ಪೊಲೀಸರ ಅಮಾನತು ಆದೇಶ, ಶಿವಮೊಗ್ಗದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

BJP-Protest-against-state-government.

ಶಿವಮೊಗ್ಗ: ಆರ್‌ಸಿಬಿ ವಿಜಯೋತ್ಸವ ಸಂದರ್ಭ ಕಾಲ್ತುಳಿತ ಪ್ರಕರಣ ಸಂಬಂಧ ದಕ್ಷ ಪೊಲೀಸ್ (Police) ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ನಗರ ಘಟಕದ ಕಾರ್ಯಕರ್ತರು ಇಲ್ಲಿನ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟಿರುವುದಕ್ಕೆ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನವೇ ಕಾರಣ. ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು. ಪ್ರಮುಖರಾದ ನಾಗರಾಜ್‌, ಶಿವಾನಂದ್‌, ಪ್ರದೀಪ್‌ … Read more

ಆರ್‌ಸಿಬಿ ಅಬ್ಬರ, ಶಿವಮೊಗ್ಗದಲ್ಲಿ ದೀಪಾವಳಿ ರೀತಿ ಸಂಭ್ರಮ, ಲಘು ಲಾಠಿ ಪ್ರಹಾರ, ಇಲ್ಲಿದೆ ಫಟಾಫಟ್‌ ಸುದ್ದಿ

lathi-charge-during-RCB-winning-celebration-in-Shimoga

ಶಿವಮೊಗ್ಗ: ಐಪಿಎಲ್‌ ಪಂದ್ಯಾವಳಿಯಲ್ಲಿ ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಶಿವಮೊಗ್ಗದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ನಗರದ ವಿವಿಧೆಡೆ ಯುವಕರು ರಸ್ತೆಗಿಳಿದು ಘೋಷಣೆಗಳನ್ನು ಮೊಳಗಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಗುಂಪು ಚದುರಿಸಲು ಲಘು ಲಾಠಿ (lathi charge) ಪ್ರಹಾರವು ನಡೆಯಿತು.  ಜನಪ್ರತಿನಿಧಿಗಳ ಸಂಭ್ರಮ ಆರ್‌ಸಿಬಿ ಗೆಲುವನ್ನು ಶಿವಮೊಗ್ಗದ ಜನಪ್ರತಿನಿಧಿಗಳು ಕೂಡ ಸಂಭ್ರಮಿಸಿದ್ದಾರೆ. ಸಂಸದ ರಾಘವೇಂದ್ರ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ‘ಈ ಸಲ ಕಪ್‌ ನಮ್ದೆ. ಆರ್‌ಸಿಬಿ ತಂಡಕ್ಕೆ ಶುಭಾಶಯ’ ಎಂದು ಸಾಮಾಜಿಕ ಜಾಲತಾಣದಲ್ಲಿ … Read more

ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಭೀಕರ ಅಪಘಾತ, ಶಿವಮೊಗ್ಗದಲ್ಲಿ ಯುವಕ ಸಾವು

Accident-near-usha-nursing-home-circle-in-Shimoga.

ಶಿವಮೊಗ್ಗ: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ಸಂದರ್ಭ ಅಪಘಾತವಾಗಿ (Accident) ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಉಷಾ ನರ್ಸಿಂಗ್‌ ಹೋಂ ಸರ್ಕಲ್‌ ಬಳಿ ರವೀಂದ್ರ ನಗರ ಗಣಪತಿ ದೇವಸ್ಥಾನದ ಮುಂದೆ ಕಳೆದ ರಾತ್ರಿ ಘಟನೆ ಸಂಭವಿಸಿದೆ. ವೆಂಕಟೇಶ ನಗರದ ನಿವಾಸಿ ಅಭಿ (21) ಮೃತ ದುರ್ದೈವಿ. ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಯುವಕರು ಬೈಕ್‌ ಜಾಥಾ ನಡೆಸಿದರು. ಈ ಸಂದರ್ಭ ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿದ್ದು ತೀವ್ರ ಗಾಯಗೊಂಡಿದ್ದ ಅಭಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಅಪಘಾತವಾಗುತ್ತಿದ್ದಂತೆ ಯುವಕರು ಕೂಡಲೆ ನೆರವಿಗೆ ಧಾವಿಸಿದ್ದಾರೆ. ಆದರೆ … Read more

