ಲಾಕ್ ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್, ಬೈಕ್ ಸೀಜ್, ಯಾವ್ಯಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ?

Police-General-Image-1.jpg

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2020 ಲಾಕ್‍ ಡೌನ್ ಆದೇಶ ಉಲ್ಲಂಘಿಸಿ ಅನಾವಶ್ಯಕವಾಗಿ ಬೈಕ್‍ನಲ್ಲಿ ಸುತ್ತಾಡುತ್ತಿದ್ದ ನಾಲ್ಕು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೇಸ್ 1 ಸಾಗರ ಟೌನ್ ಪೊಲೀಸ್ ಠಾಣೆ | ಜುಲೈ 15ರಂದು ರಾತ್ರಿ ಲಾಕ್‍ ಡೌನ್ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದ ನಾಲ್ವರ ವಿರುದ್ಧ ಎನ್‍ಡಿಎಂಎ ಕಾಯ್ದೆ ಅನ್ವಯ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರ ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ಕೇಸ್ 2 ತುಂಗಾ ನಗರ … Read more

ಶಿವಮೊಗ್ಗದಲ್ಲಿ ಕರೋನಾ ವರಿಯಾರ್‌ಗೆ ಚಿಕಿತ್ಸೆ ನೀಡದ ಖಾಸಗಿ ಆಸ್ಪತ್ರೆಗಳು, ಮಿನಿಸ್ಟರ್ ಸಭೆಯಲ್ಲೇ ಇನ್ಸ್‌ಪೆಕ್ಟರ್‌ ಅಳಲು

160720 Police Meeting in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2020 ಕರೋನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ರಕ್ಷಣೆ ಇಲ್ಲವಾ? ಹೀಗೊಂದು ಪ್ರಶ್ನೆ ಶಿವಮೊಗ್ಗದಲ್ಲಿ ಎದುರಾಗಿದೆ. ಇವತ್ತು ಶಿವಮೊಗ್ಗ ಡಿಎಆರ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಸಂಬಂಧ ಪೊಲೀಸರ ಸಭೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಒಬ್ಬರು ಈ ರೀತಿಯ ಪ್ರಶ್ನೆ ಎತ್ತಿ ಆಶ್ಚರ್ಯ ಮೂಡಿಸಿದರು. ಕರೋನಾ ವಾರಿಯರ್ಸ್ ಪೊಲೀಸರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ. ಶಿವಮೊಗ್ಗದ ಎಎಸ್ಐ … Read more

ಶಿವಮೊಗ್ಗ ಲಾಕ್‌ಡೌನ್, ಖಾಕಿ ಪಡೆ ಜೊತೆ ಮೀಟಿಂಗ್, ಪೊಲೀಸರಂದರೆ ಭಯ ಬರುವಂತೆ ಮಾಡಿ ಅಂದರು ಮಿನಿಸ್ಟರ್

160720 Police Meeting in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2020 ಲಾಕ್‍ಡೌನ್ ಮತ್ತು ಕರೋನ ಹರಡುತ್ತಿರುವ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಗುಂಪುಗೂಡುವವರಿಗೆ, ಸುಖಾ ಸುಮ್ಮನೆ ರಸ್ತೆಯಲ್ಲಿ ಓಡಾಡುವವರಿಗೆ ಪೊಲೀಸರೆಂದರೆ ಭಯ ಬರುವ ವಾತಾವರಣ ನಿರ್ಮಾಣ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಡಿಎಆರ್ ಸಭಾಂಗಣದಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಈಶ್ವರಪ್ಪ, ಮಾಸ್ಕ್ ಧರಿಸದೆ ಓಡಾಡುವವರನ್ನ, ರಸ್ತೆಯ ಮೇಲೆ … Read more

ಜಿಲ್ಲಾ ಕೇಂದ್ರದಲ್ಲಿ 500, ತಾಲೂಕಲ್ಲಿ 50 ಬೆಡ್ ಕೋವಿಡ್ ಆಸ್ಪತ್ರೆ ಸ್ಥಾಪಿಸಿ, 25 ಆಂಬುಲೆನ್ಸ್ ಕೊಡಿ

H-S-Sundaresh-Congress-President

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2020 ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜಿಲ್ಲಾ ಕೇಂದ್ರದಲ್ಲಿ 500 ಮತ್ತು ತಾಲೂಕು ಕೇಂದ್ರದಲ್ಲಿ 50 ಹಾಸಿಗೆಯ ಕೋವಿಡ್ ಆಸ್ಪತ್ರೆಗಳನ್ನು ತಕ್ಷಣದಿಂದಲೇ ಸಜ್ಜುಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಆನ್‍ಲೈನ್‍ ವಿಡಿಯೋ ಸುದ್ದಿಗೋಷ್ಠಿ ನಡೆಸಿದ ಸುಂದರೇಶ್, ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಗೆ 25 ಹೆಚ್ಚುವರಿ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಇದರಲ್ಲಿ ಪ್ರತಿ ತಾಲೂಕಿಗೆ ಎರಡು ಆಂಬುಲೆನ್ಸ್ ಒದಿಗಿಸಬೇಕು ಎಂದು ಒತ್ತಾಯಿಸಿದರು. … Read more

