ಹೊಸನಗರದಲ್ಲಿ ಮಳೆ ಜೊತೆ ಗಾಳಿ ಅಬ್ಬರ, ಮಾಸ್ತಿಕಟ್ಟೆಯಲ್ಲಿ ಹೆಚ್ಚು ವರ್ಷಧಾರೆ
ಹೊಸನಗರ | ತಾಲೂಕಿನಲ್ಲಿ ಭಾರಿ ಮಳೆ ಜೊತೆಗೆ ಗಾಳಿಯು ಅಬ್ಬರಿಸುತ್ತಿದೆ. ಇದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಮಾಸ್ತಿಕಟ್ಟೆ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ಹೊಸನಗರ ತಾಲೂಕಿನ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 71 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 82 ಮಿ.ಮೀ, ಹುಲಿಕಲ್’ನಲ್ಲಿ 99 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 111 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 51 ಮಿ.ಮೀ, ಸಾವೇಹಕ್ಲು ಭಾಗದಲ್ಲಿ 42 ಮಿ.ಮೀ ಮಳೆಯಾಗಿದೆ. ಜೋರು ಮಳೆಯಿಂದಾಗಿ ಹೊಸನಗರ ತಾಲೂಕಿನ ಜಲಾಶಯಗಳಿಗೆ ಒಳ ಹರಿವು ಹೆಚ್ಚಳವಾಗಿದೆ. … Read more