ಶಿವಮೊಗ್ಗದ ರೈತನಿಗೆ ಲಕ್ಷ ಲಕ್ಷ ಮೋಸ, ಆಗಿದ್ದೇನು?

Online-Fraud-In-Shimoga

ಶಿವಮೊಗ್ಗ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದ ಅಡಿ ಮನೆ ಕಟ್ಟಲು ಸಾಲ (Housing Loan) ಕೊಡಿಸುವುದಾಗಿ ನಂಬಿಸಿ ರೈತರೊಬ್ಬರಿಗೆ ₹3,36,000 ವಂಚಿಸಲಾಗಿದೆ. ಮೋಸ ಆಗಿದ್ದು ಹೇಗೆ? ಅಕ್ಟೋಬರ್ 27ರಂದು ಶಿವಮೊಗ್ಗದ ರೈತರೊಬ್ಬರ (Farmer) ಮೊಬೈಲ್‌ಗೆ ಅಪರಿಚಿತ ನಂಬರ್‌ಗಳಿಂದ ವಾಟ್ಸ್‌ಆ್ಯಪ್ ಮೆಸೇಜು (Whatsapp) ಮತ್ತು ಕರೆಗಳು ಬಂದಿದ್ದವು. ವಂಚಕರ ಪೈಕಿ ಒಬ್ಬರು ತಮ್ಮನ್ನು ಪ್ರಿಯಾ ಕುಮಾರಿ ಎಂದು ಪರಿಚಯಿಸಿಕೊಂಡು, ಮನೆ ಕಟ್ಟಲು ₹20 ಲಕ್ಷ ಸಾಲ (Loan) ನೀಡುವುದಾಗಿ ಹೇಳಿದ್ದರು. ಸಾಲ ಮಂಜೂರಾಗುತ್ತದೆ ಎಂದು ನಂಬಿಸಿ, ವಂಚಕರು … Read more

ಶಿವಮೊಗ್ಗದ ಮಹಿಳೆಗೆ 10 ದಿನದಲ್ಲಿ ₹11,46,273 ಮೋಸ, ಆಗಿದ್ದೇನು?

Instagram-Cyber-Crime-Shimoga-Station.

ಶಿವಮೊಗ್ಗ: ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಸಂಸ್ಥೆಯಲ್ಲಿ ವರ್ಕ್‌ ಫ್ರಂ ಹೋಮ್‌ ಅವಕಾಶವಿದ್ದು, ವಿವಿಧ ಟಾಸ್ಕ್‌ ಪೂರೈಸಿದರೆ ಅತ್ಯಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ₹11,46,273 ವಂಚಿಸಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಬಲೆಗೆ ಕೆಡವಿಕೊಂಡರು ಶಿವಮೊಗ್ಗದ ಮಹಿಳೆ ಇನ್‌ಸ್ಟಾಗ್ರಾಂ ವಿಕ್ಷಿಸುತ್ತಿದ್ದಾಗ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ವರ್ಕ್‌ ಫ್ರಂ ಹೋಮ್‌ ಅವಕಾಶವಿದೆ ಎಂಬ ಜಾಹೀರಾತು ಗಮನಿಸಿದ್ದರು. ಇದನ್ನು ಕ್ಲಿಕ್‌ ಮಾಡಿದಾಗ ವಿವಿಧ ಟಾಸ್ಕ್‌ ಪೂರೈಸಿ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ನಂಬಿದ ಮಹಿಳೆ ಹಣ ಪಾವತಿಸಿ ವಿವಿಧ ಟಾಸ್ಕ್‌ ಪೂರೈಸಿದ್ದಾರೆ. … Read more

