಸಿದ್ದ ಪೊಲೀಸ್‌ ಅಧಿಕಾರಿ ಯತೀಶ್‌  ಅವರ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳುವಾಗಿದೆ. ಇದನ್ನೂ ಓದಿ » ಮೆಗ್ಗಾನ್‌ ಆಸ್ಪತ್ರೆಯಿಂದ ಹೊರಬಂದ ಮೆಡಿಕಲ್‌ ವಿದ್ಯಾರ್ಥಿಗೆ ಕಾದಿತ್ತು ಶಾಕ್‌, ಆಗಿದ್ದೇನು? ಯತೀಶ್‌ ಅವರು ರಾತ್ರಿ ಕರ್ತವ್ಯ ಮುಗಿಸಿ ಬಂದ ನಂತರ ಬೈಕ್ ಅನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಬೈಕ್‌ಗಾಗಿ … Read more

ಮರಕ್ಕೆ ಬೈಕ್‌ ಡಿಕ್ಕಿ, ಬೈಕ್‌ನ ಹಿಂಬದಿ ಸವಾರ ಸಾವು

bike-hits-tree-pillion-rider-manjunath-dies

ರಿಪ್ಪನ್‌ಪೇಟೆ: ಸವಾರನ ನಿಯಂತ್ರಣ ತಪ್ಪಿದ ಬೈಕ್‌ ಮರಕ್ಕೆ ಡಿಕ್ಕಿ (Fatal Bike Accident) ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡ್ರಿಗೆ ಗ್ರಾಮದಲ್ಲಿ ಭಾನುವಾರ ಘಟನೆ ಸಂಭವಿಸಿದೆ. ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಣಸೆ ಗ್ರಾಮದ ನಿವಾಸಿ ಶಿವಪ್ಪ ಎಂಬುವರ ಪುತ್ರ ಮಂಜುನಾಥ (35) ಮೃತ ವ್ಯಕ್ತಿ. ಮಂಜುನಾಥ, ಹೊಸನಗರದಲ್ಲಿ ಗ್ರಾಮಒನ್ ನಡೆಸುತ್ತಿದ್ದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಹಾಡಹಗಲೆ ಶಿಕ್ಷಕಿಯ ಪರ್ಸ್‌ ಕಸಿದು ಎಸ್ಕೇಪ್‌, ಎಲ್ಲಿ? ಹೇಗಾಯ್ತು ಘಟನೆ? ಗಿಣಸೆ … Read more

ಬೈಕ್‌ಗೆ ಡಿಕ್ಕಿ ಹೊಡೆದು ಎಳೆದೊಯ್ದ ಖಾಸಗಿ ಬಸ್‌, ಸವಾರನ ಸ್ಥಿತಿ ಗಂಭೀರ, ಎಲ್ಲಿ? ಹೇಗಾಯ್ತು ಘಟನೆ?

Incident-Near-Kushavathi-in-Thirthahalli.

ತೀರ್ಥಹಳ್ಳಿ: ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ ಭೀಕರ ಅಪಘಾತ (Bus Rams Bike) ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದು, ತೀರ್ಥಹಳ್ಳಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ತೀರ್ಥಹಳ್ಳಿಯ ಕುಶಾವತಿಯಲ್ಲಿ ಘಟನೆ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಖಾಸಗಿ ಬಸ್ಸು ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿತ್ತು. ಕುಶಾವತಿ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಬೈಕ್‌ ಮೇಲೆ ಹತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ … Read more

ಲಾರಿ ಚಕ್ರದಡಿ ಸಿಲುಕಿದ ಬೈಕ್‌, ಇಬ್ಬರು ಸವಾರರು ಸ್ಥಳದಲ್ಲೆ ಸಾವು

Bike-and-Lorry-mishap-at-thirthahalli

ತೀರ್ಥಹಳ್ಳಿ: ಲಾರಿ ಮತ್ತು ಬೈಕ್‌ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಆರ್‌.ಎಂ.ಸಿ ಯಾರ್ಡ್‌ ಬಳಿ ತಡರಾತ್ರಿ ಅಪಘಾತವಾಗಿದೆ. ಬೈಕ್‌ ಸವಾರರಾದ ಸುದೀಪ್‌ (25), ಸುಧೀಶ್‌ (30) ಮೃತರು. ಘಟನಾ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಬೈಕ್‌ ನಜ್ಜುಗುಜ್ಜಾಗಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಮೃತರು ತೀರ್ಥಹಳ್ಳಿಯ ಯಡೇಹಳ್ಳಿ ಮತ್ತು ಇಂದಿರಾನಗರಕ್ಕೆ ಸೇರಿದವರು. ತೀರ್ಥಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಅಗರದಹಳ್ಳಿ ಕ್ಯಾಂಪ್‌ನ ವ್ಯಕ್ತಿಗೆ … Read more

