ಎರಡು ಬ್ಯಾಂಕ್‌ಗಳಲ್ಲಿ ಪಾಸ್‌ ಬುಕ್‌ ಎಂಟ್ರಿ ಮಾಡಿಸಿದಾಗ ಶಿವಮೊಗ್ಗದ ವ್ಯಕ್ತಿಗೆ ಕಾದಿತ್ತು ಬಿಗ್‌ ಶಾಕ್‌

Online-Fraud-Case-image

ಶಿವಮೊಗ್ಗ: ವ್ಯಕ್ತಿಯೊಬ್ಬರ ಎರಡು ಬ್ಯಾಂಕ್‌ ಖಾತೆಗಳಿಂದ ₹3.26 ಲಕ್ಷ ಹಣವನ್ನು ಅವರಿಗೆ ಗೊತ್ತಿಲ್ಲದಂತೆ ವರ್ಗಾವಣೆ (Money Transfer) ಮಾಡಿಕೊಳ್ಳಲಾಗಿದೆ. ಹೊರ ರಾಜ್ಯದ ಪ್ರವಾಸದಲ್ಲಿದ್ದ ಅವರು ತಮ್ಮ ತಂದೆ ಮೂಲಕ ಶಿವಮೊಗ್ಗದಲ್ಲಿ ಬ್ಯಾಂಕ್‌ ಪಾಸ್‌ ಬುಕ್‌ ಎಂಟ್ರಿ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗದ ವ್ಯಕ್ತಿಯ ಎಸ್‌ಬಿಐ ಬ್ಯಾಂಕ್‌ ಖಾತೆಯಿಂದ ಐದು ಬಾರಿ ಒಟ್ಟು ₹84,500 ಹಣ ವರ್ಗಾಯಿಸಿಕೊಳ್ಳಲಾಗಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಯಿಂದ ₹2.41 ಲಕ್ಷ ಹಣವನ್ನು ಬೇರೊಂದು ಖಾತೆ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬ್ಯಾಂಕ್‌ ಖಾತೆಯನ್ನು ಹ್ಯಾಕ್‌ … Read more

ಆರು ದಿನದಲ್ಲಿ ₹4.86 ಲಕ್ಷ ಕಳೆದುಕೊಂಡ ಶಿವಮೊಗ್ಗದ ವಿದ್ಯಾರ್ಥಿ, ಆಗಿದ್ದೇನು?

Instagram-Cyber-Crime-Shimoga-Station.

ಶಿವಮೊಗ್ಗ: ಇನ್‌ಸ್ಟಾಗ್ರಾಂನಲ್ಲಿದ್ದ (Instagram) ಜಾಹೀರಾತು ನಂಬಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಆರು ದಿನದಲ್ಲಿ ₹4.86 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಟ್ರೇಡಿಂಗ್‌ ಕುರಿತು ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿದ ವಿದ್ಯಾರ್ಥಿಗೆ ವಿವಿಧ ವಾಟ್ಸಪ್‌ ನಂಬರ್‌ಗಳಿಂದ ಕರೆ ಬಂದಿತ್ತು. ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ಆರು ದಿನದಲ್ಲಿ ವಿದ್ಯಾರ್ಥಿಯಿಂದ ₹4.86 ಲಕ್ಷ ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಲಾಭಾಂಶವನ್ನು ನೀಡದೆ ಇದ್ದಾಗ ವಂಚನೆಗೊಳಗಾದ ಅರಿವಾಗಿ ವಿದ್ಯಾರ್ಥಿ … Read more

ದಿನ ಪಂಚಾಂಗ | 11 ಸೆಪ್ಟೆಂಬರ್ 2025 | ಇವತ್ತು ಚತುರ್ಥಿ, ಯಾವ್ಯಾವ ಕಾಲ ಯಾವ ಸಮಯಕ್ಕಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಗುರುವಾರ, 11 ಸೆಪ್ಟೆಂಬರ್ 2025‌ – ಚತುರ್ಥಿ ಸೂರ್ಯೋದಯ : 6.16 am ಸೂರ್ಯಾಸ್ತ : 6.32 pm ನಕ್ಷತ್ರ : ಅಶ್ವಿನಿ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.43 ರಿಂದ 5.30ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.16ರವರೆಗೆ ಅಭಿಜಿತ್‌ ಮಧ್ಯಾಹ್ನ 12 ರಿಂದ 12.49ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.27 ರಿಂದ 3.16ರವರಗೆ ಗೋಧೂಳಿ ಮುಹೂರ್ತ ಸಂಜೆ 6.32 ರಿಂದ 6.55ರವರೆಗೆ … Read more

ಟೆಲಿಗ್ರಾಂನಲ್ಲಿ ಬಂತು ಮೆಸೇಜ್‌, ಎರಡು ದಿನದ ಬಳಿಕ ಮಹಿಳಾ ಇಂಜಿನಿಯರ್‌ಗೆ ಕಾದಿತ್ತು ಬಿಗ್‌ ಶಾಕ್‌, ಆಗಿದ್ದೇನು?

