ಶಿವಮೊಗ್ಗದಲ್ಲಿ ಹೆಚ್ಚು ಹಣ ವಸೂಲಿ ಮಾಡಿದ ಆಟೋ ಚಾಲಕನಿಗೆ ಕಾದಿತ್ತು ಶಾಕ್‌, ಆಗಿದ್ದೇನು?

Police-Fined-auto-driver-for-collecting-extra-amount

ಶಿವಮೊಗ್ಗ: ರೈಲ್ವೆ ನಿಲ್ದಾಣದ ಆಟೋ (Auto) ಪ್ರೀ ಪೇಯ್ಡ್‌ ಟಿಕೆಟ್‌ನಲ್ಲಿ ನಿಗದಿಯಾಗಿದ್ದ ದರಕ್ಕಿಂತಲು, ಹೆಚ್ಚು ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡಿದ ಆಟೋ ಚಾಲಕನಿಗೆ, ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಆಟೋ ಚಾಲಕರೊಬ್ಬರು ಪ್ರೀ ಪೇಯ್ಡ್‌ ಟಿಕೆಟ್‌ನಲ್ಲಿ ನಿಗದಿಯಾಗಿರುವ ದರಕ್ಕಿಂತಲು ಪ್ರಯಾಣಿಕರಿಂದ ₹15 ಹೆಚ್ಚು ವಸೂಲಿ ಮಾಡಿದ್ದರು. ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದರು. ಈ ಸಂಬಂಧ ಪ್ರಯಾಣಿಕ ಕಂಟ್ರೋಲ್‌ ರೂಂಗೆ ದೂರು ನೀಡಿದ್ದರು. ಚಾಲಕನನ್ನು ಪತ್ತೆ ಹಚ್ಚಿದ ಪೂರ್ವ ಸಂಚಾರ ಠಾಣೆ ಪೊಲೀಸರು ಹೆಚ್ಚುವರಿ … Read more

ಶಿವಮೊಗ್ಗದಲ್ಲಿ ನವದುರ್ಗ ಬಸ್‌ ಚಾಲಕನ ಮೇಲೆ ಮನಸೋಯಿಚ್ಛೆ ಹಲ್ಲೆ

Shimoga-Private-Bus-Stand-Board

ಶಿವಮೊಗ್ಗ: ಅಡ್ಡ ನಿಲ್ಲಿಸಿದ್ದ ಕಾರು ತೆಗೆಯುವಂತೆ ಹಾರನ್‌ ಮಾಡಿದ್ದಕ್ಕೆ ನವದುರ್ಗ ಬಸ್‌ ಚಾಲಕನ (BUS DRIVER) ಮೇಲೆ ಹಲ್ಲೆ ನಡೆಸಲಾಗಿದೆ. ಶಿವಮೊಗ್ಗದ ಬಸ್‌ ನಿಲ್ದಾಣದ ಸಮೀಪ ಬ್ರೈಟ್‌ ಹೊಟೇಲ್‌ ಎದುರು ಘಟನೆ ನಡೆದಿದೆ. ನವದುರ್ಗ ಬಸ್‌ ಚಾಲಕ ಬಿ.ಎಸ್.ರವಿ ಮೇಲೆ ಹಲ್ಲೆ ನಡೆಸಲಾಗಿದೆ. ಬಸ್ಸು ರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿತ್ತು. ನಿಲ್ದಾಣದಿಂದ ಹೊರ ಬಂದು ಬ್ರೈಟ್‌ ಹೊಟೇಲ್‌ ಮುಂಭಾಗ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಚಾಲಕ ರವಿ ಬಸ್‌ ನಿಲ್ಲಿಸಿದ್ದರು. ಆಗ ಬಂದ ಕಾರೊಂದು ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಲಾಯಿತು ಎಂದು … Read more

ಅಬಕಾರಿ ಇಲಾಖೆ ಚಾಲಕ ಅಮಾನತು, ಕಚೇರಿಗೆ ಹಾಜರಾಗಿ ವಿವರಣೆಗೆ ಸೂಚನೆ, ಕಾರಣವೇನು?

