ಶಿವಮೊಗ್ಗಕ್ಕೆ ಸಚಿವ ಶ್ರೀರಾಮುಲು ಭೇಟಿ,ಮಂಗನ ಕಾಯಿಲೆ ನಿಯಂತ್ರಣಕ್ಕೆ ವಿಶೇಷ ಸಭೆ ಕರೆಯುವ ಭರವಸೆ

020520 Minister Sriramulu Visit Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 2 ಮೇ 2020 ಶಿವಮೊಗ್ಗ ಜಿಲ್ಲೆಯ ತಾಲೂಕುಗಳನ್ನು ಕಾಡುತ್ತಿರುವ ಮಂಗನ ಕಾಯಿಲೆ (ಕೆಎಫ್‍ಡಿ) ಸಮರ್ಪಕ ನಿಯಂತ್ರಣಕ್ಕಾಗಿ ವಿಶೇಷ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಅಂತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಜಿಲ್ಲೆಯಲ್ಲಿ ಕರೋನಾ ಹಾಗೂ ಕೆಎಫ್‍ಡಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು. ಕೆಎಫ್‍ಡಿ ಬಗ್ಗೆ ಈಗಾಗಲೇ ಜಿಲ್ಲೆಯ ಶಾಸಕರು ವಿಧಾನಸಭೆಯಲ್ಲಿ ಸಮಗ್ರವಾದ ಮಾಹಿತಿಯನ್ನು ನೀಡಿದ್ದಾರೆ. ಕೆಎಫ್‍ಡಿಗೆ … Read more

ಶಿವಮೊಗ್ಗದಲ್ಲಿ ನಿಗದಿಯಾಯ್ತು ಕೇಂದ್ರದ ಪಡಿತರ ವಿತರಣೆಗೆ ಟೈಮ್, ಪಾಸ್ ದುರುಪಯೋಗವಾದರೆ ಕಠಿಣ ಕ್ರಮದ ವಾರ್ನಿಂಗ್

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 24 ಏಪ್ರಿಲ್ 2020 ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಡಿತರ ವಿತರಣೆಗೆ ಜಿಲ್ಲಾಡಳಿತ ಟೈಮ್‌ ಫಿಕ್ಸ್‌ ಮಾಡಿದೆ. ಮೇ ಮೊದಲ ವಾರದಲ್ಲಿ ಪಡಿತರ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಪಡಿತರ ಅಕ್ಕಿ ಮತ್ತು ತೊಗರಿ ಬೇಳೆ ವಿತರಣೆ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪಾಸ್‌ ದುರುಪಯೋಗವಾದರೆ ಕ್ರಮ ವಿವಿಧ ಸೇವೆಗಳಿಗಾಗಿ ಜಿಲ್ಲಾಡಳಿತ ಪಾಸ್‌ ವಿತರಣೆ ಮಾಡಿದೆ. ಆದರೆ ಈ ಪಾಸ್‌ ದುರುಪಯೋಗ … Read more

ಸಾಗರ, ತೀರ್ಥಹಳ್ಳಿಯ ಇಬ್ಬರು ಮಹಿಳೆಯರಲ್ಲಿ ಕೆಎಫ್‌ಡಿ ಸೋಂಕು, ಶರಾವತಿ ಅಭಯಾರಣ್ಯ ಪ್ರವೇಶ ಬಂದ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 13 ಏಪ್ರಿಲ್ 2020 ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ ಮತ್ತಿಬ್ಬರಲ್ಲಿ ಕೆಎಫ್‍ಡಿ ಸೋಂಕು ದೃಢವಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀರ್ಥಹಳ್ಳಿ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡಿನಬೈಲು ಗ್ರಾಮದ ಭಾರತಿ (49) ಎಂಬುವವರಲ್ಲಿ ಕೆಎಫ್‍ಡಿ ಸೋಂಕು ಇರುವುದು ದೃಢವಾಗಿದೆ. ಇವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಸೇರಿಸಲಾಗಿದೆ. ಸಾಗರದಲ್ಲೂ ಒಂದು ಕೇಸ್ ಪತ್ತೆ ಸಾಗರ ತಾಲೂಕಿನ ಮಹಿಳೆಯೊಬ್ಬರಿಗು ಕೆಎಫ್‍ಡಿ ದೃಢವಾಗಿದೆ. ಅರಳಗೋಡಿನ ಕಸಗುಪ್ಪೆ ಗ್ರಾಮದ ಚಂದ್ರಕಲಾ (50) ಅವರಿಗೆ ಸೋಂಕು ಇರುವುದು … Read more

ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮೇಯರ್ ಪತಿ ವಿರುದ್ಧ ದೂರು, ಕಾರಣವೇನು ಗೊತ್ತಾ?

