SAGARA | ಹಳೆ ಕಾಲದ ಚಿನ್ನ ಅಂತಾ ನಂಬಿಸ್ತಿದ್ದರು, ದುಡ್ಡು ಪಡೆದು ಪರಾರಿಯಾಗ್ತಿದ್ದರು, ತ್ಯಾಗರ್ತಿ ಬಳಿ ಸಿಕ್ಕಿಬಿದ್ದರು

prison hand cuff image

ಶಿವಮೊಗ್ಗ ಲೈವ್.ಕಾಂ | SAGARA | 05 ಡಿಸೆಂಬರ್ 2019 ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಂಧಿಸಿ 1 ಲಕ್ಷ ರೂ. ನಗದು ಹಾಗೂ 3 ಲಕ್ಷ ರೂ. ಬೆಲೆಯ ಟಾಟಾ ಏಸ್ ವಾಹನ ಮತ್ತು ನಕಲಿ ಬಂಗಾರ ವಶಕ್ಕೆ ಪಡೆದಿದ್ದಾರೆ. ಬಂಧಿತರು ಹಳೇ ಕಾಲದ ಬಂಗಾರದ ನಾಣ್ಯ ತಮಗೆ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ಹೊಸದುರ್ಗದ ಹುಣಸೇಕಟ್ಟೆಯ ಸತೀಶ್ ಮತ್ತು … Read more

THIRTHAHALLI | ಎಂಟು ಲಕ್ಷದ ಚಿನ್ನ, 40 ಸಾವಿರ ನಗದು, 100 ಗ್ರಾಂ ಬೆಳ್ಳಿ ಆಭರಣ ಕದ್ದ ಕಳ್ಳರು, ಎಲ್ಲಿ? ಹೇಗಾಯ್ತು ಕಳ್ಳತನ?

theft case general image

ಶಿವಮೊಗ್ಗ ಲೈವ್.ಕಾಂ | THIRTHAHALLI | 05 ಡಿಸೆಂಬರ್ 2019 ತೀರ್ಥಹಳ್ಳಿಯ ಪಟ್ಟಣಕ್ಕೆ ಸಮೀಪದ ಯಡೇಹಳ್ಳಿ ಕೆರೆದಂಡೆಯಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಲಾಗಿದ್ದು ಪ್ರಕರಣದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ 40 ಸಾವಿರ ರೂ.ನಗದು ದೋಚಲಾಗಿದೆ. ಪಟ್ಟಣದ ಹೋಟೆಲ್ ಮಾಲೀಕ ರಾಮದಾಸ್ ಕಾಮತ್ ಎಂಬುವವರ ಮನೆಯಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಮನೆಯ ಬಾಗಿಲನ್ನು ಒಡೆದು ಕಳ್ಳರು ಒಳ ನುಗ್ಗಿದ್ದಾರೆ. 8.73 ಲಕ್ಷ ರೂ. ಮೌಲ್ಯದ 291 ಗ್ರಾಂ ತೂಕದ ಚಿನ್ನ, 3500 ರೂ. ಮೌಲ್ಯದ 100 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಮತ್ತು 40 … Read more

SHIMOGA | ಇದೇ ತಿಂಗಳು ಕೊನೆ, ಶಿವಮೊಗ್ಗ ಸಿಟಿಯ ರಸ್ತೆಗಳಲ್ಲಿನ ಗುಂಡಿಗಳು ಮುಚ್ಚಬೇಕು, ಅಧಿಕಾರಿಗಳ ವಿರುದ್ಧ ಮಿನಿಸ್ಟರ್ ಗರಂ

