ಕವರ್‌ನಲ್ಲಿ ಪೆಟ್ರೋಲ್‌ ತಂದು ಅಂಗಡಿ ಮಾಲೀಕನ ಮೇಲೆ ಎಸೆದು ಬೆಂಕಿ ಹಚ್ಚಿ ಪರಾರಿಯಾದ ವ್ಯಕ್ತಿ

Police-Jeep-With-Light-New.

ಶಿವಮೊಗ್ಗ: ವೈಯಕ್ತಿಕ ದ್ವೇಷಕ್ಕೆ ಚಿಕನ್‌ ಅಂಗಡಿ ಮಾಲೀಕನ ಮೇಲೆ ಪೆಟ್ರೋಲ್‌ (petrol) ಎರಚಿ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಲಾಗಿದೆ. ಸೋಮಿನಕೊಪ್ಪ ಸರ್ಕಲ್‌ನಲ್ಲಿ ಘಟನೆ ಸಂಭವಿಸಿದೆ. ಚಿಕನ್‌ ಅಂಗಡಿ ಮಾಲೀಕ ಜೀಶಾನ್‌ ಕಿವಿ, ಎಡಗೈಗೆ ಬೆಂಕಿಯಿಂದ ಸುಟ್ಟ ಗಾಯವಾಗಿದೆ ಎಂದು ಆರೋಪಿಸಲಾಗಿದೆ. ಚಿಕನ್‌ ಅಂಗಡಿ ಬಳಿ ಬಂದಿದ್ದ ವಸೀಂ ಎಂಬಾತ ಜೀಶಾನ್‌ಗೆ ಅವಾಚ್ಯವಾಗಿ ನಿಂದಿಸಿದ್ದ. ಬಳಿಕ ಪ್ಲಾಸ್ಟಿಕ್‌ ಕವರ್‌ನಲ್ಲಿ ತಂದಿದ್ದ ಪೆಟ್ರೋಲ್‌ ಜೀಶಾನ್‌ ಮೈ ಮೇಲೆ ಎಸೆದು ಬೆಂಕಿ ಹಚ್ಚಿ ಓಡಿ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಕೂಡಲೆ ಸ್ಥಳೀಯರು … Read more

ಬಂಕ್‌ನಲ್ಲಿ ಅಳತೆ ಮೋಸ, ಅಧಿಕಾರಿಗಳು ದಾಳಿ, ಮುಟ್ಟುಗೋಲು

gas-bunk-seized-by-officials.

SHIVAMOGGA LIVE NEWS | 12 JULY 2024 SAGARA : ಅಳತೆಯಲ್ಲಿ ಗ್ರಾಹಕರಿಗೆ ವಂಚಿಸಲು ಕಾನೂನು ಮಾಪನ ಇಲಾಖೆಯ ಸೀಲು ಹಾಳು ಮಾಡಿದ ಆರೋಪದ ಹಿನ್ನೆಲೆ ನಗರದ ಆವಿನಹಳ್ಳಿ ರಸ್ತೆಯ ಗ್ಯಾಸ್ ಬಂಕ್‌ನ್ನು (Bunk) ಕಾನೂನು ಮಾಪನ ಶಾಸ್ತ್ರ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಘಟಕದಲ್ಲಿನ ಮದರ್ ಬೋರ್ಡ್‌ ಅನ್ನು ಅಳತೆಯ ನಿಖರತೆ ಕಾಪಾಡುವ ಸಲುವಾಗಿ ನಿಯಮಿತ ಅವಧಿಯವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆ ಪರಿಶೀಲಿಸಿ, ಸೀಲ್ ಮಾಡುವ ನಿಯಮ ಚಾಲ್ತಿಯಲ್ಲಿದೆ. ಅಳತೆಯಲ್ಲಿ ಗ್ರಾಹಕರಿಗೆ ವಂಚಿಸುವ ಉದ್ದೇಶದಿಂದ ಈ … Read more

