ಶಿವಮೊಗ್ಗ ಚೆಕ್‌ಪೋಸ್ಟ್‌ನಲ್ಲಿ ಈತನಕ ಏನೆಲ್ಲ ಸೀಜ್‌ ಆಗಿದೆ? ಎಷ್ಟು ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ?

Shimoga-Police-Barricade-Checkpost

SHIVAMOGGA LIVE NEWS | 8 APRIL 2023 SHIMOGA : ನೀತಿ ಸಂಹಿತೆ ಹಿನ್ನೆಲೆ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳನ್ನು (check post) ಸ್ಥಾಪಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಮತ್ತು ಚುನಾವಣಾ ಆಯೋಗದ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಇನ್ನು, ವಿವಿಧೆಡೆ ದಾಳಿ ನಡೆಸಿ ನಗದು, ಮದ್ಯ, ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈತನಕ 10 ಕೋಟಿ ರೂ. ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈತನಕ ಏನೇನೆಲ್ಲ ವಶಪಡೆಯಲಾಗಿದೆ? ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧೆಡೆ ದಾಖಲೆ ಇಲ್ಲದ 3.19 … Read more

ಶಿವಮೊಗ್ಗದಲ್ಲಿ ಸರ್ಕಾರಿ ಕಚೇರಿಯ ಕಂಪ್ಯೂಟರ್, ಚೇರು, ಟೇಬಲ್ ಜಪ್ತಿ, ಕಾರಣವೇನು?

Chair-Table-Computer-Seized-in-Shimoga

SHIVAMOGGA LIVE NEWS | 19 JANUARY 2023 SHIMOGA | ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯ ಕಂಪ್ಯೂಟರ್, ಪೀಠೋಪಕರಣಗಳನ್ನು ಜಪ್ತಿ (Seize) ಮಾಡಲಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆ ಜಪ್ತಿ ಕಾರ್ಯ ನಡೆಸಲಾಯಿತು. ಶಿವಮೊಗ್ಗ ತಾಲೂಕು ಕಚೇರಿ ಕಟ್ಟಡದಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಇದೆ. ಇಲ್ಲಿನ 5 ಕುರ್ಚಿ, 5 ಕಂಪ್ಯೂಟರ್, 2 ಟೇಬಲ್ ಜಪ್ತಿ (Seize) ಮಾಡಲಾಗಿದೆ. ಜಪ್ತಿಗೆ … Read more

ಲಾಕ್ ಡೌನ್ ಮೊದಲ ದಿನವೆ ಐನೂರು ಬೈಕ್ ಪೊಲೀಸ್ ವಶಕ್ಕೆ

090521 Bike Seized in Shimoga Amir Ahmed Circle 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 MAY 2021 ಲಾಕ್‍ ಡೌನ್ ಮೊದಲ ದಿನವೇ ಶಿವಮೊಗ್ಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಐನೂರಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ. ಐನೂರು ಬೈಕ್ ವಶಕ್ಕೆ ಜಿಲ್ಲೆಯಾದ್ಯಂತ ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಇವತ್ತು 500 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ 10 ಆಟೋ, 75 ಕಾರುಗಳು ಸೇರಿ, ಒಟ್ಟು 585 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ | ರೈತರಿಗೆ ಲಾಕ್ ಡೌನ್ ಬಿಸಿ, ಅನ್ನದಾತರಿಗೆ ಪಾಸ್ … Read more

ಎಚ್ಚರಿಕೆ ಕೊಟ್ಟರೂ ಬೀದಿಗಿಳಿದರು, ಪೊಲೀಸರ ಕೈಗೆ ಸಿಕ್ಕಬಿದ್ದು ತಲೆ ಚಚ್ಚಿಕೊಂಡರು, ಮುಂದೇನಾಯ್ತು?

280421 Shimoga Police seize vehicles 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 APRIL 2021 ಕರ್ಫ್ಯೂ ಹಿನ್ನೆಲೆ ಅನಗತ್ಯ ಓಡಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಶಿವಮೊಗ್ಗ ನಗರದ ವಿವಿಧೆಡೆ ವಿಭಾಗವಾರು ಚೆಕ್‍ಪೋಸ್ಟ್ ಹಾಕಲಾಗಿತ್ತು. ಎಲ್ಲಾ ರಸ್ತೆಯಲ್ಲಿ ಬರುವ ವಾಹನಗಳ ತಪಾಸಣೆ ನಡೆಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಸಿಟಿ ರೌಂಡ್ಸ್ ಕರ್ಫ್ಯೂ ಪರಿಸ್ಥಿತಿ ಪರಿಶೀಲನೆಗೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಸಿಟಿ ರೌಂಡ್ಸ್ ನಡೆಸಿದರು. ಬಿ.ಹೆಚ್.ರಸ್ತೆ, ಗಾಂಧಿ ಬಜಾರ್, ಕೋಟೆ ರಸ್ತೆ ಸೇರಿದಂತೆ ವಿವಿಧೆಡೆ ಜಿಲ್ಲಾ ರಕ್ಷಣಾಧಿಕಾರಿ ಪರಿಶೀಲಿಸಿದರು. ವಾಹನ ಸೀಜ್ … Read more

