ಶಿವಮೊಗ್ಗದಲ್ಲಿ ಶುರುವಾಗಲಿದೆ ನೂರು ಹಾಸಿಗೆಯ ಇಎಸ್ಐ ಆಸ್ಪತ್ರೆ

b y raghavendra about press meet

ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018 ನೂರು ಹಾಸಿಗೆಯುಳ್ಳ ಎಎಸ್ಐ ಆಸ್ಪತ್ರೆಯನ್ನು ಶಿವಮೊಗ್ಗದಲ್ಲಿ ಆರಂಭಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಜಿಲ್ಲಾಧಿಕಾರಿ ಅವರು ಎರಡು ಜಾಗ ಗುರುತಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕರು ಮತ್ತು ಅವರ ಕುಟುಂಬ ಸೇರಿ ಲಕ್ಷಾಂತರ ಜನರಿಗೆ ಇಎಸ್ಐ ಆಸ್ಪತ್ರೆಯಿಂದ ಅನುಕೂಲ ಆಗಲಿದೆ. ಈ ಹಿನ್ನಲೆಯಲ್ಲಿ ಆಸ್ಪತ್ರೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮೊದಲು, ಜಿಲ್ಲಾ ಖಾಸಗಿ ಕಾರ್ಖಾನೆ ಹಾಗೂ ಇತರೆ ಸಂಸ್ಥೆಗಳ ನೌಕರರ ಕ್ಷೇಮಾಭಿವೃದ್ಧಿ … Read more

ಸಾಗರದಲ್ಲಿ ಎರಡು ದಿನ ಬೆಳಗಿಂದ ಸಂಜೆವರೆಗೂ ಕರೆಂಟ್ ಇರಲ್ಲ, ಎಲ್ಲೆಲ್ಲಿ ಪವರ್ ಕಟ್ ಆಗುತ್ತೆ?

power cut graphics

ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018 ಸಾಗರ ನಗರ ವ್ಯಾಪ್ತಿಯಲ್ಲಿ ಡಿ.5 ಮತ್ತು 7ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಕರೆಂಟ್ ಇರೋದಿಲ್ಲ. ಘಟಕ – 1 ಮತ್ತು ಘಟಕ – 2 ರಲ್ಲಿ ಎಚ್.ಟಿ.ಎ.ಬಿ ಕೇಬಲ್ ಅಳವಡಿಸುವ ಕಾಮಗಾರಿ ಇರುವುದರಿಂದ ಈ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಎಲ್.ಬಿ.ಕಾಲೇಜು, ಪ್ರಗತಿನಗರ, ಲೋಹಿಯಾ ನಗರ, ಮಂಕಳಲೆ, ಅಂಬಾಪುರ, ಕುಗ್ವೆ, ವಿನೋಬನಗರ, ನೆಹರು ನಗರ, ಹಾನಂಬಿ ರಸ್ತೆ, ಎಸ್.ಎನ್.ನಗರ, ಚಿಪ್ಪಳಿ, ವರದಾ ಕಾಲನಿ, ಆದಿಶಕ್ತಿನಗರ, ವಿಜಯನಗರ, … Read more

ಜಯನಗರದಲ್ಲಿ ಆಸ್ಪತ್ರೆಗಾಗಿ ಪಾಯ ತೆಗೆದರು, ಅಕ್ಕಪಕ್ಕದ ಕಟ್ಟಡಗಳೆಲ್ಲ ಗಢಗಢ ನಡುಗೋಕೆ ಶುರುವಾದವು

