ಶಿವಮೊಗ್ಗದಲ್ಲಿ ಬಸ್‌ ಹತ್ತಿ ಆಧಾರ್‌ ಕಾರ್ಡ್‌ ತೋರಿಸಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್‌, ಆಗಿದ್ದೇನು?

KSRTC-Bus-General-Image-Shimoga-Bangalore

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ (Bus) ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಪರ್ಸ್‌, ಚಿನ್ನಾಭರಣ ಕಳ್ಳತನ ಪ್ರಕರಣಗಳು ಮುಂದುವರೆದಿದೆ. ಗಾಂಧಿ ಬಜಾರ್‌ನ ಧರ್ಮರಾಯನ ಬೀದಿಯ ಗಾಯತ್ರಿ ಎಂಬುವವರ ವ್ಯಾನಿಟಿ ಬ್ಯಾಗ್‌ನಿಂದ ಚನ್ನದ ಸರ, ನಗದು ಮತ್ತು ಆಧಾರ್‌ ಕಾರ್ಡ್‌ ಕಳ್ಳತನ ಮಾಡಲಾಗಿದೆ. ಗಾಯತ್ರಿ ಅವರು ಹಿರೇಕೆರೂರಿನಲ್ಲಿರುವ ತಾಯಿ ಮನೆಗೆ ತೆರಳುತ್ತಿದ್ದರು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತಿದ್ದರು. ರಶ್‌ ಇದ್ದಿದ್ದರಿಂದ ನೂಕುನುಗ್ಗಲಿನಲ್ಲೆ ಬಸ್‌ ಹತ್ತಿ ಟಿಕೆಟ್‌ ಮಾಡಿಸಲು ಆಧಾರ್‌ ಕಾರ್ಡ್‌ ತೋರಿಸಲು ವ್ಯಾನಿಟಿ ಬ್ಯಾಗ್‌ಗೆ ಕೈ … Read more

ಶಿವಮೊಗ್ಗದ ಮಹಿಳೆಯರೆ ಹುಷಾರ್‌, ದಾಖಲಾಯ್ತು ಮತ್ತೊಂದು ಕೇಸ್‌

Crime-News-General-Image

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಳೆದ ಕೆಲವು ದಿನದಿಂದ ಮತ್ತೆ ಚಿನ್ನದ ಸರ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಮಹಿಳೆಯೊಬ್ಬರು ಶಾಪಿಂಗ್‌ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮರಳುತ್ತಿದ್ದಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅರ್ಧ ಭಾಗ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ಸಂಗೀತಾ ಎಂಬುವವರು ಗೋಪಾಳದಲ್ಲಿ ಶಾಪಿಂಗ್‌ ಮುಗಿಸಿ ತಮ್ಮ ದ್ವಿಚಕ್ರ ವಾಹನವನ್ನು ಚಲಾಯಿಸಿಕಂಡು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಮನೆಗೆ ಮರಳುತ್ತಿದ್ದರು. ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ಎದುರು ರಸ್ತೆಯಲ್ಲಿ ಮತ್ತೊಂದು ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ, ಸಂಗೀತಾ ಅವರ ಕೊರಳಿಗೆ ಕೈ … Read more

ದ್ವಿಚಕ್ರ ವಾಹನದಲ್ಲಿ ತೆರಳುವ ಮಹಿಳೆಯರೆ ಎಚ್ಚರ, ಶಿವಮೊಗ್ಗದ ವಿದ್ಯಾರ್ಥಿನಿಯಿಂದ ದಾಖಲಾಯ್ತು ಕೇಸ್‌