ವಿನೋಬನಗರದಲ್ಲಿರುವ ಸಿಎಂ ಮನೆಗೆ ಮುತ್ತಿಗೆ ಯತ್ನ, ಬಂಧನ

051020 NSUI Workers Attempt to Attack CM Yedyurappa House 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಅಕ್ಟೋಬರ್ 2020 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿಯಾಗಿದೆ. ಈ ದಾಳಿ ರಾಜಕೀಯ ಪ್ರೇರಿತ ಅಂತಾ ಆರೋಪಿಸಿ, ಶಿವಮೊಗ್ಗ ಎನ್‍ಎಸ್‍ಯುಐ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಎನ್‍ಎಸ್‍ಯುಐ ಕಾರ್ಯಕರ್ತರನ್ನು ಬಂಧಿಸಲಾಯಿತು. ಇಲ್ಲಿದೆ ವಿಡಿಯೋ ರಿಪೋರ್ಟ್ ವಿನೋಬನಗರದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೆ ಮಧ್ಯಾಹ್ನ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಸಿಎಂ ಮನೆಯಿಂದ ಸ್ವಲ್ಪ ದೂರದಲ್ಲೇ ಪೊಲೀಸರು ಎನ್‍ಎಸ್‍ಯುಐ … Read more

ನಂಬರ್ ಪ್ಲೇಟ್’ನಲ್ಲಿದ್ದ T ಅಕ್ಷರದಿಂದ ಕಾರು ಸೀಜ್, ಚಾಲಕ ಪೊಲೀಸರ ವಶಕ್ಕೆ, ತಪ್ಪು ಸಾಬೀತಾದರೆ 1.50 ಲಕ್ಷ ದಂಡ

ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019 ಟ್ರ್ಯಾಕ್ಟರ್‌ಗಳಿಗೆ ನೋಂದಣಿ ಮಾಡಿಸುವ ನಂಬರ್ ಹಾಕಿಕೊಂಡಿದ್ದ ಕಾರನ್ನು ಆರ್‌ಟಿಒ ಅಧಿಕಾರಿಗಳು ತಮ್ಮ ಕಚೇರಿ ಎದುರೇ ವಶಕ್ಕೆ ಪಡೆದಿದ್ದು, ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 2017ರಲ್ಲಿ ಕಾರು ಖರೀದಿಸಿದ್ದು, ಕಾರಿನ ಮಾಲೀಕ ಎರಡು ವರ್ಷದಿಂದ ನೋಂದಣಿ ಮಾಡಿಸದೇ ರಾಜಾರೋಷವಾಗಿ ಓಡಾಡಿಕೊಂಡಿದ್ದ. ಬುಧವಾರ ಆರ್‌ಟಿಒ ಕಚೇರಿ ಎದುರೇ ನಿಲ್ಲಿಸಿ ಹೋಗಿದ್ದ ವೇಳೆ ಅನುಮಾನಗೊಂಡು ತಪಾಸಣೆ ನಡೆಸಿದ ಆರ್.ಟಿ.ಓ ಅಧಿಕಾರಿಗಳು, ಕಾರು ಮತ್ತು ಚಾಲಕ ಹೊಸನಗರ ತಾಲೂಕಿನ ಸೊಪ್ಪಿನಮಲ್ಲೆ ಸಮೀಪದ ನಿವಾಸಿ … Read more

ಕಾಲೇಜು ಬಳಿ ಗಾಂಜಾ ಮಾರುತ್ತಿದ್ದವನು ಅರೆಸ್ಟ್, ಒಂದು ಕೆಜಿಯಷ್ಟು ಗಾಂಜಾ ಸೀಜ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 1 ಮಾರ್ಚ್ 2019 ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ ಒಂದು ಕೆಜಿ ನೂರು ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಗಾಂಜಾ ತೂಕ ಮಾಡುವ ಯಂತ್ರ ಮತ್ತು ಬೈಕನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಸ್ತಾಕ್, ಬಂಧಿತ ವ್ಯಕ್ತಿ. ಇಕ್ಕೇರಿ ರಸ್ತೆಯ ಪಾಲಿಟೆಕ್ನಿಕ್ ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ, ದಾಳಿ ಮಾಡಿದ ಸಾಗರ ನಗರ ಠಾಣೆಯ ಪೊಲೀಸರು ಮುಸ್ತಾಕ್’ನನ್ನು ಬಂಧಿಸಿದ್ದಾರೆ. … Read more