ಗಾಳಿ, ಮಳೆ, ಹಲವು ಕಡೆ ವಿದ್ಯುತ್ ಕಟ್, ಅನೇಕ ಗ್ರಾಮಗಳಲ್ಲಿ ನೂರು ಮಿ.ಮೀಗೂ ಹೆಚ್ಚು ಮಳೆ, ಎಲ್ಲೆಲ್ಲಿ? ಯಾವ್ಯಾವ ತಾಲೂಕು?

Shivamogga-Rain-General-Image

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಆಗಸ್ಟ್ 2020 ಜಿಲ್ಲೆಯಲ್ಲಿ ಭಾರಿ ಮಳೆ, ಗಾಳಿಗೆ ಹಲವು ಕಡೆ ಮರಗಳು ಧರೆರಗುಳಿದ್ದು, ವಿದ್ಯುತ್ ವ್ಯತ್ಯಯವಾಗಿದೆ. ಅನೇಕ ಗ್ರಾಮಗಳಲ್ಲಿ ಎರಡ್ಮೂರು ದಿನದಿಂದ ಕರೆಂಟ್ ಇಲ್ಲವಾಗಿದೆ. ಗಾಳಿ, ಮಳೆ ಮೆಸ್ಕಾಂ ಶಿವಮೊಗ್ಗ ಸರ್ಕಲ್ ವ್ಯಾಪ್ತಿಯ 39 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. 87 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸುಮಾರು 8.02 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಹೊಸನಗರ, ತೀರ್ಥಹಳ್ಳಿ, ಸಾಗರ, ಶಿವಮೊಗ್ಗ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿರುವ … Read more

ಆನಂದಪುರ, ರಿಪ್ಪನ್‌ಪೇಟೆ ರಸ್ತೆಯಲ್ಲಿ ಧರೆಗುರುಳಿದ ಮರ, ರಸ್ತೆ ಪಕ್ಕದ ಜಾಗದಲ್ಲಿ ಸಿಕ್ಕಿಬಿದ್ದ ಲಾರಿ, ವಾಹನ ಸಂಚಾರ ಸ್ಥಗಿತ

040820 Tree Fall in Anandapura Ripponpete Road 1

ಶಿವಮೊಗ್ಗ ಲೈವ್.ಕಾಂ | ANANDAPURA NEWS | 4 ಆಗಸ್ಟ್ 2020 ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮರಗಳು ಧರೆಗುರುಳಿದ ವರದಿಯಾಗುತ್ತಿದೆ. ಆನಂದಪುರ ಮತ್ತು ರಿಪ್ಪನ್‍ಪೇಟೆ ರಸ್ತೆಯಲ್ಲಿ ಮರ ಉರುಳಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ದೊಡ್ಡ ಮರವೊಂದು ರಸ್ತೆಗೆ ಉರುಳಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡೆಚಣೆ ಉಂಟಾಗಿತ್ತು. ರಸ್ತೆಯ ಒಂದು ಬದಿಯಲ್ಲಿ ಸ್ವಲ್ಪ ಜಾಗವಿತ್ತು. ಈ ಜಾಗದಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಈ ಜಾಗದಲ್ಲಿ ಗ್ಯಾಸ್ ಸಿಲಿಂಡರ್ ಲಾರಿಯೊಂದು ಸಂಚರಿಸಲು ಮುಂದಾಯಿತು. ಈ ವೇಳೆ ಲಾರಿ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆ, ಯಾವ್ಯಾವ ತಾಲೂಕಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?

