ಅಡಿಕೆ ಧಾರಣೆ, ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿಕಾರಿಪುರ, ಚನ್ನಗಿರಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಶಿಕಾರಿಪುರ ಮಾರುಕಟ್ಟೆ ರಾಶಿ 58276 58276 ಚನ್ನಗಿರಿ ಮಾರುಕಟ್ಟೆ ರಾಶಿ 58612 60589 ಇದನ್ನೂ ಓದಿ » ಭದ್ರಾವತಿಯಲ್ಲಿ ಬಿಸಿ ಊಟದ ಸಿಬ್ಬಂದಿ ಶಾಲೆಗೆ ಬಂದಾಗ ಕಾದಿತ್ತು ಆಘಾತ

ಜನರ ಸಮಸ್ಯೆ ಆಲಿಸಲು ಸಚಿವರಿಂದ ಜನಸ್ಪಂದನಾ ಸಭೆ, ದಿನಾಂಕ, ಸ್ಥಳ ಪ್ರಕಟ

Madhu-Bangarappa-Minister

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ನ.18 ರಂದು ಸಾಗರ ತಾಲೂಕು ತಾಳಗುಪ್ಪದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಲಿದ್ದಾರೆ. ಅಂದು ಮಧ್ಯಾಹ್ನ 1.30ಕ್ಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ  ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಗರ ತಾಲೂಕು ಮಟ್ಟದ ಅಧಿಕಾರಿಗಳು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಅಗತ್ಯ ಮಾಹಿತಿಯೊಂದಿಗೆ ತಾವೇ ಖುದ್ದಾಗಿ ತಪ್ಪದೇ ಹಾಜರಾಗಬೇಕು. ತಮ್ಮ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಸಾಗರ ತಹಶೀಲ್ದಾರ್‌ … Read more

ಭದ್ರಾವತಿಯಲ್ಲಿ ಬಿಸಿ ಊಟದ ಸಿಬ್ಬಂದಿ ಶಾಲೆಗೆ ಬಂದಾಗ ಕಾದಿತ್ತು ಆಘಾತ

BHADRAVATHI-NEWS-UPDATE

ಭದ್ರಾವತಿ: ಸರ್ಕಾರಿ ಶಾಲೆಯ ಕೊಠಡಿಯ ಬೀಗ ಮುರಿದು 32 ಇಂಚಿನ ಸ್ಯಾಮ್‌ಸಂಗ್‌ ಟಿವಿ ಕಳ್ಳತನ ಮಾಡಲಾಗಿದೆ. ಭದ್ರಾವತಿಯ ಭದ್ರಾ ಕಾಲೋನಿಯ ಸರ್ಕಾರಿ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಊಟದ ಹಾಲ್‌ನ ಬೀಗ ಮುರಿದ ಕಳ್ಳರು ಒಳಗಿದ್ದ ಟಿವಿಯನ್ನು ಕದ್ದೊಯ್ದಿದ್ದಾರೆ. ಅಡುಗೆ ಸಹಾಯಕಿ ಶಾಲೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಶಿಕ್ಷಕಿ ಉಮಾ ಅವರು ದೂರು ನೀಡಿದ್ದಾರೆ. ಹೊಸಮನೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಶಿವಮೊಗ್ಗದ ಫೋಟೊಗ್ರಾಫರ್‌ … Read more

ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಶಿವಮೊಗ್ಗದ ಫೋಟೊಗ್ರಾಫರ್‌ ಸಾವು, ಮೂವರಿಗೆ ಗಾಯ

Car-and-Truck-incident-shimoga-photographer-succumbed.

ಚಳ್ಳಕೆರೆ: ರಸ್ತೆ ಬದಿ ನಿಂತಿದ್ದ ಟಿಪ್ಪರ್‌ ಲಾರಿಗೆ ಹಿಂಬದಿಯಿಂದ ಕಾರು ಡಕ್ಕಿಯಾಗಿ ಶಿವಮೊಗ್ಗದ ಫೋಟೊಗ್ರಾಫರ್‌ ಸಾವನ್ನಪ್ಪಿದ್ದಾರೆ. ಉಳಿದ ಮೂವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಡರಾತ್ರಿ ಘಟನೆ ಸಂಭವಿಸಿದೆ. ಶಿವಮೊಗ್ಗದ ಎಲ್‌ಬಿಎಸ್‌ ನಗರದ ಫೋಟೊಗ್ರಾಫರ್‌ ಅರ್ಜುನ್‌ (37) ಮೃತ ದುರ್ದೈವಿ. ಶರತ್‌, ನವೀನ್‌ ಮತ್ತು ಬಸವರಾಜು ಎಂಬುವವರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಗಾಯ್ತು ಘಟನೆ? ಬಳ್ಳಾರಿಯಲ್ಲಿ ಮದುವೆ ಸಮಾರಂಭದ ಫೋಟೊ ಶೂಟ್‌ಗಾಗಿ ನಾಲ್ವರು ಫೋಟೊಗ್ರಾಫರ್‌ಗಳು ತೆರಳುತ್ತಿದ್ದರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಗಿರಿಯಮ್ಮನಹಳ್ಳಿ ಬಳಿ ಹೈವೇ ರಸ್ತೆಯ … Read more