Shimoga-News-update

ಶಿವಮೊಗ್ಗ: ಅಬಕಾರಿ ಇಲಾಖೆಯ ಶಿಕಾರಿಪುರ ವಲಯದ ಉಪ ಆಯುಕ್ತರ ಕಚೇರಿ ಚಾಲಕ ಸೋಮೇಶ್ವರ್‌.ಕೆ.ಎ ಅವರನ್ನು ಅಮಾನತು (Suspend) ಮಾಡಿ ಉಪ ಆಯುಕ್ತರು ಆದೇಶಿಸಿದ್ದಾರೆ. 2024ರ ಆ.26ರಿಂದ ಅನಧಿಕೃತವಾಗಿ ಗೈರಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೋಮೇಶ್ವರ್ ಕೆ.ಎ ಅವರಿಗೆ ಗೈರು ಹಾಜರಾದ ಕುರಿತು ಕಾರಣ ಕೇಳಿ ಕಚೇರಿಯಿಂದ ಅಂತಿಮ ನೋಟಿಸ್ ನೀಡಲಾಗಿತ್ತು. ಶಿವಮೊಗ್ಗದಲ್ಲಿ ಮನೆ ಬಳಿ ವಿಚಾರಣೆ ನಡೆಸಿದಾಗ ಅವರು ಅಲ್ಲಿ ವಾಸವಾಗಿಲ್ಲ ಎಂದು ತಿಳಿದು ಬಂದಿತ್ತು. ಸ್ಥಳ ಮಹಜರ್‌ ಮಾಡಿ ಶಿಕಾರಿಪುರ ವಲಯದ … Read more

ಆನವಟ್ಟಿಯಲ್ಲಿ ಬಸ್‌ ಅಡ್ಡಗಟ್ಟಿ ಚಾಲಕನಿಗೆ ತರಾಟೆ ತೆಗೆದುಕೊಂಡ ಜನ, ಕಾರಣವೇನು?

soraba anavatti graphics

ಆನವಟ್ಟಿ: ಬಸ್‌ ನಿಲ್ಲಿಸದ್ದಕ್ಕೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್‌ ಅಡ್ಡಗಟ್ಟಿ ಚಾಲಕ (Driver) ಮತ್ತು ನಿರ್ವಾಹಕರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಟಾಪ್‌ನಲ್ಲಿ ಬಸ್‌ ನಿಲ್ಲಿಸದೆ ನಿಧಾನವಾಗಿ ಚಲಿಸಿ ವಿದ್ಯಾರ್ಥಿಗಳು, ಪ್ರಯಾಣಿಕರು ಓಡೋಡಿ ಬಂದು ಹತ್ತುವಂತೆ ಮಾಡಿದ್ದಕ್ಕೆ ಚಾಲಕನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಆನವಟ್ಟಿಯ ನೃಪತುಂಗ ಶಾಲೆ ಬಳಿ ಸ್ಟಾಪ್‌ ಇದ್ದರು ಹಾನಗಲ್‌ – ಮೈಸೂರು ಮಾರ್ಗದ ಬಸ್‌ ನಿಲ್ಲಿಸದೆ ನಿಧಾನಕ್ಕೆ ಚಲಿಸಿದೆ. ವಿದ್ಯಾರ್ಥಿಗಳು ಓಡೋಡಿ ಬಂದು ಬಸ್‌ ಹತ್ತುವಾಗ ಓರ್ವ ವಿದ್ಯಾರ್ಥಿ ಮತ್ತು ಮಹಿಳೆ ಆಯಾತಪ್ಪಿ … Read more

ಫೈನಾನ್ಸ್‌ ಸಿಬ್ಬಂದಿ ಕಿರುಕುಳದ ಆರೋಪ, ಶಿವಮೊಗ್ಗದಲ್ಲಿ ವಿಷ ಸೇವಿಸಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಸಾವು

Police-Jeep-at-Shimoga-General-Image

ಶಿವಮೊಗ್ಗ: ಫೈನಾನ್ಸ್‌ ಸಂಸ್ಥೆಯ ಕಿರುಕುಳಕ್ಕೆ ಮನನೊಂದು ವಿಷ ಸೇವಿಸಿದ್ದ ಆಟೋ ಚಾಲಕ (Driver) ಚಿಕಿತ್ಸೆ ಫಲಕಾರಿಯಾಗದ ಮೃತಪಟ್ಟಿದ್ದಾರೆ. ಶಿವಮೊಗ್ಗದ ಜ್ಯೋತಿ ನಗರ ನಿವಾಸಿ ರಂಜಿತ್‌ (39) ಮೃತರು. ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ರಂಜಿತ್‌ಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಆಟೋ ಚಲಾಯಿಸುತ್ತಿದ್ದರು. ಫೈನಾನ್ಸ್‌ ಸಂಸ್ಥೆಯೊಂದರಿಂದ 3 ಲಕ್ಷ ರೂ. ಸಾಲ ಪಡೆದಿದ್ದರು. ಸಾಲದ ವಿಚಾರವಾಗಿ ಫೈನಾನ್ಸ್‌ ಸಂಸ್ಥೆಯವರು ಮನೆ ಬಳಿ ಬಂದು ಅವಾಚ್ಯವಾಗಿ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ. ಮನನೊಂದ ರಂಜಿತ್‌ ಮೇ 20ರಂದು ಸಂಜೆ ವಿಷ ಸೇವಿಸಿದ್ದರು. … Read more

ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ksrtc-news-update-thumbnail.webp

SHIMOGA JOBS, 6 AUGUST 2024 : ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ವಿಭಾಗಕ್ಕೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಚಾಲಕರು ಬೇಕಾಗಿದ್ದಾರೆ. ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ, ಸಾಗರ, ಶಿಕಾರಿಪುರದಲ್ಲಿ ಚಾಲಕ ಹುದ್ದೆಗಳಿವೆ. ಚಾಲಕರ ಆಯ್ಕೆಗೆ ವಿವಿಧ ದಾಖಲೆಗಳನ್ನು ಹೊಂದಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ (ಹೆವಿ ಲೈಸೆನ್ಸ್ ವಿಥ್ ಬ್ಯಾಡ್ಜ್ HPV), ಮೆಡಿಕಲ್ ಫಿಟ್ನೆಸ್ ಪ್ರಮಾಣಪತ್ರ, 2 ಫೋಟೊಗಳು, ಅಂಕಪಟ್ಟಿ (7ನೇ ತರಗತಿ ಮೇಲ್ಪಟ್ಟು), ಶಾಲಾ ವರ್ಗಾವಣೆ ಪತ್ರ, ಬ್ಯಾಂಕ್ ದಾಖಲಾತಿ, ಜಾತಿ ಪ್ರಮಾಣ ಪತ್ರ, ವಾಸ ಸ್ಥಳ … Read more

ನೆಹರೂ ರಸ್ತೆಯಲ್ಲಿ ಆಟೋ ಚಾಲಕನ ತಲೆಗೆ ದೊಣ್ಣೆಯಿಂದ ಹೊಡೆದ ಮತ್ತೊಬ್ಬ ಆಟೋ ಚಾಲಕ

Auto-in-Shimoga-Nehru-road

SHIVAMOGGA LIVE NEWS | 16 APRIL 2024 SHIMOGA : ಆಟೋ ಬಾಡಿಗೆ ವಿಚಾರವಾಗಿ ಗಲಾಟೆಯಾಗಿ ಚಾಲಕನೊಬ್ಬ ದೊಣ್ಣೆಯಿಂದ ಮತ್ತೊಬ್ಬ ಚಾಲಕನಿಗೆ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗದ ನೆಹರೂ ರಸ್ತೆಯ ಬಸ್‌ ಸ್ಟಾಪ್‌ ಬಳಿ ಘಟನೆ ಸಂಭವಿಸಿದೆ. ಬೊಮ್ಮನಕಟ್ಟೆ ನಿವಾಸಿ ಮಹೇಶ ನಾಯ್ಕ್‌ ಬಸ್‌ ಸ್ಟಾಪ್‌ ಬಳಿ ಆಟೋ ನಿಲ್ಲಿಸಿಕೊಂಡಿದ್ದರು. ಈ ಸಂದರ್ಭ ಹಿಂಬದಿಗೆ ಬಂದ ಮತ್ತೊಂದು ಆಟೋದ ಚಾಲಕ, ಬಾಡಿಗೆ ವಿಚಾರವಾಗಿ ಜಗಳವಾಡಿದ್ದಾನೆ. ಅಲ್ಲದೆ ಆಟೋದಲ್ಲಿದ್ದ ದೊಣ್ಣೆಯನ್ನು ತಂದು ಮಹೇಶ್‌ ನಾಯ್ಕ್‌ ತಲೆಗೆ ಹೊಡೆದಿದ್ದು, ಪ್ರಜ್ಞೆ … Read more

ಶಿವಮೊಗ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡ್ರೈವರ್‌, ಕಂಡಕ್ಟರ್‌ ಮೇಲೆ ದಾಳಿ, ಕಾರಣವೇನು?