ಶಿವಮೊಗ್ಗದಲ್ಲಿ ಶಾಸಕ ಚನ್ನಬಸಪ್ಪ ಸೇರಿ ಬಿಜೆಪಿ ಕಾರ್ಯಕರ್ತರು ಪೊಲೀಸ್‌ ವಶಕ್ಕೆ

BJP-Protest-against-Petrol-Price-hike

SHIVAMOGGA LIVE NEWS | 20 JUNE 2024 SHIMOGA : ಪೆಟ್ರೋಲ್‌, ಡಿಸೇಲ್‌ ದರ ಏರಿಕೆ (Price) ಖಂಡಿಸಿ ಬಿಜೆಪಿ ವತಿಯಿಂದ ಖಾಸಗಿ ಬಸ್‌ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಟೈರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಶಾಸಕ ಚನ್ನಬಸಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ಎಸ್‌.ಎನ್.ಚನ್ನಬಸಪ್ಪ, ಗ್ಯಾರಂಟಿ ಆಶ್ವಾಸನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. … Read more

‘ಪೆಟ್ರೋಲ್‌, ಡಿಸೇಲ್‌ ದರ ಹೆಚ್ಚಳಕ್ಕೆ ರಾಜಕೀಯ ದ್ವೇಷವೆ ಕಾರಣ’, ಶಿವಮೊಗ್ಗದಲ್ಲಿ ನಾಳೆ ತಮಟೆ ಹೋರಾಟ

BY-Raghavendra-and-TD-Megharaj-press-meet-in-Shimoga.

SHIVAMOGGA LIVE NEWS | 16 JUNE 2024 SHIMOGA : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ನಿರೀಕ್ಷೆ ಹುಸಿಯಾಗಿದೆ. ಪೆಟ್ರೋಲ್‌, ಡಿಸೇಲ್‌ ದರ (Petrol) ಹೆಚ್ಚಳ ಮಾಡಿ ರಾಜಕೀಯ ದ್ವೇಷ ತೀರಿಸಿಕೊಳ್ಳಲಾಗುತ್ತಿದೆ. ಇದು ಮಧ್ಯಮ ವರ್ಗ, ರೈತರ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಚಟುವಟಿಕೆ ಗರಿಗೆದರುತ್ತಿದ್ದು, ಯಂತ್ರೋಪಕರಣಕ್ಕೆ ಇಂಧನ ಅವಶ್ಯಕ. ಈಗ ಇಂಧನ ದರ ಹೆಚ್ಚಳದಿಂದ ರೈತರಿಗೆ ಹೊರೆಯಾಗಲಿದೆ. ಕರಾವಳಿಯಲ್ಲಿ ಮೀನುಗಾರರಿಗು ಸಮಸ್ಯೆಯಾಗಲಿದೆ. ಡಿಸೇಲ್‌ … Read more

BREAKING NEWS – ಕರ್ನಾಟಕದಲ್ಲಿ ಪೆಟ್ರೋಲ್‌, ಡಿಸೇಲ್‌ ದರ ಹೆಚ್ಚಳ, ಶಿವಮೊಗ್ಗದಲ್ಲಿ ಎಷ್ಟಾಗಿದೆ ರೇಟ್?

petrol pump

SHIVAMOGGA LIVE NEWS | 15 JUNE 2024 PETROL PRICE : ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಿಗೆ ವಾಹನ ಸವಾರರಿಗೆ ಪೆಟ್ರೋಲ್‌, ಡಿಸೇಲ್‌ ದರ ಏರಿಕೆಯ ಬಿಸಿ ಮುಟ್ಟಿದೆ. ಪೆಟ್ರೋಲ್‌ ಮತ್ತು ಡಿಸೇಲ್‌ ದರದ ಮೇಲೆ ರಾಜ್ಯ ಸರ್ಕಾರ ಮಾರಾಟ ತೆರಿಗೆ ಹೆಚ್ಚಳ ಮಾಡಿದೆ. ಹಾಗಾಗಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ 3.06 ರೂ., ಡಿಸೇಲ್‌ ಪ್ರತಿ ಲೀಟರ್‌ಗೆ 3.05 ರೂ. ಏರಿಕೆಯಾಗಲಿದೆ. ತಕ್ಷಣದಿಂದ ಹೊಸ ದರ ಜಾರಿಗೆ ಬರಲಿದೆ. ಈವರೆಗು ಪೆಟ್ರೋಲ್‌ ಮೇಲೆ ತೆರಿಗೆ ಶೇ.25.92ರಷ್ಟು … Read more