ಹಬ್ಬದ ವೇಳೆ ಕೆರೆಗೆ ಹಾರಿ ‘ಮುಗಳಿಕೊಪ್ಪದ ಮುತ್ತು’ ಸಾವು

mugalikoppa-muttu-incident-at-hulaginakoppa-in-shikaripura.

ಶಿಕಾರಿಪುರ: ಹೋರಿ ಬೆದರಿಸುವ ಹಬ್ಬದ ವೇಳೆ ಹೋರಿಯೊಂದು ಓಡುವ ಭರದಲ್ಲಿ ಕೆರೆಗೆ ಹಾರಿ ಮೃತಪಟ್ಟಿದೆ. ಶಿಕಾರಿಪುರ ತಾಲೂಕು ಹುಲಗಿನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹಬ್ಬದಲ್ಲಿ ಘಟನೆ ಸಂಭವಿಸಿದೆ. ಹುಲಗಿನಕೊಪ್ಪದಲ್ಲಿ ಶುಕ್ರವಾರ ಆಯೋಜಿಸಿದ್ದ ಹೋರಿ ಹಬ್ಬದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಅನೇಕ ಹೋರಿಗಳು ಪಾಲ್ಗೊಂಡಿದ್ದವು. ಹೋರಿಗಳಿಗೆ ಕೊಬ್ಬರಿ ಹಾಗೂ ಬಲೂನ್‌ಗಳನ್ನು ಕಟ್ಟಿ ಅಖಾಡಕ್ಕೆ ಬಿಡಲಾಗುತ್ತಿತ್ತು. ಈ ವೇಳೆ ನಾಗರಾಜ್‌ ಜಂಬೂರು ಎಂಬುವರ ಮುಗಳಿಕೊಪ್ಪದ ಮುತ್ತು ಎಂಬ ಹೆಸರಿನ ಹೋರಿ ಹುಲಗಿನಕಟ್ಟೆ ಕೆರೆಗೆ ಹಾರಿದೆ. ಕೂಡಲೆ ಕೆರೆಗೆ ಇಳಿದು ಹೋರಿಯನ್ನು … Read more

ಮುರ್ಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋದ ಶಿವಮೊಗ್ಗದ ವ್ಯಕ್ತಿ

KARNATAKA-STATE-NEWS-UPDATE

ಭಟ್ಕಳ: ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಶಿವಮೊಗ್ಗ ಜಿಲ್ಲೆಯ ಪ್ರವಾಸಿಗರೊಬ್ಬರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಸುಭಾಷ ದೇವೆಂದ್ರಪ್ಪ (45) ಸಾವಿಗೀಡಾದವರು. ಗುರುವಾರ ಸಂಜೆ ಸ್ನೇಹಿತನೊಂದಿಗೆ ಶಿವಮೊಗ್ಗದಿಂದ ಪ್ರವಾಸಕ್ಕೆ ಬಂದಿದ್ದರು. ಶುಕ್ರವಾರ ಮಧ್ಯಾಹ್ನ ಸಮುದ್ರ ಸ್ನಾನಕ್ಕೆ ಇಳಿದಾಗ ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಟ್ಯಾಂಕರ್‌ ಡಿಕ್ಕಿ, ಅರಣ್ಯ ಕಾವಲುಗಾರ ಸಾವು, ಎಲ್ಲಿ? ಹೇಗಾಯ್ತು ಘಟನೆ?