ಒಂದೇ ಒಂದು ಮೆಸೇಜ್‌ ಮಾಡಿ ₹3.96 ಲಕ್ಷ ಕಳೆದುಕೊಂಡ ಭದ್ರಾವತಿ ವ್ಯಕ್ತಿ

Bhadravathi-Old-Town-Police-Station

ಭದ್ರಾವತಿ: ಹಣ ಡಬಲ್‌ (Money) ಆಗಲಿದೆ ಎಂದು ಟೆಲಿಗ್ರಾಂ ಅಪ್ಲಿಕೇಷನ್‌ನಲ್ಲಿ ಬಂದ ಮೆಸೇಜ್‌ ನಂಬಿ ಭದ್ರಾವತಿಯ ವ್ಯಕ್ತಿಯೊಬ್ಬರು ₹3.96 ಲಕ್ಷ ಕಳೆದಕೊಂಡಿದ್ದಾರೆ. ಹೇಗಾಯ್ತು ವಂಚನೆ? ಭದ್ರಾವತಿ ವ್ಯಕ್ತಿಯೊಬ್ಬರು ಮಗ ಮತ್ತು ಅಳಿಯನ ಜೊತೆಗೆ ಮಾತನಾಡುತ್ತಿದ್ದಾಗ ಜೈದೀಪ್‌ ಭಾರತಿ ಎಂಬ ಹೆಸರಿನಲ್ಲಿ ಟೆಲಿಗ್ರಾಂ ಅಪ್ಲಿಕೇಷನ್‌ಗೆ ಮೆಸೇಜ್‌ ಬಂದಿತ್ತು. ಹಣ ಹೂಡಿಕೆ ಮಾಡಿದರೆ ಡಬಲ್‌ ಆಗಲಿದೆ ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಭದ್ರಾವತಿ ವ್ಯಕ್ತಿ ಆ ಮೆಸೇಜ್‌ಗೆ ರಿಪ್ಲೆ ಮಾಡಿದ್ದರು. ಮೂರು ವಿವಿಧ ಅಕೌಂಟ್‌ ಕೊಟ್ಟಿದ್ದರು ಭದ್ರಾವತಿಯ ವ್ಯಕ್ತಿಗೆ ಜೈದೀಪ್‌ … Read more

ಶಿವಮೊಗ್ಗದ ಉದ್ಯಮಿಯ ಖಾತೆಗೆ ಪ್ರತಿ ದಿನ ₹200 ಹಣ ಬಂತು, 60 ದಿನ ಆದ್ಮೇಲೆ ಕಾದಿತ್ತು ಆಘಾತ, ಆಗಿದ್ದೇನು?

SMS-Fraud-Shimoga-CEN-Police-Station.

ಶಿವಮೊಗ್ಗ: ಪ್ರತಿ ದಿನ ₹200 ಮೊತ್ತ ವರ್ಗಾವಣೆ ಮಾಡಿ ನಂಬಿಕೆ ಮೂಡಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹7.84 ಲಕ್ಷ ವಂಚಿಸಲಾಗಿದೆ (Investment). ಹೇಗಾಯ್ತು ವಂಚನೆ? ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಇನ್ಸ್‌ಸ್ಟಾಗ್ರಾಂನಲ್ಲಿ ಪ್ರಕಟವಾದ ಜಾಹಿರಾತು ನಂಬಿ ಶಿವಮೊಗ್ಗದ ಉದ್ಯಮಿಯೊಬ್ಬರು ವಂಚನೆಗೊಳಗಾಗಿದ್ದಾರೆ. ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿದಾಗ ಉದ್ಯಮಿಯನ್ನು ಗ್ರೂಪ್‌ ಒಂದಕ್ಕೆ ಸೇರಿಸಿಕೊಳ್ಳಲಾಯಿತು. ಮೊದಲಿಗೆ ₹20,000 ಹೂಡಿಕೆ ಮಾಡುವಂತೆ ಸೂಚಿಸಲಾಯಿತು. ಅಂತೆಯೇ ಶಿವಮೊಗ್ಗದ ಉದ್ಯಮಿ ಹೂಡಿಕೆ ಮಾಡಿದ್ದರು. ಪ್ರತಿದಿನ ಬಂತು ₹200 ಹಣ ಹೂಡಿಕೆ ಮಾಡಿಸಿಕೊಂಡವರು … Read more

ಶಿವಮೊಗ್ಗದ ಶಿಕ್ಷಕಿಗೆ ಲಕ್ಷ ಲಕ್ಷ ವಂಚನೆ, ಹೇಗಾಯ್ತು ಮೋಸ?