ಪತ್ನಿಗೆ ಚಿಕಿತ್ಸೆ ಕೊಡಿಸಿ ವಾಪಾಸಾದ ವ್ಯಕ್ತಿಗೆ ಕಾದಿತ್ತು ಶಾಕ್‌, ಹೊಳೆಹೊನ್ನೂರು ಠಾಣೆಯಲ್ಲಿ ದಾಖಲಾಯ್ತು ಕೇಸ್‌

Holehonnuru-Police-Station-Bhadravathi-jpg

ಭದ್ರಾವತಿ: ಪತ್ನಿಗೆ ಹುಷಾರಿಲ್ಲದ ಕಾರಣ ನಡು ಹಾದಿಯಲ್ಲಿ ಬೈಕ್‌ ನಿಲ್ಲಿಸಿ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದ ಸಂದರ್ಭ ಬೈಕ್‌ ಕಳ್ಳತನ ಮಾಡಲಾಗಿದೆ. ಗುಡ್ರುಕೊಪ್ಪ ಸರ್ಕಾರಿ ಶಾಲೆ ಸಮೀಪ ಘಟನೆ ಸಂಭವಿಸಿದೆ. ಮಾಳೇನಹಳ್ಳಿಯ ಕುಬೇರ ಎಂಬುವವರು ಪತ್ನಿಗೆ ಹುಷಾರಿಲ್ಲದ ಕಾರಣ ರಾತ್ರಿ ಬೈಕಿನಲ್ಲಿ ಅಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ತೀವ್ರ ಹುಷಾರಿಲ್ಲದ ಕಾರಣ ನಡು ಹಾದಿಯಲ್ಲೇ ಸರ್ಕಾರಿ ಶಾಲೆ ಬಳಿ ತಮ್ಮ ಸ್ಪ್ಲೆಂಡರ್‌ ಬೈಕ್‌ ನಿಲ್ಲಿಸಿ, ಪತ್ನಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಪಡೆದುಕೊಂಡು ಹಿಂತಿರುಗಿದಾಗ ಬೈಕ್‌ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಘಟನೆ … Read more

ದ್ವಿಚಕ್ರ ವಾಹನದಲ್ಲಿ ತೆರಳುವ ಮಹಿಳೆಯರೆ ಎಚ್ಚರ, ಶಿವಮೊಗ್ಗದ ವಿದ್ಯಾರ್ಥಿನಿಯಿಂದ ದಾಖಲಾಯ್ತು ಕೇಸ್‌

Tunga-Nagara-Police-Station-Shimoga

ಶಿವಮೊಗ್ಗ: ಬೈಕ್‌ನಲ್ಲಿ ಬಂದ ಆಗಂತುಕನೊಬ್ಬ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಕೊರಳಲ್ಲಿದ್ದ ಚಿನ್ನದ ಸರ (Gold Chain) ಕಸಿದು ಆಕೆಯನ್ನು ಬೀಳಿಸಿ ಪರಾರಿಯಾಗಿದ್ದಾನೆ. ಶಿವಮೊಗ್ಗದ ಕಲ್ಲೂರು – ಅಗಸವಳ್ಳಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕೋಚಿಂಗ್‌ಗೆ ತೆರಳುತ್ತಿದ್ದ ಬಿ.ಕಾಂ ವಿದ್ಯಾರ್ಥಿನಿ ಲಕ್ಷ್ಮಿ ಅವರ ಚಿನ್ನದ ಸರ ಕಳ್ಳತನವಾಗಿದೆ. ಲಕ್ಷ್ಮಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಚಿನ್ನದ ಸರ ಕಸಿದುಕೊಂಡಿದ್ದಾನೆ. ನಿಯಂತ್ರಣ ತಪ್ಪಿ ಲಕ್ಷ್ಮಿ ತಮ್ಮ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದಾರೆ ಎಂದು ಆರೋಪಿಸಲಾಗಿದೆ. ₹74,000 … Read more

ಆಫೀಸಿನಲ್ಲಿ ಕೆಲಸ ಮುಗಿಸಿ ಹೊರ ಬಂದ ಉದ್ಯಮಿಗೆ ಕಾದಿತ್ತು ಆಘಾತ, ಆಗಿದ್ದೇನು?

