ತೀರ್ಥಹಳ್ಳಿ | ಇವತ್ತು ತೆಪ್ಪೋತ್ಸವ, ನಡೆಯಲಿದೆ ತುಂಗಾರತಿ, ಇದೇ ಮೊದಲು ಭಾಗವಸ್ತಿದ್ದಾರೆ ರಾಜ್ಯದ ಸಿಎಂ, ಹೇಗಿದೆ ಗೊತ್ತಾ ವ್ಯವಸ್ಥೆ?

ಶಿವಮೊಗ್ಗ ಲೈವ್.ಕಾಂ | THIRTHAHALLI | 28 ಡಿಸೆಂಬರ್ 2019 ಎಳ್ಳಮವಾಸ್ಯೆ ಅಂಗವಾಗಿ ಪ್ರಥಮ ಬಾರಿಗೆ ಜೀವನದಿ ತುಂಗೆಗೆ ಇವತ್ತು ಸಂಜೆ ತುಂಗಾರತಿ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ನಡೆಯುವ ಶ್ರೀ ರಾಮೇಶ್ವರ ದೇವರ ತೆಪ್ಪೋತ್ಸವದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ನಟ ವಿಜಯ್ ರಾಘವೇಂದ್ರ, ತೆಲುಗು ನಟ ವಿಜಯ್ ಇತರರು ನಾಡಿನಾದ್ಯಂತ ಬಂದು ಸೇರುವ ಜನರ ನಡುವೆಯೇ ಕುಳಿತು ಈ ಸಂಭ್ರಮವನ್ನು ಕಣ್ಣುಂಬಿಕೊಳ್ಳಲಿದ್ದಾರೆ. 70ರ ದಶಕದಲ್ಲಿ ಆರಂಭಗೊಂಡಿರುವ ತೆಪ್ಪೋತ್ಸವ … Read more

ರಾಜ್ಯದಲ್ಲೆ ಮೊದಲು ಡಿಸಿಸಿ ಬ್ಯಾಂಕ್’ನಿಂದ ಹೊಸ ಸಾಫ್ಟ್’ವೇರ್, ಬೈಕು, ಕಾರಿಗೆ ಶೇ.80ರಷ್ಟು ಸಾಲ, ಹೊಸ ವರ್ಷಕ್ಕೆ ಭರ್ಜರಿ ಆಫರ್

DCC Bank Shivamogga 1

ಶಿವಮೊಗ್ಗ ಲೈವ್.ಕಾಂ | SHIMOGA | 28 ಡಿಸೆಂಬರ್ 2019 ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಿವಮೊಗ್ಗದ ಎಲ್ಲ ಪ್ರಾಥಮಿಕ ಕೃಷಿ ಸಂಘಗಳು ಡಿಜಿಟಲಿಕರಣಗೊಳ್ಳುತ್ತಿವೆ. ಇದಕ್ಕಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಾಫ್ಟ್’ವೇರ್ ಒಂದನ್ನು ಸಿದ್ಧಪಡಿಸುತ್ತಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮಾರ್ಚ್ 30ರ ಒಳಗೆ ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿರುವ 168 ಪ್ರಾಥಮಿಕ ಕೃಷಿ ಸಂಘಗಳನ್ನು ಡಿಜಿಟಲಿಕರಣಗೊಳಿಸಲಾಗುತ್ತದೆ ಎಂದರು. ಎಲ್ಲಕ್ಕು ಕಾಮನ್ ಸಾಫ್ಟ್’ವೇರ್ ಶಿವಮೊಗ್ಗ ಡಿಸಿಸಿ ಬ್ಯಾಂಕ್’ನಿಂದಲೇ ಎಲ್ಲ … Read more

ಯಾರೂ ಇಲ್ಲದಾಗ ಮನೆಗೆ ನುಗ್ಗಿದ, ವಿಕಲಚೇತನ ಯುವತಿಯ ರೇಪ್ ಮಾಡಿದ, ಅತ್ಯಾಚಾರಿಗೆ ಬಿತ್ತು ಧರ್ಮದೇಟು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI | 27 ಡಿಸೆಂಬರ್ 2019 ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಕಲಚೇತನ ಯುವತಿಯ ಕೈ ಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅತ್ಯಾಚಾರಕ್ಕೆ ಯತ್ನಿಸಿದವನನ್ನು ಹಿಡಿದು ಗ್ರಾಮಸ್ಥರೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಯುವತಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ಸಂಭವಿಸಿದೆ. ಅತ್ಯಾಚಾರ ಯತ್ನದ ವೇಳೆ ಯುವತಿ ಜೋರಾಗಿ ಕೂಗಿಕೊಂಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಧರ್ಮದೇಟು ಅತ್ಯಾಚಾರಕ್ಕೆ ಯತ್ನಿಸಿದವನನ್ನು ಸತೀಶ್ … Read more

ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಮೋಡ, ದಿಢೀರ್ ಮಳೆ

Shivamogga Rain General Image DVS Road 1

ಶಿವಮೊಗ್ಗ ಲೈವ್.ಕಾಂ |SHIMOGA| 27 ಡಿಸೆಂಬರ್ 2019 ಶಿವಮೊಗ್ಗ ನಗರದ ವಿವಿಧೆಡೆ ಮಳೆಯಾಗುತ್ತಿದೆ. ಸಂಜೆ ವೇಳೆಗೆ ಮಳೆ ಶುರು ಆಗಿದೆ. ದಿಢೀರ್ ಮಳೆಯಿಂದ ಕೆಲಕಾಲ ಜನಜೀವನದ ಅಸ್ತವ್ಯಸ್ತವಾಯಿತು. ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿತ್ತು. ಬಳಿಕ ಜೋರು ಮಳೆಯಾಗುತ್ತಿದೆ.

ಹೊಸ ವರ್ಷದ ಮೊದಲ ದಿನದಿಂದಲೇ ಬಿಜೆಪಿ ಜನಜಾಗೃತಿ, ಯಾವ್ಯಾವ ದಿನ ಏನೇನು ಅಭಿಯಾನ ಇರುತ್ತೆ? ಹೇಗಿರುತ್ತೆ ಜಾಗೃತಿ?

ಶಿವಮೊಗ್ಗ ಲೈವ್.ಕಾಂ | SHIMOGA | 27 ಡಿಸೆಂಬರ್ 2019 ಪೌರತ್ವ ಕಾಯ್ದೆ ಕುರಿತು ಉಂಟಾಗಿರುವ ಗೊಂದಲ ನಿವಾರಣೆಗೆ, ಹೊಸ ವರ್ಷದ ಮೊದಲ ದಿನದಿಂದಲೇ ಜಾಗೃತಿ ಅಭಿಯಾನ ಆಯೋಜಿಸಲು ಬಿಜೆಪಿ ನಿರ್ಧರಿಸಿದೆ. ಮನೆ ಮನೆಗೆ ತೆರಳಿ ಕಾಯ್ದೆ ಕುರಿತು ತಿಳಿವಳಿಕೆ ಮೂಡಿಸಲು ಯೋಜಿಸಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಪ್ರತಿ ಬೂತ್ ಮಟ್ಟದಲ್ಲೂ ಜನ ಜಾಗೃತಿ ಸಭೆಗಳನ್ನು ನಡೆಸಲಾಗುತ್ತದೆ. ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ತಿಳಿವಳಿಕೆ ಮೂಡಿಸಬೇಕಿದೆ. ಜನವರಿ 1 ರಿಂದ 15ರವರೆಗೆ ನಿರಂತರವಾಗಿ … Read more

‘ಕಾಯ್ದೆಯಿಂದ ಪೌರತ್ವ ಹೋಗಲ್ಲ, ಮುಸ್ಲಿಮರು ಹೆದರಬೇಕಿಲ್ಲ, ಕಾಂಗ್ರೆಸ್, ಕಮ್ಯುನಿಸ್ಟರಿಂದಲೇ ಆಗ್ತಿದೆ ಗೊಂದಲ’

ಶಿವಮೊಗ್ಗ ಲೈವ್.ಕಾಂ | SHIMOGA | 27 ಡಿಸೆಂಬರ್ 2019 ಪೌರತ್ವ ಕಾಯ್ದೆ ಕುರಿತು ಭಾರತೀಯ ಮುಸ್ಲಿಮರು ಹೆದರುವ ಅಗತ್ಯವಿಲ್ಲ. ಯಾಕೆಂದರೆ ಇದು ಪೌರತ್ವ ಕೊಡುವ ಕಾಯ್ದೆಯೇ ಹೊರತು, ಯಾರ ಪೌರತ್ವವನ್ನು ಕಸಿಯುವುದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಬಿ.ವೈ.ರಾಘವೇಂದ್ರ, ಅಖಂಡ ಭಾರತದ ಭಾಗವಾಗಿರುವ ಪಾಕಿಸ್ತಾನ, ಅಪಘಾನಿಸ್ಥಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಾಗಿರುವ ಆರು ಧರ್ಮಿಯರಿಗೆ ಪೌರತ್ವ ನೀಡಲಾಗುತ್ತದೆ. ಇದರಿಂದ ಭಾರತೀಯ … Read more

ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನ ಮಹಿಳೆಯರಿಗೆ, ಯಾರಾಗ್ತಾರೆ ಗೊತ್ತಾ ನೂತನ ಮೇಯರ್?