070420 Complaint Against Deputy Mayor husband 1

ಶಿವಮೊಗ್ಗ ಲೈವ್.ಕಾಂ | SHIMOGA | 7 ಏಪ್ರಿಲ್ 2020 ಕನ್ಸರ್’ವೆನ್ಸಿಯಲ್ಲಿ ಹಾಕಲಾಗಿದ್ದ ಸ್ಲ್ಯಾಬ್’ಗಳನ್ನು ಖಾಸಗಿ ಸಂಸ್ಥೆಯೊಂದರ ಬಳಕೆಗೆ ಸಾಗಿಸಲಾಗಿದೆ ಎಂದು ಆರೋಪಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮೇಯರ್ ಅವರ ಪತಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ 6,7 ಮತ್ತು 8ನೇ ಅಡ್ಡರಸ್ತೆಯಲ್ಲಿರುವ ಕನ್ಸರ್’ವೆನ್ಸಿಗಳಲ್ಲಿ ಹಾಕಲಾಗಿದ್ದ ಸ್ಲ್ಯಾಬ್’ಗಳನ್ನು ಗೂಡ್ಸ್ ವಾಹನದಲ್ಲಿ ಸಾಗಿಸಲಾಗಿದೆ. ಉಪ ಮೇಯರ್ ಸುರೇಖಾ ಮುರಳೀಧರ್ ಅವರ ಪತಿ ನೇತೃತ್ವದಲ್ಲೇ ಈ ಕೆಲಸ ಆಗಿದೆ ಎಂದು ಯುವ … Read more

ವಾಟ್ಸಪ್, ಫೇಸ್’ಬುಕ್’ನಲ್ಲಿ ವಿಡಿಯೋ, ಮೆಸೇಜ್ ಷೇರ್ ಮಾಡುವಾಗ ಹುಷಾರ್, ಗ್ರೂಪ್ ಅಡ್ಮಿನ್’ಗಳೇ ಎಚ್ಚರ, ಎಚ್ಚರ

Whatsapp-General-Image

ಶಿವಮೊಗ್ಗ ಲೈವ್.ಕಾಂ | SHIMOGA | 7 ಏಪ್ರಿಲ್ 2020 ಲಾಕ್’ಡೌನ್ ಸಂದರ್ಭ ವಾಟ್ಸಪ್, ಫೇಸ್’ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡುವ ಮೆಸೇಜುಗಳನ್ನು ಫಾರ್ವರ್ಡ್ ಮಾಡುತ್ತಿದ್ದ ಇಬ್ಬರ ವಿರುದ್ಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನ್ಯಧರ್ಮೀಯರ ಭಾವನೆಗೆ ಧಕ್ಕೆ ಉಂಟು ಮಾಡುವಂತಹ ಕೋಮು ಪ್ರಚೋದನಕಾರಿ ವಿಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡುವಂತಿಲ್ಲ. ಹೀಗೆ ಮಾಡಿ ಸಾಮಾಜಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ … Read more

ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ, 25 ಬಾಕ್ಸ್ ಮದ್ಯ ವಶಕ್ಕೆ, ಸೀಜ್ ಆಗಿದ್ದೆಲ್ಲಿ ಗೊತ್ತಾ?