Online-Fraud-Case-image

ಶಿವಮೊಗ್ಗ: ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ (Stock Exchange) ಉದ್ಯೋಗವಕಾಶವಿದೆ ಎಂದು ನಂಬಸಿ ಶಿವಮೊಗ್ಗದ ಮಹಿಳಾ ಇಂಜಿನಿಯರ್‌ ಒಬ್ಬರಿಗೆ ₹7,57,276 ವಂಚಿಸಲಾಗಿದೆ. ಟೆಲಿಗ್ರಾಂ ಆಪ್‌ನಲ್ಲಿ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಉದ್ಯೋಗವಕಾಶವಿದೆ ಎಂದು ಮೆಸೇಜ್‌ ಬಂದಿತ್ತು. ಇದನ್ನು ನಂಬಿದ ಮಹಿಳಾ ಇಂಜಿನಿಯರ್‌, ಲಿಂಕ್‌ ಕ್ಲಿಕ್‌ ಮಾಡಿದ್ದರು. ರಿಪ್ಲೆ ಮಾಡಿದ ವಂಚಕರು ಹಣ ಹೂಡಿಕೆ ಮಾಡಿ ವಿವಿಧ ಟಾಸ್ಕ್‌ ಪೂರೈಸಿದರೆ ಅಧಿಕ ಆದಾಯ ಗಳಿಸಬಹುದು ಎಂದು ನಂಬಿಸಿದ್ದರು. ಆ.27 ಮತ್ತು 28ರಂದು ವಿವಿಧ ಟಾಸ್ಕ್‌ ಪೂರೈಸಲು ವಂಚಕರ ಖಾತೆಗೆ ಮಹಿಳಾ ಇಂಜಿನಿಯರ್‌ … Read more

25 ಮನೆಗಳ ಫೋಟೊ ಕ್ಲಿಕ್‌ ಮಾಡಿದ ಯುಕವನ ಖಾತೆಗೆ ಬಂತು ಹಣ, ಆಮೇಲೆ ಕಾದಿತ್ತು ಬಿಗ್‌ ಶಾಕ್

Online-Fraud-Case-image

ಶಿವಮೊಗ್ಗ: ಮನೆಗಳ ಫೋಟೊ ಕ್ಲಿಕ್ ಮಾಡಿ ರಿವ್ಯು (review) ನೀಡಿದರೆ ಲಾಭಾಂಶ ನೀಡುವುದಾಗಿ ನಂಬಿಸಿ ಶಿವಮೊಗ್ಗದ ಎಲೆಕ್ಟ್ರೀಷಿಯನ್‌ ಒಬ್ಬರಿಗೆ 12.72  ಲಕ್ಷ ರೂ. ಹಣ ವಂಚಿಸಲಾಗಿದೆ. ಪಾರ್ಟ್‌ ಟೈಮ್‌ ಉದ್ಯೋಗ ಕುರಿತು ಎಲೆಕ್ಟ್ರೀಷಿನ್‌ಗೆ ವಾಟ್ಸಪ್‌ಗೆ ಮೆಸೇಜ್‌ ಬಂದಿತ್ತು. ಅದನ್ನು ಕ್ಲಿಕ್‌ ಮಾಡಿದಾಗ ಮನೆಗಳಿಗೆ ರಿವ್ಯು ನೀಡಿದರೆ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಅಂತೆಯೇ ಮೊದಲು 25 ಮನೆಗಳ ಫೋಟೊಗಳ ಮೇಲೆ ಕ್ಲಿಕ್‌ ಮಾಡಿ ರಿವ್ಯು ಬರೆಯುತ್ತಿದ್ದಂತೆ ಎಲೆಕ್ಟ್ರೀಷಿಯನ್‌ ಬ್ಯಾಂಕ್‌ ಖಾತೆಗೆ 800 ರೂ. ಹಣ ವರ್ಗಾಯಿಸಿದ್ದರು. … Read more

ಶಿವಮೊಗ್ಗದ ಡಾಕ್ಟರ್‌ಗೆ ಸೇನೆಯ ಕರ್ನಲ್‌ನಿಂದ ಫೋನ್‌, ಆಮೇಲೆ ಕಾದಿತ್ತು ಶಾಕ್‌, ಆಗಿದ್ದೇನು?

