ಲಿಂಗನಮಕ್ಕಿ ಡ್ಯಾಂಗೆ ಒಂದೇ ದಿನ ಎರಡೂವರೆ ಅಡಿಯಷ್ಟು ನೀರು

-Linganamakki-Dam-General-Image

ಸಾಗರ | ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯದ (LINGANAMAKKI DAM) ಒಳ ಹರಿವು ಹೆಚ್ಚಳವಾಗಿದೆ. ಹಾಗಾಗಿ ಒಂದೇ ದಿನದಲ್ಲಿ ನೀರಿನ ಸಂಗ್ರಹ ಮಟ್ಟ ಎರಡೂವರೆ ಅಡಿಯಷ್ಟು ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 77,911 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಳೆ ಪ್ರಮಾಣ ಹೆಚ್ಚಳವಾದರೆ ಒಳ ಹರಿವು ಮತ್ತಷ್ಟು ಏರಿಕೆಯಾಗಲಿದೆ. ಒಳ ಹರಿವು ಹೆಚ್ಚಳ ಆಗಿರುವುದರಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಒಂದೇ ದಿನ 2.4 ಅಡಿಯಷ್ಟು ಹೆಚ್ಚಳವಾಗಿದೆ. ಆ.8ರಂದು 1803.8 ಅಡಿಯಷ್ಟು ನೀರಿತ್ತು. ಇವತ್ತು … Read more

ಹುಲಿಕಲ್, ಮಾಸ್ತಿಕಟ್ಟೆ, ಚಕ್ರಾದಲ್ಲಿ ಮಳೆ ಅಬ್ಬರ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

rain in shimoga

ಹೊಸನಗರ | ಭಾರಿ ಮಳೆ ತಾಲೂಕಿನಾದ್ಯಂತ ಜಲಾಶಯಗಳಿಗೆ ಒಳ ಹರಿವು (DAM WATER) ಏರಿಕೆಯಾಗಿದೆ. ಹುಲಿಕಲ್, ಮಾಸ್ತಿಕಟ್ಟೆ, ಚಕ್ರಾ ಮತ್ತು ಸಾವೇಹಕ್ಲು ಜಲಾಶಯ ವ್ಯಾಪ್ತಿಗಳಲ್ಲಿ ಭಾರಿ ಮಳೆಯಾಗಿದೆ. ಹೊಸನಗರ ತಾಲೂಕಿನ ಹುಲಿಕಲ್ ಮತ್ತು ಮಾಸ್ತಿಕಟ್ಟೆ ಭಾಗದಲ್ಲಿ ವರುಣ ಅಬ್ಬರಿಸಿದ್ದಾನೆ. ಬಿಡುವು ನೀಡದೆ ಮಳೆ ಅಬ್ಬರಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹುಲಿಕಲ್ ಭಾಗದಲ್ಲಿ 231 ಮಿ.ಮೀ ಮಳೆಯಾಗಿದೆ. ಮಾಸ್ತಿಕಟ್ಟೆಯಲ್ಲಿ 230 ಮಿ.ಮೀ ಮಳೆ ಸುರಿದಿದೆ. ಯಡೂರಿನಲ್ಲಿ 165 ಮಿ.ಮೀ ಮಳೆ ಸುರಿದಿದೆ. ಜಲಾಶಯಗಳಿಗು ಹೆಚ್ಚಿನ ನೀರು ನಿರಂತರ … Read more

ಲಿಂಗನಮಕ್ಕಿ ಜಲಾಶಯದಿಂದ ಹೊರಬಿತ್ತು ಮೊದಲ ಅಲರ್ಟ್

-Linganamakki-Dam-General-Image

ಸಾಗರ | ಭಾರಿ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಡ್ಯಾಂನಲ್ಲಿ ನೀರಿನ ಮಟ್ಟವು ಏರಿಕೆಯಾಗಿದೆ. ಈ ನಡುವೆ ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಲಿಂಗನಮಕ್ಕಿ ಜಲಾಶಯದ ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಜಲಾಶಯಕ್ಕೆ ಇವತ್ತು 30,397 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ತಿಂಗಳು ಭಾರಿ ಮಳೆಯಾದ ಹಿನ್ನೆಲೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ಒಳ ಹರಿವು ದಾಖಲಾಗಿತ್ತು. ಈಗ ಜಲಾನಯನ ಪ್ರದೇಶದಲ್ಲಿ ಪುನಃ ಮಳೆ ಜೋರಾಗಿದ್ದು, ಒಳ ಹರಿವು … Read more

ಭದ್ರಾ ಜಲಾಶಯದ ಒಳ ಹರಿವು ಇಳಿಕೆ, ಇವತ್ತೆಷ್ಟು ನೀರನ್ನು ಹೊಳೆಗೆ ಹರಿಸಲಾಗುತ್ತಿದೆ?

