ಫ್ರೀಡಂ ಪಾರ್ಕ್‌ ಹೆಸರಿನ ವಿಚಾರ, ಮಿನಿಸ್ಟರ್‌ ಕೇಳಿದ್ದೊಂದು, MLA ಹೇಳಿದ್ದೊಂದು, ಕೊನಗೆ CM ಒಪ್ಪಿದ ಹೆಸರು ಯಾವುದು?

CM-Siddaramaiah-and-MLA-channabasapp-at-yuvanidhi-programme-shimoga.

SHIVAMOGGA LIVE NEWS | 12 JANUARY 2024 SHIMOGA : ನಗರದ ಫ್ರೀಡಂ ಪಾರ್ಕ್‌ಗೆ ಹೆಸರಿನ ವಿಚಾರವಾಗಿ ಯುವನಿಧಿ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಮತ್ತು ಬಿಜೆಪಿ ಶಾಸಕ ಚನ್ನಬಸಪ್ಪ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಕೊನೆಗೆ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಮಧು ಬಂಗಾರಪ್ಪ ಸೂಚಿಸಿದ ಹೆಸರಿಗೆ ಒಪ್ಪಿಗೆ ನೀಡಿ, ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮೆಚ್ಚುಗೆ ಪಡೆದರು. ನಗರದ ಫ್ರೀಡಂ ಪಾರ್ಕ್‌ಗೆ ವಚನಕಾರ ಅಲ್ಲಮಪ್ರಭು ಅವರ ಹೆಸರು ಇಡಬೇಕು ಎಂದು ಸಚಿವ ಮಧು ಬಂಗಾರಪ್ಪ … Read more

ರಸ್ತೆಗೆ ಪುನಿತ್ ರಾಜ್‌ಕುಮಾರ್‌ ಹೆಸರು, ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸೂಚನೆ

Bhadravathi-Nagarasabhe-File-Image-New

SHIVAMOGGA LIVE NEWS | 18 DECEMBER 2023 BHADRAVATHI : ನಗರಸಭೆ ವ್ಯಾಪ್ತಿಯಲ್ಲಿ ರಸ್ತೆಯೊಂದಕ್ಕೆ ನಟ ಪುನೀತ್‌ ರಾಜಕುಮಾರ್‌ ಹೆಸರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ನಾಮಕರಣ ಮಾಡುವ ಬಗ್ಗೆ ತಮ್ಮ ಸಲಹೆ ಸೂಚನೆ ಅಥವಾ ಆಕ್ಷೇಪಣೆ ಇದ್ದಲ್ಲಿ ತಿಳಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಗರಸಭಾ ವ್ಯಾಪ್ತಿಯ ವಾರ್ಡ್ ನಂ.6ರ KSRTC ಬಸ್ ಡಿಪೋ ವೃತ್ತದ ಬಳಿಯಿಂದ ರಂಗಪ್ಪ ವೃತ್ತದವರೆಗಿನ ರಸ್ತೆಗೆ ‘ಪುನೀತ್ ರಾಜ್‍ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ನ.25ರಂದು ನಡೆದ ಕೌನ್ಸಿಲ್ ಸಾಮಾನ್ಯ … Read more

ವಿಮಾನ ನಿಲ್ದಾಣದ ಹೆಸರಿನ ಬಗ್ಗೆ ಮತ್ತೆ ಶುರುವಾಯ್ತು ಚರ್ಚೆ, ಹೋರಾಟ, ಯಾರೆಲ್ಲರ ಹೆಸರು ಮುನ್ನೆಲೆಗೆ ಬಂದಿದೆ?

Shimoga-Airport-General-Image

SHIVAMOGGA LIVE NEWS | 17 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ನಾಮಕರಣದ  (airport name) ಕುರಿತ ಚರ್ಚೆ, ಆಗ್ರಹಗಳು ಹೆಚ್ಚಾಗುತ್ತಿವೆ. ವಿಮಾನ ನಿಲ್ದಾಣದ ಹೆಸರಿನ ಸಂಬಂಧ ಶಿವಮೊಗ್ಗದಲ್ಲಿ ಒಂದಿಲ್ಲೊಂದು ಪ್ರತಿಭಟನೆ, ಸಭೆಗಳು ನಡೆಯುತ್ತಿವೆ. ಯಾರೆಲ್ಲರ ಹೆಸರು ಇಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿವೆ ಎಂಬುದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ. ಮಾಜಿ ಸಿಎಂ ಯಡಿಯೂರಪ್ಪ ವಿಮಾನ ನಿಲ್ದಾಣ ನಿರ್ಮಾಣದ ರೂವಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಆದ್ದರಿಂದ ಅವರ ಹೆಸರು ಇಡಬೇಕು … Read more

