ಶಿವಮೊಗ್ಗದ ಡೇಂಜರ್‌ ಹಂಪ್‌ಗಳಿಗೆ 24 ಗಂಟೆಯ ಗಡುವು,‌ ಬೈಕ್‌ನಲ್ಲಿ ಕಮಿಷನರ್‌ ಸಿಟಿ ರೌಂಡ್ಸ್‌

Palike-Commissioner-Mayanna-gowda-speaks-about-Danger-Road Humps-in-Shivamogga

ಶಿವಮೊಗ್ಗ: ನಗರದ ವಿವಿಧ ವಾರ್ಡ್‌ಗಳಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ಮತ್ತು ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿರುವ ಡೇಂಜರಸ್‌ ಹಂಪ್‌ಗಳನ್ನು (road humps) ಮುಂದಿನ 24 ಗಂಟೆಯೊಳಗೆ ತೆರವುಗೊಳಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಅವರು ತಿಳಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಅವರು, ಹಂಪ್‌ಗಳ ತೆರವು ಕಾರ್ಯಾಚರಣೆ ಮತ್ತು ವೈಜ್ಞಾನಿಕ ಹಂಪ್‌ಗಳ ಅಳವಡಿಕೆ ಕುರಿತು ಮಹತ್ವದ ಮಾಹಿತಿ ನೀಡಿದರು. ಕಮಿಷನರ್‌ ಏನೆಲ್ಲ ಹೇಳಿದರು? ಅವೈಜ್ಞಾನಿಕ ಹಂಪ್‌ಗಳ ಗುರುತು: ಕಳೆದ ಮೂರು ತಿಂಗಳಲ್ಲಿ ಸುಮಾರು ಶಿವಮೊಗ್ಗ ನಗರದ … Read more

ವಿದ್ಯಾನಗರ ಮೇಲ್ಸೇತುವೆ ಮುಂದೆ ಬೈಕ್‌ ಸವಾರನ ಮೇಲೆ ಹತ್ತಿದ ಲಾರಿ

Bike-and-Truck-mishap-near-vidyanagara-flyover

ಶಿವಮೊಗ್ಗ: ಲಾರಿ ಮತ್ತು ಬೈಕ್‌ ಅಪಘಾತ (Accident) ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿವಮೊಗ್ಗದ ವಿದ್ಯಾನಗರದ ಮೇಲ್ಸೇತುವೆಯ ತಿರುವಿನಲ್ಲಿ ಘಟನೆ ಸಂಭವಿಸಿದೆ. ಚನ್ನಗಿರಿ ತಾಲೂಕಿನ ರಾಘವೇಂದ್ರ ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಲಾರಿ ಮತ್ತು ಬೈಕ್‌ ಮೇಲ್ಸೇತುವೆಯಿಂದ ಒಟ್ಟಿಗೆ ಕೆಳಗೆ ಬಂದಿವೆ. ವಿದ್ಯಾನಗರದ ಕಡೆಗೆ ತಿರುವು ಪಡೆಯುವಾಗ ಲಾರಿಯ ಹಿಂಬದಿ ಚಕ್ರಗಳ ಅಡಿಗೆ ಬೈಕ್‌ ಸವಾರ ಸಿಲುಕಿದ್ದಾನೆ. ಆತನ ಮೇಲೆ ಲಾರಿ ಚಕ್ರಗಳು ಹರಿದಿದ್ದು, ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂಗೆ ಪೂರ್ವ ಸಂಚಾರ … Read more