ಸಕ್ರೆಬೈಲು ಆನೆ ಬಿಡಾರದ ಏಕದಂತ ಇನ್ನಿಲ್ಲ, ಸಾವಿಗೆ ಕಾರಣವೇನು?

201020 Elephant Ekadantha Dies at Sakrebyle 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಅಕ್ಟೋಬರ್ 2020 ಎರಡು ದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಶಿವಮೊಗ್ಗ ಸಕ್ರೆಬೈಲಿನ ಬಿಡಾರದ ಆನೆ ಏಕದಂತ ಇವತ್ತು ಮೃತಪಟ್ಟಿದೆ. ಆನೆಗೆ 35 ವರ್ಷ ವಯಸ್ಸಾಗಿತ್ತು. ಎರಡು ದಿನದಿಂದ ಏಕದಂತ ಆನೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಇವತ್ತು ಶೆಟ್ಟಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಏಕದಂತ ಆನೆ ಮೃತಪಟ್ಟಿದೆ. ಎರಡು ವರ್ಷದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಸಕ್ರೆಬೈಲು ಆನೆ ಬಿಡಾರದಲ್ಲಿ ಇದನ್ನು ಪಳಗಿಸಲಾಗಿತ್ತು. ಅನಾರೋಗ್ಯದ ಹಿನ್ನೆಲೆ ಸಕ್ರೆಬೈಲು … Read more

SHIMOGA NEWS | ವಿಚಾರಣೆಗೆ ಕರೆಸಿಕೊಂಡರು, ಹಿಗ್ಗಾಮುಗ್ಗಾ ಥಳಿಸಿದರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಫಾರೆಸ್ಟ್ ಗಾರ್ಡ್ ಅಡ್ಮಿಟ್

ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019 ಪ್ರಕರಣವೊಂದರ ವಿಚಾರಣೆಗಾಗಿ ಕರೆದು ಅರಣ್ಯ ವೀಕ್ಷಕನೊಬ್ಬನ ಮೇಲೆ ಅರಣ್ಯ ಸಂಚಾರಿ ದಳದ ಗಾರ್ಡ್ ಒಬ್ಬರು ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಳೆದ ಐದು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಫಾರೆಸ್ಟ್ ವಾಚರ್ ಆಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ್ ಎಂಬಾತನೇ ಹಲ್ಲೆಗೀಡಾದ ವ್ಯಕ್ತಿ. ನಾಲ್ಕು ದಿನಗಳ ಹಿಂದೆ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಮರಕಡಿತಲೆ ಸಂಬಂಧ ಶಿವಮೊಗ್ಗ-ತೀರ್ಥಹಳ್ಳಿ ಹೆದ್ದಾರಿಯಲ್ಲಿನ ಗಾಜನೂರು ಬಳಿಯ ಚೆಕ್ ಪೋಸ್ಟ್ ವಾಚರ್‌’ನನ್ನು … Read more

ಮನುಷ್ಯರನ್ನು ಕಂಡರೆ ಅಟ್ಟಾಡಿಸುತ್ತೆ, ಸಕ್ರೆಬೈಲು ಬಿಡಾರಕ್ಕೆ ಬಂತು ಮರಿ ಆನೆ, ಹೇಗಿದೆ ನೋಡಿ ನೂತನ ಸದಸ್ಯ

021218 Elephant from Sakaleshpura to Sakrebyle 1

ಶಿವಮೊಗ್ಗ ಲೈವ್.ಕಾಂ | 2 ಡಿಸೆಂಬರ್ 2018 ತಾಯಿಯ ಅಗಲಿಕೆಯಿಂದ ಅನಾಥವಾಗಿದ್ದ ಒಂದೂವರೆ ವರ್ಷದ ಆನೆ ಮರಿಯನ್ನು ಇಲ್ಲಿನ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆ ತರಲಾಗಿದೆ. ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ ಬಳಿ ಕೆಸರಿನಲ್ಲಿ ಸಿಕ್ಕು ಮೃತಪಟ್ಟ ಕಾರಣ, ಮರಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಅರಣ್ಯಾಕಾರಿಗಳು ಶಿವಮೊಗ್ಗದಿಂದ ಗಂಗಾ ಆನೆಯನ್ನು ಕರೆತಂದು ಮರಿಯನ್ನು ಸಕ್ರೆಬೈಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಗಂಗಾ ಆನೆಯನ್ನೇ ತನ್ನ ತಾಯಿಯೆಂದು ತಿಳಿದು ಮರಿ ಆನೆ, ಸಕ್ರೆಬೈಲಿನತ್ತ ಹೆಜ್ಜೆ ಹಾಕಿದೆ. ಈವರೆಗೂ ಕಾಡಿನಲ್ಲಿದ್ದ ಕಾರಣ, ಮರಿ ಆನೆ … Read more