ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್‌ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?

Crime-News-General-Image

ಶಿವಮೊಗ್ಗ: ಪೆಸೆಟ್‌ ಕಾಲೇಜು ಬಸ್‌ (College Bus) ಅಡ್ಡಗಟ್ಟಿ ಚಾಲಕನಿಗೆ ಜೀವ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆಸೆಟ್‌ (PESIT) ಕಾಲೇಜು ಬಸ್‌ ಚಾಲಕ ಹುಚ್ಚರಾಯ ಅವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹಿಂತಿರುಗುತ್ತಿದ್ದಾಗ ಘಟನೆ ಸಂಭವಿಸಿದೆ. ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿನೋಬನಗರ ಆಟೋ ನಿಲ್ದಾಣದ ಬಳಿ ಪೆಸೆಟ್‌ ಕಾಲೇಜು ಬಸ್‌ ಅಡ್ಡಗಟ್ಟಿ ಚಾಲಕನಿಗೆ ನಿಂದಿಸಿದ್ದಾರೆ. ಬಸ್ಸು ಉಷಾ ನರ್ಸಿಂಗ್‌ ಹೋಂ ಬಳಿ ಹೋಗುತ್ತಿದ್ದಾಗ ಬೈಕಿನಲ್ಲಿ ಮೂವರು ಪುನಃ ಅಡ್ಡಗಟ್ಟಿ ಚಾಲಕ … Read more

ಶಿವಮೊಗ್ಗದ ಪಿಇಎಸ್‌ ಸಂಸ್ಥೆಗೆ ನೂತನ ಕುಲಸಚಿವರ ನೇಮಕ

New-Registrar-for-PES-Institutions.

ಶಿವಮೊಗ್ಗ: ಪಿಇಎಸ್‌ ಸಂಸ್ಥೆಯಲ್ಲಿ ಈವರೆಗೆ ಆಡಳಿತ ಸಂಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಡಾ. ನಾಗರಾಜ. ಆರ್ ಅವರನ್ನು ಪಿಇಎಸ್ ಸಂಸ್ಥೆಯ ಕುಲಸಚಿವರಾಗಿ (ರಿಜಿಸ್ಟ್ರಾರ್) ಪದೋನ್ನತಿ ನೀಡಲಾಗಿದೆ. 2008 ರಲ್ಲಿ ಪಿಇಎಸ್ ಸಂಸ್ಥೆಯ ಎಂಬಿಎ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ನೇಮಕ ಗೊಂಡು 2011ರಲ್ಲಿ ಅದನ್ನು ಸಂಶೋಧನಾ ಕೇಂದ್ರವಾಗಿ ಮಾರ್ಪಡಿಸಿದರು. ಅವರ ಬೋಧನಾ ಕ್ಷೇತ್ರದಲ್ಲಿ ಮಾರ್ಕೆಟಿಂಗ್, ಮ್ಯಾ ನೇಜ್‌ಮೆಂಟ್ ಮತ್ತು ಸಂಯೋಜಿತ ಕೋರ್ಸ್‌ಗಳು ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ » ‘ಶಿವಮೊಗ್ಗಕ್ಕೆ ಇನ್ನೂ ₹100 ಕೋಟಿ ಬರಬೇಕಿತ್ತು’, ಸಂಸದ … Read more

ಶಿವಮೊಗ್ಗದಲ್ಲಿ ರಸ್ತೆಗೆ ಅಡ್ಡ ಬಿತ್ತು ರೆಂಬೆ, ನಾಗರಿಕ ಪ್ರಜ್ಞೆ ಮೆರೆದ ವಿದ್ಯಾರ್ಥಿಗಳು, ತಪ್ಪಿತು ಟ್ರಾಫಿಕ್‌ ಜಾಮ್‌

ATNCC-NSS-Students-clear-road.