Online-Fraud-Case-image

ಶಿವಮೊಗ್ಗ: ಹೆಚ್ಚುವರಿ ಅದಾಯ, ಅಧಿಕ ಲಾಭದ ಆಮಿಷವೊಡ್ಡಿ ಸೈಬರ್‌ ವಂಚಕರು ನಿತ್ಯ ಹಲವರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಹೊಟೇಲ್‌ಗಳಿಗೆ ರಿವ್ಯು (Hotel Review) ಬರೆದು ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗ ಜಿಲ್ಲೆಯ ಶಿಕ್ಷಕಿಗೆ ₹11.35 ಲಕ್ಷ ವಂಚಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕ್ಷಕಿಗೆ ವಾಟ್ಸಪ್‌ಗೆ ಹೊಟೇಲ್‌ ರಿವ್ಯು ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಲಿಂಕ್‌ ಜೊತೆ ಅಪರಿಚತ ನಂಬರ್‌ನಿಂದ ಮೆಸೇಜ್‌ ಬಂದಿತ್ತು. ಲಿಂಕ್‌ ಕ್ಲಿಕ್‌ ಮಾಡಿದಾಗ ಟೆಲಿಗ್ರಾಂ ಆಪ್‌ನಲ್ಲಿ ಗ್ರೂಪ್‌ ಒಂದಕ್ಕೆ ಜಾಯಿನ್‌ ಮಾಡಲಾಯಿತು. ಹಣ … Read more

ಶಿವಮೊಗ್ಗದ ವ್ಯಕ್ತಿಗೆ ಲಾಟರಿಯಲ್ಲಿ ₹30 ಲಕ್ಷ ಬಹುಮಾನ, ಆಮೇಲೆ ಕಾದಿತ್ತು ಆಘಾತ

Online-Fraud-Case-image

ಶಿವಮೊಗ್ಗ: ಲಾಟರಿಯಲ್ಲಿ ಬಹುಮಾನ (Prize) ಬಂದಿದೆ ಎಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹3.71 ಲಕ್ಷ‌ ವಂಚಿಸಲಾಗಿದೆ. ಶಿವಮೊಗ್ಗದ ವ್ಯಕ್ತಿಯೊಬ್ಬರ ಫೇಸ್‌ಬುಕ್‌ಗೆ ಲಾಟರಿಯಲ್ಲಿ ₹30 ಲಕ್ಷ ಬಹುಮಾನ ಬಂದಿದೆ ಎಂದು ಮೆಸೇಜ್‌ ಬಂದಿತ್ತು. ಇದನ್ನು ನಂಬಿದ ಶಿವಮೊಗ್ಗದ ವ್ಯಕ್ತಿ ತಮ್ಮ ಮೊಬೈಲ್‌ ನಂಬರನ್ನು ರಿಪ್ಲೆ ಮಾಡಿದ್ದರು. ಬಳಿಕ ಮತ್ತೊಂದು ನಂಬರ್‌ನಿಂದ ವಾಟ್ಸಪ್‌ನಲ್ಲಿ ಮೆಸೇಜ್‌ ಬಂದಿದ್ದು, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಲೋಗೊ ಬಳಸಿ ಬ್ಯಾಂಕ್‌ ಮ್ಯಾನೇಜರ್‌ ತಿಳಿಸಲಾಗಿತ್ತು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಆನೆಗಳನ್ನು ನೋಡಲು ತಂಡೋಪತಂಡವಾಗಿ ಜನ ಆಗಮನ … Read more

ವಿಡಿಯೋ ಕರೆಯಲ್ಲೆ ಶಿವಮೊಗ್ಗದ ವ್ಯಕ್ತಿ ಅರೆಸ್ಟ್‌, ಹುಷಾರ್‌ ಮುಂದಿನ ಟಾರ್ಗೆಟ್‌ ನೀವೆ, ಏನಿದು ಕೇಸ್‌?