090919 Pothole at Dheendayal Upadhyaya Road 1

ಶಿವಮೊಗ್ಗ ಲೈವ್.ಕಾಂ | SHIMOGA | 05 ಡಿಸೆಂಬರ್ 2019 ಶಿವಮೊಗ್ಗ ನಗರದ ಎಲ್ಲ ಕಡೆಯೂ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಗುಂಡಿ ಮುಚ್ಚೋಕೆ ಆಗಲ್ಲ ಎಂದರೆ ಮಹಾನಗರ ಪಾಲಿಕೆಗೆ ಏನು ಅರ್ಥವಿದೆ. ಈ ತಿಂಗಳ ಅಂತ್ಯದೊಳಗೆ ಎಲ್ಲ ರಸ್ತೆಗಳ ಗುಂಡಿಗಳನ್ನೂ ಮುಚ್ಚಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ, ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಎಷ್ಟು ತಿಂಗಳು ಬೇಕು? ಈ … Read more

HOSANAGARA | ಅರಣ್ಯ ಇಲಾಖೆ ಕಟ್ಟಡದ ಹಂಚಿನ ಮೇಲೆ ಹತ್ತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಡಿಫರೆಂಟ್ ಪ್ರತಿಭಟನೆ, ಕಾರಣವೇನು ಗೊತ್ತಾ?

041219 Karunakara Shetty Protest in RFO office Nagara 1

ಶಿವಮೊಗ್ಗ ಲೈವ್.ಕಾಂ | SHIMOGA | 04 ಡಿಸೆಂಬರ್ 2019 ಹಕ್ಕುಪತ್ರ ನೀಡಲು ತಾರತಮ್ಯ ಮಾಡುತ್ತಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರೊಬ್ಬರು ವಿಭಿನ್ನ ಪ್ರತಿಭಟನೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಕಟ್ಟಡದ ಮೇಲೆ ಹತ್ತಿ ಕುಳಿತು ಪ್ರತಿಭಟಿಸುತ್ತಿದ್ದಾರೆ. ಹೊಸನಗರದ ಮೂಡುಗೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ವಿಭಿನ್ನ ಪ್ರತಿಭಟನೆ ನಡೆಸುತ್ತಿದ್ದಾರೆ. ಇವತ್ತು ಬೆಳಗ್ಗೆ ವಲಯ ಅರಣ್ಯಾಧಿಕಾರಿ ಕಚೇರಿ ಮೇಲೆ ಹತ್ತಿ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ಇವರನ್ನು ಕೆಳಗಿಳಿಸಲು ಅರಣ್ಯಾಧಿಕಾರಿಗಳು ಮನವಿ ಮಾಡುತ್ತಿದ್ದಾರೆ. ಪ್ರತಿಭಟನೆಗೆ … Read more

SHIMOGA AIRPORT | ದನ ಮೇಯಿಸೋಕೆ ವಿಮಾನ ನಿಲ್ದಾಣವೇ ಪ್ರಶಸ್ತ ಜಾಗ, ಭುಜದೆತ್ತರಕ್ಕೆ ಬೆಳೆದು ನಿಂತಿವೆ ಜೋಳ

031219 Shimoga Airport News 1

ಶಿವಮೊಗ್ಗ ಲೈವ್.ಕಾಂ | SHIMOGA | 03 ಡಿಸೆಂಬರ್ 2019 ವಿಮಾನ ಹಾರಬೇಕಿದ್ದ ರನ್ ವೇ ಮೇಲೆ ಮೇಯುತ್ತಿದ್ದಾವೆ ದನ, ಕರು, ಕುರಿ..! ವಿಮಾನಗಳು ನಿಲ್ಲಬೇಕಿದ್ದ ಜಾಗದಲ್ಲಿ ಭುಜದೆತ್ತರಕ್ಕೆ ಬೆಳೆದಿದೆ ಜೋಳ..! ಶಿವಮೊಗ್ಗ ವಿಮಾನ ನಿಲ್ದಾಣದ ಸದ್ಯದ ಪರಿಸ್ಥಿತಿ ಇದು. ಬಿಜೆಪಿ ಸರ್ಕಾರ ರಚನೆಯಾಗಿ, ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುತ್ತಿದ್ದಂತೆ ಏರ್’ಪೋರ್ಟ್ ಕನಸು ಮತ್ತೆ ಚಿಗುರೊಡೆಯಿತು. ಈಗಾಗಲೇ ವಿಮಾನ ನಿಲ್ದಾಣ ಕಾಮಗಾರಿಗೆ ಸರ್ಕಾರ 39 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಬಹುವರ್ಷದಿಂದ ಕಾಮಗಾರಿ ಸ್ಥಗಿತವಾಗಿದ್ದು … Read more

