ಜೈಲ್ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್’ನಲ್ಲಿ ಗೊಂದಲವೊ ಗೊಂದಲ, ಠೇವಣಿ ಹಣ ಕೈಗೆ ಸಿಗದೆ ಗ್ರಾಹಕರಿಗೆ ಆತಂಕ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಸೆಪ್ಟೆಂಬರ್ 2019 ಠೇವಣಿ ಇಟ್ಟಿ ಹಣ ಬಿಡಿಸಲು ಬ್ಯಾಂಕ್ ಸಿಬ್ಬಂದಿ ನಿರ್ಬಂಧ ಹೇರಿದ್ದರಿಂದ, ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಯನ್ನು ತರಾಟಗೆ ತೆಗೆದುಕೊಂಡಿದ್ದಾರೆ. ಜೈಲ್ ರಸ್ತೆಯಲ್ಲಿರುವ ಪಿಎಂಸಿ ಬ್ಯಾಂಕ್’ನಲ್ಲಿ ಘಟನೆ ನಡೆದಿದೆ. ಗ್ರಾಹಕರು ಬ್ಯಾಂಕ್’ನಲ್ಲಿ ಇಟ್ಟಿರುವ ಠೇವಣಿ ಹಣವನ್ನು ಹಿಂಪಡೆಯಲು ಬ್ಯಾಂಕ್ ಸಿಬ್ಬಂದಿ ನಿರ್ಬಂಧ ಹೇರಿದ್ದಾರೆ. ಠೇವಣಿ ಹಣದಲ್ಲಿ ಕೇವಲ ಒಂದು ಸಾವಿರ ರೂ. ಮಾತ್ರ ಬಿಡಿಸಿಕೊಳ್ಳಬಹುದು ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಗೊಂದಲಕ್ಕೀಡಾದ ಗ್ರಾಹಕರು … Read more