ಶಿವಮೊಗ್ಗದಲ್ಲಿ ಚಲಿಸುತ್ತಿದ್ದಲೇ ಪುಟಾಣಿ ರೈಲಿನಲ್ಲಿ ಬೆಂಕಿ, ದಟ್ಟ ಹೊಗೆ

Heavy-Smoke-in-Toy-train-at-Shimoga-Gandhi-Bazaar.

ಶಿವಮೊಗ್ಗ: ಚಲಿಸುತ್ತಿರುವಾಗಲೆ ಪುಟಾಣಿ ರೈಲಿನಲ್ಲಿ (Toy Train) ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ರೈಲು ಚಲಿಸುವಾಗಲೆ ಪೋಷಕರು ಮತ್ತು ಮಕ್ಕಳು ಆತಂಕದಿಂದ ಕೆಳಗೆ ಇಳಿದುಕೊಂಡಿದ್ದಾರೆ. ಗಾಂಧಿ ಪಾರ್ಕ್‌ನಲ್ಲಿರುವ ಪುಟಾಣಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲು ಚಲಿಸುವಾಗಲೆ ತಾಂತ್ರಿಕ ದೋಷದಿಂದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತು. ರೈಲಿನಲ್ಲಿ ಕೆಲವು ಪೋಷಕರು ತಮ್ಮ ಮಕ್ಕಳೊಂದಿಗೆ ಇದ್ದರು. ಹೊಗೆ ಆವರಿಸಿದ್ದರಿಂದ ಆತಂಕಗೊಂಡ ಪೋಷಕರು ತಮ್ಮ ಮಕ್ಕಳ ಸಹಿತ ಚಲಿಸುವ ರೈಲಿನಿಂದ ಕೆಳಗೆ ಇಳಿದಿದ್ದಾರೆ. ಬೆಂಕಿ ನಂದಿಸಿ ಕೆಲವು ಸಮಯದ ಬಳಿಕ … Read more

ಗಾಂಧಿ ಪಾರ್ಕ್‌ ಮುಂದೆ ನಿಲ್ಲಿಸಿದ್ದ ಮತ್ತೊಂದು ಬೈಕ್‌ ನಾಪತ್ತೆ, ಹೇಗಾಯ್ತು ಘಟನೆ?

bike theft reference image

ಶಿವಮೊಗ್ಗ: ಗಾಂಧಿ ಪಾರ್ಕ್‌ ಮುಂಭಾಗ ನಿಲ್ಲಿಸಿದ್ದ ಹೀರೋ ಹೋಂಡ ಸ್ಪ್ಲೆಂಡರ್‌ ಪ್ರೋ ಬೈಕ್‌ ಕಳ್ಳತನವಾಗಿದೆ (Bike Theft). ನ್ಯಾಮತಿಯ ಬೆಳಗುತ್ತಿಯ ಪ್ರಭಾಕರ್‌ ಎಂಬುವವರಿಗೆ ಸೇರಿದ ಬೈಕ್‌ ಕಳುವಾಗಿದೆ ಎಂದು ಆರೋಪಿಸಿ ದೂರ ನೀಡಿದ್ದಾರೆ. ಸಂಜೆ 5 ಗಂಟೆಗೆ ಡಿವಿಎಸ್‌ ಸರ್ಕಲ್‌ ಬಳಿ ಗಾಂಧಿ ಪಾರ್ಕ್‌ ಗೇಟ್‌ ಮುಂಭಾಗ ಬೈಕ್‌ ನಿಲ್ಲಿಸಿದ್ದರು. ರಾತ್ರಿ 8 ಗಂಟೆ ಹೊತ್ತಿಗೆ ಗಾಂಧಿ ಪಾರ್ಕ್‌ ಬಳಿ ಬಂದಾಗ ಬೈಕ್‌ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

BIG IMPACT – ಶಿವಮೊಗ್ಗ ಲೈವ್‌ ವರದಿ ಬೆನ್ನಿಗೆ ಗಾಂಧಿ ಪಾರ್ಕ್‌ಗೆ ಉಪ ಲೋಕಾಯುಕ್ತರ ಭೇಟಿ, ಅಧಿಕಾರಿಗಳ ವಿರುದ್ಧ ಕೇಸ್‌

