ಶಿವಮೊಗ್ಗ ಈದ್‌ ಮೆರವಣಿಗೆಯಲ್ಲಿ ಡಿ.ಜೆ ಅಬ್ಬರ, ಮುಸ್ಲಿಂ ಯುವಕರಿಂದಲೇ ಡಿಜೆ, ಡಾನ್ಸ್‌ಗೆ ವಿರೋಧ

DJ-In-Shimoga-Eid-Milad-Procession

ಶಿವಮೊಗ್ಗ: ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಇವತ್ತು ನೂರಕ್ಕು ಹೆಚ್ಚು ಡಿಜೆ ಸಿಸ್ಟಮ್‌ಗಳು (DJ System) ಇದ್ದವು. ಇನ್ನೊಂದೆಡೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವರೆ ಡಿಜೆಗೆ ವಿರೋಧ ವ್ಯಕ್ತಪಡಿಸಿ ಭಿತ್ತಿ ಪತ್ರ ಪ್ರದರ್ಶಿಸಿದರು. ಇನ್ನೊಂದೆಡೆ ಭಾರಿ ಶಬ್ದ ಮಾಡುತ್ತಿದ್ದ ಡಿಜೆ ವಾಹನವನ್ನು ಪೊಲೀಸರು ತಡೆದು ಸೌಂಡ್‌ ಆಫ್‌ ಮಾಡಿಸಿದ ಘಟನೆ ನಡೆಯಿತು. ಶಿವಮೊಗ್ಗ ನಗರದಲ್ಲಿ ಇವತ್ತು ಅದ್ಧೂರಿಯ ಈದ್‌ ಮಿಲಾದ್‌ ಮೆರವಣಿಗೆ ನಡೆಯಿತು. ದೊಡ್ಡ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಈದ್‌ ಮೆರವಣಿಗೆಯಲ್ಲಿ ಡಿಜೆಗಳ ಅಬ್ಬರವೆ ಜೋರಿತ್ತು. ನೂರಕ್ಕಿಂತಲು … Read more

ಶಿವಮೊಗ್ಗದಲ್ಲಿ ಅದ್ಧೂರಿ ಈದ್‌ ಮಿಲಾದ್‌ ಮೆರವಣಿಗೆ, ಇಲ್ಲಿದೆ ಫೋಟೊ ಸಹಿತ ರಿಪೋರ್ಟ್‌

Eid-Milad-Procession-in-Shimoga-city

ಶಿವಮೊಗ್ಗ: ನಗರದಲ್ಲಿ ಈದ್‌ ಮಿಲಾದ್‌ (Eid Milad) ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಹೇಗಿತ್ತು? ಏನೆಲ್ಲ ಇತ್ತು? ಇಲ್ಲಿದೆ ಪಾಯಿಂಟ್ಸ್‌ ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿ ಮುಂಭಾಗದಿಂದ ಮೆರವಣಿಗೆ ಆರಂಭವಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಮೆರವಣಿಗೆ ಮುಕ್ತಾಯವಾಯಿತು. ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್‌ ವೇಷದಲ್ಲಿ ಮಕ್ಕಳು ಭಾಗವಹಿಸಿದ್ದು ಗಮನ ಸೆಳೆಯಿತು. ಟಿಪ್ಪು ಸುಲ್ತಾನ್‌ ಚಿತ್ರವಿರುವ ಬೃಹತ್‌ ‍ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು. … Read more

ಶಿವಮೊಗ್ಗದ ಅಮೀರ್‌ ಅಹಮದ್‌ ಸರ್ಕಲ್‌ ಜಗಮಗ, ಸಿಟಿ ಹಸಿರುಮಯ, ಹೇಗಿದೆ ಈ ಬಾರಿ ಅಲಂಕಾರ?

