ಸಹ್ಯಾದ್ರಿ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ, ದಿನಾಂಕ ಪ್ರಕಟ, ಯಾವಾಗ? ಎಲ್ಲಿ?

Sahyadri-Science-college-principal-Rajeshwari.

ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ನ. 22ರ ಬೆಳಗ್ಗೆ 10ರಿಂದ ಕಾಲೇಜಿನ  (College) ಸಭಾಂಗಣದಲ್ಲಿ ‘ನಮ್ಮ ಸಹ್ಯಾದ್ರಿ, ನಮ್ಮ -2025’ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜೇಶ್ವರಿ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಹುದ್ದೆ, ಸ್ವಂತ ಉದ್ಯಮ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿದ್ದಾರೆ. ಈ ಎಲ್ಲರ ಅಭಿಪ್ರಾಯದಂತೆ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದೆ … Read more

ಸಹ್ಯಾದ್ರಿ ಕಾಲೇಜು ಹಿಂಭಾಗ ಪೊಲೀಸರ ದಾಳಿ, ಭದ್ರಾವತಿಯ ನಾಲ್ವರು ಅರೆಸ್ಟ್‌

Police-Raid-and-Arrest-youths-near-sahyadri-college

SHIVAMOGGA LIVE NEWS | 17 JUNE 2024 SHIMOGA : ಖಚಿತ ಮಾಹಿತಿ ಮೇರೆಗೆ ಸಹ್ಯಾದ್ರಿ ಕಾಲೇಜು ಹಿಂಭಾಗ ಮತ್ತೂರು ರಸ್ತೆಯಲ್ಲಿ ದಾಳಿ (Raid) ನಡೆಸಿದ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಇವರಿಂದ 1.35 ಲಕ್ಷ ರೂ. ಮೌಲ್ಯದ 1 ಕೆಜಿ 65 ಗ್ರಾಂ ತೂಕದ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಸಿಇಎನ್‌ ಠಾಣೆ ಪೊಲೀಸರು ದಾಳಿ ನಡೆಸಿ ಭದ್ರಾವತಿಯ ತಡಸ ಗ್ರಾಮದ ಸೈಯದ್ ಸಲೇಹ (28) ಅನ್ವರ್‌ ಕಾಲೋನಿಯ ಮಹಮದ್ … Read more

ಶಿವಮೊಗ್ಗ ಚುನಾವಣೆ, ಸ್ಟ್ರಾಂಗ್‌ ರೂಂ ಸೇರಿದ ಮತ ಯಂತ್ರ, ಎಲ್ಲಿದೆ ಸ್ಟ್ರಾಂಗ್‌ ರೂಂ? ಹೇಗಿದೆ ವ್ಯವಸ್ಥೆ?

EVM-taken-to-de-mustering-centers-in-Shimoga

SHIVAMOGGA LIVE NEWS | 8 MAY 2024 ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿದೆ. ಮತಯಂತ್ರಗಳು ಸ್ಟ್ರಾಂಗ್‌ ರೂಂ ಸೇರಿವೆ. ಜೂನ್‌ 4ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಸ್ಟ್ರಾಂಗ್‌ ರೂಂನಲ್ಲಿ ಮತಯಂತ್ರಗಳು ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಮತಯಂತ್ರಗಳನ್ನು ಆಯಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಿದ್ದ ಮಸ್ಟರಿಂಗ್‌ ಕೇಂದ್ರಗಳಿಗೆ ಮರಳಿ ತರಲಾಯಿತು. ಅಲ್ಲಿ ಡಿಮಸ್ಟರಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್‌ ರೂಂಗೆ ತರಲಾಗಿದೆ. ಬೆಳಗಿನ ಜಾವದವರೆಗೂ ಸ್ಟ್ರಾಂಗ್‌ ರೂಂನಲ್ಲಿ ಮತಯಂತ್ರಗಳನ್ನು … Read more

ವರ್ಷಗಳಿಂದ ಇದ್ದ ಗುಂಡಿಗಳೆಲ್ಲ ದಿಢೀರ್‌ ಮಾಯ, ಜನರ ಮನವಿಗೆ ಕ್ಯಾರೆ ಅನ್ನಲಿಲ್ಲ, ಪಿಎಂಗಾಗಿ ರಸ್ತೆ ಜಗಮಗ