KSRTC-Bus-Stand-Shivamogga

SHIVAMOGGA LIVE NEWS | 9 FEBRUARY 2024 SHIMOGA : ಸಮಯದ ವಿಚಾರವಾಗಿ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮತ್ತು ನಿರ್ವಾಹಕನಿಗೆ ಖಾಸಗಿ ಬಸ್‌ ಮಾಲೀಕ ಸೇರಿದಂತೆ ಐವರು ಜಗಳವಾಡಿ, ಹಲ್ಲೆ ನಡೆಸಿದ್ದಾರೆ. ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗವೆ ಘಟನೆ ಸಂಭವಿಸಿದೆ. ಶಿವಮೊಗ್ಗ ಸಕ್ರೆಬೈಲು ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮುರುಳಿ ಮತ್ತು ಚಾಲಕ ರಾಮನಾಯ್ಕ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ನಿಲ್ದಾಣದಿಂದ ಬಸ್‌ ಹೊರ ತಂದು ಗಾಜನೂರು ಬಸ್‌ ಸ್ಟಾಪ್‌ ಬಳಿ ನಿಲ್ಲಿಸಿದ್ದರು. ಈ ವೇಳೆ … Read more

ದಿಢೀರ್‌ ಹಾಫ್‌ ಹೆಲ್ಮೆಟ್‌ ಕಾರ್ಯಾಚರಣೆ, ಭದ್ರಾವತಿ ರಂಗಪ್ಪ ಸರ್ಕಲ್‌ನಲ್ಲಿ ಜಿಲ್ಲಾ ರಕ್ಷಣಾಧಿಕಾರಿಯಿಂದ ಜನ ಜಾಗೃತಿ

051223-Police-seized-Half-helmets-in-Bhadravathi.webp

SHIVAMOGGA LIVE NEWS | 5 DECEMBER 2023 BHADRAVATHI : ನಗರದ ರಂಗಪ್ಪ ಸರ್ಕಲ್‌ ಮತ್ತು ಅಂಡರ್‌ ಬ್ರಿಡ್ಜ್‌ ಬಳಿ ಪೊಲೀಸರು ಹಾಫ್‌ ಹೆಲ್ಮೆಟ್‌ (half helmet) ವಿರುದ್ಧ ಕಾರ್ಯಾಚರಣೆ ನಡೆಸಿದರು. ಇದೆ ವೇಳೆ ವಾಹನ ಸವಾರರಲ್ಲಿ ಸಂಚಾರ ನಿಯಮ ಕುರಿತು ಜಾಗೃತಿ ಮೂಡಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಅವರ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಚಾರ ನಿಯಮ ಪಾಲನೆ, ಹಾಫ್‌ ಹೆಲ್ಮೆಟ್‌ (half helmet) ಧರಿಸದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಯಿತು. ಇದನ್ನೂ ಓದಿ – ಬೆಂಗಳೂರು … Read more

ನೇಣು ಬಿಗಿದ ಸ್ಥಿತಿಯಲ್ಲಿ ಆಂಬುಲೆನ್ಸ್‌ ಚಾಲಕನ ಮೃತದೇಹ ಪತ್ತೆ

Ambulance-Driver-Succumbed-at-Thirthahalli

SHIVAMOGGA LIVE NEWS | 19 OCTOBER 2023 THIRTHAHALLI : ಆಂಬುಲೆನ್ಸ್‌ (Ambulance) ಚಾಲಕರೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೀರ್ಥಹಳ್ಳಿಯ ಬೆಟ್ಟಮಕ್ಕಿಯ ಬಾಡಿಗೆ ನಿವಾಸದಲ್ಲಿ ರಮೇಶ್‌ (45) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಯಲ್ಲಿ ಸುಮಾರು 10 ವರ್ಷದಿಂದ ಆಂಬುಲೆನ್ಸ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಮೇಶ್‌ ಹೊಸನಗರ ಪಟ್ಟಣದವರು. ಅಲ್ಲಿಯೇ ಅಂತ್ಯಕ್ರಿಯೆ ನಡೆಯಿತು. ಇವರಿಗೆ ಇಬ್ಬರು ಪುತ್ರರಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ … Read more