ಮಾಜಿ ಸೈನಿಕರ ನೇಮಕಕ್ಕೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

SHIMOGA-NEWS-UPDATE

ಶಿವಮೊಗ್ಗ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಚೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಒಬ್ಬರು ಮಾಜಿ ಸೈನಿಕರನ್ನು ಲಿಪಿಕ ಸಿಬ್ಬಂದಿಯನ್ನಾಗಿ ಲಿಖಿತ ಪರೀಕ್ಷೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. 60 ವರ್ಷ ಮೀರದ ಮಾಜಿ ಸೈನಿಕರು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಸರ್ಕಾರದ ಕಾಯಂ ಹುದ್ದೆಗೆ ಸಮನಾಗಿರುವುದಿಲ್ಲ. ಸೇವಾ ಕಾಯಮಾತಿಗೂ ಅವಕಾಶವಿರುವುದಿಲ್ಲ.   ಆಸಕ್ತರು ಡಿ.5ರ ಸಂಜೆ 5 ಗಂಟೆಯೊಳಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಸ್ವ–ವಿವರಗಳೊಂದಿಗೆ, ಸ್ವ ಹಸ್ತಾಕ್ಷರದಲ್ಲಿ ಅರ್ಜಿಯನ್ನು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, … Read more

ಶಿವಮೊಗ್ಗದಲ್ಲಿ ಮತ್ತೆ ಧಗೆ ಹೆಚ್ಚಳ, ಹೇಗಿದೆ ಇವತ್ತಿನ ವಾತಾವರಣ? – ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಚಳಿ ಕಡಿಮೆಯಾಗಿದ್ದು ಉಷ್ಣಾಂಶ ಏರಿಕೆಯಾಗಿದೆ. ಇನ್ನು, ಇವತ್ತು ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌. ತೀರ್ಥಹಳ್ಳಿಯಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌. ಸೊರಬ, ಹೊಸನಗರ, ಸಾಗರ, ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ … Read more

ಶಿವಮೊಗ್ಗದ ಲಾಡ್ಜ್‌ ರೂಮಿನಲ್ಲಿ ಬೆಂಕಿ ಕೇಸ್‌, ಪುರುಷ, ಮಹಿಳೆ ವಿರುದ್ಧವೇ ಕೇಸ್‌, ಏನೇನಿದೆ ದೂರಿನಲ್ಲಿ?

Shimoga-Lodge-incident-Doddapete-police-visit-the-spot

ಶಿವಮೊಗ್ಗ: ಲಾಡ್ಜ್‌ನ ರೂಂನಲ್ಲಿ ಬೆಂಕಿಯಿಂದಾಗಿ ಮಹಿಳೆಗೆ ಗಂಭೀರ ಗಾಯ ಪ್ರಕರಣ ಸಂಬಂಧ ಲಾಡ್ಜ್‌ನ ಸೂಪರ್‌ ವೈಸರ್‌ ದೂರು ನೀಡಿದ್ದಾರೆ. ರೂಂನಲ್ಲಿದ್ದ ಪುರುಷ ಮತ್ತು ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ನ.18ರಂದು ಶಿವಮೊಗ್ಗದ ಲಾಡ್ಜ್‌ನ ರೂಂನಲ್ಲಿ ಬೆಂಕಿಗೆ ಮಹಿಳೆ ಗಂಭೀರ ಗಾಯಗೊಂಡಿದ್ದರು. ಜೊತೆಗಿದ್ದ ವ್ಯಕ್ತಿಗು ಗಾಯವಾಗಿತ್ತು. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ದೂರಿನಲ್ಲಿ ಏನಿದೆ? ‘ಗಿರೀಶ್‌ ಎಂಬುವವರು ನ.18ರಂದು ಮಧ್ಯಾಹ್ನ ಒಬ್ಬರೆ ಲಾಡ್ಜ್‌ಗೆ ಬಂದು ರೂಂ ನಂಬರ್‌ 211ರಲ್ಲಿ ಉಳಿದಿದ್ದರು. … Read more