Potholes-closed-in-Shimoga-BH-Road-ahead-of-PM-Visit

SHIVAMOGGA LIVE NEWS | 17 MARCH 2024 SHIMOGA : ವರ್ಷಗಳಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಗುಂಡಿಗಳೆಲ್ಲ ಪ್ರಧಾನಿ ಭೇಟಿ ಹಿನ್ನೆಲೆ ಬಂದ್‌ ಆಗಿವೆ. ಜನರು ಹಲವು ಬಾರಿ ಬೇಡಿಕೊಂಡರೂ ಗುಂಡಿ ಮುಚ್ಚಿಸದ ಅಧಿಕಾರಿಗಳು ಈಗ ತರಾತುರಿಯಲ್ಲಿ ಡಾಂಬಾರು ಸುರಿಸುತ್ತಿದ್ದಾರೆ. ಮಾ.18ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ಅಲ್ಲಮಪ್ರಭು ಮೈದಾನದವರೆಗೆ (ಫ್ರೀಡಂ ಪಾರ್ಕ್‌) ಕಾರಿನಲ್ಲಿ ತೆರಳಲಿದ್ದಾರೆ. ಅವರು ತೆರಳುವ ಮಾರ್ಗದುದ್ದಕ್ಕು ಇದ್ದ ಗುಂಡಿಗಳ ದಿಢೀರ್‌ ಕಾಣೆಯಾಗಿವೆ. … Read more

ಅತಿಥಿ ಉಪನ್ಯಾಸಕನಿಂದ ಲೈಂಗಿಕ ಕಿರುಕುಳ ಆರೋಪ, ರಸ್ತೆಗಿಳಿದ ವಿದ್ಯಾರ್ಥಿಗಳು, ಬಂಧನಕ್ಕೆ ಬಿಗಿಪಟ್ಟು

050123 Students protest against guests lecturer

SHIVAMOGGA LIVE NEWS | 5 JANUARY 2023 SHIMOGA : ವಿದ್ಯಾರ್ಥಿನಿಯರಿಗೆ ಅತಿಥಿ ಉಪನ್ಯಾಸಕನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು‌. ದಿಢೀರ್ ರಸ್ತೆ ತಡೆ ನಡೆಸಿ, ಧರಣಿ ಮಾಡಿದರು‌. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಅತಿಥಿ ಉಪನ್ಯಾಸಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆಪಾದಿಸಿದರು‌. ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿ ಸಂಘಟನೆ ಬೆಂಬಲ ನೀಡಿತ್ತು. ವಿದ್ಯಾರ್ಥಿಗಳ ಆರೋಪ ಏನು? ಈ ಅತಿಥಿ ಉಪನ್ಯಾಸಕ ತರಗತಿಯಿಂದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿ, … Read more

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳಿಂದ ರಸ್ತೆ ತಡೆ, ಮಾತು ತಪ್ಪಿದ ವಿವಿ ಆಡಳಿತದ ವಿರುದ್ಧ ಗರಂ

Sahyadri-College-Student-protest-in-Shimoga-BH-Road.

SHIVAMOGGA LIVE NEWS | 27 NOVEMBER 2023 SHIMOGA : ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರು ಕೊಟ್ಟ ಮಾತು ತಪ್ಪಿದ್ದಾರೆ. ಇದರಿಂದ ತರಗತಿಗಳು ನಡೆಯದೆ ತಮ್ಮ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತಿದೆ ಎಂದು ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟಿಸಿದರು. ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸಹ್ಯಾದ್ರಿ ಕಾಲೇಜು ಮುಂಭಾಗ ಬಿ.ಹೆಚ್‌.ರಸ್ತೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿ ಕುವೆಂಪು ವಿವಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿ.ಹೆಚ್‌.ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ವಿದ್ಯಾರ್ಥಿಗಳು … Read more

ಸಹ್ಯಾದ್ರಿ ಕಾಲೇಜು ಬಳಿ ತಪ್ಪಿದ ಅನಾಹುತ, ಕಾರಿನಲ್ಲಿದ್ದವರು ತಕ್ಷಣ ಎಸ್ಕೇಪ್‌

Swift-Car-near-Shimoga-Sahyadri-College-in-Mattur-Road

SHIVAMOGGA LIVE NEWS | 15 AUGUST 2023 SHIMOGA : ಅಪಘಾತಪಡಿಸಿ ಪರಾರಿಯಾಗುವ ವೇಳೆ ಕಾರೊಂದು ಚಾಲಕನ (Driver) ನಿಯಂತ್ರಣ ತಪ್ಪಿ ಮೈಲಿಗಲ್ಲಿನ (Mile Stone) ಮೇಲೆ ಹತ್ತಿ ನಿಂತಿದೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು (Sahyadri College) ಹಾಸ್ಟೆಲ್‌ ಪಕ್ಕದ ಮತ್ತೂರು ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು ಪರಾರಿಯಾಗಿದ್ದು, ಒಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಪಥ ಸಂಚಲನಕ್ಕೆ ಮಹಿಳಾ ಐಪಿಎಸ್‌ ಅಧಿಕಾರಿ … Read more

