ಶಿವಮೊಗ್ಗ ಸಿಟಿಯಲ್ಲಿ ಸಕ್ರೆಬೈಲು ಆನೆಗಳ ತಾಲೀಮು ಶುರು

Sakrebyle-Elephant-practise-in-Shimoga-city.

ದಸರಾ ಸುದ್ದಿ: ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಆಗಮಿಸಿರುವ ಮೂರು ಆನೆಗಳಿಗೆ (Elephants) ನಗರದಲ್ಲಿ ತಾಲೀಮು ಆರಂಭವಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಇವತ್ತು ಆನೆಗಳಿಗೆ ತಾಲೀಮು ನಡೆಸಲಾಯಿತು. ಅಂಬಾರಿ ಹೊರಲಿರುವ ಸಾಗರ, ಬಾಲಣ್ಣ ಮತ್ತು ಬಹದ್ದೂರ್‌ ಆನೆಗಳು ನಗರದಲ್ಲಿ ತಾಲೀಮು ನಡೆಸಿದವು. ವಾಸವಿ ಶಾಲೆ ಆವರಣದಿಂದ ಹೊರಟ ಆನೆಗಳು ಕೋಟೆ ರಸ್ತೆ, ಗಾಂಧಿ ಬಜಾರ್‌, ಶಿವಪ್ಪ ನಾಯಕ ಪ್ರತಿಮೆ, ನೆಹರು ರಸ್ತೆ, ದುರ್ಗಿಗುಡಿ, ಜೈಲ್‌ ರಸ್ತೆ ಮೂಲಕ ಸಾಗಿದವು. ಇದನ್ನೂ ಓದಿ » ವಿಡಿಯೋ ಕರೆಯಲ್ಲೆ ಶಿವಮೊಗ್ಗದ … Read more

ಕುವೆಂಪು ವಿವಿಯಲ್ಲಿ ಮೇ 3ರಿಂದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ಯಾರೆಲ್ಲ ಪಾಲ್ಗೊಳ್ತಾರೆ? ಏನೆಲ್ಲ ಇರುತ್ತೆ?

Kuvempu-University-File-Image

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು (Camp) ಮೇ 3ರಿಂದ 9ರ ವರೆಗೆ ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಆವರಣದಲ್ಲಿನಡೆಯಲಿದೆ. ಇದನ್ನೂ ಓದಿ » ಜೋಗ ಜಲಪಾತ, ಮೊದಲ ದಿನವೇ ಜಲಾಧಾರೆ ಕಣ್ತುಂಬಿಕೊಂಡ ನೂರಾರು ಜನ ವೈವಿಧ್ಯಮಯ ಸಂಸ್ಕೃತಿ ಕ್ರಿಯಾಶೀಲತೆಯನ್ನು ಬಿಂಬಿಸಲಿರುವ ಶಿಬಿರದಲ್ಲಿ ಕರ್ನಾಟಕ ಅಲ್ಲದೆ ಪಾಂಡಿಚೇರಿ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶದ ವಿಶ್ವವಿದ್ಯಾಲಯಗಳ 150 ಎನ್.ಎಸ್.ಎಸ್ ಸ್ವಯಂ ಸೇವಕರು, ಘಟಕದ ಕಾರ್ಯಕ್ರಮಾಧಿಕಾರಿಗಳು ಭಾಗವಹಿಸುವರು. ‘ವಿಕಸಿತ ಭಾರತಕ್ಕಾಗಿ ಯುವ ಜನತೆ’ … Read more

ಶಿವಮೊಗ್ಗದ ಮಹಿಳೆ ಆಫ್ರಿಕಾದಲ್ಲಿ ಸಾವು, 3 ಲಕ್ಷ ಕಟ್ಟಿದರಷ್ಟೆ ಕೊಡ್ತಾರಂತೆ ಮೃತದೇಹ, ಏನಿದು ಕೇಸ್‌?

