ಶಿವಮೊಗ್ಗ ನಗರದಲ್ಲಿ ಕಾರಿನ ಮೇಲೆ ಉರುಳಿದ ಮರ, ಸ್ವಲ್ಪದರಲ್ಲೇ ತಪ್ಪಿತು ಭಾರೀ ಅನಾಹುತ

050620 Tree fell on Car in JPN road 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜೂನ್ 2020 ಶಿವಮೊಗ್ಗ ನಗರದಲ್ಲಿ ಕಾರಿನ ಮೇಲೆ ಮರ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇರಲಿಲ್ಲ. ಇದರಿಂದ ಭಾರೀ ಅನಾಹುತ ತಪ್ಪಿದೆ. ಜೆಪಿಎನ್ ರಸ್ತೆಯಲ್ಲಿ ಮಧ್ಯಾಹ್ನ ಘಟನೆ ಸಂಭವಿಸಿದೆ. ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಶಾಪಿಂಗ್ ತೆರಳಿದ್ದಾಗ ಮರ ಧರೆಗುರುಳಿದೆ. ಘಟನೆಯಿಂದಾಗಿ ಜೆಪಿಎನ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಾಹನ ಸಂಚಾರ ನಿರ್ಬಂಧಿಸಲು ಸ್ಥಳೀಯರು ರಸ್ತೆ ಮೇಲೆ ಕಲ್ಲು ಇರಿಸಿದ್ದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ … Read more

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಬೈಕು, ಕಾರು ಢಿಕ್ಕಿ, ಒಬ್ಬ ಸಾವು, ಪೊಲೀಸ್ ಚೌಕಿಯು ಜಖಂ

ಶಿವಮೊಗ್ಗ ಲೈವ್.ಕಾಂ | SHIMOGA | 17 ಜನವರಿ 2020 ಶಿವಮೊಗ್ಗದ ಮಹಾವೀರ ಸರ್ಕಲ್’ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ. ಬೈಕ್ ಮತ್ತು ಕಾರಿನ ಮಧ್ಯೆ ಡಿಕ್ಕಿಯಾಗಿದೆ. ಬೈಕ್ ಸವಾರ ನಾಗರಾಜ್ (24) ಗಂಭೀರವಾಗಿ ಗಾಯಗೊಂಡಿದ್ದು, ಮೃತರಾಗಿದ್ದಾರೆ. ಹರೀಶ್, ರವಿ ಎಂಬುವವರಿಗೆ ಗಂಭೀರ ಗಾಯವಾಗಿದ್ದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಪಲ್ಟಿ, ಬೈಕು ನುಜ್ಜುಗುಜ್ಜು ರೈಲ್ವೆ ನಿಲ್ದಾಣದ ಕಡೆಯಿಂದ ಬರುತ್ತಿದ್ದ ಬೈಕ್ ಮತ್ತು ಕಾರಿನ ನಡುವೆ … Read more

THIRTHAHALLI | ಕಾರು ಬಸ್ಸು ಮುಖಾಮುಖಿ ಡಿಕ್ಕಿ, ಸ್ವಲ್ಪದರಲ್ಲಿ ತಪ್ಪಿತು ಭಾರೀ ಅನಾಹುತ, ಮೂವರಿಗೆ ಗಾಯ

ಶಿವಮೊಗ್ಗ ಲೈವ್.ಕಾಂ | AGUMBE | 01 ಡಿಸೆಂಬರ್ 2019 ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಮೂವರಿಗೆ ಗಾಯವಾಗಿದ್ದು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಗುಂಬೆ ಸಮೀಪದ ಬಿಳಚಿಕಟ್ಟೆ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಹೇಗಾಯ್ತು ಘಟನೆ? ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಆಗುಂಬೆ ಕಡೆಯಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ವಾಹನವೊಂದನ್ನು ಹಿಂದಿಕ್ಕುವ ರಭಸದಲ್ಲಿ ಬಸ್ಸು … Read more

ಶಿವಮೊಗ್ಗದಲ್ಲಿ ಆಟೋ, ಕಾರು ಅಪಘಾತ, ನಡು ರಸ್ತೆಯಲ್ಲೇ ಆಟೋ ಪಲ್ಟಿ

110519 Auto Accident at Mahaveera Circle 1

ಶಿವಮೊಗ್ಗ ಲೈವ್.ಕಾಂ | 11 ಮೇ 2019 ನಗರದ ಮಹಾವೀರ ಸರ್ಕಲ್’ನಲ್ಲಿ ಆಟೋ, ಕಾರು ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಮತ್ತು ಆಟೋ ಚಾಲಕರಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ರಭಸಕ್ಕೆ ಆಟೋ ಪಲ್ಟಿ ಹೊಡೆದಿದ್ದು, ಮುಂಭಾಗ ನುಜ್ಜುಗುಜ್ಜಾಗಿದೆ. ಇನ್ನು, ಕಾರಿಗೂ ಹಾನಿಯಾಗಿದ್ದು, ಚಾಲಕನ ಕಡೆಯ ಬಾಗಿಲಿಗೂ ಹಾನಿಯಾಗಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ … Read more

