ರೈಲ್ವೆ ಟರ್ಮಿನಲ್’ಗಾಗಿ ಸಾಗರದಲ್ಲಿ ಉಪವಾಸ ಸತ್ಯಾಗ್ರಹ, ಕೋಟೆಗಂಗೂರಿಗೆ ಶಿಫ್ಟ್ ಮಾಡಿದ್ದೇಕೆ ಅಂತಾ ಪ್ರಶ್ನೆ

ಶಿವಮೊಗ್ಗ ಲೈವ್.ಕಾಂ | SAGARA | 15 ಜನವರಿ 2020 ತಾಳಗುಪ್ಪಕ್ಕೆ ಮಂಜೂರಾಗಿರುವ ರೈಲ್ವೆ ಟರ್ಮಿನಲ್ ಅನ್ನು ಏಕಾಏಕಿ ಶಿವಮೊಗ್ಗದ ಕೋಟೆಗಂಗೂರಿಗೆ ಸ್ಥಳಾಂತರಿಸಿರುವ ಸರ್ಕಾರದ ಕ್ರಮ ಖಂಡಿಸಿ ತಾಲೂಕು ಕಚೇರಿ ಆವರಣದಲ್ಲಿ ಮಲೆನಾಡು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸಿದರು. ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ರೈಲ್ವೆ ಕೋಚಿಂಗ್ ಟರ್ಮಿನಲ್ ಅನ್ನು ಕೋಟಿಗಂಗೂರಿಗೆ ಸ್ಥಳಾಂತರಗೊಳ್ಳಲು ಕಾರಣ ಏನು? ಈ ಬಗ್ಗೆ ಸಾರ್ವಜನಿಕರೆದುರು ಸಾಗರ ಹಾಗೂ ಸೊರಬ ಶಾಸಕರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು. ಯೋಜನೆಯೊಂದನ್ನು ಮಂಜೂರು … Read more

ಶಿವಮೊಗ್ಗದಲ್ಲಿ ಬೀದಿಗಿಳಿದ ಮಹಿಳೆಯರು, ಮೈಕ್ರೋ ಫೈನಾನ್ಸ್ ವಿರುದ್ಧ ಭಾರೀ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | SHIMOGA | 16 ಡಿಸೆಂಬರ್ 2019 ಮೈಕ್ರೋ ಫೈನಾನ್ಸ್’ಗಳು ನೀಡಿದ ಕಾನೂನುಬಾಹಿರ ಸಾಲ ಮನ್ನಾ ಮಾಡಬೇಕು ಹಾಗೂ ಮೈಕ್ರೋ ಫೈನಾನ್ಸ್’ಗಳ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ  ನೇತೃತ್ವದಲ್ಲಿ ಸಂತ್ರಸ್ಥ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಹಲವು ಗ್ರಾಮಗಳಲ್ಲಿ ರಾಷ್ಟ್ರೀಯ ಬ್ಯಾಂಕುಗಳ ಶಾಖೆಗಳಿದ್ದರೂ ಸಹ ಆರ್ಥಿಕ ಕಾರ್ಯವ್ಯಾಪ್ತಿಯಲ್ಲಿ ಸಾಲದ ಅಗತ್ಯ ಇರುವ ಬಡ ಜನತೆಗೆ ಸಾಲ ನೀಡುತ್ತಿಲ್ಲ. ಅದರ ಪರಿಣಾಮ ಜನರು ಸುಲಭವಾಗಿ ಮೈಕ್ರೋ ಫೈನಾನ್ಸ್’ಗಳ … Read more

SAGARA | ಸಾಗರಕ್ಕೆ ಸಿಎಂ ಯಡಿಯೂರಪ್ಪ ಭೇಟಿ, ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನ, ಯುವಕರ ಬಂಧನ

ಶಿವಮೊಗ್ಗ ಲೈವ್.ಕಾಂ | SAGARA | 08 ಡಿಸೆಂಬರ್ 2019 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ತೋರಿಸಲು ಯತ್ನಿಸಿದ ಯುವಕರ ಗುಂಪನ್ನು ಸಾಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕಾಗಿ ಇವತ್ತು ಸಿಎಂ ಯಡಿಯೂರಪ್ಪ ಸಾಗರಕ್ಕೆ ಭೇಟಿ ನೀಡಿದ್ದಾರೆ. ಸಾಗರ ಪಟ್ಟಣದಲ್ಲಿ ಸಿಎಂ ಕಾರು ಅಡ್ಡಗಟ್ಟಿ ಕಪ್ಪು ಬಾವುಟ ತೋರಿಸಲು ಯುವಕರ ಗುಂಪು ಸಿದ್ಧವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲಿಸರು ಯುವಕರನ್ನು ಬಂಧಿಸಿದ್ದಾರೆ. ಕಪ್ಪು ಬಾವುಟ ಪ್ರದರ್ಶನಕ್ಕೆ ಕಾರಣವೇನು? ಬಂಧಿತ ಯುವಕರು ಟಿಪ್ಪು ಸಹಾರ ಕಮಿಟಿ ಸದಸ್ಯರಾಗಿದ್ದಾರೆ. ರಾಜ್ಯದಲ್ಲಿ … Read more