Bhadra-Dam-Water-Out-Flow

SHIVAMOGGA LIVE NEWS | BHADRAVATHI | 22 ಜುಲೈ 2022 ಹಿನ್ನೀರು ಭಾಗದಲ್ಲಿ ಮಳೆ ತಗ್ಗಿದ ಹಿನ್ನೆಲೆ ಭದ್ರಾ ಜಲಾಶಯದ (BHADRA DAM) ಒಳ ಹರಿವು ಕಡಿಮೆಯಾಗಿದೆ. ಇದೆ ಕಾರಣಕ್ಕೆ ಹೊಳೆಗೆ ಹರಿಸುತ್ತಿರುವ ನೀರಿನ ಪ್ರಮಾಣವು ಇಳಿಕೆಯಾಗಿದೆ. ಭದ್ರಾ ಜಲಾಶಯಕ್ಕೆ ಪ್ರಸ್ತುತ 10,523 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. 2,561 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. 186 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಇವತ್ತು ನೀರಿನ ಮಟ್ಟ 183.9 ಅಡಿಯಷ್ಟು ಇದೆ. ಕಳೆದ ವರ್ಷ ಭದ್ರಾ … Read more

BREAKING NEWS | ಭದ್ರಾ ಜಲಾಶಯದ ನಾಲ್ಕು ಗೇಟ್ ಓಪನ್, ಎಷ್ಟು ನೀರು ಹೊರ ಬಿಡಲಾಗುತ್ತಿದೆ?

Bhadra-Dam-gate-opened-2022

SHIVAMOGGA LIVE NEWS | BHADRAVATHI | 14 ಜುಲೈ 2022 ಭದ್ರಾ ಜಲಾಶಯ (BHADRA DAM) ಭರ್ತಿಯಾಗಿದ್ದು ನಾಲ್ಕು ಕ್ರಸ್ಟ್ ಗೇಟ್ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. 12 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಭದ್ರಾ ಜಲಾಶಯಕ್ಕೆ 43,051 ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದೆ. ಇವತ್ತು 183.2 ಅಡಿಯಷ್ಟು ನೀರಿನ ಸಂಗ್ರಹವಿದೆ. ಹಾಗಾಗಿ 12 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ನೀರಿನ ಹೊರ … Read more

ಶಿವಮೊಗ್ಗ ಜಲಾಶಯಗಳ ನೀರಿನ ಮಟ್ಟ ಹೆಚ್ಚಳ, ಯಾವ್ಯಾವ ಡ್ಯಾಂಗೆ ಎಷ್ಟು ಒಳ ಹರಿವಿದೆ?

Gajanur-Dam-Shimoga-Tunga-Dam

SHIVAMOGGA LIVE NEWS | SHIMOGA | 6 ಜುಲೈ 2022 ಜಿಲ್ಲೆಯ ವಿವಿಧೆಡೆ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳ (DAM LEVEL) ಒಳ ಹರಿವು ಹೆಚ್ಚಳವಾಗಿದೆ. ತುಂಗಾ ಜಲಾಶಯದ ಕ್ರಸ್ಟ್ ಗೇಟುಗಳನ್ನು ಮೇಲೆತ್ತಿ ನೀರನ್ನು ಹೊರ ಬಿಡಲಾಗುತ್ತಿದೆ. ಯಾವ್ಯಾವ ಡ್ಯಾಂಗೆ ಎಷ್ಟು ಒಳ ಹರಿವಿದೆ? ಲಿಂಗನಮಕ್ಕಿ ಜಲಾಶಯ : 1819 (ಗರಿಷ್ಠ ಅಡಿ), 1762.10 (ಇಂದಿನ ಮಟ್ಟ), 39262.10 ಕ್ಯೂಸೆಕ್ ಒಳಹರಿವು ಭದ್ರಾ ಜಲಾಶಯ : 186 (ಗರಿಷ್ಠ ಅಡಿ), 160.11 (ಇಂದಿನ … Read more

ಶಿವಮೊಗ್ಗದ ಜಲಾಶಯಗಳಿಗೆ ಒಳ ಹರಿವು ಹೆಚ್ಚಳ, ಯಾವ್ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು?

