ದ್ವಿಚಕ್ರ ವಾಹನಕ್ಕೆ KSRTC ಬಸ್‌ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

Mishap-at-Jambaraghatta-near-Holehonnuru.

ಹೊಳೆಹೊನ್ನೂರು: ರಾಷ್ಟ್ರೀಯ ಹೆದ್ದಾರಿಯ 13ರಲ್ಲಿ ಜಂಬರಘಟ್ಟೆ ಬಳಿ ಭಾನುವಾರ ಸಂಜೆ ಸರ್ಕಾರಿ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮೃತರನ್ನು ಜಂಬರಘಟ್ಟೆ ನಿವಾಸಿ ಸೈಯದ್ ಆಹಮದ್ (65) ಗುರುತಿಸಲಾಗಿದೆ. ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಮತ್ತು ಬೈಕ್‌ ಅಪಘಾತಕ್ಕೀಡಾಗಿವೆ. ಸೈಯದ್ ಆಹಮದ್ ಹಾಗೂ ಆಯಾನ್ ಜಮೀನಿನಿಂದ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದರು.   ಘಟನೆ ಸ್ಥಳದಲ್ಲೇ ಸೈಯದ್ ಆಹಮದ್ ಅಸುನೀಗಿದ್ದಾರೆ. ಹಿಂಬದಿ ಸವಾರ ಆಯಾನ್ ಗಾಯಗೊಂಡಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಳೆಹೊನ್ನೂರು … Read more

ಶಿವಮೊಗ್ಗದಲ್ಲಿ ಬಸ್‌ ಹತ್ತಿದ ಕೆಲವೇ ಕ್ಷಣದಲ್ಲಿ ಚನ್ನಗಿರಿಯ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

KSRTC-Bus-General-Image

ಶಿವಮೊಗ್ಗ: ನಗರದ KSRTC ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಬಸ್‌ ಹತ್ತುವಾಗ ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ ಹಣ ಲಪಟಾಯಿಸಿದ್ದಾರೆ. ಚನ್ನಗಿರಿಯ ನಾಗರಾಜ್‌ ಎಂಬುವವರು ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ತಮ್ಮ ತಾಯಿಯನ್ನು ಚಿಕಿತ್ಸೆಗೆ ಕರೆತಂದಿದ್ದರು. ಸಂಜೆ ಊರಿಗೆ ಮರಳಲು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್‌ ಹತ್ತುವಾಗ ರಶ್‌ ಇತ್ತು. ಬಸ್‌ ಹತ್ತಿದ ಮೇಲೆ ಜೇಬಿಗೆ ಕೈ ಹಾಕಿದಾಗ ಅದರಲ್ಲಿದ್ದ ₹34,000 ಹಣ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ಎಲ್ಲೆಡೆ ಹುಡುಕಿದ ನಾಗರಾಜ್‌ ಅವರು ಕೊನೆಗೆ ದೂರು … Read more

ಸಿರಿವಂತೆಯಲ್ಲಿ ಆಯಾತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದ 9ನೇ ತರಗತಿ ವಿದ್ಯಾರ್ಥಿನಿ