ಶಿವಮೊಗ್ಗ: ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರದ ರೆಂಬೆಯನ್ನು ATNC ಕಾಲೇಜು ಎನ್‌ಎಸ್‌ಎಸ್‌ ಸ್ವಯಂ ಸೇವಕರು  (Students) ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟಿದ್ದಾರೆ. ಮಹಾವೀರ ವೃತ್ತದಿಂದ ಬಸವೇಶ್ವರ ಸರ್ಕಲ್‌ಗೆ ತೆರಳುವ ರಸ್ತೆಯಲ್ಲಿ ಮರದ ರೆಂಬೆ ತುಂಡಾಗಿ ಬಿದ್ದಿತು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಒಂದು ಬದಿಯ ರಸ್ತೆ ಸಂಪೂರ್ಣ ಬಂದ್‌ ಆಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಶಾಲೆ, ಕಾಲೇಜು, ಕಚೇರಿಗಳಿಗೆ ತರಳುವವರಿಗೆ ಸಮಸ್ಯೆಯಾಗಿತ್ತು. ATNC ಕಾಲೇಜಿನ ಎನ್‌ಎಸ್‌ಎಸ್‌ ಸ್ವಯಂ ಸೇವಕರು, ಉಪನ್ಯಾಸಕರು ತುಂಡಾಗಿ ಬಿದ್ದಿದ್ದ ಮರದ ರೆಂಬೆ ತೆರವು … Read more

ಸಹ್ಯಾದ್ರಿ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ, ದಿನಾಂಕ ಪ್ರಕಟ, ಯಾವಾಗ? ಎಲ್ಲಿ?

Sahyadri-Science-college-principal-Rajeshwari.

ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ನ. 22ರ ಬೆಳಗ್ಗೆ 10ರಿಂದ ಕಾಲೇಜಿನ  (College) ಸಭಾಂಗಣದಲ್ಲಿ ‘ನಮ್ಮ ಸಹ್ಯಾದ್ರಿ, ನಮ್ಮ -2025’ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜೇಶ್ವರಿ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಹುದ್ದೆ, ಸ್ವಂತ ಉದ್ಯಮ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿದ್ದಾರೆ. ಈ ಎಲ್ಲರ ಅಭಿಪ್ರಾಯದಂತೆ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದೆ … Read more

ಶಿವಮೊಗ್ಗದಲ್ಲಿ ನಾಲ್ಕು ದಿನ ಕೃಷಿ, ತೋಟಗಾರಿಕೆ ಮೇಳ, ದಿನಾಂಕ ಪ್ರಕಟ, ಏನೆಲ್ಲ ವಿಶೇಷತೆ ಇರಲಿದೆ?

Agriculture-University-Iruvakki-sagara-campus-board

ಶಿವಮೊಗ್ಗ: ‘ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ’ ಘೋಷವಾಕ್ಯದಡಿ ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ (Agriculture) ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನ.7ರಿಂದ 10ರವರೆಗೆ ಕೃಷಿ ಮತ್ತು ತೋಟಗಾರಿಕೆ ಮೇಳ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್‌.ಸಿ.ಜಗದೀಶ್‌, ಮೇಳದಲ್ಲಿ ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನ, ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣ ಪ್ರದರ್ಶನ, ವಿಜ್ಞಾನಿಗಳು–ರೈತರೊಂದಿಗೆ ಸಂವಾದ ಮತ್ತು ವಿಚಾರ ಗೋಷ್ಠಿಯನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು. ಮೇಳದಲ್ಲಿ ಏನೇನೆಲ್ಲ ಇರಲಿದೆ? ಕೃಷಿ ಮತ್ತು ತೋಟಗಾರಿಕಾ … Read more

ಶಿವಮೊಗ್ಗದ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆ, ಏನೆಲ್ಲ ಸ್ಪರ್ಧೆಗಳಿವೆ?

PACE-PU-COLLEGE-SHIMOGA.