ಭದ್ರಾವತಿಯ 30 ವರ್ಷದ ವ್ಯಕ್ತಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

Shivamogga-Court-Balaraja-Urs-Road

ಭದ್ರಾವತಿ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 30 ವರ್ಷದ ವ್ಯಕ್ತಿಗೆ ಎಫ್‌ಟಿಎಸ್‌ಸಿ– 1 ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ. 2022ರಲ್ಲಿ ಬಾಲಕಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಕುರಿತು ಅಂದಿನ ಸಿಪಿಐ ರಾಘವೇಂದ್ರ ಕಾಂಡಿಕೆ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ‌ ಸಾಬೀತಾದ ಕಾರಣ ನ್ಯಾ. ನಿಂಗನಗೌಡ ಪಾಟೀಲ್ ಅವರು ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹ 65,000 ದಂಡ  ವಿಧಿಸಿದ್ದಾರೆ. ನೊಂದ ಬಾಲಕಿಗೆ … Read more

BREAKING NEWS – ಉಗ್ರರ ಜಾಲ, ತಪ್ಪೊಪ್ಪಿಕೊಂಡ ಶಿವಮೊಗ್ಗದ ಇಬ್ಬರಿಗೆ ಶಿಕ್ಷೆ ಪ್ರಕಟ

BREAKING-NEWS-GENERAL-

ಬೆಂಗಳೂರು: ಐಸಿಸ್‌ ಉಗ್ರ ಸಂಘಟನೆಯ ಶಿವಮೊಗ್ಗ ಜಾಲ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಾಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯದ ನ್ಯಾ.ಕೆಂಪರಾಜು ಅವರು ಇಬ್ಬರು ಅಪರಾಧಿಗಳಿಗೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಆರೋಪಿ 8 ಜಬೀವುಲ್ಲಾ ಮತ್ತು ಆರೋಪಿ 9 ನದೀಮ್‌ ಫೈಸಲ್‌ಗೆ ಶಿಕ್ಷೆಯಾಗಿದೆ. ಏನಿದು ಪ್ರಕರಣ? 2022ರ ಆಗಸ್ಟ್‌ 15ರಂದು ಶಿವಮೊಗ್ಗದಲ್ಲಿ ಪ್ರೇಮ್‌ ಸಿಂಗ್‌ ಎಂಬುವವರಿಗೆ ಮಾರಕಾಸ್ತ್ರದಿಂದ ಇರಿಯಲಾಗಿತ್ತು. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ … Read more

ಟ್ರಾಫಿಕ್‌ ಫೈನ್‌ ಬಾಕಿ ಇದ್ಯಾ? ಮತ್ತೆ ಆಫರ್‌ ನೀಡಿದ ಸರ್ಕಾರ

raffic-Fine-by-police

ಶಿವಮೊಗ್ಗ: ಟ್ರಾಫಿಕ್‌ ಫೈನ್‌ ಕಟ್ಟಲು ಮತ್ತೆ ಶೇ.50ರ ರಿಯಾಯಿತಿ ದರ ಪ್ರಕಟಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕಟಣೆ ಹೊರಡಿಸಿದೆ. ನ.21ರಿಂದ ಡಿಸೆಂಬರ್‌ 12ರವರೆಗೆ ಶೇ.50ರ ರಿಯಾಯಿತಿ ದರದಲ್ಲಿ ದಂಡ ಪಾವತಿಸಬಹುದಾಗಿದೆ. ಕರ್ನಾಟಕ ಸರ್ಕಾರದ ಆದೇಶದ ಹಿನ್ನೆಲೆ ಶಿವಮೊಗ್ಗದಲ್ಲಿಯು ರಿಯಾಯಿತಿ ದರದಲ್ಲಿ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಶಿವಮೊಗ್ಗದ ಪೂರ್ವ ಸಂಚಾರ ಠಾಣೆ, ಪಶ್ಚಿಮ ಸಂಚಾರ ಠಾಣೆ, ಟ್ರಾಫಿಕ್‌ ಪೊಲೀಸರ ಬಳಿ, ಭದ್ರಾವತಿ ಸಂಚಾರ ಠಾಣೆಯಲ್ಲಿ ದಂಡ ಕಟ್ಟಬಹುದಾಗಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಪಾರ್ಕಿಂಗ್‌ … Read more

