ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?
ಶಿವಮೊಗ್ಗ: ಕೋಟೆ ಮಾರಿಕಾಂಬ ಜಾತ್ರೆಯಲ್ಲಿ ಕುಟುಂಬದಿಂದ ಬೇರ್ಪಟ್ಟು ಕಳೆದುಹೋಗಿದ್ದ 80 ವರ್ಷದ ಮಹಿಳೆಯನ್ನು 112 ತುರ್ತು ಸ್ಪಂದನಾ ಪೊಲೀಸ್ (112 police) ಸಿಬ್ಬಂದಿ ಪತ್ತೆಹಚ್ಚಿ, ವಾಹನದಲ್ಲಿ ಅವರ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿ 12:30ರ ಹೊತ್ತಿಗೆ ವೃದ್ಧೆ ತಮ್ಮ ಸಂಬಂಧಿಕರೊಂದಿಗೆ ಮಾರಿಕಾಂಬಾ ಜಾತ್ರೆಗೆ ಬಂದಿದ್ದರು. ಆದರೆ ಜನದಟ್ಟಣೆಯ ನಡುವೆ ಅವರು ತಮ್ಮ ಕುಟುಂಬದವರಿಂದ ಬೇರ್ಪಟ್ಟು ದಾರಿ ತಪ್ಪಿದ್ದರು. ಈ ಬಗ್ಗೆ ಕುಟುಂಬದವರು 112ಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಇ.ಆರ್.ವಿ ಸಿಬ್ಬಂದಿ ಕೋಟೆ ಪೊಲೀಸ್ ಠಾಣೆಯ … Read more