ಶಿವಮೊಗ್ಗಕ್ಕೆ ಡಿಜಿ ಐಜಿಪಿ ಭೇಟಿ, ಮಹತ್ವದ ಮೀಟಿಂಗ್, ಪೊಲೀಸರಿಗೆ ಖಡಕ್ ಸೂಚನೆ
ಶಿವಮೊಗ್ಗ: ಗಾಂಜಾ ಬೆಳೆಯುವುದು, ಸೇವನೆ, ಮಾರಾಟ, ಸಂಗ್ರಹಣೆ ಮತ್ತು ಸಾಗಣೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಪೊಲೀಸರಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (DGP) ಎಂ.ಎ.ಸಲೀಂ ಸೂಚಿಸಿದರು. ಡಿಎಆರ್ ಆವರಣದಲ್ಲಿ ಪೊಲೀಸ್ ಗೌರವ ವಂದನೆ ಸ್ವೀಕರಿಸಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಗಾಂಜಾ ಸೇರಿದಂತೆ ಮಾದಕ ದ್ರವ್ಯ ಮಾರಾಟದ ಬಗ್ಗೆ ತಳಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಎಂದು ಹೇಳಿದರು. ಜಿಲ್ಲೆಯು ಭೌಗೋಳಿಕವಾಗಿ ಮಾತ್ರವಲ್ಲದೆ ಅಪರಾಧ ಕೃತ್ಯಗಳ ವರದಿಯಲ್ಲೂ ದೊಡ್ಡದಾಗಿದೆ. ಹೀಗಾಗಿ … Read more