ಶಿವಮೊಗ್ಗದಲ್ಲಿ ಯಡಿಯೂರಪ್ಪ ತುರ್ತು ಪತ್ರಿಕಾಗೋಷ್ಠಿ, ವಿಮಾನ ನಿಲ್ದಾಣದ ಹೆಸರು ಘೋಷಣೆ, ಯಾರ ಹೆಸರು ಪ್ರಕಟಿಸಿದರು?

Yedyurappa-About-Shimoga-Airport-Name

SHIVAMOGGA LIVE NEWS | 12 FEBRURARY 2023 SHIMOGA : ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು (Airport Name) ಇಡುವುದು ಬೇಡ. ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನೆ ಇಡಬೇಕು. ಈ ಕುರಿತು ಸದನದಲ್ಲಿ ವಿಷಯ ಮಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು. ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 20ನೇ ಶತಮಾನ ಕಂಡ ಈ ದೇಶದ ಶ್ರೇಷ್ಠ ಕವಿ. ಜ್ಞಾನಪೀಠ ಪ್ರಶಸ್ತಿ ಪಡೆದವರು. ರಾಜ್ಯದ ಗೀತೆಯನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲು … Read more

ಪರಿಶೀಲನೆ ವೇಳೆ ಸಿಕ್ಕ ‘ನಿರಾಪೇಕ್ಷಣಾ ಪತ್ರ’ ಕಂಡು ಪಿಡಿಒ ದಂಗು, ಮಹಿಳೆ ವಿರುದ್ಧ ಪೊಲೀಸ್ ಠಾಣೆಗೆ ದೂರು

Sagara-Rural-Police-Station

SHIVAMOGGA LIVE NEWS | 14 JANUARY 2023 SAGARA : ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ (ಪಿಡಿಒ) ನಕಲಿ ಸಹಿ (signature), ಸೀಲು ಬಳಸಿ, ನಕಲಿ ನಿರಾಪೇಕ್ಷಣಾ ಪತ್ರ ಸಿದ್ಧಪಡಿಸಿ, ಮಂಗಳೂರು ವಿದ್ಯುತ್ ಕಂಪನಿಗೆ (ಮೆಸ್ಕಾಂ) ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕು ಹೆಗ್ಗೋಡು ಗ್ರಾಮ ಪಂಚಾಯಿತಿಯ ಪಿಡಿಒ ಸೌಮ್ಯಾ ಅವರ ಸಹಿ (signature) ನಕಲು ಮಾಡಲಾಗಿದೆ. ಅವರ ಹೆಸರಿನಲ್ಲಿ ನಿರಾಪೇಕ್ಷಣಾ ಪತ್ರ ಸಿದ್ಧಪಡಿಸಿರುವ … Read more

ವಿಮಾನ ನಿಲ್ದಾಣದ ಹೆಸರಿನ ವಿಚಾರ, ಶಿವಮೊಗ್ಗದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಮಹತ್ವದ ಸಭೆ

Swamiji-meeting-about-Shimoga-Airport

SHIVAMOGGA LIVE NEWS | AIRPORT | 30 ಏಪ್ರಿಲ್ 2022 ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಇಡಬೇಕು. ಈ ನಿರ್ಧಾರದಿಂದ ರಾಜ್ಯ ಸರ್ಕಾರ ಯಾವುದೆ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಮಲೆನಾಡು ವೀರಶೈವ, ಲಿಂಗಾಯತ ಮಠಾಧೀಶರ ಪರಿಷತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು. ನಗರದ ಬೆಕ್ಕಿನಕಲ್ಮಠದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ‘ಯಾರೂ ವಿರೋಧ ಮಾಡಿಲ್ಲ’ ಸಭೆಯ ಸಾನ್ನಿಧ್ಯ ವಹಿಸಿದ್ದ ಮಲೆನಾಡು ವೀರಶೈವ, ಲಿಂಗಾಯ ಮಠಾಧೀಶರ ಪರಿಷತ್ … Read more

ವಿಮಾನ ನಿಲ್ದಾಣದ ಹೆಸರಿಗಾಗಿ ಹೋರಾಟ ಮತ್ತೆ ಶುರು, ಆಮ್ ಆದ್ಮಿ ಪಕ್ಷದಿಂದ ಡಿಸಿಗೆ ಮನವಿ

AAP-memorandum-to-DC-about-Airport.

