ಓಂ ಶಕ್ತಿ ದೇಗುಲದಿಂದ ಶಿವಮೊಗ್ಗದ ಮನೆಗೆ ಮರಳಿದಾಗ ತೆರೆದಿತ್ತು ಮುಂದಿನ ಬಾಗಿಲು, ಕುಟುಂಬಕ್ಕೆ ಶಾಕ್
ಶಿವಮೊಗ್ಗ: ಕುಟುಂಬ ಸಮೇತ ತಮಿಳುನಾಡಿನ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭ ಮನೆಯ ಬೀಗ ಮುರಿದು ನಗದು ಮತ್ತು ಚಿನ್ನಾಭರಣ (gold) ದೋಚಲಾಗಿದೆ. ಶಿವಮೊಗ್ಗದ ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿ ನಡೆದಿದೆ. ಹೆಚ್.ಕೆ. ರಂಗನಾಥ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ರಂಗನಾಥ್ ಅವರು ಕುಟುಂಬದೊಂದಿಗೆ ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಒಳಗೆ ಪರಿಶೀಲಿಸಿದಾಗ ಬೀರುವಿನ ಲಾಕ್ ಮುರಿದು ಅದರಲ್ಲಿದ್ದ ಸುಮಾರು ₹21,000 ಮೌಲ್ಯದ ಬಂಗಾರದ ಒಡವೆಗಳು ಮತ್ತು … Read more