SHIMOGA | ಸೋನಿಯಾ ಗಾಂಧಿ ಬರ್ತಡೆ, ಸಾವಿರ ಸಾವಿರ ಜನರಿಗೆ ಫ್ರೀ ಆರೋಗ್ಯ ತಪಾಸಣೆ, ಚಿಕಿತ್ಸೆ ಎಲ್ಲಿ? ಯಾವಾಗ ಗೊತ್ತಾ?

H-S-Sundaresh-Congress-President

ಶಿವಮೊಗ್ಗ ಲೈವ್.ಕಾಂ | SHIMOGA | 03 ಡಿಸೆಂಬರ್ 2019 ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಯವರ 73ನೇ ಜನ್ಮದಿನಾಚರಣೆ ಅಂಗವಾಗಿ ಡಿ.8ರ ಬೆಳಿಗ್ಗೆ 9.30 ರಿಂದ ಸಂಜೆ 5ರವರೆಗೆ ಶ್ರೀ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಸಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಬೆಂಗಳೂರಿನ ನಾರಾಯಣ ಹೃದಯಾಲಯ, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಶರಾವತಿ ದಂತ ವೈದ್ಯಕೀಯ … Read more

SHIMOGA | ನಾಲ್ಕೇ ದಿನದಲ್ಲಿ ಆದೇಶ ಹಿಂಪಡೆದ ಸರ್ಕಾರ, ಲತಾ ಗಣೇಶ್, ಚನ್ನಬಸಪ್ಪ ಇನ್ನಷ್ಟು ದಿನ ಮೇಯರ್, ಉಪಮೇಯರ್

Mahanagara-Palike-Shivamogga

ಶಿವಮೊಗ್ಗ ಲೈವ್.ಕಾಂ | SHIMOGA | 03 ಡಿಸೆಂಬರ್ 2019 ದಿಢೀರ್ ಬೆಳವಣಿಗೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಂಬಂಧ ಸರ್ಕಾರ ಹೊರಡಿಸಿದ್ದ ಆದೇಶವನ್ನು ನಾಲ್ಕು ದಿನದಲ್ಲಿ ಹಿಂಪಡೆದಿದೆ. ಆಡಳಿತಾಧಿಕಾರಿ ನೇಮಕ ಮಾಡಿದ್ದ ಆದೇಶ ಹಿಂಪಡೆಯಲಾಗಿದೆ. ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ವಿಜಯ ಕುಮಾರ್ ಅವರು ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದಾರೆ. 2019ರ ನವೆಂಬರ್ 28ರಿಂದ ಜಾರಿಗೆ ಬರುವಂತೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದೇಕೆ? ಶಿವಮೊಗ್ಗ ಮಹಾನಗರ … Read more

SHIMOGA AIRPORT | ವಿಮಾನ ನಿಲ್ದಾಣ ಕಟ್ಟಡದಲ್ಲಿ ಗುಂಡು ತುಂಡು ಪಾರ್ಟಿ, ದಾಖಲೆಗಳೆಲ್ಲ ಚೆಲ್ಲಾಪಿಲ್ಲಿ