Hakki-Pikki-camp-Shamila-succumbed-at-Africa

ಶಿವಮೊಗ್ಗ : ಗಿಡಮೂಲಿಕೆ ಮಾರಾಟಕ್ಕಾಗಿ ಆಫ್ರಿಕಾ (Africa) ಖಂಡಕ್ಕೆ ತೆರಳಿದ್ದ ಹಕ್ಕಿಪಿಕ್ಕಿ ಕಾಲೋನಿಯ ಶಮೀಲಾ (41) ಎಂಬ ಮಹಿಳೆ ಮಲೇರಿಯಾ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಡುವಂತೆ ಕುಟುಂಬದವರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಶಿವಮೊಗ್ಗ ತಾಲೂಕು ಮಲ್ಲಿಗೇನಹಳ್ಳಿ ಬಳಿಯ ತುಂಗಾ ಚಾನಲ್‌ ಪಕ್ಕದ ಹಕ್ಕಿಪಕ್ಕಿ ಕಾಲೋನಿಯ ಶಿಖರಮಣಿ ಎಂಬುವವರ ಪುತ್ರಿ ಶಮೀಲಾ, ಆಫ್ರಿಕಾ (Africa) ಖಂಡದ ಗಿನಿ ದೇಶದಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಆಸ್ಪತ್ರೆ ಬಿಲ್‌ ಕಟ್ಟದೆ ಮೃತದೇಹ ಕೊಡುತ್ತಿಲ್ಲ ಗಿನಿಯ ಝೆರೆಕೊರೆ … Read more

ಎನ್‌ಸಿಸಿ ಕ್ಯಾಂಪ್‌ನಲ್ಲಿ 9 ಕೆಡೆಟ್‌ಗಳು ದಿಢೀರ್‌ ಅಸ್ವಸ್ಥ, ಮೆಗ್ಗಾನ್‌ ಆಸ್ಪತ್ರೆಗೆ ದಾಖಲು

NCC-Cadets-admitted-to-Shimoga-Mc-Gann-Hospital

SHIVAMOGGA LIVE NEWS | 16 JUNE 2024 SHIMOGA : ಎನ್‌ಸಿಸಿ ಕ್ಯಾಂಪ್‌ನಲ್ಲಿ (NCC) ಆಹಾರ ಸೇವಿಸಿದ 9 ಕೆಡೆಟ್‌ಗಳು ಅಸ್ವಸ್ಥಗೊಂಡಿದ್ದಾರೆ. ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಎನ್‌ಸಿಸಿ ಕ್ಯಾಂಪ್‌ ನಡೆಯುತ್ತಿದೆ. ಇವತ್ತು ಬೆಳಗ್ಗೆ ಆಹಾರ ಸೇವಿಸಿದ್ದ ಬಳಿಕ ಇಬ್ಬರು ಕೆಡೆಟ್‌ಗಳು ವಾಂತಿ ಮಾಡಿಕೊಂಡಿದ್ದಾರೆ. ಇವರನ್ನು ಗಮನಿಸಿ ಉಳಿದ 7 ಮಂದಿಗೆ ವಾಂತಿಯಾಗಿದೆ ಎನ್ನಲಾಗಿದೆ. ಅಸ್ವಸ್ಥರನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಬಳಿಕ … Read more

ಆಗುಂಬೆಯಲ್ಲಿ ಎಷ್ಟಾಗಿದೆ ಮಳೆ? | ಸೊರಬ, ತೀರ್ಥಹಳ್ಳಿ ಮಿನಿಸ್ಟರ್‌ ಭೇಟಿ | ರೈತ ಆತ್ಮಹತ್ಯೆ | ಮತ್ತಷ್ಟು ಫಟಾಫಟ್‌ ಸುದ್ದಿ

250623 Rain At agumbe Madhu Bangarappa to visit soraba thirthahalli

SHIVAMOGGA LIVE | 25 JUNE 2023 ಆಗುಂಬೆಯಲ್ಲಿ ಅತಿ ಹೆಚ್ಚು ಮಳೆ AGUMBE : ಶಿವಮೊಗ್ಗ ಜಿಲ್ಲೆಯಲ್ಲಿ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದೆ (Monsoon Rain). ಕಳೆದ 24 ಗಂಟೆ ಅವಧಿಯಲ್ಲಿ 57.50 ಮಿ.ಮೀ ಮಳೆಯಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಆಗುಂಬೆಯಲ್ಲಿ ಅತಿ ಹೆಚ್ಚು ಮಳೆಯಾಗುವ  (Monsoon Rain) ಕಾರಣ ಇದನ್ನು ದಕ್ಷಿಣ ಭಾರತದ ಚಿರಾಪೂಂಜಿ ಎಂದು ಕರೆಯಲಾಗುತ್ತದೆ. ಆದರೆ ವರ್ಷದಿಂದ ವರ್ಷಕ್ಕೆ ಆಗುಂಬೆಯಲ್ಲಿ ಮಳೆ ಪ್ರಮಾಣ ಕ್ಷೀಣವಾಗುತ್ತಿದೆ … Read more