ಮತ್ತೆ ಚಳಿ ಜೋರು, ಬಿಸಿಲಿನ ಅಬ್ಬರವು ಹೆಚ್ಚು, ಎಲ್ಲೆಲ್ಲಿ ಎಷ್ಟಿದ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಮತ್ತೆ ಹೆಚ್ಚಳವಾಗಿದ್ದು ತಾಪಮಾನವು ತುಸು ಇಳಿಕೆಯಾಗಿದೆ. ಆದರೆ ಬಿಸಿಲಿನ ಅಬ್ಬರ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಮತ್ತೆ ಥಂಡಿ ವಾತಾವರಣ ಹೆಚ್ಚಾಗಿದೆ. ಶಿವಮೊಗ್ಗದಲ್ಲಿಯು ಚಳಿ ಪ್ರಮಾಣ ಏರಿಕೆಯಾಗಿದೆ. ಸಂಜೆಯಾಗುತಲೆ ವಾತಾವರಣ ತಂಪೇರುತ್ತದೆ. ನಡುರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಚಳಿ ಹೆಚ್ಚಿರುತ್ತದೆ. ಇನ್ನು, ಬಿಸಿಲು ಕೂಡ ಜೋರಾಗಿದ್ದು ಬೆಳಗ್ಗೆ 11 ಗಂಟೆಯಿಂದ ಸಂಜೆವರೆಗೆ ಮೈಸುಡುವ ಬಿಸಿಲಿರಲಿದೆ. ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 18 ಡಿಗ್ರಿ … Read more

ಟ್ಯಾಂಕರ್‌ ಡಿಕ್ಕಿ, ಅರಣ್ಯ ಕಾವಲುಗಾರ ಸಾವು, ಎಲ್ಲಿ? ಹೇಗಾಯ್ತು ಘಟನೆ?

Tanker-and-TVS-two-wheeler-mishap-at-Thirthahalli.

ತೀರ್ಥಹಳ್ಳಿ: ಶಿವಮೊಗ್ಗ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಬೆಜ್ಜವಳ್ಳಿಯಲ್ಲಿ ಶುಕ್ರವಾರ ಸಂಜೆ ಟ್ಯಾಂಕರ್, ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರ ವೆಂಕಟೇಶ್ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡುವಳ್ಳಿ ಗ್ರಾಮದ ಹಿರೇಬೈಲು ವಾಸಿ ವೆಂಕಟೇಶ್, ಮಂಡಗದ್ದೆ ವಲಯಾರಣ್ಯ ವಿಭಾಗದಲ್ಲಿ ಅರಣ್ಯ ಕಾವಲುಗಾರರಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ನೇಣು ಬಿಗಿದುಕೊಂಡು ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ

ಭದ್ರಾವತಿಯ ವಿವಿಧೆಡೆ ಎರಡು ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಭದ್ರಾವತಿ: ಮೆಸ್ಕಾಂ ನಗರ ವಿದ್ಯುತ್ ಉಪ ವಿಭಾಗದ ಘಟಕ-3ರ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಂಡಿರು ವುದರಿಂದ ನ.15 ಹಾಗೂ ನ.17ರಂದು ಬೆಳಗ್ಗೆ 10ಗಂಟೆ ಯಿಂದ ಸಂಜೆ 6ರ ವರೆಗೆ ವಿವಿಧೆಡೆ ಕರೆಂಟ್‌ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಕಡದಕಟ್ಟೆ, ಐಟಿಐ, ಹೆಬ್ಬಂಡಿ, ಹೆಬ್ಬಂಡಿ ತಾಂಡಾ, ಎ.ಕೆ.ಕಾಲೊನಿ, ಲಕ್ಷ್ಮೀಪುರ, ಬಿಳಿಕಿ, ಬಿಳಿಕಿ ತಿರುವು, ಬೈಪಾಸ್ ರಸ್ತೆ ನೀರು ಸರಬರಾಜು ಘಟಕ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದನ್ನೂ ಓದಿ … Read more

ಶಾಲೆ, ಕಾಲೇಜು ರಜೆ ವಿಚಾರ, ಸಿಎಂ ಕಚೇರಿಯಿಂದ ಸ್ಪಷ್ಟನೆ

VIDHANA-SOUDHA-GENERAL-IMAGE.jpg

ಬೆಂಗಳೂರು: ವೃಕ್ಷಮಾತೆ ನಾಡೋಜ ಸಾಲುಮರದ ತಿಮ್ಮಕ್ಕ ನಿಧನದ ಹಿನ್ನೆಲೆ ಶನಿವಾರ ಸರ್ಕಾರಿ ರಜೆ ನೀಡಲಾಗಿದೆ ಎಂಬ ನಕಲಿ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಉಲ್ಲೇಖವಾಗಿದ್ದ ಪರಿಣಾಮ ಗೊಂದಲ ಉಂಟಾಗಿತ್ತು. ಕೊನೆಗೆ ಮುಖ್ಯಮಂತ್ರಿಯವರ ಕಚೇರಿ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದು ಸ್ಪಷ್ಟಪಡಿಸಿದೆ. ಶನಿವಾರ ಎಂದಿನಂತೆ ಶಾಲಾ, ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಕೆಲಸ ಕಾರ್ಯ ನಿರ್ವಹಿಸಲಿವೆ ಎಂದು ಸಿಎಂ ಕಚೇರಿ ತಿಳಿಸಿದೆ. ಇದನ್ನೂ … Read more