020520 Rain in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಆಗಸ್ಟ್ 2020 ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದೆರಡು ದಿನದಿಂದ ಭಾರಿ ಮಳೆಯಾಗುತ್ತಿದೆ. ಹೊಸನಗರ, ತೀರ್ಥಹಳ್ಳಿ ಮತ್ತು ಸೊರಬ ತಾಲೂಕಿನಲ್ಲಿ ನಿರಂತರ ವರ್ಷಧಾರೆಯಾಗುತ್ತಿದೆ. ಕೆಲವು ಕಡೆಯಲ್ಲಿ ಮಳೆ ಬಿಡುವು ಕೊಟ್ಟಿಲ್ಲ ಎಂದು ತಿಳಿದು ಬಂದಿದೆ. ಯಾವ್ಯಾವ ತಾಲೂಕಲ್ಲಿ ಎಷ್ಟು ಮಳೆಯಾಗಿದೆ? ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 535.10 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 38.40 ಮಿ.ಮೀ, ಭದ್ರಾವತಿಯಲ್ಲಿ 21 ಮಿ.ಮೀ, ತೀರ್ಥಹಳ್ಳಿ 104.40 ಮಿ.ಮೀ, ಸಾಗರ 55.60 ಮಿ.ಮೀ, … Read more

ಹೊಸನಗರದ ಇಬ್ಬರಿಗೆ ಕರೋನ, ಇವರಿಗೆ ಸೋಂಕು ತಗುಲಿದ್ದು ಹೇಗೆ?

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 18 ಜುಲೈ 2020 ಬೆಂಗಳೂರಿನಿಂದ ಹೊಸನಗರಕ್ಕೆ ಬಂದಿದ್ದ ಇಬ್ಬರಿಗೆ ಕರೋನ ಸೋಂಕು ತಗುಲಿದೆ. ಶುಕ್ರವಾರ ಬಿಡುಗಡೆಯಾದ ವರದಿಯಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದೆ ಎಂದು ತಿಳಿಸಲಾಗಿದೆ. ಇದರಿಂದ ತಾಲುಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಯಾರಿಗೆಲ್ಲ ಸೋಂಕು ತಗುಲಿದೆ? ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳಗಲ್ಲು ಗ್ರಾಮದ 31 ವರ್ಷದ ವ್ಯಕ್ತಿ ಮತ್ತು ಮಾವಿನಕಟ್ಟೆ ಸಮೀಪದ ಸಾವಂತೂರು ಗ್ರಾಮದ 29 ವರ್ಷದ ವ್ಯಕ್ತಿಗೆ ಕರೋನ ಸೋಂಕು ದೃಢವಾಗಿದೆ. ಬೆಂಗಳೂರಿನಿಂದ … Read more

ವಿದ್ಯುತ್ ಸ್ಪರ್ಶ, ಕಂಬದಿಂದ ಬಿದ್ದು ಗುತ್ತಿಗೆ ಕಾರ್ಮಿಕ ಸಾವು, ಮತ್ತೊಬ್ಬನಿಗೆ ಗಾಯ

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA | 15 ಮಾರ್ಚ್ 2020 ವಿದ್ಯುತ್ ಕಂಬದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕನಿಗೆ ವಿದ್ಯುತ್ ಶಾಕ್ ತುಗುಲಿ, ಕಂಬದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಮತ್ತೊಬ್ಬ ಗುತ್ತಿಗೆ ಕಾರ್ಮಿಕನಿಗೆ ವಿದ್ಯತ್ ಸ್ಪರ್ಶವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುತ್ತಿಗೆ ಕಾರ್ಮಿಕ ಮಾರುತಿ (28) ಮೃತಪಟ್ಟಿದ್ದಾನೆ. ಮಹೇಶ (26)  ಎಂಬಾತನಿಗೆ ವಿದ್ಯುತ್ ಸ್ಪರ್ಶವಾಗಿದೆ. ಅವರನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವಸವೆ ಗ್ರಾಮದಲ್ಲಿ ಶನಿವಾರ ವಿದ್ಯುತ್ ಕಂಬದ … Read more

