ಜಿಲ್ಲಾ ಪಂಚಾಯಿತಿಯ ಮೂರು ಸ್ಥಾಯಿ ಸಮಿತಿಗೆ ಬಿಜೆಪಿ ಸದಸ್ಯರ ನೇಮಕ, ಕಾಂಗ್ರೆಸ್ ಆಕ್ರೋಶ, ಕಾರಣವೇನು?
ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಆಗಸ್ಟ್ 2020 ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಮೂರು ಸ್ಥಾಯಿ ಸಮಿತಿಗೆ ಬಿಜೆಪಿ ಸದಸ್ಯರನ್ನು ನೇಮಿಸಲಾಗಿದೆ. ಅಧ್ಯಕ್ಷರ ಈ ನಡೆ ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಯಾರನ್ನೆಲ್ಲ ನೇಮಿಸಲಾಗಿದೆ? ಸಾಮಾಜಿಕ ನ್ಯಾಯ ಸ್ಥಾಯಿ ಸಿಮಿತಿ ಅಧ್ಯಕ್ಷರಾಗಿ ಆನವೇರಿ ಕ್ಷೇತ್ರದ ವೀರಭದ್ರಪ್ಪ ಪೂಜಾರ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ನಗರ ಕ್ಷೇತ್ರದ ಸುರೇಶ್ ಸ್ವಾಮಿರಾವ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಸುಣ್ಣದಕೊಪ್ಪ ಕ್ಷೇತ್ರದ ರೇಣುಕಾ ಹನುಮಂತಪ್ಪ ಅವರನ್ನು ನೇಮಿಸಲಾಗಿದೆ. … Read more