ಮುಚ್ಚಿದಂತೆ ಇದ್ದ ಬಾಗಿಲ ಬೀಗ ತೆಗೆಯಲು ಹೋದಾಗ ಇಂಟರ್ ಲಾಕ್ ಕಟ್, ಒಳ ನೋಡಿದಾಗ ಕಾದಿತ್ತು ಶಾಕ್

theft case general image

SHIMOGA | ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಬೀಗ (DOOR LOCK BREAK) ಮುರಿದು ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಲಾಗಿದೆ. ಸಯ್ಯದ್ ರಿಯಾಜ್ ಅಹಮದ್ ಎಂಬುವವರಿಗೆ ಸೇರಿದ ಇಲಿಯಾಸ್ ನಗರದ ಮನೆ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಸಯ್ಯದ್ ರಿಯಾಜ್ ಅಹಮದ್ ಅವರ ಮನೆಯವರು ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಯಚೂರು ಜಿಲ್ಲೆಯ ಸಿಂಧನೂರಿಗೆ ತೆರಳಿದ್ದರು. ಸೆ.4ರಂದು ಮನೆಗೆ ಮರಳಿದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಗಿಲು ಹಾಕಿದಂತೆಯೇ ಇತ್ತು ರಾಯಚೂರಿನಿಂದ ಬಂದ ಕುಟುಂಬದವರಿಗೆ ಮನೆ ಬಾಗಿಲು … Read more

34 ವರ್ಷದಿಂದ ತಲೆಮರೆಸಿಕೊಂಡಿದ್ದವನು ಹೊಳೆಹೊನ್ನೂರು ಪೊಲೀಸರಿಗೆ ಸಿಕ್ಕಿಬಿದ್ದ, ಯಾವ ಕೇಸ್? ಸಿಕ್ಕವನಾರು?

prison hand cuff image

ಶಿವಮೊಗ್ಗ ಲೈವ್.ಕಾಂ | HOLEHONNURU NEWS | 25  MARCH 2021 34 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ರಾಮಿನಕೊಪ್ಪದ ರೂಪ್ಲಾನಾಯ್ಕ (68) ಬಂಧಿತ. 1987ರಲ್ಲಿ ದಾಖಲಾಗಿದ್ದ ಮನೆ ಕಳ್ಳತನ ಪ್ರಕರಣವೊಂದರ ಆರೋಪಿಯಾಗಿದ್ದ ರೂಪ್ಲಾನಾಯ್ಕ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ರೂಪ್ಲಾನಾಯ್ಕನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಹೊಳೆಹೊನ್ನೂರು ಠಾಣೆ ಪಿಎಸ್ಐ ಸುರೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಲಿಂಗೇಗೌಡ, ಮಲ್ಲಿಕಾರ್ಜುನ, ಪ್ರಕಾಶ್, ದೇವೇಂದ್ರನಾಯ್ಕ ಅವರು ಕಾರ್ಯಾಚರಣೆ ನಡೆಸಿ, ರೂಪ್ಲಾನಾಯ್ಕನನ್ನು ಪತ್ತೆ ಹಚ್ಚಿದ್ದಾರೆ. … Read more