031218 Jayanagara Building Collapse Problem 1

ಶಿವಮೊಗ್ಗ ಲೈವ್.ಕಾಂ | 3 ಡಿಸೆಂಬರ್ 2018 ಬೆಂಗಳೂರಿನಲ್ಲಿ ವರದಿಯಾಗುತ್ತಿದ್ದ ಆತಂಕಕಾರಿ ಘಟನೆ ಈಗ ಶಿವಮೊಗ್ಗ ನಗರದಲ್ಲಿ ಸುದ್ದಿಯಾಗಿದೆ. ಕಟ್ಟಡ ನಿರ್ಮಾಣಕ್ಕೆ ತೆಗೆದ ಪಾಯದ ಗುಂಡಿಯಿಂದಾಗಿ, ಅಕ್ಕಪಕ್ಕದ ಮನೆಗಳು ಕುಸಿಯುವ ಆತಂಕಕಾರಿ ಬೆಳವಣಿಗೆ ಜಯನಗರದಲ್ಲಿ ವರದಿಯಾಗಿದೆ. ಇದರಿಂದ ಮನೆಯವರು ಭಯದಲ್ಲಿಯೇ ಸಮಯ ತಳ್ಳುವಂತಾಗಿದೆ. ಜಯನಗರದ ಎರಡನೇ ತಿರುವಿನಲ್ಲಿ ಖಾಸಗಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಪಾಯ ತೆಗೆಯಲಾಗಿದೆ. ಆದರೆ ಪಾಲಿಕೆ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಿದ ಪರಿಣಾಮ ಸುತ್ತಮುತ್ತಲ ಮನೆ ಕಟ್ಟಡಗಳ ಕುಸಿಯುವ ಆತಂಕ ನಿರ್ಮಾಣವಾಗಿದೆ. ಏನೆಲ್ಲ ಉಲ್ಲಂಘನೆ … Read more

ಮನುಷ್ಯರನ್ನು ಕಂಡರೆ ಅಟ್ಟಾಡಿಸುತ್ತೆ, ಸಕ್ರೆಬೈಲು ಬಿಡಾರಕ್ಕೆ ಬಂತು ಮರಿ ಆನೆ, ಹೇಗಿದೆ ನೋಡಿ ನೂತನ ಸದಸ್ಯ

021218 Elephant from Sakaleshpura to Sakrebyle 1

ಶಿವಮೊಗ್ಗ ಲೈವ್.ಕಾಂ | 2 ಡಿಸೆಂಬರ್ 2018 ತಾಯಿಯ ಅಗಲಿಕೆಯಿಂದ ಅನಾಥವಾಗಿದ್ದ ಒಂದೂವರೆ ವರ್ಷದ ಆನೆ ಮರಿಯನ್ನು ಇಲ್ಲಿನ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆ ತರಲಾಗಿದೆ. ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ ಬಳಿ ಕೆಸರಿನಲ್ಲಿ ಸಿಕ್ಕು ಮೃತಪಟ್ಟ ಕಾರಣ, ಮರಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಅರಣ್ಯಾಕಾರಿಗಳು ಶಿವಮೊಗ್ಗದಿಂದ ಗಂಗಾ ಆನೆಯನ್ನು ಕರೆತಂದು ಮರಿಯನ್ನು ಸಕ್ರೆಬೈಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಗಂಗಾ ಆನೆಯನ್ನೇ ತನ್ನ ತಾಯಿಯೆಂದು ತಿಳಿದು ಮರಿ ಆನೆ, ಸಕ್ರೆಬೈಲಿನತ್ತ ಹೆಜ್ಜೆ ಹಾಕಿದೆ. ಈವರೆಗೂ ಕಾಡಿನಲ್ಲಿದ್ದ ಕಾರಣ, ಮರಿ ಆನೆ … Read more

‘ಈ ಯೋಜನೆಗೆ ಕೈ ಹಾಕಿದ್ರೆ ರಕ್ತಪಾತವಾಗುತ್ತೆ ಅನ್ನೋದನ್ನ ಯಡಿಯೂರಪ್ಪ, ಅವರ ಮಗ ನೆನಪಿಟ್ಟುಕೊಳ್ಳಲಿ’

