ಗಾಜನೂರಿನಿಂದ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಪಾದಯಾತ್ರೆ, ಸಿಇಒ ಮೂಲಕ ಸಿಎಂಗೆ ಮನವಿ

padayathre-from-gajanuru-haleshappa-dss

ಶಿವಮೊಗ್ಗ: ಡಾ. ಅಂಬೇಡ್ಕರ್‌ ಭವನಕ್ಕೆ ಜಾಗ ಮಂಜೂರು ಮಾಡಿಕೊಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗಾಜನೂರು ಗ್ರಾಮದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ (Padayathre) ನಡೆಸಲಾಯಿತು. ಗಾಜನೂರು ಗ್ರಾಮ ಪಂಚಾಯಿತಿಯ ಎ.ಕೆ, ಎ.ಡಿ ಕಾಲೋನಿ ಪಕ್ಕದಲ್ಲಿರುವ ಹಳೆಯ ದೊಡ್ಡಿ ಖಾಲಿ ಜಾಗವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನಕ್ಕೆ ಮಂಜೂರು ಮಾಡಿಕೊಡುವಂತೆ ಆಗ್ರಹಿಸಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಗಾಜನೂರು ಗ್ರಾಮ ಪಂಚಾಯಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಹಾಗೂ … Read more

BREAKING NEWS | ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ

Bus-Truck-Mishap-near-Gajanuru-in-Shimoga

ಶಿವಮೊಗ್ಗ: ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್‌ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಗಾಜನೂರು ಅಗ್ರಹಾರದ ಬಳಿ ಇಂದು ಬೆಳಗಿನ ಜಾವ ಅಪಘಾತ (Mishap) ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಉಚಿತವಾಗಿ ಹೆಪಟೈಟಿಸ್‌ ಬಿ ತಪಾಸಣೆ ಶಿಬಿರ, ಲಸಿಕೆ ವಿತರಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ ಖಾಸಗಿ ಬಸ್ಸಿನ ನಿರ್ವಾಹಕ ಅಣ್ಣಪ್ಪ ಮೃತರಾಗಿದ್ದಾರೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ 13 ಜನ ಗಾಯಗೊಂಡಿದ್ದು … Read more

ಗಾಜನೂರಿನ ತುಂಗಾ ಜಲಾಶಯದ ಒಳ, ಹೊರ ಇರುವು ಇಳಿಕೆ, ಇವತ್ತು ಎಷ್ಟಿದೆ?

Tunga-Dam-Gajanuru.

ಶಿವಮೊಗ್ಗ: ಗಾಜನೂರಿನ ತುಂಗಾ ಜಲಾಶಯದ (Dam) ಒಳ ಹರಿವು ಇಳಿಕೆಯಾಗಿದೆ. ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ತುಂಗಾ ಜಲಾಶಯಕ್ಕೆ ಇವತ್ತು 14,791 ಕ್ಯೂಸೆಕ್‌ ಒಳ ಹರಿವು ಇದೆ. 13,645 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಒಳ, ಹೊರ ಹರಿವು ಕಡಿಮೆಯಾಗಿದೆ. ಇದರಿಂದ ತುಂಗಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ತಗ್ಗಿದೆ. ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1.10 ಅಡಿ ಹೆಚ್ಚಳ, ಇವತ್ತು … Read more

ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಗೆ ಉರುಳಿದ ಬೃಹತ್ ಆಲದ ಮರ, ವಾಹನ ಸಂಚಾರಕ್ಕೆ ಅಡಚಣೆ

Tree-falls-to-Shimoga-Thirthahalli-Road-at-gajanuru

ಶಿವಮೊಗ್ಗ: ಜೋರು ಗಾಳಿಗೆ ಸಹಿತ ಮಳೆಯಿಂದಾಗಿ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಬೃಹತ್‌ ಮರ (Tree) ಧರೆಗುರುಳಿದೆ. ಶಿವಮೊಗ್ಗ ತಾಲೂಕು ಗಾಜನೂರು ಚೆಕ್‌ ಪೋಸ್ಟ್‌ ಸಮೀಪ ಮರ ಬುಡಮೇಲಾಗಿದೆ. ಚೆಕ್‌ ಪೋಸ್ಟ್‌ನ ಸಹಿನದಲ್ಲಿದ್ದ ಬೃಹತ್‌ ಆಲದ ಮರ ಮಧ್ಯಾಹ್ನ ಬೀಸಿದ ಜೋರಿ ಗಾಳಿಗೆ ಧರೆಗುರುಳಿಸಿದೆ. ಇದರಿಂದ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿ ಸಂಪೂರ್ಣ ಬಂದ್‌ ಆಗಿದೆ. ಮರ ಉರುಳುವಾಗ ಅದೃಷ್ಟವಶಾತ್‌ ಆ ಭಾಗದಲ್ಲಿ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಈಗ ಹೆದ್ದಾರಿ ಪಕ್ಕದಲ್ಲಿರುವ … Read more

