ಫಲಿತಾಂಶಕ್ಕೂ ಮೊದಲೇ ಮತದಾರರಿಗೆ ಅಭಿನಂದನೆ, ಶಿಕಾರಿಪುರದಿಂದಲೇ ಗೆಲುವಿನ ಶಿಕಾರಿ ಅಂದ್ರು ಮೈತ್ರಿ ಅಭ್ಯರ್ಥಿ

ಶಿವಮೊಗ್ಗ ಲೈವ್.ಕಾಂ | 10 ಮೇ 2019 ನನಗೆ ಶಿಕಾರಿಪುರ ಮತ್ತು ಸೊರಬ ಎರಡು ಕಣ್ಣುಗಳಿದ್ದಂತೆ. ಶಿಕಾರಿಪುರದಿಂದಲೇ ನನ್ನ ಗೆಲುವಿನ ಶಿಕಾರಿ ಆರಂಭವಾಗಿದೆ. ಹಾಗಾಗಿಯೇ ಫಲಿತಾಂಶಕ್ಕೂ ಮೊದಲೇ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು. ಶಿಕಾರಿಪುರದ ಗುರುಭವನದಲ್ಲಿ ಜೆಡಿಎಸ್, ಕಾಂಗ್ರೆಸ್ ಆಯೋಜಿಸಿದ್ದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಸುಳ್ಳು ಹೇಳುವವರು ಸೋಲುತ್ತಾರೆ. ಸತ್ಯ ಗೆಲ್ಲುತ್ತದೆ. ಇವರ ಸರ್ವಾಧಿಕಾರಿ ಧೋರಣೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಅವೆಲ್ಲ ನನಗೆ ಮತಗಳಾಗಿವೆ … Read more