050420 Liquor Raid in Soraba 1

ಶಿವಮೊಗ್ಗ ಲೈವ್.ಕಾಂ | SHIMOGA | 5 ಏಪ್ರಿಲ್ 2020 ಲಾಕ್’ಡೌನ್ ಸಂದರ್ಭ ವೈನ್ ಶಾಪ್ ಒಂದರಿಂದ ಮದ್ಯವನ್ನು ಬೇರೆಡೆ ಕೊಂಡೊಯ್ಯುತ್ತಿದ್ದ ವ್ಯಕ್ತಿ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾರು, ಬಾಕ್ಸ್’ಗಟ್ಟಲೆ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಘಟನೆಯ ಸಂಭವಿಸಿದೆ. ಇಲ್ಲಿನ ವೈನ್ ಶಾಪ್ ಒಂದರಿಂದ ವ್ಯಕ್ತಿಯೊಬ್ಬರು 25 ಬಾಕ್ಸ್ ಮದ್ಯವನ್ನು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು, ಕಾರು ಮತ್ತು ಮದ್ಯವನ್ನು ಸೀಜ್ ಮಾಡಿದ್ದಾರೆ. ‘ದೇವರಾಜ್ … Read more

ಮುಂದುವರೆದ ಬೈಕ್ ಸೀಜ್, ಈವರೆಗೆ 600 ಬೈಕ್’ಗಳು ವಶಕ್ಕೆ, ಏಪ್ರಿಲ್ 4ರಂದು ಸೀಜ್ ಆಗಿದ್ದೆಷ್ಟು?

280320 Bikes Seized in Shimoga during Lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 5 ಏಪ್ರಿಲ್ 2020 ಲಾಕ್’ಡೌನ್ ಆದೇಶ ಉಲ್ಲಂಘಿಸಿ ಕಾರಣವೇ ಇಲ್ಲದೆ ಸುತ್ತಾಡುತ್ತಿದ್ದವರ ಬೈಕ್’ಗಳ ಸೀಜ್ ಮುಂದುವರೆದಿದೆ. ಈವರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸರು ವಶಕ್ಕೆ ಪಡೆದ ಬೈಕ್’ಗಳ ಸಂಖ್ಯೆ 600ಕ್ಕೂ ತಲುಪಿದೆ. ಏಪ್ರಿಲ್ 4ರಂದು 56 ಬೈಕ್’ಗಳನ್ನು ಜಿಲ್ಲೆಯ ವಿವಿಧೆಡೆ ಪೊಲೀಸ್ ಠಾಣೆಗಳಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಲಾಕ್’ಡೌನ್ ಸಂದರ್ಭ ಅಗತ್ಯ ವಸ್ತುಗಳ ಖರೀದಿಗಷ್ಟೆ ವಿನಾಯಿತಿ ನೀಡಿದೆ. ಆದರೆ ಸರ್ಕಾರದ ಆದೇಶ ಉಲ್ಲಂಘಿಸಿ ಯಾವುದೇ ಅಗತ್ಯ ಕೆಲಸವಿಲ್ಲದಿದ್ದರೂ … Read more

ನವುಲೆ ಚಾನಲ್ ಏರಿಯಾದ ಮಹಿಳೆಯರಿಂದ ದಿಢೀರ್ ಪ್ರತಿಭಟನೆ, ಕಾರ್ಪೊರೇಟರ್ ಜೊತೆ ವಾಗ್ವಾದ, ಕಾರಣವೇನು? ಮುಂದೇನಾಯ್ತು?

040420 Navule Protest in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 4 ಏಪ್ರಿಲ್ 2020 ಕರೋನ ಲಾಕ್’ಡೌನ್ ಸಂದರ್ಭ ಸರ್ಕಾರ ಘೋಷಿಸಿದ ಯಾವುದೇ ಸೌಲಭ್ಯವು ತಮಗೆ ದೊರಕ್ಕಿಲ್ಲ ಅಂತಾ ಮಹಿಳೆಯರು ನವುಲೆ ಚಾನೆಲ್ ಏರಿ ಪಕ್ಕದ ರಸ್ತೆ ತಡೆ ನಡೆಸಿದರು. ಈ ವೇಳೆ ಮಹಾನಗರ ಪಾಲಿಕೆ ಕಾರ್ಪೊರೇಟರ್ ಜೊತೆಗೆ ಮಾತಿನ ಚಕಮಕಿಯನ್ನು ನಡೆಸಿದರು. ದಿಢೀರ್ ಪ್ರತಿಭಟನೆಗೆ ಕಾರಣವೇನು? ರಾಜ್ಯ ಸರ್ಕಾರದ ಆದೇಶದಂತೆ ಬಡವರು, ಸ್ಲಂ ನಿವಾಸಿಗಳಿಗೆ ಕಾರ್ಪೊರೇಟರ್ ಧೀರಾಜ್ ಹೊನ್ನವಿಲೆ ಹಾಲು ವಿತರಿಸುತ್ತಿದ್ದರು. ನವುಲೆ ಚಾನೆಲ್ ಏರಿ ಪಕ್ಕದ ರಸ್ತೆ ನಿವಾಸಿಗಳಿಗೆ … Read more