Tunga-Nagara-Police-Station-Shimoga

ಶಿವಮೊಗ್ಗ: ಬೈಕ್‌ನಲ್ಲಿ ಬಂದ ಆಗಂತುಕನೊಬ್ಬ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಕೊರಳಲ್ಲಿದ್ದ ಚಿನ್ನದ ಸರ (Gold Chain) ಕಸಿದು ಆಕೆಯನ್ನು ಬೀಳಿಸಿ ಪರಾರಿಯಾಗಿದ್ದಾನೆ. ಶಿವಮೊಗ್ಗದ ಕಲ್ಲೂರು – ಅಗಸವಳ್ಳಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕೋಚಿಂಗ್‌ಗೆ ತೆರಳುತ್ತಿದ್ದ ಬಿ.ಕಾಂ ವಿದ್ಯಾರ್ಥಿನಿ ಲಕ್ಷ್ಮಿ ಅವರ ಚಿನ್ನದ ಸರ ಕಳ್ಳತನವಾಗಿದೆ. ಲಕ್ಷ್ಮಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಚಿನ್ನದ ಸರ ಕಸಿದುಕೊಂಡಿದ್ದಾನೆ. ನಿಯಂತ್ರಣ ತಪ್ಪಿ ಲಕ್ಷ್ಮಿ ತಮ್ಮ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದಾರೆ ಎಂದು ಆರೋಪಿಸಲಾಗಿದೆ. ₹74,000 … Read more

ರವೀಂದ್ರನಗರ, ವೆಂಕಟೇಶನಗರದಲ್ಲಿ ಮಾಂಗಲ್ಯ ಸರ ಅಪಹರಣ, ಹೇಗಾಯ್ತು ಘಟನೆ?

Shimoga-Police-Jeep

ಶಿವಮೊಗ್ಗ: ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರ ಸರಗಳ್ಳತನ (Chain snatching) ಮಾಡಿದ್ದಾರೆ. ಒಂದು ಪ್ರಕರಣದಲ್ಲಿ ಮಾಂಗಲ್ಯ ಸರದ ಸ್ವಲ್ಪ ಭಾಗ ಮಾತ್ರ ಕಳ್ಳನ ಪಾಲಾಗಿದೆ. ಎಲ್ಲೆಲ್ಲಿ ಹೇಗಾಯ್ತು ಘಟನೆ? ಪ್ರಕರಣ 1 : ರವೀಂದ್ರ ನಗರ ಸೆ.11ರಂದು ಬೆಳಗ್ಗೆ 6.50ರ ಹೊತ್ತಿಗೆ ಶಿವಮೊಗ್ಗದ ರವೀಂದ್ರನಗರದ ರೈಲ್ವೆ ಹಳಿ ಪಕ್ಕದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸುಶೀಲಮ್ಮ ಎಂಬುವವರ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಸರಗಳ್ಳ ಸುಶೀಲಮ್ಮ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರ … Read more

ಗಾಂಧಿ ಬಜಾರ್‌ನಲ್ಲಿ ಹಾಡಹಗಲೆ ಮಹಿಳೆಗೆ ಮಂಕು ಕವಿಯುವಂತೆ ಮಾಡಿದ ಕಳ್ಳಿಯರು, ಮುಂದೇನಾಯ್ತು?

041023 Gandhi Bazaar In Shimoga.webp

SHIVAMOGGA LIVE NEWS | 28 MAY 2024 SHIMOGA : ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ಹಿಂದಿನಿಂದ ಬಂದು ಬೆನ್ನು ತಟ್ಟಿ, ಕೈಗೆ ಏನೋ ಸವರಿ ಬಂಗಾರದ ಸರ ಕಳ್ಳತನ (Chain Theft) ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಂಧಿ ಬಜಾರ್‌ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಘಟನೆ ಸಂಭವಿಸಿದ್ದು ಹೇಗೆ? ಗೋಪಾಳದ ಶಾಂತಾ ಜವಾಹರ ಎಂಬುವವರು ಗಾಂಧಿ ಬಜಾರ್‌ನಲ್ಲಿ ನಡೆದು ಹೋಗುತ್ತಿದ್ದಾಗ ಹಿಂಬದಿಯಿಂದ ಇಬ್ಬರು ಮಹಿಳೆಯರು ಬಂದು ಬೆನ್ನು ತಟ್ಟಿದ್ದಾರೆ. ಶಾಂತಾ ಅವರು ತಿರುಗುತ್ತಿದ್ದಂತೆ ಕೈಗೆ … Read more

ಶಿವಮೊಗ್ಗದಲ್ಲಿ ಪರೀಕ್ಷಾ ಕೊಠಡಿಯಿಂದ ಹೊರ ಬಂದು ಬ್ಯಾಗ್‌ಗೆ ಕೈ ಹಾಕಿದ ವಿದ್ಯಾರ್ಥಿನಿಗೆ ಕಾದಿತ್ತು ಆಘಾತ

Doddapete-Police-Station.

