ಬಿಳಿ ಕಾಮಾಲೆಗೆ ತೀರ್ಥಹಳ್ಳಿಯ ವಿದ್ಯಾರ್ಥಿನಿ ಸಾವು

Thirthahalli-News-Update

ತೀರ್ಥಹಳ್ಳಿ : ಬಿಳಿ ಕಾಮಾಲೆ ಕಾಯಿಲೆಯಿಂದ (Jaundice) ಬಳಲುತ್ತಿದ್ದ ವಿದ್ಯಾರ್ಥಿನಿ ಐಸಿರಿ ಹೆಚ್.ಯು. (14) ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ. ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್‌ಇ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಕೆಲವು ದಿನಗಳ ಹಿಂದೆ ಶಾಲೆಯಲ್ಲಿ ತಲೆಸುತ್ತು ಬಂದು ಬಿದ್ದಿದ್ದಳು. ಪೋಷಕರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದರು. ಐಸಿರಿ, ಹೆಗ್ಗೋಡು ಗ್ರಾಮದ ಪ್ರತಿಮಾ ಮತ್ತು ಉಪೇಂದ್ರ ದಂಪತಿಯ ಪುತ್ರಿ. ಇದನ್ನೂ ಓದಿ » ಅಪಘಾತ ತಪ್ಪಿಸಲು ರಸ್ತೆ ಕ್ಲೀನ್‌ ಮಾಡಿದ ಶಿವಮೊಗ್ಗದ … Read more