ಹೊಸನಗರ ತಹಶೀಲ್ದಾರ್ ಆರೋಪಿ ನಂಬರ್ 7, ಇಬ್ಬರು ಮಹಿಳೆಯರು ಸೇರಿ ಏಳು ಮಂದಿ ವಿರುದ್ಧ ಎಫ್ಐಆರ್

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | NR PURA | 08 ಡಿಸೆಂಬರ್ 2019 ಹೊಸನಗರ ತಾಲೂಕು ತಹಶೀಲ್ದಾರ್ ಸೇರಿ ಎಳು ಮಂದಿ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ನಿರೀಕ್ಷಕ ಆತ್ಮಹತ್ಯೆಗೆ ಇವರ ಕಿರುಕುಳವೆ ಕಾರಣ ಎಂದು ಕುಟುಂಬ ಆರೋಪಿಸಿದ್ದರಿಂದ ಪ್ರಕರಣ ದಾಖಲಾಗಿದೆ. ಹೊಸನಗರ ತಾಲೂಕು ಕಚೇರಿ ಆಹಾರ ನಿರೀಕ್ಷಕ ಐ.ಡಿ.ದತ್ತಾತ್ರೇಯ (60) ಅವರು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬ ಸೇತುವೆ ಸಮೀಪ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದತ್ತಾತ್ರೇಯ … Read more

50 ಲಾರಿಗಳನ್ನು ತಡೆದ ಗ್ರಾಮಸ್ಥರು, ಗುಂಡಿ ಮುಚ್ಚುವಂತೆ ಪಟ್ಟು, ಹೊಸನಗರದ ಗ್ರಾಮದಲ್ಲಿ ಮತ್ತೆ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | SHIMOGA | 14 ನವೆಂಬರ್ 2019 ಹೊಸನಗರ ಕುಂಬತ್ತಿ ಗ್ರಾಮದಲ್ಲಿ ಸುಮಾರು 50 ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಬೆಳಗ್ಗೆಯಿಂದಲೆ ರಸ್ತೆಗಿಳಿದ ಗ್ರಾಮಸ್ಥರು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾರಿಗಳ ಓಡಾಟದಿಂದಾಗಿ ಕುಂಬತ್ತಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಹಾಗಾಗಿ ಈ ರಸ್ತೆಯಲ್ಲಿ ಓಡಾಡುವುದೆ ಕಷ್ಟವಾಗಿದೆ. ಇತ್ತೀಚೆಗಷ್ಟೆ ಗುಂಡಿಯಿಂದಾಗಿ ರಸ್ತೆಯಲ್ಲಿ ಬಿದ್ದು ಗ್ರಾಮಸ್ಥರೊಬ್ಬರ ಕಾಲಿಗೆ ಗಂಭೀರ ಗಾಯವಾಗಿದೆ. ಅಲ್ಲದೆ ಈ ಭಾಗದ ಮಕ್ಕಳು ಶಾಲೆಗೆ ತೆರಳುವುದೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆ … Read more

ಇದು ಶಿವಮೊಗ್ಗದ ಅತ್ಯಂತ ಕೋಲ್ಡ್ ಜಾಗ, ಜಿಲ್ಲೆಯ ರೈತರಿಗೆ ತರಲಿದೆ ಲಾಭ, ರಿಪ್ಪನ್’ಪೇಟೆಯಲ್ಲಿ ಹೈಟೆಕ್ ಕೋಲ್ಡ್ ಸ್ಟೋರೇಜ್