SHIVAMOGGA LIVE NEWS | SHIMOGA AIRPORT| 26 ಏಪ್ರಿಲ್ 2022 ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ಸಂಬಂಧ ಹೋರಾಟ, ಹಕ್ಕೊತ್ತಾಯಗಳು ಪುನಾರಂಭವಾಗಿವೆ. ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಇಡದಿರುವಂತೆ ಆಮ್ ಆದ್ಮಿ ಪಕ್ಷದ ಶಿವಮೊಗ್ಗ ಘಟಕ ಆಗ್ರಹಿಸಿದೆ. ಇವತ್ತು ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಆಮ್ ಆದ್ಮಿ ಪಕ್ಷದ ಮುಖಂಡರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರುನ್ನು ವಿಮಾನ ನಿಲ್ದಾಣಕ್ಕೆ ಶಿಫಾರಸು ಮಾಡುವ ಮೂಲಕ ರಾಜ್ಯ ಸರ್ಕಾರ ಕೆಟ್ಟ ಪರಂಪರೆಗೆ … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾವೆಲ್ಲ ಹೆಸರು ಇಡುವಂತೆ ಒತ್ತಾಯವಿದೆ? ಇಲ್ಲಿದೆ ಲಿಸ್ಟ್

Shimoga-Ariport-Design

SHIVAMOGGA LIVE NEWS | SHIMOGA FM | 25 ಏಪ್ರಿಲ್ 2022 ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಮಾನ ನಿಲ್ದಾಣ ಕಾಮಗಾರಿಯ ಪರಿಶೀಲನೆ ನಡೆಸಿದರು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು. ಈ ಮಧ್ಯೆ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡಲು ಕ್ಯಾಬಿನೆಟ್’ನಲ್ಲಿ ನಿರ್ಧಾರ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೂ ಶಿಫಾರಸು ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು … Read more

ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರು ಫೈನಲ್, ಮುಖ್ಯಮಂತ್ರಿಯಿಂದ ಘೋಷಣೆ

CM-basavaraja-bommai-Visit-Shimoga-Airport

SHIVAMOGGA LIVE NEWS | AIRPORT| 20 ಏಪ್ರಿಲ್ 2022 ಶಿವಮೊಗ್ಗ ವಿಮಾನ‌ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಇಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಅವರ ಹೆಸರು ಇಡಲು ಸಚಿವ ಸಂಪುಟ ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ … Read more

ಶಿವಮೊಗ್ಗ ವಿಮಾನ ನಿಲ್ದಾಣ ಹೆಸರು ಸಂಬಂಧ ಭದ್ರಾವತಿ ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ

Veerashaiva-Maha-Sabha-at-Bhadravathi-about-Airport-Name

SHIVAMOGGA LIVE NEWS | 17 ಮಾರ್ಚ್ 2022 ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಇಡಬೇಕು ಎಂದು ವೀರಶೈವ-ಲಿಂಗಾಯಿತ ಸಮುದಾಯದ ಮುಖಂಡರು ಮನವಿ ಸಲ್ಲಿಸಿದ್ದಾರೆ. ಭದ್ರಾವತಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಗ್ರೇಡ್-2 ರಂಗಮ್ಮ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ದಕ್ಷ ಆಡಳಿತ ನೀಡಿದ್ದಾರೆ. ಅಭಿವೃದ್ಧಿಯ ಹರಿಕಾರರಾಗಿ ಸಾಮಾಜಿಕ ನ್ಯಾಯ ನೀಡಿದ್ದಾರೆ. ಅವರ ಶ್ರಮದ ಫಲವಾಗಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಅವರ ಕೀರ್ತಿ … Read more