ಶಿವಮೊಗ್ಗದಲ್ಲಿಯು ನಡೆದಿತ್ತು ಪುನೀತ್ ರಾಜಕುಮಾರ್ ಗಂಧದ ಗುಡಿ ಸಾಕ್ಷ್ಯಚಿತ್ರದ ಶೂಟಿಂಗ್

Puneeth-Rajkumar-Gandhadagudi-Shooting-in-sakrebyle-shimoga

SHIMOGA | ನಟ ಪುನೀತ್ ರಾಜಕುಮಾರ್ ಅವರ ಅಭಿನಯದ ಗಂಧದ ಗುಡಿ ಸಾಕ್ಷ್ಯಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ರಾಜ್ಯದ ವಿವಿಧೆಡೆ ಈ ಸಾಕ್ಷ್ಯಚಿತ್ರಕ್ಕಾಗಿ ಚಿತ್ರೀಕರಣ ಮಾಡಲಾಗಿತ್ತು. ಶಿವಮೊಗ್ಗದಲ್ಲಿಯು ಶೂಟಿಂಗ್ ನಡೆದಿತ್ತು. (PUNEETH RAJKUMAR IN SHIMOGA) 2021ರ ಸೆಪ್ಟೆಂಬರ್ 1ರಂದು ಶಿವಮೊಗ್ಗ ತಾಲೂಕು ಸಕ್ರೆಬೈಲಿನ ಆನೆ ಬಿಡಾರದಲ್ಲಿ ಗಂಧದಗುಡಿ ಸಾಕ್ಷ್ಯಚಿತ್ರದ ಶೂಟಿಂಗ್ ನಡೆಸಲಾಗಿತ್ತು. ನಟ ಪುನೀತ್ ರಾಜಕುಮಾರ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಬಿಡಾರದಲ್ಲಿ ಆನೆಗಳ ಕ್ರಾಲ್ ಇರುವ ಜಾಗದಲ್ಲಿ ಚಿತ್ರೀಕರಣ ನೆರವೇರಿಸಲಾಗಿತ್ತು. ಪುನೀತ್ ರಾಜಕುಮಾರ್ ಅವರು ಬಂದಿರುವ ವಿಚಾರ … Read more

ಇನ್ಮುಂದೆ ಸಕ್ರೆಬೈಲಿನಲ್ಲಿ ಆನೆಗಳನ್ನು ನೊಡುವುದರ ಜೊತೆಗೆ ದೋಣಿ ವಿಹಾರಕ್ಕೂ ಚಾನ್ಸ್

Boat-Riding-in-Shimoga-Sakrebyle-Elephant-Camp

SHIVAMOGGA LIVE NEWS | SHIMOGA | 2 ಜುಲೈ 2022 ಇನ್ಮುಂದೆ ಸೆಕ್ರಬೈಲಿಗೆ ಹೋದರೆ ಆನೆಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ತುಂಗಾ ನದಿ ಹಿನ್ನೀರಿನಲ್ಲಿ ದೋಣಿ (BOAT RIDE) ವಿಹಾರವನ್ನೂ ಮಾಡಬಹುದಾಗಿದೆ. ತುಂಗೆಯ ಹಿನ್ನೀರಿನಲ್ಲಿ ಬೋಟ್ ಸ್ಪೋರ್ಟ್ಸ್’ಗೆ ಚಾಲನೆ ನೀಡಲಾಗಿದೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಚಾಲನೆ ನೀಡಿದರು. ಒಂದು ಬೋಟ್, ಎರಡು ಕಯಾಕ್ ಬೋಟ್’ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಸಂಸದರಿಂದ ದೋಣಿ ಸವಾರಿ ದೋಣಿ ವಿಹಾರಕ್ಕೆ (BOAT RIDE) ಚಾಲನೆ ನೀಡಿದ ಬಳಿಕ ಸಂಸದ ಬಿ.ವೈ.ರಾಘವೇಂದ್ರ ಅವರು … Read more