SAGARA | ಇನ್ನೂ ಆರಂಭವಾಗದ ಇಂದಿರಾ ಕ್ಯಾಂಟೀನ್, ಜೋಗ ರಸ್ತೆಯಲ್ಲಿ ಮಾಜಿ ಮಿನಿಸ್ಟರ್ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | SAGARA | 05 ಡಿಸೆಂಬರ್ 2019 ಬಿಜೆಪಿ ಸರ್ಕಾರ ಮತ್ತು ಶಾಸಕರ ನಿರ್ಲಕ್ಷ್ಯದಿಂದಾಗಿ ಈವರೆಗೂ ಸಾಗರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿಲ್ಲ ಎಂದು ಆರೋಪಿಸಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಜೋಗ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಇಂದಿರಾ … Read more

ಕಲ್ಲು ಗಣಿಗಾರಿಕೆಗೆ ಭಾರೀ ವಿರೋಧ, ಗಣಿ ಪ್ರದೇಶಕ್ಕೆ ಸಾಗರ ಎಸಿ ನೇತೃತ್ವದ ಟೀಂ ಭೇಟಿ

ಶಿವಮೊಗ್ಗ ಲೈವ್.ಕಾಂ | RIPPONPETE | 26 ಅಕ್ಟೋಬರ್ 2019 ಹುಂಚಾ ಸರ್ವೇ ನಂ. 69ರಲ್ಲಿ ನಡೆಸಲು ಉದ್ದೇಶಿಸಿರುವ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಸಾಗರ ಉಪವಿಭಾಗಾಧಿಕರಿ ಡಾ.ಎಲ್.ನಾಗರಾಜ್ ಅವರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾಗರ ಅರಣ್ಯ ಇಲಾಖೆ ಅಧಿಕಾರಿಗಳು, ಹೊಸನಗರ ತಹಸೀಲ್ದಾರ್‌ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಗಣಿಗಾರಿಕೆ ನಡೆಸದಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಜಿಲ್ಲಾಧಿಕಾರಿಗೆ ಸೂಕ್ತ ವರದಿ ನೀಡುವಂತೆ ಒತ್ತಾಯಿಸಿದರು. ಗಣಿಗಾರಿಕೆ ವಿರೋಧಿಸಿ ಕಳೆದ … Read more

ಎಲ್.ಬಿ.ಕಾಲೇಜು ವಿದ್ಯಾರ್ಥಿಯಲ್ಲಿ ಅತ್ಯಂತ ಅಪರೂಪದ ರಕ್ತ, ಬೆಂಗಳೂರಿನಿಂದ ಹುಡುಕಿ ಬಂತು ರೋಗಿಯ ಕುಟುಂಬ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 23 ಅಕ್ಟೋಬರ್ 2019 ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಸಾಗರದ ಎಲ್.ಬಿ.ಕಾಲೇಜು ವಿದ್ಯಾರ್ಥಿಯೊಬ್ಬರು ಅತ್ಯಂತ ಅಪರೂಪದ ಬಾಂಬೆ ಗ್ರೂಪ್ ರಕ್ತವನ್ನು ದಾನ ಮಾಡಿದ್ದಾರೆ. ಈ ಗ್ರೂಪ್’ನ ರಕ್ತ ತುಂಬಾನೆ ಅಪರೂಪ ಎಂದು ವೈದ್ಯರು ತಿಳಿಸಿದ್ದಾರೆ. ಸಾಗರದ ಎಲ್.ಬಿ.ಕಾಲೇಜಿನಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆದಾಗ ಬಿಎಸ್ಸಿ ವಿದ್ಯಾರ್ಥಿ ಉದಯ್ ಕುಮಾರ್ ಅವರ ರಕ್ತದ ಮಾದರಿ ಅತ್ಯಂತ ಅಪರೂಪದ್ದು ಎಂದು ತಿಳಿದು ಬಂದಿದೆ. ಇದರ ಮಾಹಿತಿಯನ್ನು ಸಂಕಲ್ಪ ಆನ್’ಲೈನ್ ಎಂಬ ವೆಬ್’ಸೈಟ್’ನಲ್ಲಿ ಪ್ರಕಟಿಸಲಾಗಿತ್ತು. ಈ ಮಾಹಿತಿ … Read more

ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯ ವರ್ತನೆ, ಬಸ್ ಸ್ಟಾಂಡ್’ನಲ್ಲೇ ಯುವಕನಿಗೆ ಬಿತ್ತು ಧರ್ಮದೇಟು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 22 ಅಕ್ಟೋಬರ್ 2019 ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ಬಸ್ಸಿನಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಯುವಕನೊಬ್ಬ ಕಿರುಕುಳ ನೀಡಿದ್ದಾನೆ. ಸಾಗರದಿಂದ ಆನಂದಪುರಕ್ಕೆ ಬರುವ ಬಸ್ಸಿನಲ್ಲಿ ಘಟನೆ ನಡೆದಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಆನಂದಪುರದಲ್ಲಿ ಯುವಕನನ್ನು ಬಸ್ಸಿನಿಂದ ಕೆಳಗಿಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಯುವಕ ಮದ್ಯಪಾನ ಮಾಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೋಮವಾರ ಸಂಜೆ ಘಟನೆ ನಡೆದಿದ್ದು, … Read more

ಲಿಂಗನಮಕ್ಕಿ ಡ್ಯಾಂನ 9 ಗೇಟ್ ಓಪನ್, ಮತ್ತೆ ನಳನಳಿಸುತ್ತಿದೆ ಜೋಗ್ ಫಾಲ್ಸ್

191019 Jog Falls Full 1

ಶಿವಮೊಗ್ಗ ಲೈವ್.ಕಾಂ | SAGARA | 19 ಅಕ್ಟೋಬರ್ 2019 ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದರಿಂದ, ಒಂಭತ್ತು ಗೇಟುಗಳನ್ನು ತೆಗೆದು ನೀರು ಹೊರಬಿಡಲಾಗುತ್ತಿದೆ. ಇದರಿಂದ ಜೋಗ ಜಲಪಾತ ಮೈದುಂಬಿ ಹರಿಯುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 20,869 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಒಂಭತ್ತು ಗೇಟುಗಳನ್ನು ತೆಗೆದು 15 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದಿಂದ ನೀರು ಹೊರಬಿಡುತ್ತಿರುವುದಿರಂದ ಜೋಗ ಜಲಪಾತ ಮತ್ತೆ ನಳನಳಿಸುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ಇವತ್ತು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ವೀಕೆಂಡ್ ಆಗಿದ್ದರಿಂದ ಪ್ರವಾಸಿಗರ ಸಂಖ್ಯೆ … Read more

ಆಯತಪ್ಪಿ ಕೆರೆಗೆ ಬಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುತ್ರ ಕೊನೆಯುಸಿರು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 14 ಅಕ್ಟೋಬರ್ 2019 ಆಯತಪ್ಪಿ ಕೆರೆ ಬಿದ್ದು ಯುವಕನೊಬ್ಬ ಕೊನೆಯುಸಿರೆಳೆದಿದ್ದಾನೆ. ಸಾಗರ ತಾಲೂಕಿನ ಹೊಸಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಗೌತಮ್ (21) ಮೃತ ಯುವಕ. ಗೆಳೆಯರೊಂದಿಗೆ ಭಾನುವಾರ ಮಧ್ಯಾಹ್ನ ಗುಮ್ಮನಹಳ್ಳಿ ಕೆರೆಗೆ ಹೋಗಿದ್ದಾಗ ಘಟನೆ ನಡೆದಿದೆ. ಆಯತಪ್ಪಿ ನೀರಿಗೆ ಬಿದ್ದಿರುವ ಶಂಕೆ ಇದೆ. ಗೌತಮ್, ಗೌತಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ರೇವಪ್ಪ ಅವರ ಪುತ್ರ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.   ಶಿವಮೊಗ್ಗ ಲೈವ್.ಕಾಂ … Read more

ಸಿಗಂದೂರು ಲಾಂಚ್ ಬಳಿ ನಕಲಿ ಟೋಲ್ ರಶೀದಿ, ಸರ್ಕಾರದ ಹಣ ಗುಳಂ, ಎಸಿಬಿ ತನಿಖೆ ಸಾಧ್ಯತೆ

Sigandur Launch with people 1

ಶಿವಮೊಗ್ಗ ಲೈವ್.ಕಾಂ | ಸಾಗರ | 27 ಸೆಪ್ಟೆಂಬರ್ 2019 ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿ ಲಾಂಚ್ ಟೋಲ್ ಮತ್ತು ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರದ ತನಿಖೆಯನ್ನು ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಬೇಕು ಎಂದು ಸಾಗರ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಿಗಂದೂರಿಗೆ ತೆರಳುವ ಪ್ರವಾಸಿ ವಾಹನಗಳಿಗೆ ಶರಾವತಿ ಹಿನ್ನೀರು ಭಾಗದಲ್ಲಿ ಕಳಸವಳ್ಳಿಯಲ್ಲಿ ಟೋಲ್ ಸಂಗ್ರಹಿಸಲಾಗುತ್ತಿತ್ತು. ಇದರಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸರ್ಕಾರಕ್ಕೆ ಸೇರಬೇಕಾದ ಲಕ್ಷಾಂತರ … Read more