ಶಿವಮೊಗ್ಗದಲ್ಲಿ ಆರ್‌ಸಿಬಿ ಹವಾ, ಗೆಲುವಿಗಾಗಿ ಪ್ರಾರ್ಥನೆ, ರಕ್ತದಾನ, ಹಾಲಿನ ಅಭಿಷೇಕ

Special-Pooja-and-Blood-donation-for-RCB

ಶಿವಮೊಗ್ಗ: ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಕಪ್‌ ಗೆಲ್ಲಲಿ ಎಂದು ಶಿವಮೊಗ್ಗದಲ್ಲಿ ಪೂಜೆ, ರಕ್ತದಾನ, ಹಾಲಿನ ಅಭಿಷೇಕ ನಡೆಯುತ್ತಿದೆ. ಇಂದು ಪಂದ್ಯಾವಳಿ ವೀಕ್ಷಣೆಗೆ ವಿವಿಧೆಡೆ ಬೃಹತ್‌ ಪರದೆಗಳನ್ನು ಹಾಕುವ ಸಾಧ್ಯತೆ ಇದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಟೊಯೋಟ ಸಂಸ್ಥೆಯ ಡೆಮೋ ಕಾರುಗಳ ಮಾರಾಟ, ಎಕ್ಸ್‌ಚೇಂಜ್‌ ಮೇಳ, ಯಾವಾಗ? ಎಲ್ಲಿದೆ? ಇದನ್ನೂ ಓದಿ » ಕಾರು, ಲಾರಿ ಮುಖಾಮುಖಿ ಡಿಕ್ಕಿ, ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಮತ್ತೊಂದೆಡೆ ಹೊಟೇಲ್‌, ಚಾಟ್ಸ್‌ ಸ್ಟಾಲ್‌ಗಳಲ್ಲಿ ಆರ್‌ಸಿಬಿ ಗೆದ್ದರೆ ಆಫರ್‌ಗಳನ್ನು … Read more

ಶಿವಮೊಗ್ಗದ ಮದುವೆ ರಿಸೆಪ್ಷನ್‌ನಲ್ಲಿ RCB ಪಂದ್ಯ ಲೈವ್‌, ಕುಣಿದು ಕುಪ್ಪಳಿಸಿದ ನೆಂಟರು, ಇಷ್ಟರು

RCB-Cricket-Match-live-in-Sarji-Convention-hall

SHIVAMOGGA LIVE NEWS | 19 MAY 2024 SHIMOGA : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯಾವಳಿಯಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸಿ ಆರ್‌ಸಿಬಿ (rcb vs csk) ಪ್ಲೇ ಆಫ್‌ ಪ್ರವೇಶಿಸಿದೆ. ಆರ್‌ಸಿಬಿ ಪಂದ್ಯ ಗೆಲ್ಲುತ್ತಿದ್ದಂತೆ ಜೋರು ಮಳೆ ನಡವೆ ಶಿವಮೊಗ್ಗದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಕಲ್ಯಾಣ ಮಂಟಪದಲ್ಲಿ ಆರ್‌ಸಿಬಿ ಘೋಷಣೆ ನಗರದ ಸರ್ಜಿ ಕನ್ವೆನ್‌ಷನ್‌ ಹಾಲ್‌ನಲ್ಲಿ ಬಿ.ಹೆಚ್‌.ಮಂಜುನಾಥ್‌ ಮತ್ತು ಬಿ.ಟಿ.ತನುಜಾ ಅವರ ಮದುವೆ ರಿಸೆಪ್ಷನ್‌ ನಡೆಯುತ್ತಿತ್ತು. ವಿಡಿಯೋ ವೀಕ್ಷಣೆಗೆ ಎರಡು ಪರದೆ ಹಾಕಲಾಗಿತ್ತು. … Read more

ಐಪಿಎಲ್ ಹವಾ | ಸಾಗರದಲ್ಲಿ RCB ಕಾರ್, ವಿಡಿಯೋ ವೈರಲ್, ಹೇಗಿದೆ ಕಾರು?

RCB-Car-in-Sagara-Sadguru-Santhosh

SHIVAMOGGA LIVE NEWS | 25 ಮಾರ್ಚ್ 2022 ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದೆ. ಈ ಭಾರಿಯೂ ರಾಯಲ್ ಚಾಲೆಂಜರ್ಸ್ (RCB) ಕ್ರೇಜ್ ಜೋರಾಗಿದೆ. ಅಭಿಮಾನಿಯೊಬ್ಬರು RCBಗಾಗಿ ತಮ್ಮ ಕಾರಿಗೆ ಹೊಸ ರೂಪ ಕೊಟ್ಟಿದ್ದಾರೆ. ಸಾಗರದ ಸದ್ಗುರು ಸಂತೋಷ್ ಅವರು RCB ತಂಡದ ಅಪ್ಪಟ ಅಭಿಮಾನಿ. ಇದೆ ಕಾರಣಕ್ಕೆ ತಮ್ಮ ಫಿಯಟ್ ಕಾರಿಗೆ ಹೊಸ ಲುಕ್ ಕೊಟ್ಟಿದ್ದಾರೆ. ಈ ಕಾರು ಸಾಗರದಲ್ಲಿ ಜನರ ಗಮನ ಸೆಳೆಯುತ್ತಿದೆ. ಸೆಲ್ಫಿ, ಫೋಟೊಗಾಗಿ ಜನರು ಮುಗಿಬಿದ್ದಿದ್ದಾರೆ. 1980ರ … Read more