ಜನ್ನಾಪುರ ಸಮೀಪ ಕೆರೆಯಲ್ಲಿ ವೃದ್ಧನ ಮೃತದೇಹ ಪತ್ತೆ
ಭದ್ರಾವತಿ: ನಗರದ ಜನ್ನಾಪುರ-ಹೊಸಸಿದ್ದಾಪುರ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೆರೆಯಲ್ಲಿ ಶುಕ್ರವಾರ ವೃದ್ಧನ ಶವ (Body) ಪತ್ತೆಯಾಗಿದೆ. ಅಪ್ಪರ್ ಹುತ್ತಾ ನಿವಾಸಿ ಮರಿಗೌಡ(81) ಮೃತರು. ಮರೀಗೌಡ ಮೂರು ದಿನಗಳ ಹಿಂದೆ ವಾಕಿಂಗ್ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದರು ಎಂದು ಹೇಳಲಾಗಿದೆ. ಹುಡುಕಾಟ ನಡೆಸಿದ್ದ ಕುಟುಂಬಸ್ಥರು ಗುರುವಾರ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಅವರು ಹೊಸಸಿದ್ದಾಪುರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ, ಚಿಕ್ಕಮಗಳೂರು ರಾಹುಲ್ ಹುಂಡೈ ಕಾರು ಶೋ ರೂಂಗಳಲ್ಲಿ ಉಚಿತ ಕಣ್ಣಿನ … Read more