ಹೊಲ, ಗದ್ದೆಯಲ್ಲಿ ಕಾಡಾನೆಗಳ ಸಂಚಾರ, ರೈತರಲ್ಲಿ ಅತಂಕ, ಅರಣ್ಯಾಧಿಕಾರಿಗಳ ಗಸ್ತು ಹೆಚ್ಚಳ

wild-elephants-at-Soraba-ulavi-hobli

ಸೊರಬ: ಕಳೆದ ಎರಡು ದಿನಗಳ ಹಿಂದೆ ಸೊರಬ ತಾಲೂಕಿನ ಉಳವಿ ಹೋಬಳಿ (Uluvi Hobli) ಸುತ್ತಮುತ್ತಲಿನ ಗ್ರಾಮಗಳ ಜಮೀನಿನಲ್ಲಿ ಕಾಡಾನೆಗಳು (Wild Elephants) ಲಗ್ಗೆ ಇಟ್ಟಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿವೆ. ಎಲ್ಲೆಲ್ಲಿ ಕಾಡಾನೆ ಲಗ್ಗೆ? ಕಾನಹಳ್ಳಿ, ಕಣ್ಣೂರು ಮತ್ತು ಮೈಸಾವಿ ಗ್ರಾಮಗಳ ಸುತ್ತಮುತ್ತ ಬೆಳೆ ಕಟಾವು ಮಾಡಿದ ರೈತರ ಜಮೀನಿನಲ್ಲಿ (farmland) ಆನೆಗಳು ಸಂಚರಿಸಿರುವ ಬಗ್ಗೆ ಹೆಜ್ಜೆ ಗುರುತು ಹಾಗೂ ಲದ್ದಿ ಕಾಣಿಸಿದೆ. ಅಲ್ಲದೇ ಕೆಲವು ತೋಟದಲ್ಲಿ ಬಾಳೆಗಿಡಗಳನ್ನು ಕಿತ್ತು ತಿಂದು ಹಾನಿ ಮಾಡಿವೆ. ಇದನ್ನೂ ಓದಿ … Read more

ಶಿವಮೊಗ್ಗದಲ್ಲಿ ಸಾವಿರ ಸಾವಿರ ಜನರ ಸಮ್ಮುಖದಲ್ಲಿ ಅಂಬುಛೇದನ, ರಾವಣ ದಹನ, ಹೇಗಿತ್ತು ಕಾರ್ಯಕ್ರಮ?

021025-Banni-event-at-Shimoga-Freedom-park.webp

ದಸರಾ ಸುದ್ದಿ: ವಿಜಯ ದಶಮಿಯಂದು (Vijayadashami) ಶಿವಮೊಗ್ಗದಲ್ಲಿ ಅಂಬುಛೇದನ ಮಾಡಲಾಯಿತು. ಫ್ರೀಡಂ ಪಾರ್ಕ್‌ನಲ್ಲಿ ಸಾವಿರ ಸಾವಿರ ಜನರ ಸಮ್ಮುಖದಲ್ಲಿ ತಹಶೀಲ್ದಾರ್‌ ವಿ.ಎಸ್.ರಾಜೀವ್‌ ಅಂಬುಛೇದನ ಮಾಡಿದರು. ಇದೆ ವೇಳೆ ರಾವಣ ದಹನ, ಸಿಡಿಮದ್ದು ಪ್ರದರ್ಶನ ನಡೆಯಿತು. ಇಲ್ಲಿವೆ ಅಂಬುಛೇದನ ಕಾರ್ಯಕ್ರಮದ ಫೋಟೊಗಳು ಇದನ್ನೂ ಓದಿ » ಶಿವಮೊಗ್ಗ ದಸರಾದಲ್ಲಿ ವೈಭವದ ಮೆರವಣಿಗೆ, ಇಲ್ಲಿದೆ 15 ಫೋಟೊಗಳು Vijayadashami