Shimoga-Amir-Ahmed-Circle-during-Shimoga-Eid-Festival

ಶಿವಮೊಗ್ಗ: ಈದ್‌ ಮಿಲಾದ್‌ ಮೆರವಣಿಗೆ ಹಿನ್ನೆಲೆ ಶಿವಮೊಗ್ಗ ನಗರ ಹಸಿರುಮಯವಾಗಿದೆ. ವಿವಿಧ ಕಲಾಕೃತಿಗಳು ಮತ್ತು ಜಗಮಗಿಸುವ ಲೈಟುಗಳಿಂದ ಅಮೀರ್‌ ಅಹಮದ್‌ ಸರ್ಕಲ್‌ ಕಂಗೊಳಿಸುತ್ತಿದೆ. (Decoration) ಸೆ.15ರಂದು ಶಿವಮೊಗ್ಗ ನಗರದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿದೆ. ನಗರದ ವಿವಿಧೆಡೆ ಮುಸ್ಲಿಂ ಸಮುದಾಯದವರು ವಾಸಿಸುವ ಬಡಾವಣೆಗಳಲ್ಲಿ ವಿವಿಧ ಬಗೆಯ ಅಲಂಕಾರ ಮಾಡಲಾಗಿದೆ. ಎ.ಎ.ಸರ್ಕಲ್‌ ಜಗಮಗ ಶಿವಮೊಗ್ಗ ನಗರದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ವಿಭಿನ್ನವಾಗಿ ಅಲಂಕಾರ ಮಾಡಲಾಗಿದೆ. ಈ ಬಾರಿ ಮೆಕ್ಕಾ, ಮದೀನಾ ಮಾದರಿಗಳು ಸೇರಿದಂತೆ ವಿವಿಧ … Read more

ಗಣೇಶ ಚತುರ್ಥಿ, ಈದ್‌ ಮಿಲಾದ್‌, ಈ ಬಾರಿ ಡಿಜೆ ಬಳಸಬಹುದಾ? – ಇಲ್ಲಿದೆ ಜಿಲ್ಲಾಧಿಕಾರಿಯ 3 ಪ್ರಮುಖ ಆದೇಶ

shimoga-dc-gurudatta-hegde

SHIMOGA, 3 SEPTEMBER 2024 : ಗಣೇಶ ಚತುರ್ಥಿ ಮತ್ತು ಈದ್‌ ಮಿಲಾದ್‌ ಹಬ್ಬಗಳ (Festival) ಹಿನ್ನೆಲೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮೂರು ಪ್ರಮುಖ ಆದೇಶ ಹೊರಡಿಸಿದ್ದಾರೆ. ಇಲ್ಲಿದೆ 3 ಫಟಾಫಟ್‌ ನ್ಯೂಸ್‌ ಅಪ್‌ಡೇಟ್‌ ಏನೆಲ್ಲ ಆದೇಶ ಹೊರಡಿಸಿದ್ದಾರೆ? ಇದನ್ನೂ ಓದಿ » ಶಿವಮೊಗ್ಗದಲ್ಲಿ ಉಪನ್ಯಾಸಕ ಅರೆಸ್ಟ್‌, ವಿದ್ಯಾರ್ಥಿನಿ ನೀಡಿದ್ದ ದೂರಿನ ಹಿನ್ನಲೆ ಬಂಧನ, ಕಾರಣವೇನು?

ಶಾಂತಿನಗರ ಕಲ್ಲು ತೂರಾಟ ಪ್ರಕರಣ, ಪರಿಹಾರಕ್ಕೆ ಒತ್ತಾಯ, ಪಾಲಿಕೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ

altercation-between-congress-and-bjp-at-mahanagara-palike-shimoga.

SHIVAMOGGA LIVE NEWS | 22 NOVEMBER 2023 SHIMOGA : ಈದ್‌ ಮೆರವಣಿಗೆ ಸಂದರ್ಭ ರಾಗಿಗುಡ್ಡದಲ್ಲಿ ಸಂಭವಿಸಿದ್ದ ಕಲ್ಲು ತೂರಾಟ ಪ್ರಕರಣದಲ್ಲಿ 18 ಮನೆಗಳಿಗೆ ಹಾನಿಯಾಗಿದೆ. ಈ ಕೂಡಲೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಧೀರರಾಜ್‌ ಹೊನ್ನವಿಲೆ ಮೇಯರ್‌ ಅವರನ್ನು ಒತ್ತಾಯಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಧೀರರಾಜ್‌ ಹೊನ್ನವಿಲೆ ಕೇಳಿದ್ದೇನು? ಈದ್‌ ಮೆರವಣಿಗೆ ಸಂದರ್ಭ ಶಾಂತಿನಗರದಲ್ಲಿ 18 ಮನೆಗಳಿಗೆ ಹಾನಿಯಾಗಿದೆ. ಪಾಲಿಕೆ … Read more