ಗಾಜನೂರಿನಲ್ಲಿ ನಡುರಾತ್ರಿ ಕೇಳಿತು ಶಬ್ದ, ಹೊರಗೆ ಕಾಣಿಸ್ತು ಸ್ಯಾಂಟ್ರೋ ಕಾರ್‌, ಮೊಬೈಲ್‌ನಲ್ಲಿ ದೃಶ್ಯ ಸೆರೆ, ಏನಿದು ಕೇಸ್?

Cow-theives-escaped-in-a-car-in-gajanuru

ಶಿವಮೊಗ್ಗ : ನಡುರಾತ್ರಿ ದನಗಳ್ಳತನಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್‌ (Gang) ಒಂದು ಸ್ಥಳೀಯರು ಬರುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದೆ. ಈ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗದ ತಾಲೂಕು ಗಾಜನೂರಿನ ಬಸವೇಶ್ವರ ಬೀದಿಯಲ್ಲಿ ನಡೆದಿದೆ. ಮಾ.20ರಂದು ರಾತ್ರಿ 3 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ನಡುರಾತ್ರಿ ಶಬ್ದ, ಹೊರಗೆ ನಿಂತಿತ್ತು ಕಾರು ಬಸವೇ‍ಶ್ವರ ಬೀದಿಯಲ್ಲಿ ನಡುರಾತ್ರಿ ಶಬ್ದವಾಗುತ್ತಿತ್ತು. ನಾಯಿಗಳು ಜೋರಾಗಿ ಬೊಗಳುತ್ತಿದ್ದವು. ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ಹೊರ ಬಂದಾಗ ರಸ್ತೆ ಬದಿ ನಿಂತಿದ್ದ ಹಸುವೊಂದನ್ನು ಸ್ಯಾಂಟ್ರೋ ಕಾರಿಗೆ ತುಂಬಿಕೊಳ್ಳುವ ಪ್ರಯತ್ನ … Read more

ಗಾಜನೂರಿನಲ್ಲಿ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಚಾಲಕನ ವಿರುದ್ಧ ಕೇಸ್‌ ದಾಖಲಿಸಿದ ಮೆಸ್ಕಾಂ

ACCIDENT-NEWS-GENERAL-IMAGE.

ಶಿವಮೊಗ್ಗ : ಕಾರು ಡಿಕ್ಕಿಯಾಗಿ ವಿದ್ಯುತ್‌ ಕಂಬಕ್ಕೆ (Pole) ಹಾನಿಯಾಗಿದ್ದು, ಕಾರು ಚಾಲಕನ ವಿರುದ್ಧ ಮೆಸ್ಕಾಂ ಜೂನಿಯರ್‌ ಇಂಜಿನಿಯರ್‌ ದೂರು ನೀಡಿದ್ದಾರೆ. ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಭಾಗ ಟೊಯೊಟ ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡದಿತ್ತು. ಇದರಿಂದ ಕಂಬ ಜಖಂಗೊಂಡಿದೆ. ಹಾಗಾಗಿ 23,778 ರೂ. ನಷ್ಟವಾಗಿದೆ ಎಂದು ಆರೋಪಿಸಿ ಕಾರು ಚಾಲಕನ ವಿರುದ್ಧ ಮೆಸ್ಕಾಂ ಜೂನಿಯರ್‌ ಇಂಜಿನಿಯರ್‌ ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.  ಇದನ್ನೂ ಓದಿ » ಕಮಲಾ … Read more