ಶಿವಮೊಗ್ಗ ದಸರಾ ಆನೆ ತಂಗಿರುವ ಜಾಗದ ಸುತ್ತಲು ಶೀಟ್‌, ನಾಗರಿಕರಿಗೆ ನಿರಾಸೆ

Dasara-Elephant-Sheets-around-in-shimoga-city

ದಸರಾ ಸುದ್ದಿ: ವಾಸವಿ ಶಾಲೆ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು (Elephants) ವೀಕ್ಷಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆನೆಗಳು ತಂಗುವ ಜಾಗದ ಸುತ್ತಲು ಶೀಟ್‌ ಅಳವಡಿಸಲಾಗಿದೆ. ಕಳೆದ ವರ್ಷ ಆನೆಗಳನ್ನು ವೀಕ್ಷಿಸಲು ಬಂದ ಕೆಲವರು ಅವುಗಳತ್ತ ಕಲ್ಲು, ಮಣ್ಣು ತೂರಿದ್ದರು. ಕಬ್ಬು ಎಸೆದಿದ್ದಿರು. ಇದರಿಂದ ಆನೆಗಳು ರೊಚ್ಚಿಗೇಳುವ ಸಾಧ್ಯತೆ ಇದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆನೆಗಳು ಉಳಿದಿರುವ ಜಾಗದ ಸುತ್ತಲು ಶೀಟ್‌ ಅಳವಡಿಸಲಾಗಿದೆ. ಇನ್ನು, ಆನೆ ನೋಡಲು ನಗರದ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಮಕ್ಕಳನ್ನು ಆನೆ ತೋರಿಸಿ ಖುಷಿ … Read more

ಶಿವಮೊಗ್ಗದಲ್ಲಿ ಆನೆಗಳಿಗೆ ನಿತ್ಯ ಎರಡು ಬಾರಿ ತಾಲೀಮು, ಇದಕ್ಕಿದೆ ಎರಡು ಕಾರಣ, ಏನದು?

Sakrebyle-Elephant-Practise-for-dasara-in-Shimoga-city

ದಸರಾ ಸುದ್ದಿ: ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಇದಕ್ಕಾಗಿ ಸಕ್ರೆಬೈಲಿನ ಮೂರು ಆನೆಗಳು (Elephants) ಈಗಾಗಲೇ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು, ಎರಡು ಸುತ್ತು ತಾಲೀಮು ನಡೆಸಿವೆ. ಸಕ್ರೆಬೈಲು ಬಿಡಾರದ ಸಾಗರ್‌, ಬಾಲಣ್ಣ ಮತ್ತು ಬಹದ್ದೂರ್‌ ಆನೆಗಳು ಶಿವಮೊಗ್ಗ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿವೆ. ಪ್ರತಿ ವರ್ಷದಂತೆ ಈ ಬಾರಿಯು ಸಾಗರ್‌ ಆನೆಯೆ ಅಂಬಾರ ಹೊರಲಿದ್ದಾನೆ. ಎರಡು ಬಾರಿ ತಾಲೀಮು, ಕಾರಣವೇನು? ಜಂಬೂ ಸವಾರಿಯ ಆನೆಗಳಿಗೆ ನಿತ್ಯ ಎರಡು ಬಾರಿ ತಾಲೀಮು ನಡೆಸಲಾಗುತ್ತಿದೆ. ವಾಸವಿ ಶಾಲೆ ಆವರಣದಿಂದ … Read more

ಶಿವಮೊಗ್ಗದಲ್ಲಿ ಆನೆಗಳನ್ನು ನೋಡಲು ತಂಡೋಪತಂಡವಾಗಿ ಜನ ಆಗಮನ

Sakrebyle-Elephant-at-Vasavi-School-in-Shimoga

ದಸರಾ ಸುದ್ದಿ: ದಸರಾ ಜಂಬೂ ಸವಾರಿಗೆ ಬಂದಿರುವ ಆನೆಗಳು ಕೋಟೆ ರಸ್ತೆಯ ವಾಸವಿ ಶಾಲೆ ಅವರಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಆನೆಗಳನ್ನು (Elephants) ಹತ್ತಿರದಿಂದ ನೋಡಲು ಇವತ್ತು ಬೆಳಗ್ಗೆಯಿಂದಲೆ ಜನರು ಶಾಲೆಯತ್ತ ಆಗಮಿಸುತ್ತಿದ್ದಾರೆ. ಸಕ್ರೆಬೈಲು ಬಿಡಾರದ ಆನೆಗಳಾದ ಸಾಗರ್‌, ಬಾಲಣ್ಣ ಮತ್ತು ಬಹದ್ದೂರ್‌ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿವೆ. ಇವತ್ತು ಬೆಳಗ್ಗೆ ದಸರಾ ಆನೆಗಳು ಮೊದಲ ಸುತ್ತಿನ ತಾಲೀಮು ನಡೆಸಿವೆ. ಇನ್ನೊಂದೆಡೆ ಆನೆಗಳು ಉಳಿದುಕೊಂಡಿರುವ ವಾಸವಿ ಶಾಲೆ ಆವರಣಕ್ಕೆ ಜನರು ಬೆಳಗ್ಗೆಯಿಂದಲೇ ತಂಡೋಪ ತಂಡವಾಗಿ ಬರುತ್ತಿದ್ದಾರೆ. ಮಕ್ಕಳನ್ನು ಕರೆತಂದು … Read more

ಶಿವಮೊಗ್ಗ ಸಿಟಿಯಲ್ಲಿ ಸಕ್ರೆಬೈಲು ಆನೆಗಳ ತಾಲೀಮು ಶುರು

Sakrebyle-Elephant-practise-in-Shimoga-city.