021219 Airport Building Bottels 1

ಶಿವಮೊಗ್ಗ ಲೈವ್.ಕಾಂ | SHIMOGA | 02 ಡಿಸೆಂಬರ್ 2019 ಎಲ್ಲವು ಅಂದುಕೊಂಡತೆ ಆಗಿದ್ದರೆ ಇಷ್ಟು ಹೊತ್ತಿಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹಲವು ವಿಮಾನಗಳು ಬಂದಿಳಿಯಬೇಕಿತ್ತು. ಆದರೆ ಆರಂಭದಿಂದಲ್ಲೆ ಏರ್’ಪೋರ್ಟ್’ಗೆ ವಿಘ್ನ ಎದುರಾಯಿತು. ರನ್ ವೇ ನಿರ್ಮಾಣಕ್ಕು ಮೊದಲೇ ಕಾಮಗಾರಿ ನಿಂತು ಹೋಯಿತು. ಈಗ ಶಿವಮೊಗ್ಗ ವಿಮಾನ ನಿಲ್ದಾಣದ ಕಟ್ಟಡ, ಅಕ್ರಮ ಚಟುವಟಿಕೆಯ ತಾಣವಾಗಿದೆ. ಕುಡುಕರು, ಪಾರ್ಟಿ ಮಾಡುವವರಿಗೆ ಫ್ರೀ ಜಾಗವಾಗಿದೆ. ಶಿವಮೊಗ್ಗ ಲೈವ್.ಕಾಂ ವಿಮಾನ ನಿಲ್ದಾಣದ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿದಾಗ ಅಚ್ಚರಿ ಅನಿಸುವ ಸಂಗತಿಗಳು … Read more

SHIMOGA | ವಕೀಲರ ಸಂಘದ ಚುನಾವಣೆ ಫಲಿತಾಂಶ, ಹೊಸ ಅಧ್ಯಕ್ಷರ ಆಯ್ಕೆ, ಯಾರು ಗೊತ್ತಾ ನೂತನ ಪ್ರೆಸಿಡೆಂಟ್?

011219 Advocates Election Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 01 ಡಿಸೆಂಬರ್ 2019 ತೀವ್ರ ಕುತೂಹಲ ಮೂಡಿಸಿದ್ದ ಶಿವಮೊಗ್ಗ ವಕೀಲರ ಸಂಘಕ್ಕೆ ಎನ್.ದೇವೇಂದ್ರಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆಯಿಂದ ನಡೆದ ಮತ ಎಣಿಕೆಯಲ್ಲಿ 303 ಮತಗಳನ್ನು ಪಡೆದು ದೇವೇಂದ್ರಪ್ಪ ಚುನಾಯಿತರಾಗಿದ್ದಾರೆ. ಜಿಲ್ಲಾ ವಕೀಲರ ಸಂಘದ ವಿವಿಧ ಜವಾಬ್ದಾರಿಗಳಿಗೆ ನವೆಂಬರ್ 30ರಂದು ಚುನಾವಣೆ ನಡೆದಿತ್ತು. ಇವತ್ತು ಮತ ಎಣಿಕೆ ಕಾರ್ಯ ನಡೆಯಿತು. ಕೊನೆವರೆಗೆ ಹಣಾಹಣಿ ಅಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದರು. ಆದರೆ ದೇವೇಂದ್ರಪ್ಪ ಮತ್ತು ಬಸಪ್ಪಗೌಡ ಅವರ ನಡುವೆ ಮತ ಎಣಿಕೆಯ … Read more

THIRTHAHALLI | ಕಾರು ಬಸ್ಸು ಮುಖಾಮುಖಿ ಡಿಕ್ಕಿ, ಸ್ವಲ್ಪದರಲ್ಲಿ ತಪ್ಪಿತು ಭಾರೀ ಅನಾಹುತ, ಮೂವರಿಗೆ ಗಾಯ

ಶಿವಮೊಗ್ಗ ಲೈವ್.ಕಾಂ | AGUMBE | 01 ಡಿಸೆಂಬರ್ 2019 ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಮೂವರಿಗೆ ಗಾಯವಾಗಿದ್ದು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಗುಂಬೆ ಸಮೀಪದ ಬಿಳಚಿಕಟ್ಟೆ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಹೇಗಾಯ್ತು ಘಟನೆ? ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಆಗುಂಬೆ ಕಡೆಯಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ವಾಹನವೊಂದನ್ನು ಹಿಂದಿಕ್ಕುವ ರಭಸದಲ್ಲಿ ಬಸ್ಸು … Read more