Sagara-Rural-Police-Station-General-Image

ಶಿವಮೊಗ್ಗ: ಚಲಿಸುತ್ತಿದ್ದ ಬಸ್ಸಿನಿಂದ (Bus) ಆಯಾತಪ್ಪಿ ಕೆಳೆಗೆ ಬಿದ್ದು 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗಾಯಗೊಂಡಿದ್ದಾಳೆ. ಸಾಗರದ ಸಿರಿವಂತೆಯಲ್ಲಿ ಘಟನೆ ಸಂಭವಿಸಿದೆ. ಸಾಗರದ ವರದಹಳ್ಳಿ ಕ್ರಾಸ್‌ನಲ್ಲಿರುವ ಶಾಲೆಯಲ್ಲಿ ಓದುತ್ತಿದ್ದ ಪ್ರಿಯಾಂಕಾ ಎಂಬ ವಿದ್ಯಾರ್ಥಿನಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮನೆಗೆ ತೆರಳುತ್ತಿದ್ದರು. ಸಿರಿವಂತೆ ಬಳಿ ಪ್ರಿಯಾಂಕ ಬಸ್ಸಿನಿಂದ ಆಯಾತಪ್ಪಿ ಕೆಳೆಗೆ ಬಿದ್ದಿದ್ದಾಳೆ. ಆಕೆಯ ತಲೆ, ಮೈಕೈಗೆ ಪೆಟ್ಟಾಗಿದೆ. ಇದನ್ನೂ ಓದಿ » ಸಿಗಂದೂರು ಲಾಂಚ್‌ನತ್ತ ಜನರೆ ಬರುತ್ತಿಲ್ಲ, 56 ವರ್ಷದ ಸೇವೆ ನಿಂತೇ ಹೋಗುತ್ತಾ? ಇಲ್ಲಿದೆ ಲಾಂಚ್‌ ಇತಿಹಾಸ ವಿದ್ಯಾರ್ಥಿನಿ ಆಯಾತಪ್ಪಿ ಕೆಳಗೆ … Read more

ಶಿವಮೊಗ್ಗದಲ್ಲಿ ನೂತನ KSRTC ನಗರ ಸಾರಿಗೆ ಬಸ್‌ಗೆ ಚಾಲನೆ

KSRTC-Bus-green-flag-by-Minister-Madhu-Bangarappa.

ಶಿವಮೊಗ್ಗ: ಬೊಮ್ಮನಕಟ್ಟೆ ಮಾರ್ಗವಾಗಿ ಶಿವಮೊಗ್ಗ, ಭದ್ರಾವತಿಗೆ ಸಂಪರ್ಕ ಕಲ್ಪಿಸುವ KSRTC ನಗರ ಸಾರಿಗೆ ಬಸ್‌ಗೆ ಸಚಿವ ಮಧು ಬಂಗಾರಪ್ಪ ಹಸಿರು ನಿಶಾನೆ ತೋರಿಸಿದರು. ಬೊಮ್ಮನಕಟ್ಟೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ನಗರ ಸಾರಿಗೆ ಬಸ್‌ ಇಂದಿನಿಂದ ಸಂಚಾರ ಆರಂಭಿಸಿದೆ. ಈ ಭಾಗದಲ್ಲಿ ಬಹು ದಿನದಿಂದ ಸರ್ಕಾರಿ ಬಸ್‌ ಸಂಪರ್ಕಕ್ಕೆ ಬೇಡಿಕೆ ಇತ್ತು. ಯುವ ಕಾಂಗ್ರೆಸ್‌ ಮುಖಂಡ ಕೆ.ಚೇತನ್ ಅವರು ಸಾರಿಗೆ ಬಸ್‌ ಸಂಪರ್ಕಕ್ಕೆ ಮನವಿ ಸಲ್ಲಿಸಿ, ಬಸ್‌ ಸಂಚಾರಕ್ಕೆ ಶ್ರಮಿಸಿದ್ದರು. ಬಸ್‌ಗೆ ಚಾಲನೆ ನೀಡುವ ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ … Read more

ಸಾಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಜಫ್ತಿ, ನ್ಯಾಯಾಲಯದ ಆವರಣಕ್ಕೆ ರವಾನೆ, ಕಾರಣವೇನು?

KSRTC-Bus-seized-at-sagara-court.

ಸಾಗರ : ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆ ಸಾಗರ ನ್ಯಾಯಾಲಯದ ಆದೇಶದ ಮೇರೆಗೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಜಫ್ತಿ ಮಾಡಲಾಗಿದೆ. ಶಿರಸಿ ಡಿಪೋಗೆ ಸೇರಿದ ಬಸ್‌ ಒಂದನ್ನು ಜಫ್ತಿ (Seized) ಮಾಡಿ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದೆ. ಏನಿದು ಪ್ರಕರಣ? 2022ರ ಜುಲೈ 7ರಂದು ಬೆಳಗ್ಗೆ 5.30ಕ್ಕೆ ಗಣೇಶ್‌ ಎಂಬ ಯುವಕ ಪತ್ರಿಕೆ ಹಂಚಲು ಸೈಕಲ್‌ನಲ್ಲಿ ತೆರಳುವಾಗ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಸಾವನ್ನಪ್ಪಿದ್ದ. ಪರಿಹಾರ ಕೋರಿ ಗಣೇಶನ ಪೋಷಕರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ … Read more