ದಸರಾ ಸುದ್ದಿ: ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಆಗಮಿಸಿರುವ ಮೂರು ಆನೆಗಳಿಗೆ (Elephants) ನಗರದಲ್ಲಿ ತಾಲೀಮು ಆರಂಭವಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಇವತ್ತು ಆನೆಗಳಿಗೆ ತಾಲೀಮು ನಡೆಸಲಾಯಿತು. ಅಂಬಾರಿ ಹೊರಲಿರುವ ಸಾಗರ, ಬಾಲಣ್ಣ ಮತ್ತು ಬಹದ್ದೂರ್‌ ಆನೆಗಳು ನಗರದಲ್ಲಿ ತಾಲೀಮು ನಡೆಸಿದವು. ವಾಸವಿ ಶಾಲೆ ಆವರಣದಿಂದ ಹೊರಟ ಆನೆಗಳು ಕೋಟೆ ರಸ್ತೆ, ಗಾಂಧಿ ಬಜಾರ್‌, ಶಿವಪ್ಪ ನಾಯಕ ಪ್ರತಿಮೆ, ನೆಹರು ರಸ್ತೆ, ದುರ್ಗಿಗುಡಿ, ಜೈಲ್‌ ರಸ್ತೆ ಮೂಲಕ ಸಾಗಿದವು. ಇದನ್ನೂ ಓದಿ » ವಿಡಿಯೋ ಕರೆಯಲ್ಲೆ ಶಿವಮೊಗ್ಗದ … Read more

ಶಿವಮೊಗ್ಗಕ್ಕೆ ಮೂರು ಆನೆಗಳು ಆಗಮನ, ಪೂಜೆ, ಸ್ವಾಗತ, ಯಾವೆಲ್ಲ ಆನೆಗಳು ಬಂದಿವೆ?

Sakrebyle-Elephants-welcomed-in-Shimoga-city-for-dasara.

ದಸರಾ ಸುದ್ದಿ: ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಸಕ್ರೆಬೈಲು ಬಿಡಾರದ ಮೂರು ಆನೆಗಳು ಇವತ್ತು ನಗರಕ್ಕೆ ಆಗಮಿಸಿವೆ. ಕೋಟೆ ರಸ್ತೆಯ ವಾಸವಿ ಶಾಲೆ ಆವರಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಮೂರು ಆನೆಗಳನ್ನು (Elephants) ಸ್ವಾಗತಿಸಿ, ಪೂಜೆ ಸಲ್ಲಿಸಲಾಯಿತು. ಸಕ್ರೆಬೈಲು ಬಿಡಾರದ ಸಾಗರ್‌, ಬಹದ್ದೂರ್‌ ಮತ್ತು ಬಾಲಣ್ಣ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿವೆ. ವಾಸವಿ ಶಾಲೆ ಆವರಣದಲ್ಲಿ ಆನೆಗಳು ತಂಗಲು ವ್ಯವಸ್ಥೆ ಮಾಡಲಾಗಿದೆ. ಆನೆಗಳ ಜೊತೆ ಮಾವುತರು, ಕಾವಾಡಿಗಳು ಮತ್ತು ಬಿಡಾರದ ಸಿಬ್ಬಂದಿ ಆಗಮಿಸಿದ್ದಾರೆ. ಆನೆಗಳು ಬರುತ್ತಿದ್ದಂತೆ ಶಾಸಕ ಎಸ್‌.ಎನ್.ಚನ್ನಬಸಪ್ಪ … Read more

ಸಕ್ರೆಬೈಲು ಆನೆಗಳಿಗೆ ಶಿವಮೊಗ್ಗ ದಸರಾಕ್ಕೆ ಆಹ್ವಾನ, ಯಾವೆಲ್ಲ ಆನೆಗಳು ಭಾಗವಹಿಸಲಿವೆ? ಇಲ್ಲಿದೆ ಡಿಟೇಲ್ಸ್‌

