ಗುಡ್ಡದಿಂದ ಇಳಿದು ಬಂದ ಹುಲಿ, ಹಸುವಿನ ಮೇಲೆ ದಾಳಿ
ಸಾಗರ : ತಾಲೂಕಿನ ಕರೂರು ಹೋಬಳಿಯ ಕುದರೂರು ಗ್ರಾಮದಲ್ಲಿ ಹಸುವೊಂದರ ಮೇಲೆ ಹುಲಿ (Tiger) ದಾಳಿ ನಡೆಸಿ ಕೊಂದಿದೆ. ಹಸು ಕುದರೂರು ಗ್ರಾಮದ ಗಣಪತಿ ತೇಕಲೆ ಅವರಿಗೆ ಸೇರಿದ್ದಾಗಿದೆ. ಗೋಮಾಳದಲ್ಲಿ ಹಸುವನ್ನು ಮೇಯಲು ಬಿಡಲಾಗಿತ್ತು. ಈ ಸಂದರ್ಭ ತೇಕಲೆ ಗುಡ್ಡದಿಂದ ಬಂದ ಹುಲಿಯು ದಾಳಿ ನಡೆಸಿದೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಅತಿ ಹೆಚ್ಚು ಬಿಸಿಲು, ಉಳಿದ ತಾಲೂಕುಗಳಲ್ಲಿ ಹೇಗಿದೆ ಸೂರ್ಯನ ಅಬ್ಬರ?