ಭದ್ರಾವತಿ ಎಂಎಲ್‌ಎ ವಿರುದ್ಧ ಕೇಸ್, ಕಾಂಗ್ರೆಸ್‌ನಿಂದ ಶಿವಮೊಗ್ಗ ಚಲೋ, 25 ಸಾವಿರ ಜನರಿಂದ ಮೆರವಣಿಗೆ

100321 Congress Leader Dhruvanarayana at Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಮಾರ್ಚ್ 2021 ಶಾಸಕ ಸಂಗಮೇಶ್ವರ್ ವಿರುದ್ಧ ಪೊಲೀಸ್ ದೌರ್ಜನ್ಯದ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ‘ಶಿವಮೊಗ್ಗ ಚಲೋ’ ಹಮ್ಮಿಕೊಳ್ಳಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿಷ ಧ್ರುವನಾರಾಯಣ್, ಮಾರ್ಚ್ 13ರಂದು ಶಿವಮೊಗ್ಗ ಬಸ್ ನಿಲ್ದಾಣದಿಂದ ಸೈನ್ಸ್ ಮೈದಾನದವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಸೈನ್ಸ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಗುತ್ತದೆ ಎಂದರು. ಸಿದ್ದರಾಮಯ್ಯ, ಡಿಕೆಶಿ, ಖರ್ಗೆ … Read more

‘ನನ್ನ ಬಳಿ ಸಿಡಿ ಇಲ್ಲ, ಗೋವಾಗೆ ಹೋಗುವ ಶಾಸಕರೆ ಎಚ್ಚರ’

100321 Rajashekar Mulali at shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಮಾರ್ಚ್ 2021 ಬೆಳಗಾವಿ ಅಧಿವೇಶನಕ್ಕೆ ಬರುವ ಶಾಸಕರು ಗೋವಾಗೆ ಹೋಗಬಾರದು ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಶೇಖರ ಮುಲಾಲಿ, ಅಧಿವೇಶನಕ್ಕೆ ಬರುವ ಶಾಸಕರು ಸಮಯ ಇದೆ ಎಂದು ಗೋವಾಗೆ ಹೋಗುತ್ತಾರೆ.ಆ ರೀತಿ ಹೋಗಬಾರದು. ಮುಂದೆ ಸಮಸ್ಯೆ ಆಗಬಹುದು ಎಂದರು. ನನ್ನ ಹತ್ರ ಸಿಡಿ ಇಲ್ಲ ನನ್ನ ಬಳಿ 19 ಸಿಡಿಗಳಿವೆ ಎಂದು ಎಲ್ಲಿಯೂ ಹೇಳಿಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ. ಈ … Read more

ಭದ್ರಾವತಿಯಲ್ಲಿ ಆಗಿದ್ದು ಸಣ್ಣ ಘಟನೆ, ಜಿಲ್ಲೆಯಲ್ಲಿ ಇಂತಹ ದ್ವೇಷ ರಾಜಕಾರಣ ನಡೆದಿರಲಿಲ್ಲ

Congress-President-Sundaresh

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 MARCH 2021 ಮಾಜಿ ಶಾಸಕ ಸಂಗಮೇಶ್ವರ್ ವಿರುದ್ಧ ದೂರು ದಾಖಲಿಸಿರುವುದು ದ್ವೇಷ ರಾಜಕಾರಣ. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಉಗ್ರವಾಗಿ ಪ್ರತಿಭಟನೆ ನಡೆಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಂದರೇಶ್, ಸ್ವಾತಂತ್ರ್ಯ ನಂತರ ಜಿಲ್ಲೆಯ ಮಟ್ಟಿಗೆ ಇಂತಹ ದ್ವೇಷ ರಾಜಕಾರಣ ನಡೆದಿರಲಿಲ್ಲ ಎಂದು ಆರೋಪಿಸಿದರು. ಭದ್ರಾವತಿಯಲ್ಲಿ ನಡೆದಿದ್ದು ಸಣ್ಣದೊಂದು ಗಲಾಟೆ. ಕಬಡ್ಡಿ ಪಂದ್ಯಾವಳಿಯ ವೇಳೆ ನಡೆದ ಗಲಾಟೆಗೆ ಕಾಂಗ್ರೆಸ್ ಶಾಸಕ ಸಂಗಮೇಶ್ವರ್‍, … Read more