ಭದ್ರಾವತಿಯಲ್ಲಿ ಸಿಎಂ ಕಾರು ತಪಾಸಣೆ, ಶಿವಮೊಗ್ಗದಲ್ಲಿ ಡಿಕೆಶಿ ಹೆಲಿಕಾಪ್ಟರ್ ಪರಿಶೀಲನೆ, ಮೆರವಣಿಗೆಯಲ್ಲಿ ಏನೇನಾಯ್ತು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019 ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಗಣ್ಯಾತಿಗಣ್ಯರೇ ಈ ವೇಳೆ ಉಪಸ್ಥಿತರಿದ್ದರು. ಈ ವೇಳೆ ನಡೆದ ಕೆಲವು ಪ್ರಮುಖ ಸಂಗತಿಗಳು ಗಮನ ಸೆಳೆದವು. ಭದ್ರಾವತಿಯಲ್ಲಿ ಸಿಎಂ ಕಾರು ಚೆಕ್ಕಿಂಗ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳಗ್ಗೆ ಹಾಸನದಲ್ಲಿ ಪ್ರಚಾರ ನಡೆಸಿ, ಶಿವಮೊಗ್ಗಕ್ಕೆ ಬರುತ್ತಿದ್ದರು. ಭದ್ರಾವತಿ ಕಾರೇಹಳ್ಳಿ ಚೆಕ್’ಪೋಸ್ಟ್’ನಲ್ಲಿ ಸಿಎಂ ಕಾರು ತಡೆದ ಚುನಾವಣಾ ಸಿಬ್ಬಂದಿ, ಅವರ ಕಾರು ತಪಾಸಣೆ ನಡೆಸಿದರು. ಡಿಕೆಶಿ ಹೆಲಿಕಾಪ್ಟರ್ ಚೆಕ್ … Read more

ಮತ್ತೊಮ್ಮೆ ಜಪ್ತಿಯಾಯ್ತು ಸಾಗರ ಉಪ ವಿಭಾಗಾಧಿಕಾರಿ ಕಾರು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 22 ಮಾರ್ಚ್ 2019 ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ, ನ್ಯಾಯಾಲಯದ ಆದೇಶದಂತೆ ಸಾಗರ ಉಪ ವಿಭಾಗಾಧಿಕಾರಿ ಕಾರನ್ನು ಜಪ್ತಿ ಮಾಡಲಾಗಿದೆ. ಶಿಕಾರಿಪುರದ ಅಂಬ್ಲಿಗೊಳ ಜಲಾಶಯದ ಕೋಡಿ ಮತ್ತು ಏರಿ ಎತ್ತರಿಸುವ ಯೋಜನೆ ಸಂಬಂಧ ಸಾಗರ ತಾಲೂಕಿನ ರೈತರಿಗೆ ನೀಡಬೇಕಾದ ಹೆಚ್ಚುವರಿ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗಿತ್ತು. ಈ ಕಾಮಗಾರಿಯಿಂದ ಸಾಗರ ತಾಲೂಕಿನ ಆನಂದಪುರ ಹೋಬಳಿಯ ನಾಡವಳ್ಳಿ, ಗೌತಮಪುರ, ಭೈರಾಪುರ, ಕುಡಿಗೆರೆ ಗ್ರಾಮದ 22 ರೈತರಿಗೆ ಸಂಬಂಧಿಸಿದ ಜಮೀನುಗಳನ್ನು 2007 … Read more

BREAKING NEWS | ಜೋಗದಿಂದ ಮರಳುವಾಗ ಮರಕ್ಕೆ ಕಾರು ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

181218 Car Accident At Sagara 1

ಶಿವಮೊಗ್ಗ ಲೈವ್.ಕಾಂ | 18 ಡಿಸೆಂಬರ್ 2018 ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸಾಗರದ ಆಕಾಶ್ (21), ಅಣಲೆಕೊಪ್ಪದ ಲೋಹಿತ್ (21) ಮೃತಪಟ್ಟವರು. ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಮರತ್ತೂರು ಬಳಿ ಘಟನೆ ನಡೆದಿದೆ. ಜೋಗದಿಂದ ಆಲ್ಟೋ ಕಾರಿನಲ್ಲಿ ಸಾಗರಕ್ಕೆ ಮರಳುವಾಗ, ಚಾಲಕನ ನಿಯಂತ್ರಣ ತಪ್ಪಿ, ಕಾರು ಮರಕ್ಕೆ ಗುದ್ದಿದೆ. ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಇನ್ನು, ಗಂಭೀರವಾಗಿ ಗಾಯಗೊಂಡಿದ್ದ ಆಕಾಶ್ … Read more