ಸಕ್ರೆಬೈಲಿನಿಂದ 6 ಕಿ.ಮೀ ಸ್ವಚ್ಛತೆ, ವಿನಯ್ ಗುರೂಜಿ, ಡಾ.ಸರ್ಜಿ ನೇತೃತ್ವದಲ್ಲಿ ಅಭಿಯಾನ

Vinay-guruji-cleaning-in-Sakrebyle

SHIVAMOGGA LIVE NEWS | SHIMOGA | 30 ಜೂನ್ 2022 ಪರಿಸರ (NATURE) ರಕ್ಷಣೆಗೆ ಕಠಿಣ ಕಾನೂನು ಜಾರಿ ಮಾಡುವ ಅವಶ್ಯಕತೆ ಇದೆ. ಪರಿಸರ ನಾಶ ಮಾಡುವವರಿಗೆ ದೊಡ್ಡ ಮಟ್ಟದ ದಂಡ ಹಾಕಬೇಕಿದೆ. ಆಗ ಮಾತ್ರ ಪರಿಸರ ರಕ್ಷಣೆ ಮಾಡಲು ಸಾಧ್ಯ ಎಂದು ಹರಿಹರಪುರದ ಗೌರಿಗದ್ದೆ ಅವಧೂತ ವಿನಯ್ ಗುರೂಜಿ (VINAY GURUJI) ಅಭಿಪ್ರಾಯ ವ್ಯಕ್ತಪಡಿಸಿದರು. ಸಕ್ರೆಬೈಲು ಆನೆ ಬಿಡಾರದಿಂದ 6 ಕಿ.ಮೀ  ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಸ ಹಾಕಿದವರಿಗೆ ಅರಣ್ಯ … Read more

ವಿನೋಬನಗರ ಶಿವಾಲಯದಲ್ಲಿ ಇವತ್ತು ಉಚಿತ ಆರೋಗ್ಯ ತಪಾಸಣೆ, ತಜ್ಞ ವೈದ್ಯರು ಭಾಗಿ

Veerashaiva-Mahasabha-Youth-Wing-Health-Camp.

SHIVAMOGGA LIVE NEWS | HEALTH | 02 ಮೇ 2022 ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಮತ್ತು ಸೆಕ್ಯೂರ್ ಆಸ್ಪತ್ರೆ ವತಿಯಿಂದ ಶಿವಮೊಗ್ಗದಲ್ಲಿ ಇವತ್ತು ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ತಜ್ಞ ವೈದ್ಯರು ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶಿವಯೋಗಿ ಹಂಚಿನಮನೆ ಅವರು, ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಮೇ 2ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. … Read more

ರಸ್ತೆ ಮಧ್ಯೆ ಅಸ್ವಸ್ಥರಾಗಿ ಕೂತಿದ್ದ ದಂಪತಿಗೆ ನೆರವಾದ ಭದ್ರಾವತಿ ಶಾಸಕರು, ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್

020222 BK Sangameshwara Helps Aged Couple in Bhadravathi

ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 2 ಫೆಬ್ರವರಿ 2022 ರಸ್ತೆ ಮಧ್ಯೆ ಅಸ್ವಸ್ಥರಾಗಿ ಕುಸಿದು ಕೂತಿದ್ದ ದಂಪತಿಯನ್ನು ಭದ್ರಾವತಿ ಶಾಸಕ ಸಂಗಮೇಶ್ವರ್ ಅವರು ತಮ್ಮ ಕಾರಿನಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾಸಕರ ಈ ಕಾರ್ಯದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮ ಮುಗಿಸಿ, ಶಾಸಕ ಸಂಗಮೇಶ್ವರ್ ಅವರು ಭದ್ರಾವತಿಗೆ ಹಿಂತಿರುಗುತ್ತಿದ್ದರು. ರಸ್ತೆ ಮಧ್ಯೆ ವೃದ್ಧ ದಂಪತಿ ಅಸ್ವಸ್ಥರಾಗಿ ಕೂತಿದ್ದರು. ಇದನ್ನು ಗಮನಿಸಿದ … Read more