ಶಿವಮೊಗ್ಗದಲ್ಲಿ ಪಾರ್ಕಿಂಗ್‌ ಸಮಸ್ಯೆ, ರಸ್ತೆಗಿಳಿದ ರಕ್ಷಣಾಧಿಕಾರಿ, ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಬ್ರೇಕ್‌, ಏನೇನಾಯ್ತು?

Shimoga-Parking-menace-SP-visits-park-extension.

ಶಿವಮೊಗ್ಗ: ಸಿಟಿಯಲ್ಲಿ ಪಾರ್ಕಿಂಗ್‌ ಸಮಸ್ಯೆ ಬಿಗಡಾಯಿಸಿದ್ದು ಮುಕ್ತಿ ನೀಡಲು ಸಂಚಾರ ಠಾಣೆ ಪೊಲೀಸರು ಮುಂದಡಿ ಇಟ್ಟಿದ್ದಾರೆ. ಆಸ್ಪತ್ರೆಗಳು, ವಾಣಿಜ್ಯ ಕಟ್ಟಡಗಳ ಕಾರಣಕ್ಕೆ ಪಾರ್ಕ್‌ ಬಡಾವಣೆಯಲ್ಲಿ ಪಾರ್ಕಿಂಗ್‌ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಇಲ್ಲಿ ಶಾಶ್ವತವಾಗಿ ಪಾರ್ಕಿಂಗ್‌ ಸಮಸ್ಯೆ ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ರಕ್ಷಣಾಧಿಕಾರಿಯಿಂದ ಪರಿಶೀಲನೆ ಮಥುರಾ ಪ್ಯಾರಡೈಸ್‌ ಪಕ್ಕದ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಜಾಗವೆ ಸಿಗುವುದಿಲ್ಲ. ಅಲ್ಲದೆ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದಾಗಿ ಸಂಚಾರ ದಟ್ಟಣೆಯು ಹೆಚ್ಚು. ಪಾರ್ಕಿಂಗ್‌ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ … Read more

ದಿಢೀರ್‌ ಕಾರ್ಯಾಚರಣೆ, 24 ಮಂದಿಯನ್ನು ಠಾಣೆಗೆ ಕರೆದೊಯ್ದ ಪೊಲೀಸ್‌, ನಾಲ್ವರ ವಿರುದ್ಧ ಕೇಸ್‌

Shimoga-Police-Jeep

ಶಿವಮೊಗ್ಗ: ನಗರದಲ್ಲಿ ಪೊಲೀಸರು ದಿಢೀರ್‌ ವಿಶೇಷ ಏರಿಯಾ ಡಾಮಿನೇಷನ್‌ ಕಾರ್ಯಾಚರಣೆ ನಡೆಸಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಆರ್‌ಎಂಎಲ್‌ ನಗರ, ಬುದ್ಧನಗರ, ಮಿಳಘಟ್ಟ ಭಾಗದಲ್ಲಿ ಏರಿಯಾ ಡಾಮಿನೇಷನ್‌ ವಿಶೇಷ ಗಸ್ತು ನಡೆಸಲಾಯಿತು. ಈ ಸಂದರ್ಭ 24 ಮಂದಿಯನ್ನು ಠಾಣೆಗೆ ಕರೆಯಿಸಿ ವೈದ್ಯಕೀಯ ಪರೀಕ್ಷೆ ನಡೆಸಾಯಿತು. ಈ ಸಂದರ್ಭ ನಾಲ್ಕು ಮಂದಿ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಅವರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ … Read more

ಆಟೋದಲ್ಲಿ ಬಂತು ಐದು ಬಾಳೆಗೊನೆ, ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಶಾಕ್‌, ಆಗಿದ್ದೇನು?

