ಬೆಂಗಳೂರು – ಶಿವಮೊಗ್ಗ – ಗೋಕರ್ಣ ಬಸ್ ಅಪಘಾತ, ಹಲವು ಪ್ರಯಾಣಿಕರು ಸಜೀವ ದಹನ
ಚಿತ್ರದುರ್ಗ: ಕಂಟೇನರ್ ಲಾರಿ ಡಿಕ್ಕಿ ಹೊಡೆದು ಸೀಬರ್ಡ್ ಕಂಪನಿಯ ಬಸ್ (bus accident) ಹೊತ್ತಿ ಉರಿದಿದೆ. ಬಸ್ಸು ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ತೆರಳುತ್ತಿತ್ತು. ಘಟನೆಯಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗೊರ್ಲತ್ತು ಗ್ರಾಮದ ಬಳಿ ಘಟನೆ ಸಂಭವಿಸಿದೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಂಟೇನರ್ ಲಾರಿ ಡಿವೈಡರ್ ಹಾರಿ ಬಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಇಬ್ಬರು ಶಿವಮೊಗ್ಗದ ಪ್ರಯಾಣಿಕರು ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಬಸ್ ಹೊರಟಿತ್ತು. ರಾತ್ರಿ 2 ಗಂಟೆ … Read more