Online-Fraud-In-Shimoga

ಶಿವಮೊಗ್ಗ : ಭಾರತೀಯ ಸೇನೆಯ ಅಧಿಕಾರಿ ಎಂದು ನಂಬಿಸಿ ಶಿವಮೊಗ್ಗದ ವೈದ್ಯೆ (Doctor) ಮತ್ತು ಅವರ ಮನೆಯಲ್ಲಿ ಬಾಡಿಗೆಗೆ ಇರುವ ವ್ಯಕ್ತಿಯೊಬ್ಬರಿಗೆ 3.72 ಲಕ್ಷ ರೂ. ಹಣ ವಂಚಿಸಲಾಗಿದೆ. ವಿಡಿಯೋ ಕರೆ ಮಾಡಿ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂದು ನಂಬಿಸಿ ಹಣ ಲಪಟಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಎನ್‌ಸಿಸಿ ಕಚೇರಿಯಿಂದ ಫೋನ್..!‌ ಶಿವಮೊಗ್ಗದ ಎನ್‌ಸಿಸಿ ಕಚೇರಿಯಿಂದ ಕ್ಯಾಪ್ಟನ್‌ ಮಾತನಾಡುತ್ತಿರುವುದಾಗಿ ತಿಳಿಸಿ ವ್ಯಕ್ತಿಯೊಬ್ಬ ವೈದ್ಯೆಗೆ (ಹೆಸರು ಗೌಪ್ಯ) ಕರೆ ಮಾಡಿದ್ದ. ಸೇನಾ ವಾಹನದಲ್ಲಿ ಸುಮಾರು 45 ರೋಗಿಗಳನ್ನು ನಿಮ್ಮ ಕ್ಲಿನಿಕ್‌ಗೆ … Read more

ರೈಲ್ವೆ ಟಿಕೆಟ್‌ ಬುಕಿಂಗ್‌, ನವೆಂಬರ್‌ 1ರಿಂದ ಹೊಸ ನಿಯಮ ಜಾರಿಗೆ

Prayanikare-Gamanisi-Indian-Railway-News

RAILWAY NEWS, 18 OCTOBER 2024 : ರೈಲುಗಳಲ್ಲಿ ಮುಂಗಡ ಟಿಕೆಟ್‌ (Ticket) ಖರೀದಿಯ ಅವಧಿ ಕಡಿತಗೊಳಿಸಿದೆ. ಈವರೆಗೂ 120 ದಿನ ಮೊದಲು ಟಿಕೆಟ್‌ ಬುಕ್‌ ಮಾಡಬಹುದಾಗಿತ್ತು. ಸದ್ಯ ಈ ಅವಧಿಯನ್ನು ಕಡಿತಗೊಳಿಸಲಾಗಿದೆ. ಇನ್ಮುಂದೆ 60 ದಿನ ಮುಂಗಡವಾಗಿ ಮಾತ್ರ ಟಿಕೆಟ್‌ ರಿಸರ್ವ್‌ ಮಾಡಿಕೊಳ್ಳಬಹುದಾಗಿದೆ. ನವೆಂಬರ್‌ 1ರಿಂದ ಟಿಕೆಟ್‌ ಕಾಯ್ದಿರಿಸುವ ಹೊಸ ನಿಯಮ ಜಾರಿಗೆ ಬರಲಿದೆ. ಟಿಕೆಟ್‌ ಬ್ಲಾಕ್‌ ದಂಧೆಗೆ ಕಡಿವಾಣ ಹಾಕಲು, ಎಲ್ಲ ಪ್ರಯಾಣಿಕರಿಗು ಸೀಟ್‌ ದೊರೆಯುವಂತೆ ಮಾಡಲು ಈ ಕ್ರಮ ಕೈಗೊಳಲಾಗಿದೆ ಎಂದು ರೈಲ್ವೆ … Read more

ಶಿವಮೊಗ್ಗದ ಶಿಕ್ಷಕಿಯ ಮೊಬೈಲ್‌ಗೆ ಬಂತು ಸಾಲು ಸಾಲು ಮೆಸೇಜ್‌, ಓಪನ್‌ ಮಾಡ್ತಿದ್ದಂತೆ ಕಾದಿತ್ತು ಆಘಾತ

SMS-Fraud-Shimoga-CEN-Police-Station.