Online-Fraud-Case-image

ಶಿವಮೊಗ್ಗ: ಡಿಜಿಟಲ್‌ ಅರೆಸ್ಟ್‌ (Digital Arrest) ಮಾಡಿ ಜನರಲ್ಲಿ ಆತಂಕ ಮೂಡಿಸಿ ಹಣ ವಸೂಲಿ ಮಾಡುತ್ತಿದ್ದ ಆನ್‌ಲೈನ್‌ ವಂಚಕರು ಈಗ ವಂಚನೆಯ ಸ್ವರೂಪ ಬದಲಿಸಿದ್ದಾರೆ. ವಿಡಿಯೋ ಕಾಲ್‌ನಲ್ಲೇ ಅರೆಸ್ಟ್‌ ಮಾಡಿ, ವಿಡಿಯೋ ಕಾಲ್‌ನಲ್ಲೇ ಬೇಲ್‌ ಕೊಡಿಸಿ ಹಣ ಪಡೆದು ವಂಚಿಸುತ್ತಿದ್ದಾರೆ. ಇಂತಹುದೇ ಪ್ರಕರಣದಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹19 ಲಕ್ಷ ವಂಚಿಸಲಾಗಿದೆ. ಟಾರ್ಗೆಟ್‌ ಆದ ನಿವೃತ್ತ ಉದ್ಯೋಗಿ ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರನ್ನು ಗುರಿಯಾಗಿಸಿ ವಾಟ್ಸಪ್‌ನಲ್ಲಿ ವಿಡಿಯೋ ಕಾಲ್‌ ಮಾಡಲಾಗಿದೆ. ಮುಂಬೈನ ಕೊಲಾಬ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಶಿಖಾವತ್‌ ಎಂದು … Read more

ಎರಡು ಬ್ಯಾಂಕ್‌ಗಳಲ್ಲಿ ಪಾಸ್‌ ಬುಕ್‌ ಎಂಟ್ರಿ ಮಾಡಿಸಿದಾಗ ಶಿವಮೊಗ್ಗದ ವ್ಯಕ್ತಿಗೆ ಕಾದಿತ್ತು ಬಿಗ್‌ ಶಾಕ್‌

Online-Fraud-Case-image

ಶಿವಮೊಗ್ಗ: ವ್ಯಕ್ತಿಯೊಬ್ಬರ ಎರಡು ಬ್ಯಾಂಕ್‌ ಖಾತೆಗಳಿಂದ ₹3.26 ಲಕ್ಷ ಹಣವನ್ನು ಅವರಿಗೆ ಗೊತ್ತಿಲ್ಲದಂತೆ ವರ್ಗಾವಣೆ (Money Transfer) ಮಾಡಿಕೊಳ್ಳಲಾಗಿದೆ. ಹೊರ ರಾಜ್ಯದ ಪ್ರವಾಸದಲ್ಲಿದ್ದ ಅವರು ತಮ್ಮ ತಂದೆ ಮೂಲಕ ಶಿವಮೊಗ್ಗದಲ್ಲಿ ಬ್ಯಾಂಕ್‌ ಪಾಸ್‌ ಬುಕ್‌ ಎಂಟ್ರಿ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗದ ವ್ಯಕ್ತಿಯ ಎಸ್‌ಬಿಐ ಬ್ಯಾಂಕ್‌ ಖಾತೆಯಿಂದ ಐದು ಬಾರಿ ಒಟ್ಟು ₹84,500 ಹಣ ವರ್ಗಾಯಿಸಿಕೊಳ್ಳಲಾಗಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಯಿಂದ ₹2.41 ಲಕ್ಷ ಹಣವನ್ನು ಬೇರೊಂದು ಖಾತೆ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬ್ಯಾಂಕ್‌ ಖಾತೆಯನ್ನು ಹ್ಯಾಕ್‌ … Read more

ಸಾನಿಯಾ ಕಪೂರ್‌ ಮೆಸೇಜ್‌ಗೆ ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದ್ದು ಬರೋಬರಿ ₹55 ಲಕ್ಷ, ಏನಿದು ಕೇಸ್‌?

