ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿದ ವ್ಯಕ್ತಿ

Man-falls-in-front-of-running-train-in-sagara

ಸಾಗರ: ತಾಳಗುಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ರೈಲಿಗೆ (train) ವೃದ್ಧನೋರ್ವ ಸಿಲುಕಿ ತಲೆಗೆ ಗಂಭೀರ ಗಾಯವಾಗಿದೆ. ಹೊಸನಗರ ತಾಲೂಕಿನ ಮುಗುಡ್ತಿ ಗ್ರಾಮದ ನರೇಂದ್ರ ಕುಮಾ‌ರ್ (61) ಗಾಯಗೊಂಡವರು. ನರೇಂದ್ರ ಕುಮಾರ್‌ ಅವರನ್ನು ಸ್ಥಳೀಯರು ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ » ವಿಷ ಸೇವಿಸಿದ್ದ ಭದ್ರಾವತಿಯ ಗೃಹಿಣಿ ಚಿಕಿತ್ಸೆ ಫಲಿಸದೆ ಸಾವು