ಶಿವಮೊಗ್ಗ ಲೈವ್.ಕಾಂ | 30 ನವೆಂಬರ್ 2018 ಯಡಿಯೂರಪ್ಪ ಮತ್ತು ಅವರ ಮಗ, ಈ ಯೋಜನೆ ಮಾಡಲು ಬಿಡೋದಿಲ್ಲ. ಒಂದು ವೇಳೆ ಯೋಜನೆಗೆ ಕೈ ಹಾಕಿದ್ರೆ ರಕ್ತಪಾತವಾಗುತ್ತೆ. ಹೀಗಂತ ಖಡಕ್ ಎಚ್ಚರಿಕೆ ನೀಡಿದ್ದಾರೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ಶಿಕಾರಿಪುರದಲ್ಲಿ ಇವತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಕಲ್ಲೋಡ್ಡು ನೀರಾವರಿ ಯೋಜನೆಗೆ ಮಾಡೋಕೆ ಬಿಡೋದಿಲ್ಲ. ಯೋಜನೆ ಮಾಡೋಕೆ ಮುಂದಾದರೆ ರಕ್ತಪಾತವಾಗುತ್ತೆ ಅನ್ನೋದನ್ನ ಯಡಿಯೂರಪ್ಪ ಮತ್ತವರ ಮಗ ನೆನಪಿಟ್ಟುಕೊಳ್ಳಬೇಕು ಅಂತಲೂ ಎಚ್ಚರಿಕೆ ನೀಡಿದ್ದಾರೆ. ‘ಯೋಜನೆ ಮಾಡೋಕೆ ರೆಡಿ’ ಮತ್ತೊಂದೆಡೆ … Read more

ಸರ್ಕಾರಿ ಬಸ್’ನಲ್ಲಿ ತೀರ್ಥಹಳ್ಳಿಗೆ ಬಂತು ಇಡೀ ಜಿಲ್ಲಾಡಳಿತ, ಆಗುಂಬೆಯಲ್ಲಿ ಡಿಸಿ ನೇತೃತ್ವದಲ್ಲಿ ಜನತಾದರ್ಶನ

301118 DC Grama Vastavya Agumbe 1

ಶಿವಮೊಗ್ಗ ಲೈವ್.ಕಾಂ | 30 ನವೆಂಬರ್ 2018 ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎರಡನೇ ಹಂತದ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಆರಂಭವಾಗಿದೆ. ಆಗುಂಬೆಯಲ್ಲಿ ಇವತ್ತು ಜಿಲ್ಲಾಧಿಕಾರಿ ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳು ಜನತಾ ದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲಿ ಜನತಾದರ್ಶನ? ಆಗುಂಬೆ ಹೋಬಳಿಯಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ನೇತೃತ್ವದಲ್ಲಿ ಜನತಾ ದರ್ಶನ ನಡೆಯುತ್ತಿದೆ. ಈ ಭಾಗದ ಜನರು ಜಿಲ್ಲಾಧಿಕಾರಿ ಅವರಿಗೆ ತಮ್ಮ ಅಹವಾಲು ಸಲ್ಲಿಸುತ್ತಿದ್ದಾರೆ. ಆಗುಂಬೆಯಲ್ಲಿ ಹೆಚ್ಚಾಗಿರುವ ಕಾಡು ಪ್ರಾಣಿಗಳ ಸಮಸ್ಯೆ, ಕುಂಟಿತ ಅಭಿವೃದ್ಧಿ ಕುರಿತು ಬಹುತೇಕರು ಅಹವಾಲು ಸಲ್ಲಿಸುತ್ತಿದ್ದಾರೆ. ಪ್ರತೀ … Read more

ಬಸ್ಸಲ್ಲಿ ಪಾಲಿಕೆಗೆ ಬಂದು ಕಾರಲ್ಲಿ ಮನೆಗೆ ಹಿಂತಿರುಗಿದ್ರು..! ಅಧಿಕಾರ ಸಿಕ್ಕರೂ ಹತ್ತು ನಿಮಿಷ ಎಣಿಸಿ ಕುರ್ಚಿ ಏರಿದರು..!