Bhadra-Dam-General-Images

SHIVAMOGGA LIVE NEWS | DAM LEVEL | 20 ಮೇ 2022 ಭಾರಿ ಮಳೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ಹೆಚ್ಚಳವಾಗಿದೆ. ತುಂಗಾ ಜಲಾಶಯ ಭರ್ತಿ ಆಗಿರುವುದರಿಂದ ಇಲ್ಲಿ ಹೊರ ಹರಿವು ಕೂಡ ದಾಖಲಾಗಿದೆ. ಯಾವ್ಯಾವ ಜಲಾಶಯದಲ್ಲಿ ಎಷ್ಟಿದೆ ನೀರು? ಲಿಂಗನಮಕ್ಕಿ ಜಲಾಶಯಕ್ಕೆ 11,125 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಪ್ರಸ್ತುತ 1763.65 ಅಡಿಯಷ್ಟು ನೀರಿದೆ. ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯ … Read more

ಭದ್ರಾ ನಾಲೆಯಲ್ಲಿ ನೀರು ನಿಲ್ಲಿಸುವ ಕುರಿತು ಕಾಡಾ ಸಭೆಯಲ್ಲಿ ಮಹತ್ವದ ನಿರ್ಧಾರ

Bhadra-Kada-Meeting-in-Shimoga-Machenahalli.

SHIVAMOGGA LIVE NEWS | WATER | 28 ಏಪ್ರಿಲ್ 2022 ಬೇಸಿಗೆ ಬೆಳೆಗಳಿಗಾಗಿ ಭದ್ರಾ ಅಚ್ಚುಕಟ್ಟು ನಾಲೆಗಳಲ್ಲಿ ಹರಿಸಲಾಗುತ್ತಿರುವ ನೀರನ್ನು ಮೇ 15 ಕ್ಕೆ ನಿಲ್ಲಿಸಲಾಗುವುದು. ನೀರಿನ ಅವಶ್ಯಕತೆ ಇದ್ದರೆ ಮೇ 20ರವರೆಗೆ ಹೆಚ್ಚುವರಿಯಾಗಿ ನೀರು ಹರಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿತು. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರಾ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇವತ್ತು ಮಲವಗೊಪ್ಪದ ಕಚೇರಿಯಲ್ಲಿ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ … Read more

BREAKING NEWS | ಗಾಜನೂರು ಡ್ಯಾಂ ಭರ್ತಿ, ಯಾವುದೆ ಕ್ಷಣದಲ್ಲಿ ನೀರು ಹೊರಬಿಡುವ ಎಚ್ಚರಿಕೆ

Tunga-River-Dam

SHIVAMOGGA LIVE NEWS | SHIMOGA JOBS | 26 ಏಪ್ರಿಲ್ 2022 ತುಂಗಾ ಮೇಲ್ದಂಡೆ ಯೋಜನೆ ಡ್ಯಾಂ ಪೂರ್ಣ ಮಟ್ಟಕ್ಕೆ ನೀರು ಸಂಗ್ರಹವಾಗಿದೆ. ಮುಂಗಾರು ಪ್ರಾರಂಭವಾಗಿ, ಜಲಾನಯನ ಪ್ರದೇಶದಲ್ಲಿ ಮಳೆಯಾಗಲಿದೆ. ಹಾಗಾಗಿ ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವುದೆ ಕ್ಷಣದಲ್ಲಾದರೂ ನದಿಗೆ ನೀರನ್ನು ಬಿಡುವ ಸಂಭವವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.   ತುಂಗಾ ನದಿ ಪಾತ್ರದಲ್ಲಿ ಬರುವ ಗ್ರಾಮಗಳ ಪ್ರದೇಶದ ಗ್ರಾಮಸ್ಥರು ನದಿಪಾತ್ರದಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು. ದನಕರುಗಳನ್ನು, ಪ್ರಾಣಿಗಳನ್ನು ಮೇಯಲು … Read more

ಕಾಶಿಪುರ ಲೆವೆಲ್ ಕ್ರಾಸಿಂಗ್’ನಲ್ಲಿ ತಾಂತ್ರಿಕ ನಿರ್ವಹಣೆ, ಸವಳಂಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್

071221 Savalaga Road Traffic Jam Railway Level Crossing

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಡಿಸೆಂಬರ್ 2021 ಕಾಶಿಪುರದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್’ನಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ ಸವಳಂಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಕಾಶಿಪುರದ ಎಲ್.ಸಿ. 50ರಲ್ಲಿ ತಾಂತ್ರಿಕ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಸವಳಂಗ ರಸ್ತೆಯನ್ನು ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಇದನ್ನೂ ಓದಿ | ಇವತ್ತು ಕಾಶಿಪುರ, ಡಿ.9ರಂದು ಕುಂಸಿ ರೈಲ್ವೆ ಕ್ರಾಸಿಂಗ್ ಬಂದ್, ವಾಹನಗಳಿಗೆ ಪರ್ಯಾಯ ಮಾರ್ಗ ಸವಳಂಗ ರಸ್ತೆಯಲ್ಲಿ ಇವತ್ತು ಬೆಳಗ್ಗೆಯಿಂದ ಟ್ರಾಫಿಕ್ … Read more