SHIVAMOGGA LIVE NEWS | 1 MAY 2024 SHIMOGA : ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯ ಚಿನ್ನ ಸರ ಕಳ್ಳತನವಾಗಿದೆ. ಕಸ್ತೂರ ಬಾ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಶಿಕಾರಿಪುರ ತಾಲೂಕು ತಾಳಗುಂದದ ಸಿಂಚನಾ ಬ್ಯಾಗಿನಲ್ಲಿಟ್ಟಿದ್ದ ಚಿನ್ನದ ಸರ ನಾಪತ್ತೆಯಾಗಿದೆ. ಅಂದಾಜು 44 ಸಾವಿರ ರೂ. ಮೌಲ್ಯದ  10 ಗ್ರಾಂ ತೂಕದ ಸರ ಕಳುವಾಗಿದೆ ಎಂದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏ.18 ಮತ್ತು 19ರಂದು ಶಿವಮೊಗ್ಗದ ಪರೀಕ್ಷಾ ಕೇಂದ್ರದಲ್ಲಿ ಸಿಂಚನಾ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದಳು. … Read more

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಅರ್ಧ ಮಾಂಗಲ್ಯ ಸರ ಅಪಹರಣ, ಘಟನೆ ಸಂಭವಿಸಿದ್ದು ಹೇಗೆ?

Sagara Police Station Building

SHIVAMOGGA LIVE NEWS | 18 APRIL 2024 SAGARA : ನಡೆದು ಹೋಗುತ್ತಿದ್ದ ವೃದ್ಧೆಯೊಬ್ಬರ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತರು ವಿಳಾಸ ಕೇಳುವಂತೆ ನಟಿಸಿ ಮಾಂಗಲ್ಯ ಸರ ಅಪಹರಿಸಿದ್ದಾರೆ. ಸಾಗರದ ಅಣಲೆಕೊಪ್ಪ ಬಡಾವಣೆಯ ರಾಬಿಯಾ ಮಸೀದಿ ಬಳಿ ಘಟನೆ ನಡೆದಿದೆ. ಅಪರಿಚಿತರು ಶಿರವಾಳ ಗ್ರಾಮದ ಕಡೆಯಿಂದ ಬೈಕ್‌ನಲ್ಲಿ ಬಂದಿದ್ದರು. ವಿಳಾಸ ಕೇಳುವ ನೆಪದಲ್ಲಿ ಶಾಂತಮ್ಮ ಎಂಬುವರ ಮಾಂಗಲ್ಯ ಸರ ಕೀಳಲು ಮುಂದಾಗಿದ್ದಾರೆ. ಶಾಂತಮ್ಮ ಪ್ರತಿರೋಧ ವ್ಯಕ್ತಪಡಿಸಿದಾಗ 40 ಗ್ರಾಂ ತೂಕದ ಮಾಂಗಲ್ಯ ಸರದ ಪೈಕಿ 23 ಗ್ರಾಂ … Read more