ಆಗುಂಬೆಯಲ್ಲಿ ಎಷ್ಟಾಗಿದೆ ಮಳೆ? | ಸೊರಬ, ತೀರ್ಥಹಳ್ಳಿ ಮಿನಿಸ್ಟರ್‌ ಭೇಟಿ | ರೈತ ಆತ್ಮಹತ್ಯೆ | ಮತ್ತಷ್ಟು ಫಟಾಫಟ್‌ ಸುದ್ದಿ

250623 Rain At agumbe Madhu Bangarappa to visit soraba thirthahalli

SHIVAMOGGA LIVE | 25 JUNE 2023 ಆಗುಂಬೆಯಲ್ಲಿ ಅತಿ ಹೆಚ್ಚು ಮಳೆ AGUMBE : ಶಿವಮೊಗ್ಗ ಜಿಲ್ಲೆಯಲ್ಲಿ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದೆ (Monsoon Rain). ಕಳೆದ 24 ಗಂಟೆ ಅವಧಿಯಲ್ಲಿ 57.50 ಮಿ.ಮೀ ಮಳೆಯಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಆಗುಂಬೆಯಲ್ಲಿ ಅತಿ ಹೆಚ್ಚು ಮಳೆಯಾಗುವ  (Monsoon Rain) ಕಾರಣ ಇದನ್ನು ದಕ್ಷಿಣ ಭಾರತದ ಚಿರಾಪೂಂಜಿ ಎಂದು ಕರೆಯಲಾಗುತ್ತದೆ. ಆದರೆ ವರ್ಷದಿಂದ ವರ್ಷಕ್ಕೆ ಆಗುಂಬೆಯಲ್ಲಿ ಮಳೆ ಪ್ರಮಾಣ ಕ್ಷೀಣವಾಗುತ್ತಿದೆ … Read more

ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಸುತ್ತಮುತ್ತ ಮೇ 13ರ ಬೆಳಗ್ಗೆಯಿಂದ ನಿಷೇಧಾಜ್ಞೆ, ಯಾಕೆ?

Shimoga-DC-Dr-Selvamani-IAS

SHIVAMOGGA LIVE NEWS | 7 MAY 2023 SHIMOGA : ವಿಧಾನಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಸುತ್ತಮುತ್ತ ಮೇ 13ರ ಬೆಳಗ್ಗೆ 6 ಗಂಟೆಯಿಂದ ಮೇ 14ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ (Prohibition) ವಿಧಿಸಲಾಗಿದೆ. ಮೇ 13ರಂದು ಮತ ಎಣಿಕ ಕಾರ್ಯದ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಈ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ – ಮನೆ ಬಾಗಿಲು ಹಾಕಿದಂತೆಯೇ ಇತ್ತು, ರೂಮಿಗೆ ಹೋದಾಗ ಮಾಲೀಕನ ಕುಟುಂಬಕ್ಕೆ ಕಾದಿತ್ತು ಶಾಕ್ … Read more

ಹೊಳೆ ಬಸ್‌ ಸ್ಟಾಪ್‌, ಸಹ್ಯಾದ್ರಿ ಕಾಲೇಜು ಸುತ್ತಮುತ್ತ ಅಧಿಕಾರಿಗಳು, ಪೊಲೀಸರಿಂದ ದಾಳಿ, 19 ಕೇಸ್‌ ದಾಖಲು

Cotpa-Act-Raid-in-Shimoga-Hole-bus-stop-and-near-sahyadri-college

SHIVAMOGGA LIVE NEWS | 26 APRIL 2023 SHIMOGA : ಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಿವಿಧೆಡೆ ಪೊಲೀಸರು ಮತ್ತು ಅಧಿಕಾರಿಗಳು ದಾಳಿ (Cotpa Raid) ನಡೆಸಿ 19 ಪ್ರಕರಣಗಳನ್ನು ದಾಖಲಿಸಿ 2500 ರೂ. ದಂಡ ವಿಧಿಸಿದ್ದಾರೆ. ಹೊಳೆ ಬಸ್‌ ನಿಲ್ದಾಣ ಮತ್ತು ಸಹ್ಯಾದ್ರಿ ಕಾಲೆಜು ಸುತ್ತಮುತ್ತ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳು, ಗೂಡಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಕೋಟ್ಪಾ (Cotpa Raid) ಕಾಯ್ದೆ ಉಲ್ಲಂಘನೆ ಮಾಡಿದ್ದಕ್ಕೆ 19 ಪ್ರಕರಣ ದಾಖಲಿಸಿ 2500 ರೂ. ದಂಡ … Read more