ಆಯನೂರು ಸಮೀಪ 70ಕ್ಕೂ ಹೆಚ್ಚು ಮಂದಿಯಿಂದ ನಮಾಜ್, ಏಳು ಮಂದಿಗೆ ಜ್ವರದ ಲಕ್ಷಣ, ಎಲ್ಲರಿಗೂ ಈಗ ಕ್ವಾರಂಟೈನ್

030420 Namaaz in Ayanuru 1

ಶಿವಮೊಗ್ಗ ಲೈವ್.ಕಾಂ | SHIMOGA | 3 ಏಪ್ರಿಲ್ 2020 ಲಾಕ್’ಡೌನ್ ಮತ್ತು ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಮಸೀದಿಯೊಂದರಲ್ಲಿ ನಮಾಜ್ ಮಾಡುತ್ತಿದ್ದ 77 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಕ್ವಾರಂಟೈನ್’ನಲ್ಲಿ ಇರಿಸಿದ್ದಾರೆ. ನಮಾಜ್’ನಲ್ಲಿ ಭಾಗಿಯಾದವರ ಪೈಕಿ ಏಳು ಮಂದಿಯಲ್ಲಿ ಜ್ವರದ ಲಕ್ಷಣ ಇರುವುದು ಬೆಳಕಿಗೆ ಬಂದಿದೆ. ಆಯನೂರು ಸಮೀಪದ ಕೆಸವಿನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಶುಕ್ರವಾರದ ನಮಾಜ್ ಮಾಡಲು 70ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ ಅಂತಾ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಡಾಕ್ಟರ್ ಸ್ಥಳಕ್ಕೆ ಭೇಟಿ … Read more

ಶ್ರೀರಾಮನವಮಿ ಮೇಲೆ ಕರೋನ ಲಾಕ್’ಡೌನ್ ಕರಿನೆರಳು, ಎಲ್ಲೆಲ್ಲಿ ಹೇಗೆ ನಡೀತಿದೆ ಪೂಜೆ?

020420 Ramanavami in Kote during Corona 1

ಶಿವಮೊಗ್ಗ ಲೈವ್.ಕಾಂ | SHIMOGA | 2 ಏಪ್ರಿಲ್ 2020 ಶ್ರೀರಾಮ ನವಮಿಗೂ ಆಚರಣೆ ಮೇಲೂ ಕರೋನ ಕರಿನೆರಳು ಆವರಿಸಿದೆ. ಈ ಭಾರಿ ಶಿವಮೊಗ್ಗದಲ್ಲಿ ವಿಜೃಂಭಣೆಯ ರಾಮನವಮಿ ಆಚರಣೆ ಇಲ್ಲವಾಗಿದೆ. ಕೊಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಲವೇ ಕೆಲವು ಭಕ್ತರಷ್ಟೆ ದೇವಸ್ಥಾನಕ್ಕೆ ಆಗಮಿಸಿದ್ದರು. ಆದರೆ ದೇಗುಲಕ್ಕೆ ಬಂದವರು ಹೆಚ್ಚು ಹೊತ್ತು ನಿಲ್ಲದೆ ಕೈಮುಗಿದು ಹೊರಡಬೇಕು ಎಂದು ಮೈಕ್ ಮೂಲಕ ಮನವಿ ಮಾಡಲಾಗುತ್ತಿತ್ತು. ಶ್ರೀರಾಮನವಮಿ ವೇಳೆ ನಗರದ ವಿವಿಧೆಡೆ ಪಾನಕ, ಮಜ್ಜಿಗೆ, … Read more