ಶಿವಮೊಗ್ಗದ ಹೊಸಮನೆ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆ ನಾಳೆ ಕರೆಂಟ್ ಇರಲ್ಲ

power cut graphics

ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.16ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕುವೆಂಪು ರಸ್ತೆ, ಶಾರದಮ್ಮ ಕಾಂಪೌಂಡ್‌, ಶಿವಶಂಕರ ಗ್ಯಾರೇಜ್, ಚರ್ಚ್ ರಸ್ತೆ, ಶರಾವತಿ ನಗರ, ಹೊಸಮನೆ ಮುಖ್ಯರಸ್ತೆ, ಹಂದಿಗೊಲ್ಲರ ಬೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪ ವಿಭಾಗ 3ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ. ಇದನ್ನೂ ಓದಿ | About Shivamogga Live

ಖಾಸಗಿ ಬಸ್ ಮಾಲೀಕ ನಿಧನದ ಬಳಿಕ 11.65 ಲಕ್ಷ ರೂ. ವಂಚನೆ

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022 ನಗರದ ಖಾಸಗಿ ಬಸ್ ಮಾಲೀಕ ನಿಧನದ ಬಳಿಕ ಅವರ ಸಹೋದರ, ಆತನ ಪುತ್ರ ಮತ್ತು ಕಂಡಕ್ಟರ್‌ಗಳು 11.65 ಲಕ್ಷ ರೂ. ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಲದೆ ಮೃತ ಮಾಲೀಕನ ಪತ್ನಿ ಮತ್ತು ಮಗಳಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್‌ಗಳ ಮಾಲೀಕ ಮೃತಪಟ್ಟ ಬಳಿಕ ನಾಲ್ಕು ಬಸ್‌ಗಳಿಂದ 11,65,013 ರೂ. ದೈನಂದಿನ ಕಲೆಕ್ಷನ್ ಆಗಿತ್ತು. ಆದರೆ ಬಸ್‌ಗಳ … Read more

ಶಿವಮೊಗ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿಯಿಂದ ಕ್ಯಾಮರಾ, ಟ್ಯೂಬ್ ಲೈಟ್ ಪೀಸ್ ಪೀಸ್

shimoga central jail building

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022 ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬ ಬುಲೆಟ್ ಕ್ಯಾಮರಾ ಮತ್ತು ಟ್ಯೂಬ್ ಲೈಟ್’ಗಳಿಗೆ ಹಾನಿ ಮಾಡಿದ್ದಾನೆ. ಆತನ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶರಾವತಿ ನಗರದ ಗಗನ್ ಅಲಿಯಾಸ್ ಆನಂದ ಎಂಬ ವಿಚಾರಣಾಧೀನ ಖೈದಿ ವಿರುದ್ಧ ಪ್ರಕರಣ ದಾಖಲಾಗಿದೆ. ಹೇಗಾಯ್ತು ಘಟನೆ? ಕೇಂದ್ರ ಕಾರಾಗೃಹದ ಶರಾವತಿ ವಿಭಾಗದಲ್ಲಿ ಖೈದಿಗಳು ಮತ್ತು ಸೆಲ್’ಗಳಲ್ಲಿ ದೈನಂದಿನ ತಪಾಸಣೆ ನಡೆಸಲಾಗುತ್ತಿತ್ತು. ಅನಧಿಕೃತ ವಸ್ತುಗಳು ತಂದಿಟ್ಟುಕೊಳ್ಳುವುದನ್ನು ತಡೆಯಲು ಜೈಲು … Read more

ಕೆಲಸ ಕೊಟ್ಟ ಕಂಪನಿಗೆ 3 ಲಕ್ಷ ವಂಚಿಸಿದ ಉದ್ಯೋಗಿ

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022 ಉದ್ಯೋಗಿಯೊಬ್ಬ ತನ್ನ ಕಂಪನಿಗೆ ಸುಮಾರು 3 ಲಕ್ಷ ರೂ. ವಂಚಿಸಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತ ತಲೆ ಮರೆಸಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಉದ್ಯೋಗಿಯ ಹುಡುಕಾಟ ನಡೆಯುತ್ತಿದೆ. ಆಸ್ಪತ್ರೆಗಳಿಗೆ ಸಾಫ್ಟ್ ವೇರ್ ಒದಗಿಸುವ ಕರ್ಪೊರೇಟ್ ಕಂಪನಿಯ ಉದ್ಯೋಗಿಯೊಬ್ಬ ವಂಚನೆ ಆರೋಪ ಎದುರಿಸುತ್ತಿದ್ದಾನೆ. ಏನಿದು ವಂಚನೆ ಪ್ರಕರಣ? ಸಾಫ್ಟ್ ವೇರ್ ಕಂಪನಿಯ ಫೀಲ್ಡ್ ಎಗ್ಸಿಕ್ಯೂಟಿವ್ ಕಬೀರ್ ಅಸ್ಲಾಂ ಎಂಬುವವರ ವಿರುದ್ಧ ವಂಚನೆ ಆರೋಪ ಕೇಳಿ … Read more