ವಾಕಿಂಗ್‌ ತೆರಳುವವರೆ ಹುಷಾರ್‌, ಶಿವಮೊಗ್ಗದ ಮೂರು ಕಡೆ ಮಹಿಳೆಯರ ಕೊರಳಿಗೆ ಕೈ ಹಾಕಿದ ಖದೀಮರು

Chain theft at Shimoga gundappa shed

SHIVAMOGGA LIVE NEWS | 6 APRIL 2024 SHIMOGA : ಮಲ್ಲೇಶ್ವರದ ನಗರದಲ್ಲಿ ವಾಕಿಂಗ್‌ಗೆ ತೆರಳಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ ಕಳವು ಪ್ರಕರಣ ಸಿಸಿಟಿವಿ ದೃಶ್ಯ ವೈರಲ್‌ ಆಗಿತ್ತು. ಅದೇ ದಿನ ಖದೀಮರು ನಗರದ ವಿವಿಧೆಡೆ ಮಹಿಳೆಯರ ಚಿನ್ನದ ಸರ ಕಳವು ಮಾಡಿದ್ದಾರೆ. ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಕೇಸ್‌ 1 : ಮಲ್ಲೇಶ್ವರ ನಗರ ಸಮಯ : ಬೆಳಗ್ಗೆ 5.15 ಮಲ್ಲೇಶ್ವರ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮನೆ ಎದುರು ವಾಕಿಂಗ್‌ … Read more

ಬೆಳಂಬೆಳಗ್ಗೆ ಈಶ್ವರಪ್ಪ ಮನೆ ಎದುರು ಬೈಕ್‌ ನಿಲ್ಲಿಸಿದರು, ಕೆಲವೇ ಕ್ಷಣದಲ್ಲಿ ಮಹಿಳೆಯ ಕೊರಳಿಗೆ ಕೈ ಹಾಕಿದರು

Chain theft at Shimoga gundappa shed

HIGHLITES ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಮಹಿಳೆಯ ಸರಗಳ್ಳತನ ವಿಳಾಸ ಕೇಳುವ ನೆಪದಲ್ಲಿ ನಡೆಯಿತು ಕೃತ್ಯ ಬೈಕ್‌ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಕಳ್ಳತನ SHIVAMOGGA LIVE NEWS | 4 APRIL 2024 SHIMOGA : ವಾಕಿಂಗ್‌ಗೆ ತೆರಳಿದ್ದ ಮಹಿಳೆಯೊಬ್ಬರ ಸರಗಳ್ಳತನ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ದುಷ್ಕೃತ್ಯ ಎಸಗಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನೆಯ ಗೇಟ್‌ನಲ್ಲಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಮಲ್ಲೇಶ್ವರನಗರದಲ್ಲಿ ಬೆಳಗ್ಗೆ 5 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಬೈಕ್‌ನಲ್ಲಿ ಬಂದ ಇಬ್ಬರು ವಿಳಾಸ … Read more

ದುರ್ಗಿಗುಡಿ ದುರ್ಗಮ್ಮ ಜಾತ್ರೆ ವೇಳೆ ದೇಗುಲದ ಬಾಗಿಲ ಬಳಿ ಬಂದು ನಿಂತಿದ್ದ ಮಹಿಳೆಗೆ ಕಾದಿತ್ತು ಶಾಕ್

Crime-News-General-Image

SHIVAMOGGA LIVE NEWS | 28 MARCH 2024 SHIMOGA : ದುರ್ಗಿಗುಡಿ ದುರ್ಗಮ್ಮ ಜಾತ್ರೆ ವೇಳೆ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನವಾಗಿದೆ. ದೇಗುಲದ ಮುಂದೆ ನಿಂತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಪೂಜಿನಗರ ನಿವಾಸಿ ಯಶೋಧ ಅವರು ತನ್ನ ತಂಗಿ ಮತ್ತು ಅಕ್ಕನ ಮಗಳ ಜೊತೆಗೆ ದುರ್ಗಿಗುಡಿಯ ದುರ್ಗಮ್ಮ ಜಾತ್ರೆಗೆ ಆಗಮಿಸಿದ್ದರು. ದೇವರ ದರ್ಶನಕ್ಕೆಂದು ದೇಗುಲದ ಮುಂದೆ ನಿಂತಿದ್ದಾಗ ಯಶೋಧ ಅವರ ಭುಜದ ಮೇಲೆ ಲಕ್ಷ್ಮಿ ಪೆಂಡೆಂಟ್‌ ಸಿಕ್ಕಿಬಿದ್ದಿತ್ತು. ಇದನ್ನು ಗಮನಿಸಿದ ತಂಗಿ ಯಶೋಧ ಅವರಿಗೆ ತಿಳಿಸಿದ್ದರು. … Read more