ದುರ್ಗಿಗುಡಿಯಲ್ಲಿ ಮೂರು ಅಂತಸ್ತಿನ ಕಟ್ಟಡದಿಂದ ಜಿಗಿದು ಯುವಕ ಸಾವು
ಶಿವಮೊಗ್ಗ: ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡದಿಂದ (Building) ಜಿಗಿದು ಯುವಕ ಸಾವನ್ನಪ್ಪಿದ್ದಾರೆ. ದುರ್ಗುಗುಡಿಯ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಹಿಂಭಾಗದ ಬೀದಿಯಲ್ಲಿ ಘಟನೆ ಸಂಭವಿಸಿದೆ. ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಅಮಿತ್ (27) ಮೃತ ಯುವಕ. ಅಮಿತ್ ಕಟ್ಟಡದಿಂದ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯರು ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ಗಾಯಗೊಂಡಿದ್ದ ಅವರು ಅಸುನೀಗಿದ್ದಾರೆ. ಶಿವಮೊಗ್ಗದ ಹೊಟೇಲ್ ಒಂದರಲ್ಲಿ ಅಮಿತ್ ಕೆಲಸ ಮಾಡುತ್ತಿದ್ದರು. ಭಾನುವಾರ ಮಧ್ಯಾಹ್ನದ ಬಳಿಕ ಹೊಟೇಲ್ ರಜೆ ಇತ್ತು. ಅಮಿತ್ ಕೆಲಸ … Read more