ಶಿವಮೊಗ್ಗ: ತ್ಯಾವರೆಕೊಪ್ಪದ ಪ್ರಾಣಿ ಸಂಗ್ರಹಾಲಯ ಹಾಗೂ ಹುಲಿ ಮತ್ತು ಸಿಂಹಧಾಮ, ಶಿವಮೊಗ್ಗದ ಪೇಸ್ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ 8, 9 ಮತ್ತು 10ನೇ ತರಗತಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅ.25ರಂದು ಬೆಳಗ್ಗೆ 9 ಗಂಟೆಗೆ ತೇವರಚಟ್ನಹಳ್ಳಿಯ ಪೇಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಸ್ಪರ್ಧೆಗಳು (Competition) ನಡೆಯಲಿವೆ. ಯಾವೆಲ್ಲ ಸ್ಪರ್ಧಗಳು ನಡೆಯಲಿವೆ? ರಸಪ್ರಶ್ನೆ: ವನ್ಯಜೀವಿಗಳು ಮತ್ತು ಸಾಮಾನ್ಯ ಜ್ಞಾನ ಕುರಿತು ಕೃತಕ ಬುದ್ಧಿಮತ್ತೆ (AI) ಪೇಂಟಿಂಗ್‌: ಶಿವಮೊಗ್ಗ ಜಿಲ್ಲಾ ವನ್ಯಜೀವಿಗಳನ್ನು ಕುರಿತ ಚಿತ್ರಕಲೆ ಪವರ್ … Read more

ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಂದ ಬೀದಿ ನಾಟಕ, ಹೇಗಿತ್ತು ನಾಟಕ?

270925-street-drama-in-Shimog-dasara.webp

ಶಿವಮೊಗ್ಗ: ರಂಗ ದಸರಾದಲ್ಲಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ನಗರದ ವಿವಿಧೆಡೆ ಹಲವು ಲಾವಣಿ ಮತ್ತು ಜನಪದ ಕಥೆ ಆಧಾರಿತ ಸ್ವಾತಂತ್ರ್ಯ ಹೋರಾಟದ ‘ಹಲಗಲಿ’ ಬೀದಿ ನಾಟಕ (Street Drama) ಪ್ರದರ್ಶಿಸಿದರು. ಬೀದಿ ನಾಟಕ ಪ್ರದರ್ಶನವನ್ನು ಆ‌ರ್ ಟಿಒ ಕಚೇರಿ ರಸ್ತೆಯಲ್ಲಿ ಶಿವಮೊಗ್ಗ ಪ್ರೆಸ್‌ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಉದ್ಘಾಟಿಸಿದರು. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್‌, ನಾಟಕದ ನಿರ್ದೇಶಕ ಚಂದನ್‌ ನೀನಾಸಂ ಸೇರಿ ಹಲವರು ಇದ್ದರು. ವಿನೋಬನಗರ ಎಪಿಎಂಸಿ ತರಕಾರಿ ಮಾರುಕಟ್ಟೆ, ಎಟಿಎನ್‌ಸಿ ಕಾಲೇಜು, ಆರ್‌ಟಿಒ … Read more

