ಕಾಡಿಗೆ ಹೋಗಿದ್ದ ವ್ಯಕ್ತಿ ಹಿಂತಿರುಗಲಿಲ್ಲ, ಹುಡುಕಾಡಿದ ಕುಟುಂಬದವರಿಗೆ ಕಾದಿತ್ತು ಆಘಾತ

Crime-News-General-Image

ರಿಪ್ಪನ್‌ಪೇಟೆ: ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆ ಕೆರೆಯಲ್ಲಿ (Lake) ಕಾಲು ಜಾರಿ ಬಿದ್ದು 45 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕರಡಿಗ ಗ್ರಾಮದ ಬೆಳಕೋಡು ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದೆ. ಲೋಕೇಶ್ ಅವರು ತಮ್ಮ ಪತ್ನಿಯ ತವರುಮನೆಯಾದ ಹುಂಚದಕಟ್ಟೆಗೆ ತೆರಳಿದ್ದರು. ಭಾನುವಾರ ಬೆಳಗ್ಗೆ ಸೊಪ್ಪು ತರಲು ಕಾಡಿಗೆ ಹೋಗಿದ್ದ ಅವರು, ಬಹಳ ಹೊತ್ತಾದರೂ ವಾಪಸ್ ಬರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ, ಹೊಸಕೆರೆ ಕೆರೆಯಲ್ಲಿ ಕಾಲುಜಾರಿ ಬಿದ್ದು ದುರ್ಘಟನೆ ಸಂಭವಿಸಿರುವುದು ಬೆಳಕಿಗೆ ಬಂದಿದೆ. … Read more

ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾಗಿ ಶಿವಮೊಗ್ಗದ ಆದರ್ಶ

SHIVAMOGGA-CITY-TALUK-NEWS-

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021 ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗದ ಆದರ್ಶ ಹುಂಚದಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ವಕ್ತಾರರ ಪಟ್ಟಿ ಬಿಡುಗಡೆ ಮಾಡಿದ್ದಾರೆ. 27 ಮಂದಿ ರಾಷ್ಟ್ರೀಯ ವಕ್ತಾರರ ಪೈಕಿ ಕರ್ನಾಟಕದ ಇಬ್ಬರು ಇದ್ದಾರೆ. ಶಿವಮೊಗ್ಗ ಆದರ್ಶ ಹುಂಚದಕಟ್ಟೆ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ಆಯ್ಕೆ ಮಾಡಲಾಗಿದೆ. ಇತ್ತೀಚೆಗಷ್ಟೆ ಆದರ್ಶ ಹುಂಚದಕಟ್ಟೆ ಅವರನ್ನು ರಾಜ್ಯ ವಕ್ತಾರರಾಗಿ ಆಯ್ಕೆಯಾಗಿದ್ದರು.