12 ಸೆಕೆಂಡ್‌ನ ವಿಡಿಯೋ ಅಪ್‌ಲೋಡ್‌ ಮಾಡಿದ್ದವನ ವಿರುದ್ಧ ದಾಖಲಾಯ್ತು ಕೇಸ್‌

instagram.webp

SHIVAMOGGA LIVE NEWS | 30 OCTOBER 2023 SHIMOGA : ಈದ್‌ ಮಿಲಾದ್‌ ಮೆರವಣಿಗೆ ಸಂದರ್ಭ ರಾಗಿಗುಡ್ಡದಲ್ಲಿ ಸಂಭವಿಸಿದ ಕಲ್ಲು ತೂರಾಟ ಘಟನೆಯ ಪ್ರಚೋದನಕಾರಿ ವಿಡಿಯೋ (Video) ಅಪ್‌ಲೋಡ್‌ ಮಾಡಿದ್ದ ವ್ಯಕ್ತಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ- ದಸರಾ, ದೀಪಾವಳಿ, ಶಿವಮೊಗ್ಗದಲ್ಲಿ ಲೆದರ್‌ ವಸ್ತುಗಳ ಮೇಲೆ ಶೇ.20ರಷ್ಟು ರಿಯಾಯಿತಿ ಸಮೀರ್‌ ಪಾಷ ಎಂಬಾತ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 12 ಸೆಕೆಂಡ್‌ನ ಪ್ರಚೋದನಕಾರಿ ವಿಡಿಯೋ ಅಪ್‌ಲೋಡ್‌ ಮಾಡಿದ್ದ. ಮಾಹಿತಿ ಲಭಿಸುತ್ತಿದ್ದಂತೆ ಪರಿಶೀಲನೆ ನಡೆಸಿದ ಪೊಲೀಸರು … Read more

ರಾಗಿಗುಡ್ಡ ಈಗ ಖಾಕಿ ಕೋಟೆ, ಏರಿಯಾದ ಒಳ, ಹೊರ ಹೋಗಲು ಬೇಕು ಪರ್ಮಿಷನ್‌, ಹೇಗಿದೆ ಸದ್ಯದ ಪರಿಸ್ಥಿತಿ?

021023 Heavy Police deployed in Shanthi Nagara in Shimoga.webp

SHIVAMOGGA LIVE NEWS | 2 OCTOBER 2023 SHIMOGA : ಕಲ್ಲು ತೂರಾಟ (Stone Pelting) ಪ್ರಕರಣದ ಬಳಿಕ ರಾಗಿಗುಡ್ಡ ಖಾಕಿ ಭದ್ರ ಕೋಟೆಯಾಗಿದೆ. ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಜನ ಗುಂಪುಗೂಡದಂತೆ ಎಚ್ಚರ ವಹಿಸಲಾಗಿದೆ. ಬಡಾವಣೆಯ ಒಳ ಮತ್ತು ಹೊರ ಹೋಗಲು ಸ್ಪಷ್ಟ ಕಾರಣ ತಿಳಿಸಬೇಕಾಗಿದೆ. ಶನಿವಾರ ಸಂಜೆ ಈದ್‌ ಮಿಲಾದ್‌ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ (Stone Pelting) ನಡೆಸಿದ್ದರು. ಈ ಘಟನೆ ಬೆನ್ನಿಗೆ ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನೊಂದೆಡೆ ಜನ ಗುಂಪುಗೂಡದಂತೆ ತಡೆಯಲು … Read more

ರಾಗಿಗುಡ್ಡದಲ್ಲಿ ಕಟೌಟ್‌ ವಿಚಾರವಾಗಿ ಗೊಂದಲ, ಸ್ಥಳಕ್ಕೆ ಎಸ್‌ಪಿ ಭೇಟಿ, ಪರಿಸ್ಥಿತಿ ಶಾಂತ, ಏನೇನಾಯ್ತು?