ಕರೋನ ಸೋಂಕಿನಿಂದ ಹಾಲಸ್ವಾಮಿ ಮಠದ ಸ್ವಾಮೀಜಿ ಲಿಂಗೈಕ್ಯ, ಆಸ್ಪತ್ರೆಗೆ ದಾಖಲಾಗಿದ್ದು ಯಾವಾಗ? ಏನೆಲ್ಲ ಚಿಕಿತ್ಸೆ ಆಯ್ತು?

150720 Gavimata Swamiji Dies of Corona 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2020 ಶಿವಮೊಗ್ಗದಲ್ಲಿ ಕರೋನಾ ಸೋಂಕಿನಿಂದ ಸ್ವಾಮೀಜಿಯೊಬ್ಬರು ಲಿಂಗೈಕ್ಯರಾಗಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮೀಜಿ ಅವರು ಚಿಕಿತ್ಸೆಗೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರದ ಹಾಲಸ್ವಾಮಿ ಮಠದ ಶ್ರೀ ಹಾಲಶಂಕರ ವಿಶ್ವಾರಾಧ್ಯ ಸ್ವಾಮೀಜಿ (55) ಅವರು ಮೃತಪಟ್ಟಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಪಾಸಿಟಿವ್ ಜುಲೈ 9ರಂದು ಮದ್ಯಾಹ್ನ ಸ್ವಾಮೀಜಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ, ಉಸಿರಾಟದ … Read more

ಶಿವಮೊಗ್ಗದಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಬಂದಿದ್ದ ಶಿಕ್ಷಕರೊಬ್ಬರಿಗೆ ಹೃದಯಾಘಾತ, ಸಾವು, ಶಿಕ್ಷಕರಿಂದ ಶ್ರದ್ಧಾಂಜಲಿ

150720 SSLC Teachers Pay Tribute 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2020 ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಬಂದಿದ್ದ ಶಿಕ್ಷಕರೊಬ್ಬರಿಗೆ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದ ಮೌಲ್ಯಮಾಪನ ಕೇಂದ್ರವೊಂದರಲ್ಲಿ ಘಟನೆ ಸಂಭವಿಸಿದೆ. ಭದ್ರಾವತಿಯ ಈಶ್ವರಮ್ಮ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕುಮಾರ್ (48) ಮೃತರು. ಮಧ್ಯಾಹ್ನ ಊಟ ಮಾಡುವಾಗ ಶಿಕ್ಷಕ ಕುಮಾರ್ ಅವರು ಕುಸಿದು ಬಿದ್ದಿದ್ದಾರೆ. ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟು ಹೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದಾರೆ. ಸಂತಾಪ ಸೂಚಿಸಿದ ಶಿಕ್ಷಕರು ಇನ್ನು, ಶಿವಮೊಗ್ಗದ ಎಲ್ಲಾ ಮೌಲ್ಯಮಾಪನ ಕೇಂದ್ರದಲ್ಲಿ … Read more

ಶಿವಮೊಗ್ಗದಲ್ಲಿ ಇವತ್ತು 30 ಮಂದಿಗೆ ಕರೋನ ಪಾಸಿಟಿವ್, ಯಾವ್ಯಾವ ತಾಲೂಕಲ್ಲಿ ಎಷ್ಟು ಮಂದಿಗೆ ಸೋಂಕು ತಗುಲಿದೆ?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜುಲೈ 2020 ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಕರೋನ ಆರ್ಭಟ ಮುಂದುವರೆದಿದೆ. 30 ಮಂದಿಗೆ ಪಾಸಿಟಿವ್ ಬಂದಿದೆ. ಇದರಿಂದ ಸೋಂಕಿತರ ಸಂಖ್ಯೆ ಆರು ನೂರರ ಸನಿಹಕ್ಕೆ ಬಂದು ನಿಂತಿದೆ. ಇವತ್ತಿನ 30 ಸೋಂಕಿತರು ಸೇರಿ ಒಟ್ಟು ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಇವತ್ತು 330 ಮಂದಿಯ ರಿಪೋರ್ಟ್ ನೆಗೆಟಿವ್ ಬಂದಿದೆ. ಈವರೆಗೂ 21,841 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 20,261 ಮಂದಿಗೆ ನೆಗೆಟಿವ್ ಬಂದಿದೆ. ಯಾವ್ಯಾವ … Read more