ಎಟಿಎನ್‌ಸಿ ಕಾಲೇಜಿನಲ್ಲಿ ಎನ್‌ಎಸ್‌ಎಸ್‌ ದಿನಾಚರಣೆ, ಧ್ವಜಾರೋಹಣ

NSS-Flag-hoisting-at-ATNCC-College

ಶಿವಮೊಗ್ಗ: ಎಟಿಎನ್‌ಸಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ (NSS Day) ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿಗಳಾದ ಪ್ರೊ. ಮಂಜುನಾಥ್‌.ಎನ್‌, ಗಾಯತ್ರಿ ಸೇರಿದಂತೆ ಹಲವರು ಇದ್ದರು. ಸಂಯೋಜನಾಧಿಕಾರಿ ಪ್ರವೀಣ್‌.ಬಿ.ಎನ್‌ ಸ್ವಯಂ ಸೇವಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಎಲ್ಲ ತರಗತಿಗಳಲ್ಲಿಯು ಎನ್‌ಎಸ್‌ಎಸ್‌ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಇದನ್ನೂ ಓದಿ » ವಿಡಿಯೋ ಕರೆಯಲ್ಲೆ ಶಿವಮೊಗ್ಗದ ವ್ಯಕ್ತಿ ಅರೆಸ್ಟ್‌, ಹುಷಾರ್‌ ಮುಂದಿನ ಟಾರ್ಗೆಟ್‌ ನೀವೆ, ಏನಿದು ಕೇಸ್‌?

ಶಾಲೆ, ಕಾಲೇಜಿಗೆ ರಜೆ ಆದೇಶ ಎಡಿಟ್‌ ಮಾಡಿ ವೈರಲ್‌, ಕಿಡಿಗೇಡಿಗಳ ವಿರುದ್ಧ ತೀರ್ಥಹಳ್ಳಿಯಲ್ಲಿ ಕೇಸ್‌

Thirthahalli-News-Update

ತೀರ್ಥಹಳ್ಳಿ: ಶಾಲೆ, ಕಾಲೇಜುಗಳಿಗೆ ತಹಶೀಲ್ದಾರ್‌ ರಜೆ (Holiday) ಘೋಷಣೆ ಮಾಡಿದ್ದ ಆದೇಶ ಪ್ರತಿಯಲ್ಲಿದ್ದ ದಿನಾಂಕ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದರಿಂದ ಆ.18ರಂದು ತೀರ್ಥಹಳ್ಳಿ ತಹಶೀಲ್ದಾರ್‌ ಅವರು ಅಂಗನವಾಡಿಗಳು, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಈ ಆದೇಶ ಪ್ರತಿಯಲ್ಲಿದ್ದ ದಿನಾಂಕ ಎಡಿಟ್‌ ಮಾಡಿ, ಆ.19ರಂದು ರಜೆ ಎಂದು ದಿನಾಂಕ ಬದಲಾಯಿಸಲಾಗಿತ್ತು. ಇದನ್ನೂ ಓದಿ » ಗೌರಿ – ಗಣೇಶ ಹಬ್ಬ, ಶಿವಮೊಗ್ಗ ಜಿಲ್ಲಾಧಿಕಾರಿಯಿಂದ 8 ಪಾಯಿಂಟ್‌ನ … Read more

ಎಸ್ಸೆಸ್ಸೆಲ್ಸಿ ಪ್ರಥಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿನಿಗೆ ಉಚಿತ ಸೀಟ್‌, ಪಿಯುಸಿಯ ಟಾಪರ್‌ಗಳಿಗೆ ಅಮೆರಿಕ ಟೂರ್‌

sslc-first-rank-holder-namana-at-arya-pu-college

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ (Rank) ಪಡೆದ ವಿದ್ಯಾರ್ಥಿನಿ ನಮನಾ.ಕೆ ಅವರಿಗೆ ಆರ್ಯ ಪಿ.ಯು. ಕಾಲೇಜಿನಲ್ಲಿ ಉಚಿತ ಸೀಟ್‌ ನೀಡಲಾಗಿದೆ. ಅಲ್ಲದೆ ದ್ವಿತೀಯ ಪಿ.ಯು ಕಾಲೇಜಿನಲ್ಲಿ ಟಾಪರ್‌ ಆಗುವವರಿಗೆ ಅಮೆರಿಕಾ ಪ್ರವಾಸಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನಮನಾ.ಕೆ 625 ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ. ಇಂದು ಆರ್ಯ ಪಿ.ಯು ಕಾಲೇಜಿನಲ್ಲಿ ನಮನಾ ಅವರಿಗೆ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಶಾಲೆ ಆರಂಭಿಸಿ 18 ವರ್ಷವಾಗಿದೆ. … Read more