Upa-Lokayukta-Justice-Phanindra-sudden-visit-to-gandhi-park

ಶಿವಮೊಗ್ಗ : ಗಾಂಧಿ ಪಾರ್ಕ್‌ನ (Gandhi Park) ನಿರ್ವಹಣೆ ಕೊರತೆ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಭೇಟಿ ನೀಡಿದ್ದರು. ಗಾಂಧಿ ಪಾರ್ಕ್‌ ದುಸ್ಥಿತಿ ಕಂಡು ಗರಂ ಆದರು. ಕಮಿಷನರ್‌ ವಿರುದ್ಧ ಕೇಸ್‌ ದಾಖಲಿಸುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗಕ್ಕೆ ಭೇಟಿ ನೀಡಿರುವ ನ್ಯಾ. ಕೆ.ಎನ್.ಫಣೀಂದ್ರ ಅವರು ನಗರದ ವಿವಿಧೆಡೆ ಇಂದು ಬೆಳಗ್ಗೆಯಿಂದ ದಿಢೀರ್‌ ಭೇಟಿ ನೀಡುತ್ತಿದ್ದಾರೆ. ಗಾಂಧಿ ಪಾರ್ಕ್‌ಗೆ ಭೇಟಿ ನೀಡಿದ್ದ ಅವರು ಇಲ್ಲಿನ ಅವಸ್ಥೆ ಕಂಡು ಹೌಹಾರಿದರು. ಪಾಲಿಕೆ ಕಮಿಷನರ್‌ ಕವಿತಾ … Read more

ಧಗಧಗ ಹೊತ್ತಿ ಉರಿಯಲಿದೆ ಗಾಂಧಿ ಪಾರ್ಕ್‌, ಕೆಲವರಿಗಿದು ಓಪನ್‌ ಬಾರ್‌, ಹೇಗಿದೆ ಒಳಗಿನ ಸ್ಥಿತಿ?

Shimoga-Gandhi-Park-non-maintenence

ಶಿವಮೊಗ್ಗ : ಆಕಸ್ಮಿಕವಾದ ಒಂದೇ ಒಂದು ಬೆಂಕಿ ಕಿಡಿ ಸಾಕು, ಧಗಧಗ ಹೊತ್ತಿ ಉರಿಯಲಿದೆ ಇಡೀ ಪಾರ್ಕ್‌! ಕಂಡ ಕಂಡಲ್ಲಿ ಸಿಗುತ್ತೆ ಬಿಯರ್‌ ಬಾಟಲ್‌! ರಾಶಿ ರಾಶಿ ಕಸ, ಅಲ್ಲಲ್ಲಿ ಉಪಕರಣಗಳು ಧ್ವಂಸ! ಅಹ್ಲಾದಕರ ವಾತಾವರಣ ಸೃಷ್ಟಿಸಬೇಕಿದ್ದ ಉದ್ಯಾನವನ (Park) ಈಗ ಅನೈತಿಕ ಚಟುವಟಿಕೆಯ ತಾಣ! ಇದಷ್ಟು ನಗರದ ಹೃದಯ ಭಾಗದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಗಾಂಧಿ ಪಾರ್ಕ್‌ (Gandhi Park) ವಾಸ್ತವ ಸ್ಥಿತಿ. ಈ ಉದ್ಯಾನದಿಂದ ಕೆಲವೇ ಮೀಟರ್‌ ಅಂತರದಲ್ಲಿ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಆಡಳಿತ ಕಚೇರಿ, … Read more

ಸಿದ್ದರಾಮಯ್ಯ ಬೆಂಬಲಿಸಿ ಶಿವಮೊಗ್ಗದಲ್ಲಿ ಪ್ರತಿಜ್ಞೆ ಸ್ವೀಕಾರ

Shimoga-News-update

SHIMOGA NEWS, 26 SEPTEMBER 2024 : ಬಿಜೆಪಿ – ಜೆಡಿಎಸ್‌ ಪಕ್ಷಗಳ ಷಡ್ಯಂತ್ರ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ಸೂಚಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸಿದರು. ಗಾಂಧಿ ಪಾರ್ಕ್‌ನಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು, ಬಿಜೆಪಿ – ಜೆಡಿಎಸ್‌ ಷಡ್ಯಂತ್ರದ ವಿರುದ್ಧ ಘೋಷಣೆ (Protest) ಕೂಗಿದರು. ಯಾರೆಲ್ಲ ಏನೆಲ್ಲ ಹೇಳಿದರು? ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆರ್‌.ಪ್ರಸನ್ನ ಕುಮಾರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸೂಡಾ ಅಧ್ಯಕ್ಷ ಹೆಚ್‌.ಎಸ್‌.ಸುಂದರೇಶ್‌, ಪ್ರಮುಖರಾದ ರಮೇಶ್‌ … Read more

ಶಿವಮೊಗ್ಗದಲ್ಲಿ 2 ದಿನ ಲೇಬರ್‌ ಲೈಸೆನ್ಸ್‌ ಮೇಳ| ಗಾಂಧಿ ಪಾರ್ಕ್‌ ಬೋರ್ಡ್‌ನಲ್ಲಿ ಅಕ್ಷರಗಳು ಮಾಯ – ಫಟಾಫಟ್‌ ನ್ಯೂಸ್