ಶಿವಮೊಗ್ಗ ಲೈವ್.ಕಾಂ | SHIMOGA | 8 ನವೆಂಬರ್ 2019 ರೈತರ ಬೆಳೆಗೆ ಸರಿಯಾದ ಬೆಲೆ ಸಿಕ್ಕಾಗ ಮಾತ್ರ ಆತ ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ. ಆದರೆ, ಬಹಳಷ್ಟು ಸಮಯದಲ್ಲಿ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ರೈತರ ಇನ್ನೂ ಆರ್ಥಿಕವಾಗಿ ದುರ್ಬಲನಾಗಿದ್ದಾನೆ. ಫಸಲು ಕೈಗೆ ಬಂದು ಇನನ್ನೇನು ಮಾರಾಟ ಮಾಡಬೇಕು ಎನ್ನುವ ಸಂದರ್ಭದಲ್ಲಿ ಧಾರಣೆ ಕುಸಿದಿರುತ್ತದೆ. ಆಗ ಅನಿವಾರ್ಯವಾಗಿ ಆತ ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡಬೇಕಾದ ಪರಿಸ್ಥಿತಿ ರೈತರನ್ನು ಬಾಧಿಸತೊಡಗಿದೆ. ರೈತರ ಸಮಸ್ಯೆಗೆ ಪರಿಹರಿಸಿದ ಸಹಕಾರಿ … Read more

ಸಿನಿಮೀಯ ರೀತಿಯಲ್ಲಿ ಯುವತಿ ಕಿಡ್ನಾಪ್, ನಡುದಾರಿಯಲ್ಲೆ ಕಾರು, ಯುವತಿ ಬಿಟ್ಟು ಎಸ್ಕೇಪ್, ಅಪಹರಣಕಾರರು ಯಾರು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | HOSANAGARA | 4 ಅಕ್ಟೋಬರ್ 2019 ಸಿನಿಮೀಯ ರೀತಿಯಲ್ಲಿ ಯುವತಿಯೊಬ್ಬಳನ್ನು ಅಪಹರಿಸಿದ ಯುವಕ, ಆಕೆಯನ್ನು ನಡುದಾರಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಲಾಂಗ್ ತೋರಿಸಿ, ಯುವತಿಯನ್ನು ಬೆದರಿಸಿ ಅಪಹರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ತೀರ್ಥಹಳ್ಳಿಯ ಕುರುವಳ್ಳಿ ನಾಗರಾಜ್ ಮತ್ತು ಆತನ ಮೂವರು ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಹೊಸನಗರ ಯಡೂರಿನಲ್ಲಿ ಯುವತಿ ಮನೆ ಬಳಿ ದೇವಸ್ಥಾನಕ್ಕೆ ತೆರಳಿದ್ದಾಗ ಅಪಹರಣ ಮಾಡಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಯುವತಿಯ ಮನೆಯವರು ಅಪಹರಣಕಾರರ ಕಾರನ್ನು ಹಿಂಬಾಲಿಸಿದ್ದಾರೆ. ಭಯಗೊಂಡ ಅಪಹೃತರು … Read more

ನಕಲಿ ಹಕ್ಕುಪತ್ರ ನೀಡಿದ ಆರೋಪ, ನಗರ ಆರ್.ಐ ವಿರುದ್ಧ ಎರಡನೇ ಕಂಪ್ಲೇಂಟ್

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಹೊಸನನಗರ | 26 ಸೆಪ್ಟೆಂಬರ್ 2019 ನಕಲಿ ಹಕ್ಕುಪತ್ರ ನೀಡಿದ ಆರೋಪದ ಮೇಲೆ ಹೊಸನಗರ ತಾಲೂಕು ನಗರ ಹೋಬಳಿ ಕಂದಾಯ ನಿರೀಕ್ಷಕ (ಆರ್.ಐ) ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಆರ್.ಐ ದತ್ತಾತ್ರೇಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಹಕ್ಕುಪತ್ರ ನೀಡಿದ್ದಲ್ಲದೆ, ಅದನ್ನು ಅವರು ಹಿಂತಿರಿಗಿ ಕೇಳಿದಾಗ ವಾಪಸ್ ನೀಡಿದಿದ್ದ ಹಿನ್ನೆಲೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನೂಲಿಗ್ಗೇರಿ ಶಶಿಕಲಾ ಎಂಬುವವರು ಜಾತಿ ನಿಂದನೆ, ವಂಚನೆ ಮತ್ತು … Read more