ಶಿವಮೊಗ್ಗದ ಹಲವು ಗ್ರಾಮಗಳಲ್ಲಿ ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

SHIVAMOGGA LIVE NEWS, 21 DECEMBER 2024 ಶಿವಮೊಗ್ಗ : ಗಾಜನೂರು ಶಾಖಾ ವ್ಯಾಪ್ತಿಯ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ‌ನಡೆಸಲಾಗುತ್ತಿದೆ. ಆದ್ದರಿಂದ ಡಿಸೆಂಬರ್‌ 22ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಗಾಜನೂರು, ಕ್ಯಾಂಪ್ ಮತ್ತು ಡ್ಯಾಂ, ಸಕ್ಕರೆ ಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಶ್ರೀಕಂಠಪುರ, ವೀರಾಪುರ, … Read more

ಗಾಜನೂರು ತುಂಗಾ ಜಲಾಶಯದಲ್ಲಿ ತಪ್ಪಿದ ದುರಂತ, ತುಂಡಾಗುವ ಹಂತದಲ್ಲಿದೆ ಗೇಟ್‌ ರೋಪ್‌

Gajanuru-Dam-gate-8-rope-to-cut

SHIMOGA, 13 AUGUST 2024 : ತುಂಗಭದ್ರ ಜಲಾಶಯದ ಗೇಟ್‌ (Crust Gate) ಮುರಿದು ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಡ್ಯಾಮ್‌ಗಳ ಸುರಕ್ಷತೆ ಕುರಿತು ಪ್ರಶ್ನೆಗಳು ಮೂಡಿವೆ. ಈ ಮಧ್ಯೆ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯದ 8ನೇ ಗೇಟ್‌ನ ರೋಪ್‌ ತುಂಡಾಗುವ ಹಂತದಲ್ಲಿದೆ. ಇದರ ಫೋಟೊಗಳು ಶಿವಮೊಗ್ಗ ಲೈವ್.ಕಾಂಗೆ ಲಭ್ಯವಾಗಿದೆ. ಗಾಜನೂರಿನ ತುಂಗಾ ಜಲಾಶಯ ಮೂರುವರೆ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸರಿಯಾದ ಒಂದೆರಡು ಮಳೆಗೆ ಜಲಾಶಯ … Read more

ಗಾಜನೂರಿನ ತುಂಗಾ ಜಲಾಶಯಕ್ಕೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಬಾಗಿನ, ಹೂಳೆತ್ತುವಂತೆ ಶಾಸಕರ ಒತ್ತಾಯ

BY-Raghavendra-offers-bagina-to-tunga-river-at-gajanuru-dam.

SHIVAMOGGA LIVE NEWS | 20 JULY 2024 SHIMOGA : ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಗಾಜನೂರಿನ ಜಲಾಶಯದಲ್ಲಿ (Dam) ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು. ಇದೇ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಸುಮಾರು 80 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ತುಂಗಾ ಮೇಲ್ದಂಡೆ ಯೋಜನೆ ಮೂಲಕ ನೀರು ಒದಗಿಸಲಾಗುತ್ತಿದೆ. ಇದು ಈ ಭಾಗದ ಜನರ ಜೀವನದಿ. ಕಳೆದ ವರ್ಷ ಮಳೆ … Read more

ತುಂಗಾ ಡ್ಯಾಂನಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರು ಹೊರಕ್ಕೆ, ಇವತ್ತು ಎಷ್ಟು ನೀರು ಹೊಳೆಗೆ ಹರಿಯುತ್ತಿದೆ?

TUNGA-DAM-21-CRUST-GATES-OPENED

SHIVAMOGGA LIVE NEWS | 8 JULY 2024 DAM LEVEL : ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು ಏರಳಿತವಾಗುತ್ತಿದೆ. ಇನ್ನು, ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ತುಂಗಾ ಜಲಾಶಯಕ್ಕೆ 17,049 ಕ್ಯೂಸೆಕ್‌ ಒಳ ಹರಿವು ಇದೆ. ಅಷ್ಟೆ ಪ್ರಮಾಣದ ನೀರನ್ನು ಗೇಟ್‌ಗಳ ಮೂಲಕ ಹೊಳೆಗೆ ಹರಿಸಲಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 588.24 ಮೀಟರ್.‌ ಉತ್ತಮ ಒಳ ಹರಿವು ಇರುವುದರಿಂದ ಜಲಾಶಯ ಗರಿಷ್ಠ … Read more