bike theft reference image

ಶಿವಮೊಗ್ಗ: ಕಚೇರಿಯಲ್ಲಿ ಕೆಲಸ ಮುಗಿಸಿ ಹಿಂತಿರುಗುವಷ್ಟರಲ್ಲಿ ಬೈಕ್‌ ಕಳ್ಳತನವಾಗಿದೆ (Theft) ಎಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ನೀಡಿದ್ದಾರೆ. ನಗರದ ದುರ್ಗಿಗುಡಿಯ ಶಿವಮೊಗ್ಗ ಆಪ್ಟಿಕಲ್ಸ್‌ ಎದುರಿನ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಓಂಪ್ರಕಾಶ್‌ ಎಂಬುವವರು ತಮ್ಮ ಬೈಕ್‌ ಅನ್ನು ನಿಲ್ಲಿಸಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಕಚೇರಿಗೆ ತೆರಳಿದ್ದರು. ‍ಸಂಜೆ 7 ಗಂಟೆಗೆ ಹಿಂತಿರುಗಿದಾಗ ಬೈಕ್‌ ಇರಲಿಲ್ಲ. ಟಿವಿಎಸ್‌ ಅಪಾಚೆ ಬೈಕ್‌ ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದು, ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಮಹಿಳೆಗೆ … Read more

ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ನೀಲಿ ಬಣ್ಣದ ಕಾರು

ACCIDENT-NEWS-GENERAL-IMAGE.

ಶಿವಮೊಗ್ಗ: ನೀಲಿ ಬಣ್ಣದ ಕಾರು ಡಿಕ್ಕಿಯಾಗಿ ಬೈಕಿನಲ್ಲಿದ್ದ (Bike) ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಘಟನೆ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ತಾಲೂಕು ಹಸೂಡಿ ಗ್ರಾಮದ ಸರ್ಕಾರಿ ಶಾಲೆ ಬಳಿ ಘಟನೆ ಸಂಭವಿಸಿದೆ. ಬಿದರೆಯ ಆದರ್ಶ ಮತ್ತು ಗಿರೀಶ್‌ ಗಾಯಗೊಂಡಿದ್ದಾರೆ. ಇಬ್ಬರು ಅಡಿಕೆ ಕೂಲಿ ಕೆಲಸಕ್ಕೆ ಹೋಗಿದ್ದು, ಅಲ್ಲಿಂದ ಹಸೂಡಿಗೆ ತೆರಳಿದ್ದರು. ಮಧ್ಯಾಹ್ನ ಬಿದರೆಗೆ ಮರಳುವಾಗ ವೇಗವಾಗಿ ಬಂದ ನೀಲಿ ಬಣ್ಣದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ … Read more

ಭದ್ರಾವತಿ ಕೂಡ್ಲಿಗೆರೆ ಬಳಿ ಬೈಕುಗಳು ಡಿಕ್ಕಿ, ಸವಾರನಿಗೆ ಗಾಯ

Bhadravathi-Rural-Police-Station

ಭದ್ರಾವತಿ: ತರಕಾರಿ ಖರೀದಿಸಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಮತ್ತೊಂದು ಬೈಕ್‌ ಡಿಕ್ಕಿ (Mishap) ಹೊಡೆದಿದೆ. ಭದ್ರಾವತಿ ತಾಲೂಕು ಕೂಡ್ಲಿಗೆರೆಯ ಬಸ್‌ ನಿಲ್ದಾಣದ ಬಳಿ ಅಪಘಾತವಾಗಿದೆ. ಕೂಡ್ಲಿಗೆರೆಯ ಮುರುಳಿ ಎಂಬುವವರಿಗೆ ಗಾಯವಾಗಿದೆ. ಅಂಗಡಿಯಲ್ಲಿ ತರಕಾರಿ ಖರೀದಿಸಿ ಬೈಕಿನಲ್ಲಿ ತೆರಳುತ್ತಿದ್ದರು. ತಮ್ಮ ಮನೆಗೆ ಹೋಗುವ ರಸ್ತೆಗೆ ಬೈಕ್‌ ತಿರುಗಿಸುತ್ತಿರುವಾಗ ವೇಗವಾಗಿ ಬಂದ ಸ್ಪ್ಲೆಂಡರ್‌ ಬೈಕ್‌ ಡಿಕ್ಕಿ ಹೊಡೆದಿದೆ. ಮುರುಳಿ ಅವರ ಕಾಲು, ಕಣ್ಣಿನ ಭಾಗ ಸೇರಿ ವಿವಿಧೆಡೆ ಗಾಯವಾಗಿದೆ. ಬೈಕಿಗು ಹಾನಿಯಾಗಿ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ … Read more