ಸಂಬಂಧಿಗೆ ಕರೋನ ಪಾಸಿಟಿವ್, ಸಚಿವ ಈಶ್ವರಪ್ಪ ಕುಟುಂಬದ 21 ಮಂದಿಗೆ ಕೋವಿಡ್ ಟೆಸ್ಟ್

140720 KS Eshwarappa Press Meet After Covid test 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜುಲೈ 2020 ಸಂಬಂಧಿಯೊಬ್ಬರಿಗೆ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕುಟುಂಬ ಇವತ್ತು ಕರೋನ ಪರೀಕ್ಷೆಗೆ ಒಳಗಾಗಿದೆ. ಎಲ್ಲರಿಗೂ ನೆಗೆಟಿವ್ ರಿಪೋರ್ಟ್ ಬಂದಿದೆ. 21 ಮಂದಿಯ ಪರೀಕ್ಷೆ ಸಚಿವ ಕೆ.ಎಸ್.ಈಶ್ವರಪ್ಪ, ಅವರ ಕುಟುಂಬದ ಸದಸ್ಯರು, ಅಡುಗೆಯವರು, ಕಾರು ಚಾಲಕರು ಸೇರಿ 21 ಮಂದಿ ಕೋವಿಡ್ ಟೆಸ್ಟ್‍ಗೆ ಒಳಗಾಗಿದ್ದರು. ಇವರೆಲ್ಲರ ವರದಿಯು ನೆಗೆಟಿವ್ ಎಂದು ಬಂದಿದೆ ಎಂದು ಸಚಿವ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. … Read more

ಇದು ಯಡಿಯೂರಪ್ಪ ಅವರ ಕನಸಿನ ಯೋಜನೆ, ಇವತ್ತು ಅವರು ಇಲ್ಲಿಗೆ ದಿಢೀರ್ ಬಂದರೆ ಏನೆಲ್ಲ ಕಾಣುತ್ತೆ ಗೊತ್ತಾ?

130720 Private Bus Stand in bad state 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜುಲೈ 2020 ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣ, ಯಡಿಯೂರಪ್ಪ ಅವರ ಕನಸಿ ಯೋಜನೆಗಳಲ್ಲೊಂದು. ಇವತ್ತು ಇದೇ ಖಾಸಗಿ ಬಸ್ ನಿಲ್ದಾಣಕ್ಕೆ ಮುಖ್ಯಮಂತ್ರಿ ಅವರು ಭೇಟಿ ನೀಡಿದರೆ, ಹೌಹಾರುವುದು ಖಚಿತ. ಅದಕ್ಕೆ ಕಾರಣ, ಖಾಸಗಿ ಬಸ್ ನಿಲ್ದಾಣದ ದುಸ್ಥಿತಿ. ಹೇಗಿದೆ ಬಸ್ ನಿಲ್ದಾಣದ ಸ್ಥಿತಿ? ಸ್ವಾಗತ ಕೋರುತ್ತಾರೆ ಭಿಕ್ಷುಕರು | ಖಾಸಗಿ ಬಸ್ ನಿಲ್ದಾಣಕ್ಕೆ ಯಾರೆ ಬಂದರೂ ಮೊದಲು ಸ್ವಾಗತಕಾರರಂತೆ ಕಾಣುವುದು ಭಿಕ್ಷುಕರು. ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮಲಗಿರುವ ಭಿಕ್ಷುಕರು … Read more

ಮೂರು ದಿನ ಶಿವಮೊಗ್ಗ ತಾಲೂಕು ಆಫೀಸ್ ಬಂದ್, ಸಂಪೂರ್ಣ ಸ್ಯಾನಿಟೈಸೇಷನ್

130720 Taluk office Seal down in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜುಲೈ 2020 ಗ್ರಾಮ ಲೆಕ್ಕಾಧಿಕಾರಿಯೊಬ್ಬರಿಗೆ ಕರೋನ ಪಾಸಿಟಿವ್ ಬಂದ ಹಿನ್ನೆಲೆ ಶಿವಮೊಗ್ಗ ತಾಲೂಕು ಕಚೇರಿಯನ್ನು ಬಂದ್ ಮಾಡಲಾಗಿದೆ. ಕಟ್ಟಡದಲ್ಲಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಯಿತು. ಕರೋನ ಸೋಂಕಿತ ಗ್ರಾಮ ಲೆಕ್ಕಾಧಿಕಾರಿ ತಾಲೂಕು ಕಚೇರಿಯಲ್ಲಿ ಓಡಾಡಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕು ಕಚೆರಿಯನ್ನು ಬಂದ್ ಮಾಡಲಾಗಿದೆ ಎಂದು ತಹಶೀಲ್ದಾರ್ ನಾಗರಾಜ್ ತಿಳಿಸಿದ್ದಾರೆ. ತಾಲೂಕು ಕಚೇರಿ ಕಟ್ಟಡಕ್ಕೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಯಿತು. ಒಳ ಮತ್ತು ಹೊರಗೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ … Read more