cut-out-controversy-at-Ragigudda-in-Shimoga

SHIVAMOGGA LIVE NEWS | 1 OCTOBER 2023 SHIMOGA : ಈದ್‌ ಮಿಲಾದ್‌ ಮೆರವಣಿಗೆ ಹಿನ್ನಲೆ ರಾಗಿಗುಡ್ಡದಲ್ಲಿ ಅಳವಡಿಸಿದ್ದ ಕಟೌಟ್‌ (Cut Out) ವಿಚಾರವಾಗಿ ಗೊಂದಲದ ಉಂಟಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಮನವರಿಕೆ ಮಾಡಿ, ಪರಿಸ್ಥಿತಿ ತಿಳಿಗೊಳಿಸಿದರು. ರಾಗಿಗುಡ್ಡ ಮುಖ್ಯರಸ್ತೆಯಲ್ಲಿ ಅಳವಡಿಸಿದ್ದ ಕಟೌಟ್‌ (Cut Out)  ವಿಚಾರವಾಗಿ ಗೊಂದಲ ಸೃಷ್ಟಿಯಾಗಿ ಜನ ಗುಂಪುಗೂಡಿದ್ದರು. ನೂರಕ್ಕು ಹೆಚ್ಚು ಜನರು ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸರು ಸ್ಥಳಕ್ಕೆ ಭೇಟಿ … Read more

ಈದ್‌ ಮಿಲಾದ್‌ ಮೆರವಣಿಗೆ, ಶಿವಮೊಗ್ಗದಲ್ಲಿ ಅದ್ಧೂರಿ ಸಿದ್ಧತೆ, ಎಲ್ಲೆಲ್ಲಿ ಹೇಗಿದೆ ಅಲಂಕಾರ?

Eid-Milad-Procession-Preparation-in-Amir-Ahmed-Circle-in-Shimoga.

SHIVAMOGGA LIVE NEWS | 1 OCTOBER 2023 SHIMOGA : ಈದ್‌ ಮಿಲಾದ್‌ ಮೆರವಣಿಗೆ (Procession) ಹಿನ್ನೆಲೆ ಶಿವಮೊಗ್ಗ ನಗರ ಹಸಿರುಮಯವಾಗಿದೆ. ಮುಸ್ಲಿಂ ಸಮುದಾಯ ಹೆಚ್ಚಿರುವ ಬಡಾವಣೆಗಳಲ್ಲಿ ವಿವಿಧ ಅಲಂಕಾರ ಮಾಡಲಾಗಿದೆ. ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಮೆಕ್ಕಾ ಮದೀನಾ ಮಾದರಿ ಅಲಂಕಾರ ಮಾಡಲಾಗಿದ್ದು ಇದರ ಮುಂದೆ ಸೆಲ್ಫಿ, ಫೋಟೋಗೆ ಜನರು ಮುಗಿಬಿದ್ದಿದ್ದಾರೆ. ಎಎ ಸರ್ಕಲ್‌ ಹಸಿರುಮಯ ಮಾಡಲಾಗಿದೆ. ಮೆಕ್ಕಾ ಮದೀನಾ ಮಾದರಿ ಇರಿಸಲಾಗಿದೆ. ಇನ್ನು, ಸರ್ಕಲ್‌ ಪಕ್ಕದಲ್ಲಿ ಎರಡು ಫಿರಂಗಿಗಳನ್ನು ಇಡಲಾಗಿದೆ. ಸರ್ಕಲ್‌ನಲ್ಲಿ ಟಿಪ್ಪು ಸುಲ್ತಾನ್‌ … Read more

ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಅಲಂಕಾರದ ವಿಚಾರದಲ್ಲಿ ಗೊಂದಲ, ಜಮಾವಣೆಯಾದ ಜನ, ಸದ್ಯ ಪರಿಸ್ಥಿತಿ ಶಾಂತ

Shimoga-SP-Mithun-Kumar-spoke-to-protesters

SHIVAMOGGA LIVE NEWS | 30 SEPTEMBER 2023 SHIMOGA : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ನಗರದ ಅಮೀರ್‌ ಅಹಮದ್‌ ಸರ್ಕಲ್‌ ಮತ್ತು ಶಿವಪ್ಪನಾಯಕ ಪ್ರತಿಮೆ ಸಮೀಪ ಮಾಡಿದ್ದ ಅಲಂಕಾರ (Decoration) ತೆರವು ವಿಚಾರ ಗೊಂದಲಕ್ಕೆ ಕಾರಣವಾಗಿತ್ತು. ಇದರಿಂದ ಶುಕ್ರವಾರ ರಾತ್ರಿ ಸರ್ಕಲ್‌ ಸಮೀಪ ಎರಡು ಕಡೆಯ ಯುವಕರು ಗಂಪುಗೂಡಿ ಘೋಷಣೆ ಕೂಗಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ ಭೇಟಿ ನೀಡಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದರು. … Read more