ಶಿವಮೊಗ್ಗದ ಪೆಟ್ರೋಲ್‌ ಬಂಕ್‌ ಮೇಲೆ ಚುನಾವಣ ಅಧಿಕಾರಿಗಳ ದಾಳಿ, ಕಾಂಗ್ರೆಸಿಗರ ಆಕ್ಷೇಪ, ಕೆಲಕಾಲ ಗೊಂದಲ

election-officers-raid-petrol-bunk-in-durgigudi.

SHIVAMOGGA LIVE NEWS | 4 MAY 2024 SHIMOGA : ದುರ್ಗಿಗುಡಿಯಲ್ಲಿ ಕಾಂಗ್ರೆಸ್‌ ಮುಖಂಡನ ಪೆಟ್ರೋಲ್‌ ಬಂಕ್‌ ಒಂದರ ಮೇಲೆ ಚುನಾವಣ ಅಧಿಕಾರಿಗಳು ಕಳೆದ ರಾತ್ರಿ ದಾಳಿ ನಡೆಸಿದರು. ನಗದು ವಶಕ್ಕೆ ಪಡೆಯಲಾಗಿದೆ. ಆದರೆ ಈ ವಿಚಾರವಾಗಿ ಕಾಂಗ್ರೆಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರಕರಣ ಜಯನಗರ ಠಾಣೆ ಮೆಟ್ಟಿಲೇರಿದೆ. ಪೆಟ್ರೋಲ್‌ ಬಂಕ್‌ ಮೇಲೆ ದಾಳಿ ಚುನಾವಣ ಫ್ಲೈಯಿಂಗ್‌ ಸ್ಕ್ವಾಡ್‌ ತಂಡ ಕಾಂಗ್ರೆಸ್‌ ಮುಖಂಡ ಹೆಚ್‌.ಸಿ.ಯೋಗೇಶ್‌ ಅವರಿಗೆ ಸೇರಿದ ಪೆಟ್ರೊಲ್‌ ಬಂಕ್‌ ಮೇಲೆ ಕಳೆದ ರಾತ್ರಿ … Read more

ಪೆಟ್ರೋಲ್‌ ಟ್ಯಾಂಕರ್‌ ಪಲ್ಟಿ, ಕೆಲಕಾಲ ಸ್ಥಳದಲ್ಲಿ ಭೀತಿ, ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ

Petrol-Tanker-at-Ammanagatta-cross-in-Hosanagara.

SHIVAMOGGA LIVE NEWS | 19 MARCH 2024 HOSANAGARA : ಪೆಟ್ರೋಲ್‌ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್‌ ಪಲ್ಟಿಯಾಗಿದೆ. ಪೆಟ್ರೋಲ್‌ ಬಂಕ್‌ ಸಮೀಪದಲ್ಲೆ ಘಟನೆ ಸಂಭವಿಸಿದ್ದರಿಂದ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ಹೊಸನಗರ ತಾಲೂಕು ಕೋಡೂರಿನ ಅಮ್ಮನಘಟ್ಟ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಮಂಗಳೂರಿನಿಂದ ಬಳ್ಳಾರಿಗೆ ಪೆಟ್ರೋಲ್‌ ತುಂಬಿಕೊಂಡು ಟ್ಯಾಂಕರ್‌ ತೆರಳುತ್ತಿತ್ತು. ಅಮ್ಮನಘಟ್ಟ ಕ್ರಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಘಟನೆಯಿಂದ ಈ ಮಾರ್ಗದಲ್ಲಿ ಕೆಲಕಾಲ ವಾಹನ … Read more

ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಫಾಸ್ಟ್‌ ಫುಡ್‌ ವ್ಯಾಪಾರಿ

Sagara Police Station Building

SHIVAMOGGA LIVE NEWS | 9 OCTOBER 2023 SAGARA : ಫಾಸ್ಟ್‌ ಫುಡ್‌ ವ್ಯಾಪಾರಿಯೊಬ್ಬರು ಹೊಟೇಲ್‌ ಒಂದರ ಕಾರಿಡಾರ್‌ನಲ್ಲಿ (Corridor) ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೊಟೇಲ್‌ ಸಿಬ್ಬಂದಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಸಾಗರ ನಗರದ ಬಿ.ಹೆಚ್.ರಸ್ತೆಯ ಹೊಟೇಲ್‌ ಮುಂಭಾಗ ಭಾನುವಾರ ಘಟನೆ ನಡೆದಿದೆ. ಫಾಸ್ಟ್‌ಫುಡ್‌ ತಯಾರಿಕೆ ವ್ಯಾಪಾರ ನಡೆಸುತ್ತಿದ್ದ ಬಸವರಾಜ್‌ ಆತ್ಮಹತ್ಯೆಗೆ ಯತ್ನಿಸಿದವರು. ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿರುವ ಬಸವರಾಜ್‌ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ … Read more

ಹೈವೆ ರಸ್ತೆಯಲ್ಲಿ ಪೆಟ್ರೋಲ್ ಟ್ಯಾಂಕರ್‌ ಪಲ್ಟಿ

Petrol-Tanker-Upside-at-nagara-in-Hosanagara

SHIVAMOGGA LIVE NEWS | 23 MAY 2023 HOSANAGARA : ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್‌ ಟ್ಯಾಂಕರ್‌ (Petrol Tanker) ಲಾರಿ ಪಲ್ಟಿಯಾಗಿದೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೊಸನಗರ ತಾಲೂಕಿನ ನಗರದ ದರ್ಗಾ ಕ್ರಾಸ್‌ ಬಳಿ ಘಟನೆ ಸಂಭವಿಸಿತ್ತು. ಮಂಗಳೂರಿನಿಂದ ಪೆಟ್ರೋಲ್‌ ತುಂಬಿಕೊಂಡು ಶಿವಮೊಗ್ಗಕ್ಕೆ ತೆರಳುತ್ತಿದ್ದ ಟ್ಯಾಂಕರ್‌ (Petrol Tanker) ಲಾರಿ ಅಪಘಾತಕ್ಕೀಡಾಗಿತ್ತು. ರಸ್ತೆ ಪಕ್ಕದಲ್ಲಿ ಟ್ಯಾಂಕರ್‌ ಪಲ್ಟಿಯಾಗಿತ್ತು. ಇದರಿಂದ ಪೆಟ್ರೋಲ್‌ ಸೋರಿಕೆಯಾಗುತ್ತಿತ್ತು. ಇದನ್ನೂ ಓದಿ – ಫಟಾಫಟ್‌ ನ್ಯೂಸ್‌ 8 AM … Read more

ದೇಶಾದ್ಯಂತ ಪೆಟ್ರೋಲ್, ಡಿಸೇಲ್ ದರ ತುಸು ಇಳಿಕೆ ಸಂಭವ

Petrol-Price-General-Image.jpg

SHIVAMOGGA LIVE NEWS | 1 NOVEMBER 2022 MUMBAI | ಸದ್ಯದಲ್ಲೇ ಪೆಟ್ರೋಲ್, ಡಿಸೇಲ್ ದರದಲ್ಲಿ ತುಸು ಇಳಿಕೆಯಾಗುವ (PETROL PRICE) ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ. ದರ ಏರಿಕೆ ಬಿಸಿಯನ್ನು ಕೊಂಚ ತಗ್ಗಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 2ರೂ.ನಷ್ಟು ಇಳಿಕೆಯಾಗುವ ಸಂಭವವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ (PETROL PRICE) ದರ ಪ್ರತಿ ಲೀಟರ್ … Read more