ಭದ್ರಾವತಿ ಶಾಸಕ ಸಂಗಮೇಶ್ವರ್ ಬಂಧನದ ಹಳೆ ವಿಡಿಯೋ ವೈರಲ್, ಶಾಸಕರು ಗರಂ

BK Sangameshwara Bhadravathi BDVT 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 3 MARCH 2021 ಕಬಡ್ಡಿ ಪಂದ್ಯಾವಳಿ ವೇಳೆ ಗಲಾಟೆ, ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವ ಬೆನ್ನಿಗೆ, ಶಾಸಕ ಸಂಗಮೇಶ್ವರ್  ಮತ್ತು ಅವರ ಕುಟುಂಬದವರನ್ನು ಬಂಧಿಸಲಾಗಿದೆ ಎಂದು ವಿಡಿಯೋ ವೈರಲ್ ಮಾಡಲಾಗಿದೆ. ಹಳೆ ವಿಡಿಯೋಗೆ ಮರು ಜೀವ ಈ ಹಿಂದೆ ಶಾಸಕ ಸಂಗಮೇಶ್ವರ್ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಆ ವಿಡಿಯೋವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಕಬಡ್ಡಿ ಪಂದ್ಯಾವಳಿ ವೇಳೆ ಗಲಾಟೆ ಹಿನ್ನೆಲೆಯಲ್ಲಿ ಸಂಗಮೇಶ್ವರ್ ಮತ್ತು … Read more

ಮಧು ಬಂಗಾರಪ್ಪ ಹುಟ್ಟುಹಬ್ಬ, ಶಿವಮೊಗ್ಗದಲ್ಲಿ ರಕ್ತದಾನ, ಪುಸ್ತಕ, ಸಸಿ ವಿತರಣೆ

020321 Madhu Bangarappa Birthday 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 MARCH 2021 ಮಾಜಿ ಶಾಸಕ ಮಧು ಬಂಗಾರಪ್ಪ ಇವತ್ತು ಶಿವಮೊಗ್ಗದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಸಂಭ್ರಮ ಆಚರಿಸಿಕೊಂಡರು. ಅಭಿಮಾನಿಗಳಿಂದ ರಕ್ತದಾನ ಶಿಬಿರ ಮಧು ಬಂಗಾರಪ್ಪ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸಿದ್ದರು. ರಕ್ತದಾನ ಶಿಬಿರಕ್ಕೆ ಮಧು ಬಂಗಾರಪ್ಪ ಅವರು ಚಾಲನೆ ನೀಡಿದರು. ಪುಸ್ತಕ, ಸಸಿಗಳ ವಿತರಣೆ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. … Read more

ಸಾಗರದ ಗಣಪತಿ ಕೆರೆ, ಸೊರಬ ರಸ್ತೆಗೆ ಡಿಸಿ ಭೇಟಿ, ಪರಿಶೀಲನೆ, ಮತ್ತೆ ನಡೆಯುತ್ತಾ ಸರ್ವೇ? ಏನಂದರು ಜಿಲ್ಲಾಧಿಕಾರಿ?

281220 Sagara DC Visit Ganapathi Kere 1

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SAGARA NEWS | 28 DECEMBER 2020 ಸೊರಬ ರಸ್ತೆ ಅಗಲೀಕರಣ ಸಂಬಂಧ ಮತ್ತೊಮ್ಮೆ ಜಂಟಿ ಸರ್ವೇ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪರಿಶೀಲನೆ ನಡೆಸಿದ ಬಳಿಕ ಜಂಟಿ ಸರ್ವೇಯ ನಿರ್ಧಾರ ಪ್ರಕಟಿಸಿದರು. ಶಾಸಕ ಹಾಲಪ್ಪ ಅವರೊಂದಿಗೆ ಸಾಗರ ಪಟ್ಟಣದ ವಿವಿಧೆಡೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು, ಪರಿಶೀಲನೆ ನಡೆಸಿದರು. ಅಲ್ಲದೆ … Read more

ಹಳೆ ಚರಂಡಿ ಮೇಲೆ ಹೊಸ ಚರಂಡಿ, ಬೇಲಿ ಉಳಿಸೋಕೆ ರಸ್ತೆ ಒತ್ತುವರಿ, ಶಿವಮೊಗ್ಗ ಪಾಲಿಕೆ ವಿರುದ್ಧ ಆಕ್ರೋಶ

051120 Former MLA Pasanna Kumar Visit Ashok Nagara 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 NOVEMBER 2020 ಹಳೆ ಬಾಕ್ಸ್ ಚರಂಡಿ ತೆರವುಗೊಳಿಸದೆ, ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ಹೊಸ ಬಾಕ್ಸ್ ಚರಂಡಿ ನಿರ್ಮಿಸುತ್ತಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಕ್ರಮಕ್ಕೆ ಅಶೋಕನಗರ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಅಧಿಕಾರಿಗಳ ವಿರುದ್ಧ ಗರಂ ಆದರು. ಅಮೃತ್ ಯೋಜನೆ ಅಡಿಯಲ್ಲಿ ಅಶೋಕ ನಗರದಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದೆ. ಆದರೆ … Read more