SMS-Fraud-Shimoga-CEN-Police-Station.

ಶಿವಮೊಗ್ಗ: ಷೇರು ಮಾರುಕಟ್ಟೆಯಲ್ಲಿ (Share Market) ಹಣ ಹೂಡಿಕೆ ಮಾಡಿ ಅಧಿಕ ಲಾಭಾಂಶ ಗಳಿಸಬಹುದು ಎಂದು ನಂಬಿಸಿ ಲಕ್ಷ ಲಕ್ಷ ವಂಚಿಸುತ್ತಿರುವ ಪ್ರಕರಣ ಮತ್ತಷ್ಟು ವರದಿಯಾಗುತ್ತಿವೆ. ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಷೇರು ಮಾರುಕಟ್ಟೆ ಮತ್ತು ಲಾಭಾಂಶದ ಹೆಸರಿನಲ್ಲಿ ₹55 ಲಕ್ಷ ವಂಚಿಸಲಾಗಿದೆ. ಹೇಗಾಯ್ತು ವಂಚನೆ? ಸಾನಿಯಾ ಕಪೂರ್‌ ಎಂಬ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ ವಾಟ್ಸಪ್‌ ಮೆಸೇಜ್‌ ಬಂದಿತ್ತು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ವ್ಯಕ್ತಿ ಹಣ ಹೂಡಿಕೆ ಮಾಡಿದ್ದರು. … Read more

ಕೆಲಸ ಮಾಡುತ್ತಿದ್ದ ಫೈನಾನ್ಸ್‌ ಸಂಸ್ಥೆಗೇ ₹3,00,000 ವಂಚಿಸಿದ ಕ್ವಾಲಿಟಿ ಮ್ಯಾನೇಜರ್‌, ಏನಿದು ಕೇಸ್‌?

Sagara Police Station Building

ಸಾಗರ: ಗ್ರಾಹಕರು ಮರುಪಾವತಿ ಮಾಡಿದ್ದ ಸಾಲದ ಕಂತಿನ ಹಣವನ್ನು ಫೈನಾನ್ಸ್‌ (Finance) ಸಂಸ್ಥೆಗೆ ಕಟ್ಟದೆ ವಂಚಿಸಿದ ಬ್ರಾಂಚ್‌ ಕ್ವಾಲಿಟಿ ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಲೆಕ್ಕ ಪರಿಶೋಧನೆ ಮಾಡಿದಾಗ ಕ್ವಾಲಿಟಿ ಮ್ಯಾನೇಜರ್‌ ₹3.03 ಲಕ್ಷ ವಂಚಿಸಿರುವು ಬೆಳಕಿಗೆ ಬಂದಿದೆ. ಫೈನಾನ್ಸ್‌ ಸಂಸ್ಥೆಯೊಂದು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸುತ್ತದೆ. ಅವರು ಸಾಲ ಮರುಪಾವತಿ ಮಾಡಿದ್ದನ್ನು ಕ್ವಾಲಿಟಿ ಮ್ಯಾನೇಜರ್‌ ಫೈನಾನ್ಸ್‌ ಸಂಸ್ಥೆಗೆ ಮರುಪಾವತಿಸಬೇಕು. 2024ರ ಡಿಸೆಂಬರ್‌ 10 ರಿಂದ 2025ರ ಮೇ 12ರವರೆಗೆ ₹3.03 ಲಕ್ಷವನ್ನು ಫೈನಾನ್ಸ್‌ ಸಂಸ್ಥೆಗೆ … Read more