Mahanagara-Palike-Shivamogga

ಶಿವಮೊಗ್ಗ ಲೈವ್.ಕಾಂ | SHIMOGA | 27 ಡಿಸೆಂಬರ್ 2019 ಶಿವಮೊಗ್ಗ ಸೇರಿದಂತೆ ರಾಜ್ಯದ 11 ನಗರ ಪಾಲಿಕೆಗಳ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ಬಿ ಕೆಟಗರಿಯ ಮಹಿಳೆ ಮತ್ತು ಉಪಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಯಾರಾಗಬಹುದು ನೂತನ ಮೇಯರ್? ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪೂರ್ಣ ಬಹುಮತ … Read more

ಎಳ್ಳಮವಾಸ್ಯೆ ತೆಪ್ಪೋತ್ಸವಕ್ಕೆ ಬರ್ತಾರೆ ಸಿಎಂ, ಎರಡು ದಿನ ಜಿಲ್ಲೆ ಟೂರ್, ಶಿಕ್ಷಣ ಸಚಿವರಿಂದಲೂ ಪ್ರವಾಸ, ಎಲ್ಲಿಗೆಲ್ಲ ಭೇಟಿ ಕೊಡ್ತಾರೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪ್ರತ್ಯೇಕವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ  ಪ್ರವಾಸ ಕೈಗೊಂಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಡಿಸೆಂಬರ್ 27ರ ರಾತ್ರಿ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ವಾಸ್ತವ್ಯ ಹೂಡಲಿದ್ದಾರೆ. ಸಾಗರದ ಸಿಗಂದೂರು ಬಳಿಯ ಚದರವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಂತರ ಅಲ್ಲಿಂದ ಹೊನ್ನಾವರಕ್ಕೆ ಪ್ರಯಾಣ … Read more

ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆ, ಪುರಾಣ ಪ್ರಸಿದ್ಧ ರಾಮುಕುಂಡದಲ್ಲಿ ಸಾವಿರ ಸಾವಿರ ಭಕ್ತರಿಂದ ತೀರ್ಥ ಸ್ನಾನ | ವಿಡಿಯೋ ರಿಪೋರ್ಟ್

ಶಿವಮೊಗ್ಗ ಲೈವ್.ಕಾಂ | THIRTHAHALLI | 26 ಡಿಸೆಂಬರ್ 2019 ಎಳ್ಳಮವಾಸ್ಯೆ ಜಾತ್ರೆ ಅಂಗವಾಗಿ ಇತ್ತು ತುಂಗಾ ನದಿಯ ರಾಮಕುಂಡದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿದರು. ಸಾವಿರಾರು ಭಕ್ತರು ತೀರ್ಥ ಸ್ನಾನ ಮಾಡಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. ರಾಮಕುಂಡಕ್ಕೆ ತೀರ್ಥ ಸ್ನಾನಕ್ಕೆ ಬರಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ರಾಮಕುಂಡದವರೆಗೆ ಬರಲು ಎರಡು ಬದಿಯಲ್ಲೂ ಹಗ್ಗದ ಕಟ್ಟಲಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು. ರಾಮಕುಂಡದಲ್ಲಿ ತೀರ್ಥ ಸ್ನಾನಕ್ಕೇನು ಕಾರಣ? ಮಾತೃ ಹತ್ಯೆ ಶಾಪಕ್ಕೆ ತುತ್ತಾಗಿದ್ದ ಪರಶುರಾಮ, … Read more

ಒಂದು ಸಿಮ್ ಖರೀದಿಸಿದರೆ ಒಂದು ಕೆ.ಜಿ. ಈರುಳ್ಳಿ ಫ್ರೀ.. ಫ್ರೀ.. ಫ್ರೀ.., ಶಿವಮೊಗ್ಗದಲ್ಲಿ ಟೆಲಿಕಾಂ ಸಂಸ್ಥೆಯ ಆಫರ್

ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019 ಸಾವಿರ ರೂ. ಬಟ್ಟೆ ಖರೀದಿಸಿದರೆ ಒಂದು ಕೆ.ಜಿ ಈರುಳ್ಳಿ ಫ್ರೀ ಅಂತಾ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಾಪಾರಿಯೊಬ್ಬರು ಆಫರ್ ಕೊಟ್ಟಿದ್ದರು. ಈರುಳ್ಳಿ ಬೆಲೆ ನೂರು ರೂ. ಗಡಿ ದಾಟಿದ್ದಾಗ ಇಂತಹ ಆಫರ್ ನೀಡಿದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಈಗ ಶಿವಮೊಗ್ಗದಲ್ಲಿ ಟೆಲಿಕಾಂ ಸಂಸ್ಥೆಯೊಂದು ಇಂತಹುದೇ ಆಫರ್ ಕೊಡುತ್ತಿದೆ. ಶಿವಮೊಗ್ಗದ ಪುರದಾಳು ಗ್ರಾಮದಲ್ಲಿ ಟೆಲಿಕಾಂ ಸಂಸ್ಥೆಯೊಂದು ಒಂದು ಕೆ.ಜಿ ಈರುಳ್ಳಿಯನ್ನು ಉಚಿತವಾಗಿ ಕೊಡುವ ಆಫರ್ ಕೊಟ್ಟಿದೆ. ಬೆಳಗ್ಗೆ ಗ್ರಾಮಕ್ಕೆ … Read more