ಬಂಗಾರಪ್ಪ ಅವರ ಮೊದಲ ಪ್ರತಿಮೆ, ಪಾರ್ಕ್ ಉದ್ಘಾಟನೆಗೆ ಸಿದ್ಧ, ಹೇಗಿದೆ ಪಾರ್ಕ್?

251020 Soraba Bangarappa Park Set to Inauguration 1

ಶಿವಮೊಗ್ಗ ಲೈವ್.ಕಾಂ | SORABA NEWS | 25 ಅಕ್ಟೋಬರ್ 2020 ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಮೊದಲ ಪ್ರತಿಮೆ ಉದ್ಘಾಟನೆಗೆ ಸಿದ್ಧವಾಗಿದೆ. ಇದರೊಂದಿಗೆ ಪಟ್ಟಣದ ಹೃದಯ ಭಾಗದಲ್ಲಿ ಬಂಗಾರಪ್ಪ ಅವರ ಹೆಸರಿನ ಪಾರ್ಕ್ ಕೂಡ ಲೋಕಾರ್ಪಣೆಗೊಳ್ಳಲಿದೆ. VIDEO REPORT ಸೊರಬ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಬಂಗಾರಪ್ಪ ಪಾರ್ಕ್ ಸಿದ್ಧಪಡಿಸಲಾಗಿದೆ. ಪಾರ್ಕ್‍ನ ಮಧ್ಯ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿ ಇದೆ ಮೊದಲ ಬಾರಿಗೆ ಬಂಗಾರಪ್ಪ ಅವರ ಪ್ರತಿಮೆ ಸಿದ್ಧವಾಗಿದೆ. ಹೇಗಿದೆ … Read more

ಶಿವಮೊಗ್ಗದ ಮತ್ತೊಬ್ಬ ಶಾಸಕರಿಗೆ ಕರೋನ ಪಾಸಿಟಿವ್, ಮನೆಯಲ್ಲೇ ಚಿಕಿತ್ಸೆ

KB Ashok Naik BJP MLA Shimoga Rural 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಅಕ್ಟೋಬರ್ 2020 ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಅವರಿಗೆ ಕರೋನಾ ಪಾಸಿಟಿವ್ ಬಂದಿದೆ. ಅವರು ಹೋಂ ಕ್ವಾರಂಟೈನ್ ಒಳಗಾಗಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಪೇಜಲ್ಲಿ ಬರೆದುಕೊಂಡಿರುವ ಅವರು, ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿದ ಹಿನ್ನೆಲೆಯಲ್ಲಿ 2ನೆಯ ಬಾರಿಗೆ ಕೋವಿಡ್ ಪರೀಕ್ಷೆ ಮಾಡಿಸಿದೆ. ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದರು. ಕಳೆದ ನಾಲ್ಕೈದು ದಿನಗಳಿಂದ ತಮ್ಮ ಸಂಪರ್ಕದಲ್ಲಿದ್ದ ಎಲ್ಲರು ಕರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸಿದ್ದಾರೆ. ಶಿವಮೊಗ್ಗ … Read more

ಸಾಗರ ಎಂಎಲ್ಎ ಆಸ್ಪತ್ರೆಯಿಂದ ಬಿಡುಗಡೆ, ಮೂರು ವಾರ ವಿಶ್ರಾಂತಿ

Haratalu-Halappa

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಸೆಪ್ಟಂಬರ್ 2020 ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಾಗರ ಶಾಸಕ ಹರತಾಳು ಹಾಲಪ್ಪ ಗುಣವಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕರೋನದಿಂದ ಗುಣವಾಗಿ ಹಿಂತಿರುಗಿದ ಬಳಿಕ ಹರತಾಳು ಹಾಲಪ್ಪ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಅವರು ಪುನಃ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಹಾಲಪ್ಪ ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಹರತಾಳು ಹಾಲಪ್ಪ ಅವರು ಮೂರು ವಾರ ವಿಶ್ರಾಂತಿ ಪಡೆಯುವುದಾಗಿ ಹರತಾಳು ಹಾಲಪ್ಪ ಅವರು ತಿಳಿಸಿದ್ದಾರೆ. … Read more