ತಡರಾತ್ರಿ ಮನೆ ಮುಂದೆ ಕಟ್ಟಿದ್ದ ನಾಯಿ ಕೂಗಾಟ, ಹೊರ ಬಂದ ಮನೆಯವರಿಗೆ ಆಘಾತ, ಗ್ರಾಮದಲ್ಲಿ ಆತಂಕ
ಶಿಕಾರಿಪುರ: ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ (Leopard) ದಾಳಿ ನಡೆಸಿದೆ. ಮನೆಯವರು ಹೊರ ಬರುತ್ತಿದ್ದಂತೆ ಚಿರತೆ ಓಡಿ ಹೋಗಿದೆ. ಶಿಕಾರಿಪುರ ತಾಲೂಕು ಮುಳುಕೊಪ್ಪ ತಾಂಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇಲ್ಲಿನ ಮನೆಯೊಂದರ ಮುಂದೆ ಕಟ್ಟಿ ಹಾಕಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ನಾಯಿ ಕೂಗಾಟ ಕೇಳಿ ಅಕ್ಕಪಕ್ಕದವರೆಲ್ಲ ಮನೆಯಿಂದ ಹೊರ ಬಂದಾಗ ಚಿರತೆ ಓಡಿ ಹೋಗಿದೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಮುಳುಕೊಪ್ಪ ತಾಂಡ ವಾಸಿಗಳಲ್ಲಿ ಆತಂಕ ಮೂಡಿಸಿದೆ. ಕೂಡಲೆ … Read more