FATAFAT-NEWS-GENERAL-IMAGE.jpg

SHIVAMOGGA LIVE NEWS | 4 DECEMBER 2023 ಕಳಚಿ ಬಿದ್ದ ಅಕ್ಷರಗಳು SHIMOGA : ಗಾಂಧಿ ಪಾರ್ಕ್‌ನ ಹೊಸ ಬೋರ್ಡ್‌ ಹಾನಿಗೀಡಾಗಿದೆ. ಮಹಾತ್ಮ ಗಾಂಧೀಜಿ ಉದ್ಯಾನವನ ಎಂದು ಮಹಾನಗರ ಪಾಲಿಕೆ ವತಿಯಿಂದ ಬೋರ್ಡ್‌ ಹಾಕಲಾಗಿತ್ತು. ಗಾಂಧೀಜಿಯ ಹೆಸರಿನಲ್ಲಿದ್ದ ಅಕ್ಷರಗಳು ಕಳಚಿ ಬಿದ್ದಿವೆ. ಕಸ್ತೂರ ಬಾ ಪದವಿ ಪೂರ್ವ ಕಾಲೇಜು ಮುಂಭಾಗ ಇರುವ ಗೇಟ್‌ನ ಬೋರ್ಡ್‌ನಲ್ಲಿ ಅಕ್ಷರಗಳು ಕಳಚಿ ಬಿದ್ದಿವೆ. ಇದನ್ನು ಕೂಡಲೆ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಶಕ್ತಿ ಪೂಜೆ, ಹೊಸಮನೆಯಲ್ಲಿ ಗಮನ … Read more

ಗಾಂಧಿ ಪಾರ್ಕ್ ನಲ್ಲಿ ಡಾಗ್ ಶೋ, ಶ್ವಾನಗಳ ಆಟ, ಚಿನ್ನಾಟ, ಸೆಲ್ಫಿಗೆ ಮುಗಿಬಿದ್ದ ಜನ

Dog-show-in-Shimoga-Gandhi-Park

SHIMOGA | ಶಿವಮೊಗ್ಗ ದಸರಾ ಅಂಗವಾಗಿ ಗಾಂಧಿ ಪಾರ್ಕ್ ನಲ್ಲಿ ಶ್ವಾನ ಪ್ರದರ್ಶನ (DOG SHOW) ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ವಿವಿಧ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ವಿವಿಧ ತಳಿಯ ಶ್ವಾನಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಖ್ಯಾತ ತೀರ್ಪುಗಾರರು ಶ್ವಾನಗಳ ಚಟುವಟಿಕೆ ಗಮನಿಸಿ ತೀರ್ಪು ಘೋಷಿಸಿದ್ದು, ಬಹುಮಾನ ವಿತರಿಸಲಾಯಿತು. ಶ್ವಾನಗಳನ್ನು ಕಂಡು ಮಕ್ಕಳು ಖುಷಿ DOG SHOW ನಾನಾ ತಳಿಯ ಶ್ವಾನಗಳನ್ನು ಪ್ರದರ್ಶನಕ್ಕೆ (DOG SHOW) ಕರೆತರಲಾಗಿತ್ತು. ಅವುಗಳನ್ನು ಕಂಡು ಮಕ್ಕಳು ಖುಷಿ ಪಟ್ಟರು. ಹಲವರು ತಮ್ಮ ಮಕ್ಕಳನ್ನು … Read more

ಗಾಂಧಿ ಪಾರ್ಕ್‌ಗೆ ಬಂದು ಜೂಸ್ ಕುಡಿದು ಮಕ್ಕಳು ಸಾವು ಪ್ರಕರಣ, ಇವತ್ತು ಆಸ್ಪತ್ರೆಯಲ್ಲಿ ತಾಯಿ ಸಾವು

Mc Gann Hospital Building

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 08 JANUARY 2021 ಗಾಂಧಿ ಪಾರ್ಕ್‍ನಲ್ಲಿ ಜೂಸ್‍ ಕುಡಿದು ಇಬ್ಬರು ಮಕ್ಕಳು ಮೃತಪಟ್ಟ ಬೆನ್ನಿಗೆ, ತಾಯಿಯು ಸಾವನ್ನಪ್ಪಿದ್ದಾಳೆ. ಮೆಗ್ಗಾನ್ ಆಸ್ಪತ್ರೆಯ ಸಾಂತ್ವನ ಕೇಂದ್ರದಲ್ಲಿ ಗೀತಾ ಕೊನೆಯುಸಿರೆಳೆದಿದ್ದಾಳೆ. ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದ ಗೀತಾ ಇವತ್ತು ಮೃತಪಟ್ಟಿದ್ದಾಳೆ. ಮೆಗ್ಗಾನ್ ಆಸ್ಪತ್ರೆ ಸಾಂತ್ವನ ಕೇಂದ್ರದಲ್ಲಿ ಗೀತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಊಟ ತ್ಯಜಿಸಿದ್ದ ಗೀತಾ ಮಕ್ಕಳು ಮೃತಪಟ್ಟ ಬೆನ್ನಿಗೆ ಗೀತಾ … Read more