ಸಾಗರದಲ್ಲಿ ಹೆದ್ದಾರಿಗೆ ಅಡ್ಡಲಾಗಿ ಕುಳಿತು ವಿದ್ಯಾರ್ಥಿಗಳು, ಗ್ರಾಮಸ್ಥರ ಆಕ್ರೋಶ, ಕಾರಣವೇನು?

protest-for-ksrtc-bus-at-kanle-in-sagara.

SHIVAMOGGA LIVE NEWS, 19 DECEMBER 2024 ಸಾಗರ : ಕೆಎಸ್ಆರ್‌ಟಿಸಿ ಬಸ್ (Bus) ನಿಲುಗಡೆ ಮಾಡದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಸಾಗರ ತಾಲೂಕು ತಾಲ್ಲೂಕಿನ ಕಾನ್ಲೆ ಮಾರ್ಗದಲ್ಲಿ ಸಾಗರಕ್ಕೆ ಸಂಚರಿಸುವ ಬಸ್‌ಗಳು ನಿಲುಗಡೆ ನೀಡದಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಕಾನ್ಲೆ ಮಾರ್ಗವಾಗಿ ಸಾಗರಕ್ಕೆ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್‌ಗಳನ್ನು ಎಲ್ಲಾ ಕಡೆ ನಿಲುಗಡೆ ಮಾಡಬೇಕು. ಈ ಬಸ್‌ನಲ್ಲಿ ವಿದ್ಯಾರ್ಥಿಗಳು ಸಿರಿವಂತೆ, ಸಾಗರದ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. … Read more

ಬಸ್‌ ಹತ್ತುವಾಗ ಕೊರಳಲ್ಲಿದ್ದ ಚಿನ್ನದ ಸರ ನಾಪತ್ತೆ

KSRTC-Bus-General-Image-Shimoga-Bangalore

SHIKARIPURA NEWS, 23 OCTOBER 2024 : ಬಸ್‌ ಹತ್ತುವಾಗ ಮಹಿಳೆಯೊಬ್ಬರ (woman) ಕೊರಳಲ್ಲಿದ್ದ ಚಿನ್ನ ಸರವನ್ನು ಆಕೆಗೆ ಗೊತ್ತಾಗದ ಹಾಗೆ ಕಳ್ಳತನ ಮಾಡಲಾಗಿದೆ. ಶಿಕಾರಿಪುರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಸತ್ಯಮ್ಮ ಎಂಬುವವರು ಶಿಕಾರಿಪುರದಿಂದ ಹೊನ್ನಾಳಿಗೆ ಹೊರಟಿದ್ದರು. ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬಸ್‌ ಹತ್ತುವಾಗ ಸರ ಕಳ್ಳತನವಾಗಿದೆ. 2 ಲಕ್ಷ ರೂ. ಮೌಲ್ಯದ ಸುಮಾರು 30 ಗ್ರಾಂ ತೂಕದ ಚಿನ್ನದ ಸರ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗ … Read more

ಮಂಗಳೂರಿನಿಂದ ಶಿವಮೊಗ್ಗಕ್ಕೆ ಬಸ್ಸಲ್ಲಿ ಬಂದಿಳಿದ ವ್ಯಕ್ತಿಗೆ ಕಾದಿತ್ತು ಶಾಕ್

KSRTC-Bus-Stand-in-Shimoga

SHIMOGA NEWS, 26 SEPTEMBER 2024 : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ (Bike) ಕಳ್ಳತನವಾಗಿದೆ. ಇನ್ನೊಂದೆಡೆ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ. ಇದನ್ನೂ ಓದಿ » ರಾತ್ರೋರಾತ್ರಿ ನೂರಾರು ಅಡಿಕೆ ಮರಗಳಿಗೆ ಗರಗಸ ಹಾಕಿದ ದುಷ್ಕರ್ಮಿಗಳು