ಶಿವಮೊಗ್ಗ ಲೈವ್.ಕಾಂ | 28 ನವೆಂಬರ್ 2018 ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ ಅನೇಕ ಸ್ವಾರಸ್ಯಕರ ಮತ್ತು ಕೂತಹಲಕಾರಿ ಸಂಗತಿಗಳಿಗೆ ಸಾಕ್ಷಿಯಾಯ್ತು. ಬಸ್ಸಲ್ಲಿ ಬಂದಿಳಿದ ಬಿಜೆಪಿ ಸದಸ್ಯರು ಪಾಲಿಕೆಯ ಬಿಜೆಪಿ ಸದಸ್ಯರು ಬಿಜೆಪಿ ಕಚೇರಿಯಿಂದ ಪಾಲಿಕೆವರೆಗೂ ಪ್ರತ್ಯೇಕ ಬಸ್’ನಲ್ಲಿ ಬಂದರು. ಬಸ್ಸಿನಿಂದ ಬಂದಿಳಿಯುತ್ತಿದ್ದಂತೆ ಘೋಷಣೆಗಳನ್ನು ಕೂಗಿ, ಸಭಾಂಗಣ ಪ್ರವೇಶಿದರು. ಆದರೆ ಚನ್ನಬಸಪ್ಪ ಅವರು ಪ್ರತ್ಯೇಕವಾಗಿ ಕಾರಿನಲ್ಲಿ ಬಂದರು. ‘ಹೆಣ್ಮಗಳಿಗೆ ಅನ್ಯಾಯ ಮಾಡಬೇಡಿ’ ಚುನಾವಣೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ಶಿವಣ್ಣ ವಿರುದ್ಧವಾಗಿ ಯಾರೆಲ್ಲ ಮತ … Read more

ಬಿಜೆಪಿ ಮಡಿಲಿಗೆ ಶಿವಮೊಗ್ಗ ಪಾಲಿಕೆ ಮೇಯರ್, ಉಪಮೇಯರ್, ಯಾರಿಗೆಷ್ಟು ಓಟ್ ಬಂತು ಗೊತ್ತಾ?

281118 Mayor Election Shivamogga 1

ಶಿವಮೊಗ್ಗ ಲೈವ್.ಕಾಂ | 28 ನವೆಂಬರ್ 2018 ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಲತಾ ಗಣೇಶ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಎಸ್.ಎನ್.ಚನ್ನಬಸಪ್ಪ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. PHOTO | ನೂತನ ಮೇಯರ್, ಉಪಮೇಯರ್’ಗೆ ಅಭಿನಂದನೆ ಸಲ್ಲಿಸಿದ ಶಾಸಕ ಈಶ್ವರಪ್ಪ ಕುತೂಹಲ ಮೂಡಿಸಿದ ಕಾಂಗ್ರೆಸ್, ಜೆಡಿಎಸ್ ನಡೆ ಸಂಖ್ಯಾಬಲ ಇಲ್ಲದಿದ್ದರೂ ಕಡೇ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷ, ಮೇಯರ್, ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿತ್ತು. ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಪಕ್ಷ ಬೆಂಬಲ ಘೋಷಿಸಿತ್ತು. … Read more

ಶಿವಮೊಗ್ಗದ ಮೇಯರ್ ಆಗಿ ಆಟೋ ಡ್ರೈವರ್ ಪತ್ನಿ ಇವತ್ತು ಅಧಿಕಾರಕ್ಕೆ, ಯಾರಾಗ್ತಾರೆ ಗೊತ್ತಾ ಉಪಮೇಯರ್?

281118 Auto Driver Wife Mayor Latha Ganesh 1

ಶಿವಮೊಗ್ಗ ಲೈವ್.ಕಾಂ | 28 ನವೆಂಬರ್ 2018 ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಇವತ್ತು ಚುನಾವಣೆ ನಡೆಯಲಿದೆ. ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಚುನಾವಣೆ ನಡೆಸಲಿದ್ದಾರೆ. ಯಾರು ಗೊತ್ತಾ ಮೇಯರ್? ಮೇಯರ್ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದೆ. ಹಾಗಾಗಿ ಬಿಜೆಪಿಯಿಂದ ಗೆಲುವು ಸಾಧಿಸಿರುವ ಲತಾ ಗಣೇಶ್ ಅವರು ಮೇಯರ್ ಆಗಲಿದ್ದಾರೆ. ಆಟೋ ಚಾಲಕ ಗಣೇಶ್ ಅವರ ಪತ್ನಿ ಲತಾ ಅವರು ಮೇಯರ್ ಸ್ಥನಕ್ಕೇರುತ್ತಿದ್ದಾರೆ. ಉಪಮೇಯರ್ ಹುದ್ದೆ ಯಾರಿಗೆ? ಶಿವಮೊಗ್ಗ ಪಾಲಿಕೆಯ ಉಪಮೇಯರ್ ಸ್ಥಾನವು … Read more