NDPS-Case-for-banana-supplier-to-shimoga-jail.

ಶಿವಮೊಗ್ಗ: ಕೇಂದ್ರ ಕಾರಾಗೃಹದ ಕ್ಯಾಂಟೀನ್‌ಗೆ ತಂದಿದ್ದ ಬಾಳೆಗೊನೆಗಳಲ್ಲಿ ಗಾಂಜಾ, ಸಿಗರೇಟ್‌ಗಳು ಪತ್ತೆಯಾಗಿವೆ. ಜೈಲು ಭದ್ರತೆ ನಿರ್ವಹಿಸುತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF) ಸಿಬ್ಬಂದಿ ಇದನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನ.19ರಂದು ಮಧ್ಯಾಹ್ನ 2.15ರ ಹೊತ್ತೆಗೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಆಟೋ ಒಂದರಲ್ಲಿ ಐದು ಬಾಳೆಗೊನೆ ತರಲಾಗಿತ್ತು. ಕ್ಯಾಂಟೀನ್‌ನವರ ಸೂಚನೆ ಮೇರೆಗೆ ಇವುಗಳನ್ನು ತರಲಾಗಿದೆ ಎಂದು ಗೇಟ್‌ ಮುಂಭಾಗ ಇರಿಸಲಾಗಿತ್ತು. ಕೆಎಸ್‌ಐಎಸ್‌ಎಫ್‌ ಇನ್ಸ್‌ಪೆಕ್ಟರ್‌ ಜಗದೀಶ್‌, ಪಿಎಸ್‌ಐ ಪ್ರಭು, ಸಿಬ್ಬಂದಿ ಪ್ರವೀಣ್‌ ಮತ್ತು ನಿರೂಪಬಾಯಿ, … Read more

ಒಳ ಉಡುಪಿನಲ್ಲಿ ಗಾಂಜಾ ತಂದ ಅಧಿಕಾರಿ, ಸಿಕ್ಕಿಬಿದ್ದಿದ್ದು ಹೇಗೆ?

Shivamogga-Central-Prison-FDA-Arrested

ಶಿವಮೊಗ್ಗ: ತಪಾಸಣೆ ವೇಳೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯ ಒಳ ಉಡುಪಿನಲ್ಲಿ ಗಾಂಜಾ ಪತ್ತೆಯಾಗಿದೆ. ಅಧಿಕಾರಿಯನ್ನು ವಶಕ್ಕೆ ಪಡೆದು ತುಂಗಾ ನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಜೈಲಿನ ಎಫ್‌.ಡಿ.ಎ ಸಾತ್ವಿಕ್‌ (25) ಬಂಧಿತ. ಗುರುವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಾತ್ವಿಕ್‌ನನ್ನು ತಪಾಸಣೆ ಮಾಡಿದಾಗ ಒಳ ಉಡುಪಿನಲ್ಲಿ ಗಪ್‌ ಟೇಪ್‌ನಿಂದ ಸುತ್ತಿರುವ ವಸ್ತು ಪತ್ತೆಯಾಗಿತ್ತು. ಪರಿಶೀಲಿಸಿದಾಗ 170 ಗ್ರಾಂ ಗಾಂಜಾ ಸಿಕ್ಕಿದೆ. ಘಟನೆ ಕುರಿತು ಕೆ.ಎಸ್‌.ಐ.ಎಸ್‌.ಎಫ್‌ ಇನ್ಸ್‌ಪೆಕ್ಟರ್‌ ಜಗದೀಶ್‌, ಪಿ.ಎಸ್‌.ಐ ಪ್ರಭು, ಸಿಬ್ಬಂದಿ ಕುಪ್ಪೇರ ಬಸವರಾಜ್‌ … Read more