Sakrebyle-Elephant-welcomed-for-Shimoga-Dasara

ಶಿವಮೊಗ್ಗ ದಸರಾ: ನಾಡ ದೇವಿ ಚಾಮುಂಡೇಶ್ವರಿಯ ವೈಭವದ ಅಂಬಾರಿ ಮೆರವಣಿಗೆಗೆ ಈ ಬಾರಿಯು ಸಕ್ರೆಬೈಲು ಬಿಡಾರದ ಮೂರು ಆನೆಗಳು ಆಗಮಿಸಲಿವೆ. ಇವತ್ತು ಆನೆಗಳಿಗೆ ಪೂಜೆ ಸಲ್ಲಿಸಿ ಆಹ್ವಾನ ನೀಡಲಾಯಿತು. ಶಾಸಕ ಎಸ್‌.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು, ಮಾಜಿ ಕಾರ್ಪೊರೇಟರ್‌ಗಳು ಸಕ್ರೆಬೈಲು ಬಿಡಾರಕ್ಕೆ ತೆರಳಿ ಆನೆಗಳಿಗೆ ಪೂಜೆ ಸಲ್ಲಿಸಿ ಆಹ್ವಾನ ನೀಡಿದರು. ಸಾಗರ ನೇತೃತ್ವದಲ್ಲಿ ಮೂರು ಆನೆಗಳು ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಎನ್.ಚನ್ನಬಸಪ್ಪ, ಈ ಬಾರಿಯು ಮೂರು ಆನೆಗಳು ಆಗಮಿಸಲಿವೆ. ಸಾಗರ ಆನೆ ಶ್ರೀ ಚಾಮುಂಡೇಶ್ವರಿ … Read more

ಆನೆ ದಾಳಿ, ಸಾಗರದಲ್ಲಿ MLA ನೇತೃತ್ವದಲ್ಲಿ ಮಹತ್ವದ ಮೀಟಿಂಗ್‌, ಏನೆಲ್ಲ ಚರ್ಚೆಯಾಯ್ತು?

Beluru-Gopalakrishna-holds-meeting-with-forest-officials about elephants menace

SHIVAMOGGA LIVE NEWS, 6 JANUARY 2025 ಸಾಗರ : ಪ್ರವಾಸಿ ಮಂದಿರದಲ್ಲಿ ಅರಣ್ಯಾಧಿಕಾರಿಗಳ ಜೊತೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸಭೆ ನಡೆಸಿದರು. ಆನೆಗಳ (Elephants) ದಾಳಿ, ಬೆಳೆ ಹಾನಿ ಕುರಿತು ಚರ್ಚೆ ನಡೆಸಿದರು. ಸಮಾಲೋಚನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಬೇರೆ ಪ್ರದೇಶಗಳಿಂದ ಸಾಗರ ತಾಲೂಕಿಗೆ ಆನೆಗಳು ಲಗ್ಗೆ ಇಡುತ್ತಿವೆ. ಇವುಗಳ ನಿಯಂತ್ರಣದ ವಿಷಯವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದೇನೆ ಎಂದರು. ತಾಲ್ಲೂಕಿನ ಗೌತಮಪುರ, ಆನಂದಪುರಂ, ಗಿಳಲಗುಂಡಿ ಹಾಗೂ ಸುತ್ತಮುತ್ತಲ … Read more

ಆನಂದಪುರ ಬಳಿ ಕಾಡಾನೆಗಳು ಪ್ರತ್ಯಕ್ಷ, ತೋಟ, ಗದ್ದೆಯಲ್ಲಿ ಸಂಚಾರ

Wild-Elephants-at-anandapura-lakkavalli

SHIVAMOGGA LIVE NEWS | 27 DECEMBER 2024 ಸಾಗರ : ಆನಂದಪುರ ಸುತ್ತಮುತ್ತ ಆನೆಗಳ ಉಪಟಳ (Wild Elephants) ಹೆಚ್ಚಾಗಿದೆ. ಇವತ್ತು ಬೆಳಗ್ಗೆ ಲಕ್ಕವಳ್ಳಿ ಸಮೀಪ ಆನೆಯೊಂದು ಮರಿಯಾನೆ ಜೊತೆಗೆ ಕಾಣಿಸಿಕೊಂಡಿದೆ. ಕೂಡಲೆ ಗ್ರಾಮಸ್ಥರು ಜೋರಾಗಿ ಕೂಗಿ ಆನೆಗಳನ್ನು ಓಡಿಸಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ. ಲಕ್ಕವಳ್ಳಿಯ ಲಕ್ಷ್ಮಣಪ್ಪ ಎಂಬುವವರ ತೋಟದ ಸಮೀಪ ಆನೆಗಳು ಕಾಣಿಸಿಕೊಂಡಿವೆ. ಸ್ಥಳೀಯರು ಜೋರಾಗಿ ಕೂಗಿಕೊಂಡಿದ್ದರಿಂದ ಆನೆಗಳು ಓಡಿ ಹೋಗಿವೆ. ಇದರ ವಿಡಿಯೋ ಇಲ್ಲಿದೆ. ಇದನ್ನೂ ಓದಿ » ಶಿವಮೊಗ್ಗ ನಗರದಲ್ಲಿ ಏನೇನಾಯ್ತು? … Read more