SHIVAMOGGA LIVE NEWS | 6 MAY 2024 SHIMOGA : ಶಿಕ್ಷಕಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಏಕಾಏಕಿ 7 ಲಕ್ಷ‌ ರೂ. ಹಣ ನಾಪತ್ತೆಯಾಗಿದೆ. ಹಣ ಕಡಿತದ ಸಾಲು ಸಾಲು ಮೆಸೇಜ್‌ ಬಂದಾಗ ಶಿಕ್ಷಕಿ ಆಘಾತಕ್ಕೊಂಡಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.   ಏನಿದು ಕೇಸ್‌? ಹಣ ಕಡಿತವಾಗಿದ್ದೇಕೆ? ಶಿವಮೊಗ್ಗದ ಶಿಕ್ಷಕಿಯೊಬ್ಬರು ಯುನಿಯನ್‌ ಬ್ಯಾಂಕ್‌ನಲ್ಲಿ ಖಾತೆ ಮತ್ತು ಇಂಟರ್‌ನೆಟ್‌ ಬ್ಯಾಂಕಿಂಗ್‌ ಹೊಂದಿದ್ದಾರೆ. ಮೇ 3ರಂದು ಮಧ್ಯಾಹ್ನ ಶಿಕ್ಷಕಿಯ ಮೊಬೈಲ್‌ಗೆ ಯುನಿಯನ್‌ ಬ್ಯಾಂಕ್‌ನಿಂದ … Read more

ಕೆಲಸ ಹುಡುಕ್ತಿರೋರೆ ಹುಷಾರ್‌, ಯಾಮಾರಿದ್ರೆ ಶಿವಮೊಗ್ಗದ ಮಹಿಳೆಗಾದ ಸ್ಥಿತಿ ನಿಮಗೂ ಫಿಕ್ಸ್‌

SMS-Fraud-Shimoga-CEN-Police-Station.

SHIVAMOGGA LIVE NEWS | 26 APRIL 2024 SHIMOGA : ಪಾರ್ಟ್‌ ಟೈಮ್‌ ಉದ್ಯೋಗ ಕೊಡುವ ನೆಪದಲ್ಲಿ ಆನ್‌ಲೈನ್‌ ಮೂಲಕ ವಂಚನೆ ಮುಂದುವರೆದಿದೆ. ಉದ್ಯೋಗ ಆಕಾಂಕ್ಷಿಗಳು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಇಂತಹ ಮತ್ತೊಂದು ಪ್ರಕರಣ ವರದಿಯಾಗಿದೆ. ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗ ಕೊಡುವುದಾಗಿ ಟೆಲಿಗ್ರಾಂನಲ್ಲಿ ಬಂದ ಮೆಸೇಜ್‌ ನಂಬಿ ಶಿವಮೊಗ್ಗದ ಮಹಿಳೆಯೊಬ್ಬರು (ಹೆಸರು ಗೌಪ್ಯ) ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಏ.3ರಂದು ಶಿವಮೊಗ್ಗದ ಮಹಿಳೆಗೆ ಟೆಲಿಗ್ರಾಂನಲ್ಲಿ ಮೆಸೇಜ್‌ ಬಂದಿತ್ತು. ಹೊಟೇಲ್‌ ಒಂದರ ವೆಬ್‌ಸೈಟ್‌ ಲಿಂಕ್‌ ಕಳುಹಿಸಿ ಪ್ರಮೋಟ್‌ … Read more

ಮನೆಯಲ್ಲಿ ಕುಳಿತು ಸುಲಭವಾಗಿ ಹಣ ಸಂಪಾದನೆ, ಶಿವಮೊಗ್ಗದ ವ್ಯಕ್ತಿ ಕೊನೆಗೆ ಗಳಿಸಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು?

Online-Fraud-In-Shimoga

SHIVAMOGGA LIVE NEWS | 10 APRIL 2024 SHIMOGA : ಆನ್‌ಲೈನ್‌ ರಿವ್ಯು ನೀಡಿ ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 4.17 ಲಕ್ಷ ರೂ. ವಂಚಿಸಲಾಗಿದೆ. ವಾಟ್ಸಪ್‌ ಮತ್ತು ಟೆಲಿಗ್ರಾಂ ಮೂಲಕ ಮಾಹಿತಿ ನೀಡಿ, ಹಣ ವರ್ಗಾಯಿಸಿಕೊಳ್ಳಲಾಗಿದೆ. ಆಗಿದ್ದೇನು? ಶಿವಮೊಗ್ಗದ ವ್ಯಕ್ತಿಗೆ (ಹೆಸರು ಗೌಪ್ಯ) ವಾಟ್ಸಪ್‌ನಲ್ಲಿ ಹೆಚ್‌ಸಿಎಲ್‌ ಟೆಕ್ನಾಲಜಿಗೆ ರಿವ್ಯು ನೀಡಿದರೆ 150 ರೂ. ಹಣ ಸಿಗಲಿದೆ ಎಂದು ಮೆಸೇಜ್‌ ಬಂದಿತ್ತು. ಬಳಿಕ ಲಾಭಾಂಶದ ಆಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಮೊದಲು … Read more